ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಲೈಸೆನ್ಸ್ ಸೇರಿದಂತೆ ವಾಹನಗಳ ಹಲವು ದಾಖಲೆ ಪತ್ರಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿಸ್ತರಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಡಿ.27): ಕೊರೋನಾ ವೈರಸ್ ಕಾರಣ ಕಳೆದ ಫೆಬ್ರವರಿಯಲ್ಲಿ ಅಂತ್ಯಗೊಂಡಿದ್ದ ವಾಹನ ದಾಖಲೆಗಳಾದ ರಿಜಿಸ್ಟ್ರೇಶನ್, ಪರ್ಮಿಟ್, ಲೈಸೆನ್ಸ್ ಸೇರಿದಂತೆ ಕೆಲ ದಾಖಲೆ ಪತ್ರಗಳ ವ್ಯಾಲಿಟಿಡಿಯನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸಿದೆ. ಡಿಸೆಂಬರ್ 31, 2020ರ ವರೆಗೆ ವಿಸ್ತರಿಸಿದ್ದ ಕೇಂದ್ರ ಸರ್ಕಾರ ಇದೀಗ ಮಾರ್ಚ್ 31, 2021ರ ವರೆಗೆ ವಿಸ್ತರಿಸಿದೆ.
ಜಾತಿ ಸ್ಟಿಕ್ಕರ್ ಅಂಟಿಸಿದರೆ ವಾಹನವೇ ಸೀಝ್; ಕಟ್ಟು ನಿಟ್ಟಿನ ಆದೇಶ ಜಾರಿ!..
undefined
2020ರ ಫೆಬ್ರವರಿ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಂಡಿರುವ ರಿಜಿಸ್ಟ್ರೇಶನ್, ಪರ್ಮಿಟ್, ಲೈಸೆನ್ಸ್ ಸೇರಿದಂತೆ ಕೆಲ ದಾಖಲೆಗಳ ನವೀಕರಣಕ್ಕೆ ಮಾರ್ಚ್ ತಿಂಗಳಲ್ಲಿ ಅವಕಾಶ ಇರಲಿಲ್ಲ. ಕಾರಣ ಕೊರೋನಾ ವೈರಸ್ ಭಾರತಕ್ಕೆ ವಕ್ಕರಿಸಿತ್ತು. ಹೀಗಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ವ್ಯಾಲಿಡಿಟಿಯನ್ನು ವಿಸ್ತರಿಸಿತು. ಆದರೆ ಕೊರೋನಾ ಆರ್ಭಟ ಹೆಚ್ಚಾದ ಕಾರಣ ಕೊನೆಗೆ 2020ರ ಡಿಸೆಂಬರ್ ಅಂತ್ಯದ ವರೆಗೆ ವಿಸ್ತರಿಸಿತ್ತು.
Fastag ಮೂಲಕ ಪ್ರತಿ ದಿನ ಸಂಗ್ರಹವಾಗುವ ಹಣವೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ!.
ಡಿಸೆಂಬರ್ ತಿಂಗಳ ಆರಂಭದಲ್ಲೇ ರೂಪಾಂತರಗೊಂಡ ಕೊರೋನಾ ವೈರಸ್ ಭೀತಿ ಆವರಿಸಿರುವ ಕಾರಣ ಇದೀಗ ಮತ್ತೆ ಜನರು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ನಿತಿಕನ್ ಗಡ್ಕರಿ ಇದೀಗ ಮಾರ್ಚ್ ತಿಂಗಳ ವರೆಗೆ ವಿಸ್ತರಿಸಿದ್ದಾರೆ. ದಾಖಲೆ ಪತ್ರಗಳ ನವೀಕರಣಕ್ಕೆ ಜನರು ಕಚೇರಿಗೆ ಅಲೆದಾಡಬೇಕಾಗುತ್ತದೆ. ಇದರಿಂದ ಕೊರೋನಾ ಆಪಾಯ ಎದುರಾಗ ಸಾಧ್ಯತೆ ಹೆಚ್ಚು ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.