ಫೋನ್ ಕಾಲ್, ಮ್ಯೂಸಿಕ್, ಆಟೊ ವೇರ್ ಡಿಟೆಕ್ಟ್ ತಂತ್ರಜ್ಞಾನದ ಏಥರ್ ಸ್ಮಾರ್ಟ್ ಹೆಲ್ಮೆಟ್ ಲಾಂಚ್!

By Suvarna NewsFirst Published Apr 7, 2024, 5:05 PM IST
Highlights

ಇದು ಸ್ಮಾರ್ಟ್ ಹೆಲ್ಮೆಟ್. ಇದರಲ್ಲಿ ಅತ್ಯುತ್ತಮ ಆಡಿಯೋ ಸೌಂಡ್ ಫೀಚರ್, ಸ್ಕೂಟರ್, ಹೆಲ್ಮೆಟ್ ಹಾಗೂ ರೈಡರ್ ಜೊತೆ ನೇರ ಸಂಪರ್ಕ ಸಾಧಿಸಲಿದೆ. ಆಟೊ ವೇರ್ ಡಿಟೆಕ್ಟ್ ತಂತ್ರಜ್ಞಾನ, ಫೋನ್ ಕಾಲ್, ಮ್ಯೂಸಿಕ್ ಕೇಳುವ, ಪಿಲಿಯನ್ ರೈಡರ್ ಜೊತೆ ಮಾತನಾಡುವ ಸೇರಿದಂತೆ ಅತ್ಯಾಧುನಿಕ ಫೀಚರ್ಸ್ ಹೆಲ್ಮೆಟ್ ಬಿಡುಡಗೆಡೆಯಾಗಿದೆ. ಏಥರ್ ಬಿಡುಗಡೆ ಮಾಡಿರುವ ಈ ಅತ್ಯಾಧುನಿಕ ತಂತ್ರಜ್ಞಾನದ ಹೆಲ್ಮೆಟ್ ಭಾರತದಲ್ಲೇ ಮೊದಲು.

ಬೆಂಗಳೂರು(ಏ.07) ಏಥರ್ ಎನರ್ಜಿ ರಿಝ್ತಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಜೊತೆಗೆ ಹ್ಯಾಲೋ ಸ್ಮಾರ್ಟ್ ಹೆಲ್ಮೆಟ್ ಕೂಡ ಲಾಂಚ್ ಮಾಡಿದೆ. ಭಾರತದಲ್ಲಿ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನ, ಗರಿಷ್ಠ ಸುರಕ್ಷತೆಯ ಸ್ಮಾರ್ಟ್ ಹೆಲ್ಮೆಟ್ ಬಿಡುಗಡೆ ಮಾಡಿದ ಹೆಗ್ಗಳಿಕೆಗೆ ಏಥರ್ ಪಾತ್ರವಾಗಿದೆ. ಏಥರ್ ಹ್ಯಾಲೋ ಸ್ಮಾರ್ಟ್ ಹೆಲ್ಮೆಟ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. 

ಏಥರ್ ಸ್ಮಾರ್ಟ್ ಹೆಲ್ಮೆಟ್ ವಿಭಾಗಕ್ಕೆ ತನ್ನ ಏಥರ್ ಹ್ಯಾಲೊ ಉತ್ಪನ್ನ ಸರಣಿ ಮೂಲಕ ಪ್ರವೇಶವನ್ನು ಪ್ರಕಟಿಸಿದೆ. ಏಥರ್ ಹ್ಯಾಲೊ ಪೂರ್ಣ ಮುಖದ, ಟಾಪ್ ಆಫ್ ದಿ ಲೈನ್ ಏಕೀಕೃತ ಸ್ಮಾರ್ಟ್ ಹೆಲ್ಮೆಟ್. ಇದು ಹರ್ಮನ್ ಕಾರ್ಡನ್ ನ ಉನ್ನತ ಗುಣಮಟ್ಟದ ಆಡಿಯೊ ಹೊಂದಿದೆ. ಇದು ರೈಡರ್ ಗಳಿಗೆ ತನ್ನ ಪ್ರೊಪ್ರೈಟರಿ ಆಟೊ ವೇರ್ ಡಿಟೆಕ್ಟ್ ತಂತ್ರಜ್ಞಾನ, ವೈಯರ್‌ಲೆಸ್ ಚಾರ್ಜಿಂಗ್ ದಿಂದ ತಡೆರಹಿತ ಅನುಭವ ನೀಡುತ್ತದೆ ಮತ್ತು ಅವರಿಗೆ ಸ್ಕೂಟರ್ ನ ಹ್ಯಾಂಡಲ್ ಬಾರ್ ಮೂಲಕ ಸಂಗೀತ ಮತ್ತು ಕರೆಗಳನ್ನು ನಿಯಂತ್ರಿಸುವ ಅವಕಾಶ ನೀಡುತ್ತದೆ. ಹ್ಯಾಲೊ ಏಥರ್ ಚಿಟ್ ಚಾಟ್ ನೊಂದಿಗೆ ಬಂದಿದ್ದು ಅದು ಹೆಲ್ಮೆಟ್ ನಿಂದ ಹೆಲ್ಮೆಟ್ ಸಂವಹನವನ್ನು ರೈಡರ್ ಮತ್ತು ಪಿಲಿಯನ್ ನಡುವೆ ಸಾಧ್ಯವಾಗಿಸುತ್ತದೆ. ಇದು ಸ್ವಚ್ಛ ಮತ್ತು ಭವಿಷ್ಯಾತ್ಮಕ ವಿನ್ಯಾಸವಾಗಿದೆ ಮತ್ತು ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

