Davanagere job fair ಧರ್ಮ ಮನುಷ್ಯನಿಗೆ ಇರಬೇಕು ಧರ್ಮಕ್ಕಾಗಿ ಮನುಷ್ಯ ಅಲ್ಲ Siddaramaiah

By Suvarna News  |  First Published Apr 23, 2022, 6:16 PM IST

ಕೊವಿಡ್ , ನೋಟು ಅಮಾನ್ಯೀಕರಣದ ನಂತರ ರಾಜ್ಯದಲ್ಲಿ ಸೃಷ್ಟಿಯಾಗಿರುವ ನಿರುದ್ಯೋಗ ದ ಬಗ್ಗೆ ದಾವಣಗೆರೆ ಜಿಲ್ಲೆ ಹರಿಹರದ ಪಂಚಮಸಾಲಿ ‌ಮಠದಲ್ಲಿ  ಮಾತನಾಡಿದ ಸಿದ್ದರಾಮಯ್ಯ ಬೃಹತ್ ಉದ್ಯೋಗ ಮೇಳ ಆಯೋಜಿಸಿರುವ ಸ್ವಾಮೀಜಿ ಆಶಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ(ಏ.23):  ದಾವಣಗೆರೆ ಜಿಲ್ಲೆ ಹರಿಹರದ ಪಂಚಮಸಾಲಿ ‌ಮಠದಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚಮಸಾಲಿ ವೀರಸೇನಾನಿಗಳ ಭಾವಚಿತ್ರ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಸಿದ್ಧರಾಮಯ್ಯ ಕೊವಿಡ್ , ನೋಟು ಅಮಾನ್ಯೀಕರಣದ ನಂತರ ರಾಜ್ಯದಲ್ಲಿ ಸೃಷ್ಟಿಯಾಗಿರುವ ನಿರುದ್ಯೋಗ ದ ಬಗ್ಗೆ ಮಾತನಾಡಿದರು. ಬೃಹತ್ ಉದ್ಯೋಗ ಮೇಳ ಆಯೋಜಿಸಿರುವ ಸ್ವಾಮೀಜಿ ಆಶಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Latest Videos

undefined

ಉದ್ಯೋಗ ಒದಗಿಸುವುದು ಸರ್ಕಾರದ ಕರ್ತವ್ಯ. 2016ರಲ್ಲಿ ನೋಟು ಅಮಾನ್ಯೀಕರಣದ ಬಳಿಕ 11 ಕೋಟಿ ನಿರುದ್ಯೋಗ ಸೃಷ್ಟಿಯಾಗಿದೆ. ಸಣ್ಣ, ಅತಿಸಣ್ಣ ಉದ್ದಿಮೆಗಳಿಂದ ಕೇವಲ ಈಗ ಎರಡೂವರೆ ಕೋಟಿ ಉದ್ಯೋಗಗಳು ಮಾತ್ರ ದೊರೆಯುತ್ತಿವೆ.

ಪದವಿ ಪಡೆದವರಿಗೆ ಉದ್ಯೋಗ ಇಲ್ಲ. ಅವರಿಗೆ ಉದ್ಯೋಗ ಸೃಷ್ಟಿಯಾಗದೇ ಹೋದರೆ, ಸೃಷ್ಟಿ ಮಾಡದೇ ಹೋದರೆ ಅವರು ನಿರುಪಯುಕ್ತರಾಗದೇ ಹೋದರೆ ನಿರುಪಯೋಗಿಗಳಾಗಿ ಹೋಗುತ್ತಾರೆ. ಎಲ್ಲರಿಗೂ ಉದ್ಯೋಗ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ರಾಜ್ಯದಲ್ಲಿ 2 ವರ್ಷಗಳಿಂದ ಹೂಡಿಕೆಯೇ ಆಗಿಲ್ಲ. ಹೂಡಿಕೆ ಇಲ್ಲದೇ  ಉದ್ಯೋಗ ಸೃಷ್ಟಿಯಾಗುವುದಿಲ್ಲ. ಕಾನೂನಿನ ಸುವ್ಯವಸ್ಥೆಗೂ ಉದ್ಯೋಗ ಸೃಷ್ಟಿಗೂ ನೇರ ಸಂಬಂಧವಿದೆ. ಕಾನೂನು ಸುವ್ಯವಸ್ಥೆ ಇದ್ದರೆ ಉದ್ಯಮಿಗಳು ಬರುತ್ತಾರೆ. ಜನರ ಕೈಯಲ್ಲಿ ಹಣ ಬಂದರೆ ಕೊಡುಗೆ ನೀಡುತ್ತಾರೆ.

