ಟಾಟಾ ಮೋಟಾರ್ಸ್‌ನಿಂದ 100 ಎಲೆಕ್ಟ್ರಿಕ್ ಬಸ್ ಖರೀದಿಸಿದ ಅಸ್ಸಾಂ ಸಿಎಂ ಹಿಮಂತ ಶರ್ಮಾ!

By Suvarna News  |  First Published Jan 3, 2024, 10:24 PM IST

ಸಿಎಂ ಹಿಮಂತ ಬಿಸ್ವಾ ಶರ್ಮಾ ಅಭಿವೃದ್ಧಿ ಮೂಲಕ ಅಸ್ಸಾಂನಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ಇದೀಗ ಮಾಲಿನ್ಯ ನಿಯಂತ್ರಣ, ಕಡಿಮೆ ವೆಚ್ಚ, ಸುಲಭ ಸಾರಿಗೆ ಸಂಪರ್ಕಕ್ಕಾಗಿ ಟಾಟಾ ಮೋಟಾರ್ಸ್‌ನಿಂದ 100 ಎಲೆಕ್ಟ್ರಿಕ್ ಬಸ್ ಖರೀದಿಸಿದ್ದಾರೆ. 
 


ಗುವ್ಹಾಟಿ(ಜ.03) ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ಸಾರಿಗೆ ಸಂಸ್ಥೆಗಳು ಎಲೆಕ್ಟ್ರಿಕ್ ಬಸ್‌ಗಳ ಮೊರೆ ಹೋಗುತ್ತಿದೆ. ಪರಿಸರಕ್ಕೆ ಪೂರಕ, ಮಾಲಿನ್ಯ ನಿಯಂತ್ರಣ, ಸುಲಭ ನಿರ್ವಹಣೆ ಹಾಗೂ ಸುಲಭ ಸಾರಿಗೆ ಸಂಪರ್ಕಕ್ಕೆ ಎಲೆಕ್ಟ್ರಿಕ್ ಬಸ್ ಬಳಕೆ ಮಾಡಲಾಗುತ್ತಿದೆ. ಇದೀಗ ಅಸ್ಸಾಂ ಸಾರಿಗೆ ನಿಗಮಕ್ಕೆ ಟಾಟಾ ಮೋಟಾರ್ಸ್ 100 ಎಲೆಕ್ಟ್ರಿಕ್ ಬಸ್ ಪೂರೈಸಿದೆ. ಟಾಟಾ ಮೋಟಾರ್ಸ್ ಅಲ್ಟ್ರಾ ಎಲೆಕ್ಟ್ರಿಕ್ ಬಸ್ ಗುವ್ಹಾಟಿ ನಗರದಲ್ಲಿ ಸಂಚರಿಸಲಿದೆ. ಈ ಬಸ್ ಅತ್ಯಂತ ಸುರಕ್ಷಿತ, ಆರಾಮದಾಯಕ ಮತ್ತು ಅನುಕೂಲಕರವಾದ ನಗರ ಪ್ರಯಾಣದ ಅನುಭವವನ್ನು ನೀಡಲಿವೆ.  ಸುಧಾರಿತ ಅತ್ಯಾಧುನಿಕ ಬ್ಯಾಟರಿಯಿಂದ ಚಲಾಯಿಸಲ್ಪಡುವ ಈ ಬಸ್ ಗಳು ಸಂಪೂರ್ಣ ಪರಿಸರಸ್ನೇಹಿಯಾಗಿವೆ. 100 ಬಸ್‌ಗಳಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಚಾಲನೆ ನೀಡಿದರು. 

ಟಾಟಾ ಮೋಟರ್ಸ್ ಇದುವರೆಗೆ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಿಗೆ 1500 ಕ್ಕೂ ಹೆಚ್ಚು ಬಸ್ ಗಳನ್ನು ಪೂರೈಕೆ ಮಾಡಿದೆ. ಈ ಬಸ್ ಗಳು 10 ಕೋಟಿ ಕಿಲೋಮೀಟರ್ ಗೂ ಅಧಿಕ ದೂರದವರೆಗೆ ಕ್ರಮಿಸಿದೆ. ಶೇ.95 ರಷ್ಟು ಕಾರ್ಯಕ್ಷಮತೆಯನ್ನು ಹೊಂದಿರುವುದನ್ನು ಸಾಬೀತುಪಡಿಸಿವೆ. ಟಾಟಾ ಅಲ್ಟ್ರಾ ಇವಿ ಒಂದು ಕಟ್ಟಿಂಗ್ ಎಡ್ಜ್ ಇ-ಬಸ್ ಆಗಿದ್ದು ನಗರ ಪ್ರದೇಶದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿವೆ. ಇದರ ಪೂರ್ಣ ಎಲೆಕ್ಟ್ರಿಕ್ ಡ್ರೈವ್ ಟೋನ್ ನೊಂದಿಗೆ ಈ ಅತ್ಯಾಧುನಿಕ ವಾಹನಗಳು ಶಕ್ತಿ ಬಳಕೆಯನ್ನು ಉತ್ತಮಗೊಳಿಸುತ್ತವೆ. 