 ಹೊಸ ಏಥರ್ ರಿಝ್ತಾ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ಬೆಲೆ ಕೇವಲ 1,09,999 ರೂಪಾಯಿ!

ಏಥರ್ ಹರ್ಮನ್ ಕಾರ್ಡನ್ ಜೊತೆ ಪಾಲುದಾರಿಕೆ ಹೊಂದಿದ್ದು ಉತ್ತಮ ಗುಣಮಟ್ಟದ ಆಡಿಯೊ ಮೂಲಕ ರೈಡ್ ಅನುಭವವನ್ನು ಹೆಚ್ಚಿಸುತ್ತದೆ. ಏಥರ್ ಅನ್ನು ರೈಡರ್ ಗೆ ಪ್ರಮುಖ ಶಬ್ದಗಳನ್ನು ಕೇಳಿಸಲು ಅವಕಾಶ ಕಲ್ಪಿಸುವ ಮೂಲಕ ಹೆಚ್ಚುವರಿ ಸುರಕ್ಷತೆಯ ಪದರ ಸೇರಿಸಿ ವಿನ್ಯಾಸಗೊಳಿಸಲಾಗಿದ್ದು ಇದರಿಂದ ತಡೆರಹಿತ ಮತ್ತು ಸುರಕ್ಷಿತ ಆಲಿಸುವ ಅನುಭವ ನೀಡುತ್ತದೆ. 

ಸ್ಕೂಟರ್‌ನೊಂದಿಗೆ ಹೆಲ್ಮೆಟ್‌ನ ತಡೆರಹಿತ ಜೋಡಣೆಯನ್ನು ನಂಬುತ್ತದೆ, ಅದರಲ್ಲಿ ವಿಶೇಷವಾಗಿ ರಿಜ್ಟಾದ ಬೂಟ್ ನಲ್ಲಿ ವಿಶೇಷವಾಗಿ ರೂಪಿಸಿದ ವೈರ್ ಲೆಸೆ ಚಾರ್ಜಿಂಗ್ ಪರಿಹಾರ ಅಭಿವೃದ್ಧಿಪಡಿಸಿದೆ. ಹ್ಯಾಲೊದ ವೇರ್ ಡಿಟೆಕ್ಟ್ ತಂತ್ರಜ್ಞಾನವು ಹೆಲ್ಮೆಟ್ ಧರಿಸಿದಾಗ ಅದನ್ನು ಗುರುತಿಸಲು ಅನುಮತಿಸುತ್ತದೆ, ಹೆಲ್ಮೆಟ್, ಫೋನ್ ಮತ್ತು ಸ್ಕೂಟರ್‌ನ್ನು ತಡೆರಹಿತ 3 ರೀತಿಯಲ್ಲಿ ಜೋಡಿಸುತ್ತದೆ. ಇದೆಲ್ಲವೂ ಹ್ಯಾಲೊ ಜೊತೆಗೆ ಆಕರ್ಷಕ, ಆನಂದದಾಯಕ ಮತ್ತು ಸುರಕ್ಷಿತ ಸವಾರಿಯನ್ನು ಖಾತ್ರಿಗೊಳಿಸುತ್ತದೆ ಎಂದು ಏಥರ್ ನಂಬುತ್ತದೆ. 

