ಕಾಂತಿ ಸ್ವೀಟ್‌ನ ಪೇಪರ್ ಬ್ಯಾಗ್. ಈ ಬ್ಯಾಗನ್ನೇ ಹಿಂಬದಿ ಬೈಕ್ ಸವಾರ ಹೆಲ್ಮೆಟ್ ಆಗಿ ಬಳಸಿ ಸಿಟಿ ಸುತ್ತಾಡಿದ್ದಾನೆ. ಈ ಫೋಟೋ ಭಾರಿ ವೈರಲ್ ಆಗಿದೆ. ಜನರು ಬಗೆ ಬಗೆಯ ಕಮೆಂಟ್ ಮಾಡಿದ್ದಾರೆ.
ಬೆಂಗಳೂರು(ನ.14) ಬೆಂಗಳೂರಿನ ಚಿತ್ರ ವಿಚಿತ್ರಗಳು ದೇಶಾದ್ಯಂತ ಸದ್ದು ಮಾಡುತ್ತದೆ. ಇಲ್ಲಿನ ಟ್ರಾಫಿಕ್, ತಂತ್ರಜ್ಞಾನ ಬಳಕೆ ಸೇರಿದಂತೆ ಹಲವು ವಿಚಾರಗಳು ಭಾರಿ ವೈರಲ್ ಆಗಿದೆ. ಇದೀಗ ಪೇಪರ್ ಬ್ಯಾಗ್ ಹೆಲ್ಮೆಟ್ ಟ್ರಂಡ್ ಆಗುತ್ತಿದೆ. ಹಿಂಬದಿ ಬೈಕ್ ಸವಾರ ಬೆಂಗಳೂರು ಪೊಲೀಸರ ಎಐ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಪೇಪರ್ ಬ್ಯಾಗನ್ನೇ ಹೆಲ್ಮೆಟ್ ಆಗಿ ಬಳಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇದು ಶೇಕಡ 100 ರಷ್ಟು ಮರುಬಳಕೆ ಪ್ಲಾನ್. ಆದರೆ ಸುರಕ್ಷತೆ ಶೂನ್ಯ ಎಂದು ಕಮೆಂಟ್ ಮಾಡಿದ್ದಾರೆ.
ಪೀಕ್ ಬೆಂಗಳೂರು ಹ್ಯಾಶ್‌ಟ್ಯಾಗ್‌ನಲ್ಲಿ ಉದ್ಯಾನ ನಗರಿಯ ಹಲವು ವಿಡಿಯೋಗಳು, ತಮಾಷೆ ಘಟನೆಗಳು, ಅತ್ಯಾಧುನಿಕ ತಂತ್ರಜ್ಞಾನದ ಬಳಕೆಗಳು ಮೀಮ್ಸ್ ಸೇರಿದಂತೆ ಭಾರಿ ಟ್ರೆಂಡ್ ಆಗಿದೆ. ಇದೀಗ ನಗರದಲ್ಲಿ ಬೈಕ್ ಸವಾರನ ಹೆಲ್ಮೆಟ್ ಭಾರಿ ಟ್ರೆಂಡ್ ಸೃಷ್ಟಿ ಮಾಡಿದೆ. ಇಷ್ಟೇ ಅಲ್ಲ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
Traffic Violation ಎರಡು ಕೈಯಲ್ಲಿ ಎರಡು ಫೋನ್, ಬೈಕ್‌ನಲ್ಲಿ ಸಾಹಸಕ್ಕೆ ಬಿತ್ತು ದುಬಾರಿ ಫೈನ್!