Latest Videos

undefined

ಮಂಗಳೂರು ವಿಮಾನ ನಿಲ್ದಾಣಕ್ಕೆ ಶೀಘ್ರ ಎಲೆಕ್ಟ್ರಿಕ್‌ ಬಸ್‌ ಸಂಚಾರ..!

ಇವುಗಳು ಕಡಿಮೆ ಶಕ್ತಿಯ ಅಂದರೆ ವಿದ್ಯುತರ್ ಬಳಕೆ ಮತ್ತು ಕಾರ್ಯಾಚರಣೆ ವೆಚ್ಚವನ್ನು ಕಡಿಮೆ ಮಾಡುತ್ತವೆ. ಈ ಬಸ್ ನ ಬೋರ್ಡಿಂಗ್ ಸುಲಭವಾಗಿದ್ದು, ಆರಾಮದಾಯಕವಾದ ಆಸನ ವ್ಯವಸ್ಥೆ ಮತ್ತು ಚಾಲಕಸ್ನೇಹಿ ಕಾರ್ಯಾಚರಣೆಗಳಂತಹ ವೈಶಿಷ್ಟ್ಯತೆಗಳನ್ನು ಹೊಂದಿದೆ. ಸಂಪೂರ್ಣವಾಗಿ ಶೂನ್ಯ ಮಾಲಿನ್ಯ ಹೊರಸೂಸುವಿಕೆಯನ್ನು ಖಚಿತಪಡಿಸುವುದರಿಂದ ಇದು ಪರಿಸರ ಸ್ನೇಹಿ ವಾಹನವಾಗಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್, ಏರ್ ಸಸ್ಪೆನ್ಷನ್, ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ (ITS) ಮತ್ತು ಪ್ಯಾನಿಕ್ ಬಟನ್ ನಂತಹ ಇನ್ನಿತರ ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಹೊಂದಿದೆ. ಈ ಮೂಲಕ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಈ ಎಲೆಕ್ಟ್ರಿಕ್ ಬಸ್ ಸ್ವಚ್ಛವಾದ ಸಾರ್ವಜನಿಕ ಬದ್ಧತೆಯನ್ನು ಸಾಕಾರಗೊಳಿಸುತ್ತದೆ ಮತ್ತು ನಗರ ಪ್ರದೇಶದ ಪ್ರಯಾಣಿಕರ ಪ್ರಯಾಣದ ಅಗತ್ಯತೆಗಳಿಗೆ ಸೂಕ್ತವಾದ ಆಯ್ಕೆಯಾಗಿದೆ.

ದೇಶದ 169 ನಗರಗಳಲ್ಲಿ 10 ಸಾವಿರ ಇ-ಬಸ್‌ ಬಿಡಲು ಕೇಂದ್ರ ಸರ್ಕಾರ ನಿರ್ಧಾರ

ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು ನಮ್ಮ ಧ್ಯೇಯವಾಗಿದೆ ಮತ್ತು ಆಧುನಿಕ ಎಲೆಕ್ಟ್ರಿಕ್ ಬಸ್ ಗಳನ್ನು ಪೂರೈಸಲು ನಮಗೆ ಅವಕಾಶ ನೀಡಿರುವ ಅಸ್ಸಾಂ ರಾಜ್ಯ ಸರ್ಕಾರ ಮತ್ತು ASTC ಗೆ ನಾವು ಕೃತಜ್ಞರಾಗಿರುತ್ತೇವೆ ಎಂದು  ಟಾಟಾ ಮೋಟರ್ಸ್ ಉಪಾಧ್ಯಕ್ಷ & ಬ್ಯುಸಿನೆಸ್ ಮುಖ್ಯಸ್ಥ ರೋಹಿತ ಶ್ರೀವಾಸ್ತವ ಹೇಳಿದ್ದಾರೆ.  

click me!