CBSE SYLLABUS 2022-23 ಪಠ್ಯಕ್ರಮದಲ್ಲಿ ಸಿಬಿಎಸ್‌ಸಿಯಿಂದ ಭಾರೀ ಬದಲಾವಣೆ

ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮ ಕೊಂಡಾಡಿದ ಸಿದ್ದರಾಮಯ್ಯ: ಬೆಳವಾಡಿ ಮಲ್ಲಮ್ಮ 3000 ಹೆಣ್ಣುಮಕ್ಕಳಿಗೆ ಸೈನ್ಯ ಕಟ್ಟಿದ್ದರು  ಅದು ತಮಾಷೆಯಲ್ಲ.  ಆ ಮಹಿಳೆ ಶೌರ್ಯ, ಸಮರಕಲೆ ನೋಡಿ ಶಿವಾಜಿಯವರೇ ಹಿಂದೆ ಸರಿದಿದ್ದರು. ಕೆಳದಿ ಚೆನ್ನಮ್ಮ 17ನೇ ಶತಮಾನದಲ್ಲಿ,  1924ರಲ್ಲಿ ಥ್ಯಾಕರೆಯನ್ನು ಕೊಂದು ಬಿಸಾಡಿದ ಕಿತ್ತೂರು ರಾಣಿ ಚೆನ್ನಮ್ಮ.

ಅವರ ಜತೆಗೆ ಸಂಗೊಳ್ಳಿ ರಾಯಣ್ಣನನ್ನು ಮರೆಯುವಂತಿಲ್ಲ. ಚೆನ್ನಮ್ಮ ಜೈಲು ಸೇರಿದಾಗ ಗೆರಿಲ್ಲಾಯುದ್ಧ ಮಾಡಿದ್ದರು. ಅವರನ್ನು ನೇಣುಗಂಬಕ್ಕೆ ಏರಿಸಲಾಗಿತ್ತು. 1930ರಲ್ಲಿ ದಂಡಿಯಾತ್ರೆ ನಡೆದಾಗ ಅದರಲ್ಲ ಭಾಗವಹಿಸಿದ್ದ ಏಕೈಕ ಹೋರಾಟಗಾರ ಮೈಲಾರ ಮಹದೇವ ಅವರು ಗುಂಡಿಗೆ ಬಲಿಯಾಗಿದ್ದರು,
ಕಂಬಳಿ ಸಿದ್ದಪ್ಪ ಶಿಕ್ಷಣ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ್ದರು. ನಾನು ಮುಖ್ಯಮಂತ್ರಿಯಾಗಿದ್ದರೆ, ನರೇಂದ್ರ ಮೋದಿ ಪ್ರಧಾನಿಯಾಗಿದ್ದರೆ ಅಂಬೇಡ್ಕರ್‌ ನೀಡಿದ ಸಂವಿಧಾನದ ಪರಿಣಾಮ ಕಾರಣ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಅದಕ್ಕೆ ಕಾರಣ.

ಇವನಾರವ ಇವನಾರವ ಎಂಬ ಬಸವಣ್ಣನವರ ವಚನ ಹೇಳಿದ ಸಿದ್ದು: ಸ್ವತಂತ್ರರಾಗಿ ಸ್ವಾಭಿಮಾನದಿಂದ ಜೀವನ ಸಾಗಿಸಬೇಕು. ಪ್ರತಿಯೊಬ್ಬರಿಗೆ ಸಮಾನ ಅವಕಾಶ ಸಿಗಬೇಕು. ಸಾಮಾಜಿಕ ನ್ಯಾಯ ಸಿಗಬೇಕು. ಪ್ರಜಾಪ್ರಭುತ್ವ ನೆಲೆಗೊಳ್ಳಬೇಕು ಎಂಬುದು ಈ ಎಲ್ಲ ಮಹನಿಯರು ಇಟ್ಟುಕೊಂಡಿದ್ದರು. ನಾವು ಪ್ರತಿಜ್ಞೆ ಮಾಡಬೇಕು. ಈ ಸಂವಿಧಾನ, ಪ್ರಜಾಪ್ರಭುತ್ವ, ದೇಶವನ್ನು ಉಳಿಸಲು ಶಪತ ಮಾಡಬೇಕಿದೆ.

ಇಲ್ಲಿವರೆಗೆ ಏನಾಗಿದೆ, ಮುಂದೆ ಏನಾಗಬೇಕಿದೆ ಎಂದು ಅವಲೋಕನ ಮಾಡಿಕೊಳ್ಳಬೇಕಿದೆ. ಅನೇಕ ಭಾಷೆ, ಧರ್ಮ, ಜಾತಿಯಿಂದ ಕೂಡಿರುವ ದೇಶ. ಭಾರತ ಬಹುತ್ವದ ರಾಷ್ಟ್ರ. ಈ ದೇಶದಲ್ಲಿ ನಾವೆಲ್ಲ ಭಾರತ ಮಾತೆಯ ಮಕ್ಕಳು. ಪ್ರತಿ ಪ್ರಜೆಯು ಮೊದಲು ಭಾರತೀಯ. ಅದಾದ ಮೇಲೆ ನಾನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌. ಕುವೆಂಪು ಅವರು ಹೇಳಿದ ಸರ್ವಜನಾಂಗದ ಶಾಂತಿಯ ತೋಟ ಇದು. ಈ ಸಮಾಜದಲ್ಲಿ ಯಾವುದೇ ಧರ್ಮದ ಆಧಾರದಲ್ಲಿ ಸರ್ಕಾರ ರಚನೆಯಾಗಿಲ್ಲ. ಸರ್ವ ಧರ್ಮಗಳ ಸಮನ್ವಯದಿಂದ ರಚನೆಯಾಗಿದೆ. ಸಹಿಷ್ಣುತೆ ಮತ್ತು ಸಹಬಾಳ್ವೆ ಮಾಡಬೇಕಿದೆ. ಅಂಬೇಡ್ಕರ್‌ ಅವರ ಉದ್ದೇಶವನ್ನು ಇಟ್ಟುಕೊಂಡು ಮಾಡಬೇಕು.

