ಬೆಂಗಳೂರು(ಜೂ.09): ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಹೆಚ್ಚಿನ ಗಮನಹರಿಸುತ್ತಿದೆ. ಕರ್ನಾಟಕ ಎಲೆಕ್ಟ್ರಿಕ್ ವಾಹನಗಳ ಹಬ್ ಆಗಿ ಹೊರಹೊಮ್ಮಿದೆ. ಇದೀಗ ಬೆಸ್ಕಾಂ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ ಮುಂದಾಗಿದೆ. ಇದಲ ಮೊದಲ ಅಂಗವಾಗಿ ಬೆಸ್ಕಾಂನಿಂದ ವಿದ್ಯುತ್ ಚಾಲಿತ ವಾಹನ ಬಳಕೆ ಕುರಿತ ಸಂಪೂರ್ಣ ಮಾಹಿತಿ ಒಳಗೊಂಡ ಪೋರ್ಟಲ್ ಲೋಕಾರ್ಪಣೆ ಮಾಡಲಾಗಿದೆ.
ಬೆಸ್ಕಾಂ ಮುಖ್ಯ ಕಚೇರಿಯಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಸಚಿವ ಸುನಿಲ್ ಕುಮಾರ್ ಪೋರ್ಟಲ್ ಲೋಕಾರ್ಪಣೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಬ್ರಿಟನ್ ಸರ್ಕಾರದ ಪ್ರತಿನಿಧಿಯಾಗಿ ಅಲೆಕ್ಸ್ ಎಲ್ಲಿಸ್ ಭಾಗಿಯಾಗಿದ್ದರು. ನೀತಿ ಆಯೋಗ, ರಾಜ್ಯ ಸರ್ಕಾರ ಮತ್ತು UK ಸರ್ಕಾರ ಜಂಟಿ ಸಹಯೋಗದಲ್ಲಿ ಈ ಪೋರ್ಟಲ್ ನಿರ್ಮಿಸಲಾಗಿದೆ.
ಬೆಂಗ್ಳೂರಲ್ಲಿ ಕರೆಂಟ್ ಇರದಿದ್ರೆ ಈ ನಂಬರ್‌ಗೆ ವಾಟ್ಸಾಪ್ ಮಾಡಿ..!
ಎಲೆಕ್ಟ್ರಿಕ್ ವಾಹನಗಳ ಖರೀದಿ, ಸರ್ಕಾರದ ಬೆಂಬಲ ಧನ, ಚಾರ್ಜಿಂಗ್ ಸ್ಟೇಷನ್ ಸೇರಿದಂತೆ ಇನ್ನಿತರ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಿದೆ. ಎಲೆಕ್ಟ್ರಿಕ್ ವಾಹನ ಕುರಿತು ಜನರಲ್ಲಿರುವ ಗೊಂದಲ ಹಾಗೂ ಆತಂಕವನ್ನ ದೂರ ಮಾಡುವ ಉದ್ದೇಶದಿಂದ ಪೋರ್ಟಲ್ ಆರಂಭಿಸಲಾಗಿದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ. Www.evkarnataka.co.in ಜಾಲತಾಣದಲ್ಲಿ ಒನ್ ಸ್ಟಾಪ್ ಸೈಟ್ ಆಗಿ ಕಾರ್ಯ ನಿರ್ವಹಿಸಲಿದೆ.
ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ರಾಜ್ಯದಲ್ಲಿ ಚಾರ್ಜಿಂಗ್ ಸ್ಟೇಶನ್ ಹೆಚ್ಚಿಸಲು ಬೆಸ್ಕಾಂ ನಿರ್ಧರಿಸಿದೆ.ಇದೇ ವೇಳೆ ಬ್ರಿಟನ್ ಸರ್ಕಾರದ ಜೊತೆ ಸೇರಿ 2030ರ ವೇಳೆಗೆ 31,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿದೆ.
ರಾಜ್ಯದಲ್ಲಿ ಮೊದಲ ಹಂತವಾಗಿ 1000 ಚಾರ್ಜಿಂಗ್ ಪಾಯಿಂಟ್ ನಿರ್ಮಾಣ ಮಾಡಲಾಗುವುದು . ಇದಕ್ಕಾಗಿ ರಾಜಾದ್ಯಂತ ಅಭಿಯಾನ ಮಾಡಲಿದ್ದೇವೆ. ಅಭಿಯಾನದ ಮೂಲಕ EV ಬಗ್ಗೆ ಜಾಗೃತಿ ಮೂಡಿಸುವತ್ತ ನಮ್ಮ ಇಲಾಖೆ ಕಾರ್ಯ ನಿರ್ವಹಿಸಲಿದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಇಂಧನ ಇಲಾಖೆಯಿಂದ ಹೈಬ್ರಿಡ್ ಪಾರ್ಕ್ ನಿರ್ಮಾಣ: ಸಚಿವ ಸುನೀಲಕುಮಾರ
ಭಾರತದಲ್ಲಿನ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಮಾರುಕಟ್ಟೆ ಕುರಿತು ಮಾತನಾಡಿದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್, ಭಾರತ ದಿನೇ ದಿನೇ ಎತ್ತರಕ್ಕೆ ಬೆಳಿತಾ ಇದೆ. ಅದರಲ್ಲೂ ಕರ್ನಾಟಕ ರಾಜ್ಯ ಅತ್ಯಂತ ವೇಗವಾಗಿಯೇ ಸಾಗುತ್ತಿದೆ ಎಂದರು. ಬೆಂಗಳೂರನ್ನ ಗ್ರೀನ್ ಸಿಟಿ ಮಾಡುವತ್ತ ಸರ್ಕಾರ ಶ್ರಮಿಸುತ್ತಿದೆ. ಟೆಕ್ನಾಲಜಿ ಇರಬಹುದು ಅಥವಾ ಬೇರೆ ವಿಚಾರದಲ್ಲಿಯೂ ಅಭಿವೃದ್ಧಿಯಾಗುತ್ತದಿ ಎಂದರು. ಭಾರತ ಮತ್ತು ಇಂಗ್ಲೆಂಡ್ ನಡುವೆ ಸಾಕಷ್ಟು ಕಾಂಪ್ಲಿಕೇಟೆಡ್ ಹಿಸ್ಟರೀ ಇದೆ. ಆದ್ರೆ ಈಗ ಅವೆಲ್ಲವೂ ಕೂಡ ಬದಲಾಗುತ್ತಿದೆ, ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಾವೆಲ್ಲಾ ಸೇರಿ ಕೆಲಸ ಮಾಡೋಣ ಎಂದು ಅಲೆಕ್ಸ್ ಹೇಳಿದ್ದಾರೆ.