ಧರ್ಮಸ್ಥಳದ ಎತ್ತಿನ ಗಾಡಿ ಕಾರಿನ ವಿಡಿಯೋ ಟ್ವೀಟ್ ಮಾಡಿ ಟೆಸ್ಲಾಗೆ ಚಾಲೆಂಜ್ ಹಾಕಿದ ಮಹೀಂದ್ರ!

By Suvarna NewsFirst Published Dec 24, 2020, 4:01 PM IST
Highlights

ಉದ್ಯಮಿ ಆನಂದ್ ಮಹೀಂದ್ರ ಸಾಮಾಜಿಕ ಮಾಧ್ಯಮದಲ್ಲಿ ಸಕ್ರೀಯರಾಗಿರುತ್ತಾರೆ. ಕುತೂಹಲಕರ ಮಾಹಿತಿಗಳನ್ನು ಹಂಚಿಕೊಳ್ಳುತ್ತಾ, ದೇಶದ ಗಮನಸೆಳೆದಿದ್ದಾರೆ. ಈಗಾಗಲೇ ಹಲವು ಮಾಹಿತಿಗಳು, ಘೋಷಣೆಗಳನ್ನು, ಬಹುಮಾನಗಳನ್ನು ಆನಂದ್ ಮಹೀಂದ್ರ ಘೋಷಿಸಿದ್ದಾರೆ. ಇದೀಗ ಆನಂದ್ ಮಹೀಂದ್ರ ಧರ್ಮಸ್ಥಳದ ಎತ್ತಿನ ಗಾಡಿ ಕುರಿತು ಟ್ವೀಟ್ ಮಾಡಿದ, ಅಮೆರಿಕದ ಟೆಸ್ಲಾ ಕಂಪನಿ ಸಿಇಓಗೆ ಚಾಲೆಂಜ್ ಹಾಕಿದ್ದಾರೆ
 

ಮುಂಬೈ(ಡಿ.24): ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ಚೇರ್ಮೆನ್ ಆನಂದ್ ಮಹೀಂದ್ರ ಟ್ವೀಟ್ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತದೆ. ಆಸಕ್ತಿಕರ ಟ್ವೀಟ್ ಮೂಲಕ ಹಲವು ಸಂದೇಶಗಳನ್ನು ಆನಂದ್ ಮಹೀಂದ್ರ ನೀಡಿದ್ದಾರೆ. ವಿಶ್ವದ ಮೂಲೇ ಮೂಲೆಗಳಲ್ಲಿನ ಕುತೂಹಲ ವಿಚಾರ ಹೆಕ್ಕಿ ಆನಂದ್ ಮಹೀಂದ್ರ ದೇಶದ ಗಮನಸೆಳೆದಿದ್ದಾರೆ. ಇದೀಗ ಧರ್ಮಸ್ಥಳದ ಎತ್ತಿನ ಬಂಡಿ ಕಾರು ವಿಡಿಯೋವನ್ನು ಟ್ವೀಟ್ ಮಾಡಿ, ವಿಶ್ವದ ಗಮನಸೆಳೆದಿದ್ದಾರೆ.

105 ಕಿ.ಮೀ ಸೈಕಲ್‌ನಲ್ಲಿ ತೆರಳಿ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!...

ಧರ್ಮಸ್ಥಳದಲ್ಲಿ ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಎತ್ತಿನ ಬಂಡಿ ಇದೆ. ಸಾಮಾನ್ಯವಾಗಿ ಎತ್ತಿನ ಬಂಡಿ ರೂಪ ಎಲ್ಲರಿಗೂ ತಿಳಿದೆ ಇದೆ. ಆದರೆ ಧರ್ಮಸ್ಥಳದ ಎತ್ತಿನ ಬಂಡಿಯಲ್ಲ, ಅದು ಎತ್ತಿನ ಕಾರು. ಅಂಬಾಸಿಡರ್ ಕಾರಿನ ಅರ್ಧಭಾಗವನ್ನು ಆಕರ್ಷಕ ರೂಪ ನೀಡಿ ನಿರ್ಮಾಣ ಮಾಡಲಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆ ಪರಿಕಲ್ಪನೆಯಲ್ಲಿ ಈ ಎತ್ತಿನ ಕಾರ್ ನಿರ್ಮಾಣ ಮಾಡಲಾಗಿದೆ. 

ಅಂತರ ಕಾಯ್ದುಕೊಳ್ಳಲು ರಿಕ್ಷಾ ಚಾಲಕನ ಐಡಿಯಾ; ಭರ್ಜರಿ ಆಫರ್ ನೀಡಿದ ಆನಂದ್ ಮಹೀಂದ್ರ!.

ಹೆಗ್ಗಡೆಯವರ ಈ ವಿಶೇಷ ಎತ್ತಿನ್ ಕಾರ್ ಇದೀಗ ವಿಶ್ವಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಆನಂದ್ ಮಹೀಂದ್ರ, ಇದೇ ಎತ್ತಿನ ಗಾಡಿ ವಿಡಿಯೋವನ್ನು ಟ್ವೀಟ್ ಮಾಡಿ, ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಟೆಸ್ಲಾ ಸಿಇಓ ಎಲನ್ ಮಸ್ಕ್‌ಗೆ ಸವಾಲು ಹಾಕಿದ್ದಾರೆ.

 

I don’t think & Tesla can match the low cost of this renewable energy-fuelled car. Not sure about the emissions level, though, if you take methane into account... pic.twitter.com/C7QzbEOGys

— anand mahindra (@anandmahindra)

ಟೆಸ್ಲಾ ಹಾಗೂ ಎಲನ್ ಮಸ್ಕ್ ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ನವೀಕರಿಸಬಹುದಾದ ಇಂಧನ ಕಾರನ್ನು ತಯಾರಿಸಲು ಸಾಧ್ಯವಿದೆ ಎಂದು ನನಗನಿಸುತ್ತಿಲ್ಲ. ಮಿಥೇನ್ ಗ್ಯಾಸ್ ಪರಿಗಣನೆಗೆ ತೆಗೆದು ಎಮಿಶನ್ ನೋಡುವುದಾದದರೆ, ಇದರ ಎಮಿಶನ್ ಲೆವೆನ್ ಖಚಿತವಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.ಎಲನ್ ಮಸ್ಕ್‌ಗೆ ಚಾಲೆಂಜ್ ಹಾಕಿದ ಈ ಟ್ವೀಟ್ ಭಾರತ ಹಾಗೂ ಅಮೆರಿಕದಲ್ಲಿ ಎಲ್ಲರ ಗಮನಸೆಳೆದಿದೆ.  

ವಿರೇಂದ್ರ ಹೆಗ್ಗಡೆಯವರೇ ಖುದ್ದು ಹೇಳಿ ಮಾಡಿಸಿದ ಈ ಎತ್ತಿನ್ ಕಾರ್ ಈಗಲೂ ಧರ್ಮಸ್ಥಳದಲ್ಲಿದೆ. ಧರ್ಮಸ್ಥಳದಲ್ಲಿರುವ ಹಲವು ಆಕರ್ಷಣೆಗಳಲ್ಲಿ ಇದೂ ಕೂಡ ಒಂದಾಗಿದೆ.

click me!