ಇಬ್ಬರು ಬೈಕ್ ಮೂಲಕ ನಗರದಲ್ಲಿ ತೆರಳಿದ್ದಾರೆ. ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದಾನೆ. ಆದರೆ ಹಿಂಬದಿ ಸವಾರನ ಬಳಿ ಹೆಲ್ಮೆಟ್ ಇಲ್ಲ. ಈತ ಕಾಂತಿ ಸ್ವೀಟ್ ಶಾಪ್‌ನಲ್ಲಿ ಸ್ವೀಟ್ ಖರೀದಿಸುವಾಗ ನೀಡುವ ಪೇಪರ್ ಬ್ಯಾಗನ್ನೇ ಹೆಲ್ಮೆಟ್ ಆಗಿ ಬಳಸಿದ್ದಾರೆ. ಈ ಪೇಪರ್ ಬ್ಯಾಗನ್ನೇ ತಲೆಗೆ ಹಾಕಿಕೊಂಡಿದ್ದಾನೆ. ಥರ್ಡ್ಐ ಅನ್ನೋ ಟ್ವಿಟರ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಈ ಫೋಟೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಪೊಲೀಸರು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್(AI) ಕ್ಯಾಮೆರಾ ಅಳವಡಿಸಿದ್ದಾರೆ. ಈತ AI ಕ್ಯಾಮೆರಾಗಳನ್ನು ಪರೀಕ್ಷಿಸುತ್ತಿದ್ದಾನೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. AI ಕ್ಯಾಮೆರಾಗೆ ಕನ್ಫ್ಯೂಸ್ ಆಗಿ ಬೈಕ್ ಸವಾರನಿಗೆ ದಂಡ ಹಾಕದೇ ಕಳುಹಿಸಿಕೊಡುತ್ತದೆ ಎಂದು ಮತ್ತೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
Helmet, what's that? 🤣🤣🤣 pic.twitter.com/8WwA8ICVfz
— ThirdEye (@3rdEyeDude)
ಕಾಂತಿ ಸ್ವೀಟ್ ಪೇಪರ್ ಬ್ಯಾಗನಿನ ಶೇಕಡ 100 ರಷ್ಟು ಮರುಬಳಕೆ, ಆದರೆ ಶೇಕಡಾ 0 ಸುರಕ್ಷತೆ ಎಂದು ಕಮೆಂಟ್ ಮಾಡಿದ್ದಾರೆ. ಕಾಂತಿ ಸ್ವೀಟ್ ಪೇಪರ್ ಬ್ಯಾಗ್ ಮಾಡಿದಾತ, ಈ ಬ್ಯಾಗ್ ಈ ರೀತಿ ಬಳಕೆಯಾಗುತ್ತೆ ಎಂದು ಊಹಿಸಿರಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇದು ಹೆಲ್ಮೆಟ್ ಅಲ್ಲ, ಪ್ಯಾಕ್ಲೆಟ್ ಎಂದು ಹೊಸ ಹೆಸರು ನೀಡಿದ್ದಾರೆ.
ಹಾಫ್ ಹೆಲ್ಮೆಟ್ ಧರಿಸಿದರೆ ಇನ್ನು ದಂಡ, ಪ್ರಾಣ ರಕ್ಷಣೆಗೆ ಸಂಚಾರಿ ಪೊಲೀಸರು ಬದ್ಧ!
ಇದು ಕಾಂತಿ ಸ್ವೀಟ್ ಹೊಸದಾಗಿ ನೇಮಿಸಿದ ಮಾರ್ಕೆಂಟ್ ಎಕ್ಸ್‌ಕ್ಯೂಟೀವ್. ಈತನ ಐಡಿಯಾದಿಂದ ಇದೀಗ ಕಾಂತಿ ಸ್ವೀಟ್ ಭಾರಿ ಜನಪ್ರೀಯತೆ ಪಡೆದುಕೊಂಡಿದೆ ಎಂದಿದ್ದಾರೆ. ಮತ್ತೆ ಕೆಲವರು ರಾಜಕೀಯ ಬಣ್ಣ ಲೇಪಿಸಿದ್ದಾರೆ. ಕಾಂಗ್ರೆಸ್ ಹಲವು ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಿದೆ. ಇದೀಗ ಅಭಿವೃದ್ಧಿಗೆ ಹಣವಿಲ್ಲದೆ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.