ಇದರ ಜೊತೆಗೆ, ಏಥರ್ ಹ್ಯಾಲೋ ಬಿಟ್ ಅನ್ನು ಪರಿಚಯಿಸಿದೆ, ಇದು ಏಥರ್ ನ ಹಾಫ್ ಫೇಸ್ ಹೆಲ್ಮೆಟ್ಗಳಿಗೆ ಜೋಡಿಸಬಹುದಾದ ಮಾದರಿ.  ಏಥರ್ ಐಎಸ್ಐ ಮತ್ತು ಡಾಟ್ ಪ್ರಮಾಣೀಕೃತ ಅರ್ಧಮುಖದ ಹೆಲ್ಮೆಟ್ ಅನ್ನು ಅಭಿವೃದ್ಧಿಪಡಿಸಿದೆ, ಇದು ಶೀಘ್ರದಲ್ಲೇ ಎಲ್ಲಾ ಗ್ರಾಹಕರಿಗೆ ಲಭ್ಯವಿರುತ್ತದೆ ಮತ್ತು ಹ್ಯಾಲೊಬಿಟ್ ನೊಂದಿಗೆ ಹೊಂದಿಕೊಳ್ಳುತ್ತದೆ, ಪ್ರತಿ ಏಥರ್ ಹೆಲ್ಮೆಟ್ ಅನ್ನು ಸ್ಮಾರ್ಟ್ ಹೆಲ್ಮೆಟ್ ಮಾಡಲು ಅನುವು ಮಾಡಿಕೊಡುತ್ತದೆ. ಹ್ಯಾಲೊ ಪ್ರಾರಂಭಿಕ ಬೆಲೆ ರೂ.12,999 ಮತ್ತು ಹ್ಯಾಲೊಬಿಟ್ ರೂ. 4,999 ಆಗಿದೆ.

10 ರೂ ನಾಣ್ಯ ಕೂಡಿಟ್ಟು 1.10 ಲಕ್ಷ ಬೆಲೆಯ ಎದರ್ ಸ್ಕೂಟರ್ ಖರೀದಿ,ಸಂತಸ ವ್ಯಕ್ತಪಡಿಸಿದ ಸಿಇಒ!

ನಾವು ಹೆಲ್ಮೆಟ್ ಗಳನ್ನು ಕಡ್ಡಾಯಕ್ಕಿಂತ ಮುಖ್ಯವಾಗಿ ಮೋಜಿನ, ಆಕರ್ಷಕವಾದ ಸವಾರಿಯ ಅವಿಭಾಜ್ಯ ಅಂಗವಾಗಿ ಪರಿವರ್ತಿಸಲು ಬಯಸಿದ್ದೇವೆ ಎಂದು ಏಥರ್ ಎನರ್ಜಿಯ ಸಹ-ಸಂಸ್ಥಾಪಕ ಸ್ವಪ್ನಿಲ್ ಜೈನ್ ಹೇಳಿದ್ದಾರೆ.ಹೀಗಾಗಿ ನಾವು  ಹ್ಯಾಲೊ ನಿರ್ಮಿಸಿದ್ದೇವೆ, ಇದು ಹರ್ಮನ್ ಕಾರ್ಡನ್ ನಿಂದ ಉನ್ನತ ಗುಣಮಟ್ಟದ ಧ್ವನಿಯನ್ನು ನೀಡುತ್ತದೆ ಮತ್ತು ನಮ್ಮ ಪ್ರೊಪ್ರೈಟರಿ ಆಟೊ ವೇರ್ ಡಿಟೆಕ್ಟ್ ತಂತ್ರಜ್ಞಾನ ಮತ್ತು ವೈರ್ಲೆಸ್ ಚಾರ್ಜಿಂಗ್ ಅನ್ನು ಸಂಯೋಜಿಸುತ್ತದೆ. ಹ್ಯಾಲೊನೊಂದಿಗೆ ನಾವು ಚಿಟ್ ಚಾಟ್ ಮತ್ತು ಮ್ಯೂಸಿಕ್ ಶೇರಿಂಗ್ ನಂತಹ ವಿಶೇಷತೆಗಳನ್ನು ಪಿಲಿಯನ್ಗೆ ಕೂಡಾ ವಿಸ್ತರಿಸುವುದನ್ನು ಖಚಿತಪಡಿಸುತ್ತೇವೆ ಎಂದರು.
 

click me!