Udupi ಹಿಜಾಬ್ ಹೋರಾಟಗಾರ್ತಿಯರು ಎರಡನೇ ದಿನ ಪಿಯುಸಿ ಪರೀಕ್ಷೆಗೆ ಬರಲೇ ಇಲ್ಲ!

12ನೇ ಶತಮಾನದಲ್ಲಿ ಬಸವಣ್ಣಾಧಿ ಶರಣದು ಇದನ್ನೇ ಬಯಸಿದ್ದು. ಶ್ರೇಣಿಕೃತ ವ್ಯವಸ್ಥೆ ನಿರ್ಣಾಮವಾಗಬೇಕು. ಜಾತಿ ರಹಿತ, ಶ್ರೇಣಿರಹಿತ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. ಇದು ನಮಗೆ ದಾರಿದೀಪವಾಗಬೇಕು.  ಅಂಬೇಡ್ಕರ್‌ ಅವರು ದೇಶದಲ್ಲಿ ಹುಟ್ಟದೇ ಇದ್ದರೆ ಅಸ್ಪೃಶ್ಯತೆ ನಾಶವಾಗುತ್ತಿರಲಿಲ್ಲ. ಶ್ರೇಷ್ಠ ಸಂವಿಧಾನ ನಮ್ಮದಾಗಿದೆ.

ಬಸವಣ್ಣ ಕಟ್ಟಿದ ಕನಸಿನ ಸಮಾಜದ ನಿರ್ಮಾಣಕ್ಕೆ ಸರಿಯಾದ ಸಂವಿಧಾನ ರಚನೆಯಾಗಿದೆ. ವಿಶಾಲವಾದ ಮನೋಭಾವನೆ ಬೆಳೆಸಿಕೊಳ್ಳಬೇಕು. ಎಲ್ಲಕ್ಕಿಂತ ಮಾನವೀಯತೆ ಬಹಳ ಮುಖ್ಯ. ಧರ್ಮ ಮನುಷ್ಯರಿಗಾಗಿ ಇರುವುದು. ಧರ್ಮಕ್ಕಾಗಿ ಮನುಷ್ಯ ಇರುವುದಲ್ಲ. 

ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸನ್ನು, ಸಮಸಮಾಜವನ್ನು ಕಟ್ಟಲು ಬಸವಣ್ಣ, ಅಂಬೇಡ್ಕರ್‌, ಹೋರಾಟಗಾರರ ದಾದಿಯಲ್ಲಿ ನಡೆಯಬೇಕು.
ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತೋತ್ಸವ, ಎಲ್ಲಾ ಕಚೇರಿಗಳಲ್ಲಿ ಬಸವಣ್ಣನ ಫೋಟೊ, 
ಬಿಜಾಪುರ ವಿವಿಗೆ ಅಕ್ಕ ಮಹಾದೇವಿ ಹೆಸರಿಟ್ಟಿದ್ದು ನಮ್ಮ ಸರ್ಕಾರ. ಯುವ ಪೀಳಿಗೆಗೆ ಇವರ ಇತಿಹಾಸ ಪರಿಚಯವಾಗಬೇಕೆಂದು ಆಶಯ ವ್ಯಕ್ತಪಡಿಸಿದರು.

ನನಗೆ ಇಷ್ಟವಾದ ಮುಖ್ಯಮಂತ್ರಿ ಸಿದ್ದರಾಮಯ್ಯ- ವಚನಾನಂದ ಶ್ರೀ: ನನಗೆ ಬಹಳ ಇಷ್ಟವಾದ ಮುಖ್ಯಮಂತ್ರಿಗಳೆಂದರೆ ಅವರು  ಸಿದ್ದರಾಮಯ್ಯ ನವರು ಎಂದು‌ ವಚನಾನಂದ ಶ್ರೀ ಅಭಿಪ್ರಾಯಿಸಿದರು.  ಪಂಚಮಸಾಲಿ ವೀರಸೇನಾನಿಗಳ ಭಾವಚಿತ್ರ ಅನಾವರಣಗೊಳಿಸಿದ ಸಿದ್ದರಾಮಯ್ಯ ನವರನ್ನು ಕುರಿತ ಮಾತನಾಡಿದ ಸ್ವಾಮೀಜಿ
ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಮೂರು  ವರ್ಷ ಅಂತರರಾಷ್ಟ್ರೀಯ ಯೋಗಾದಿನಾಚರಣೆಗೆ ನನಗೆ  ಅವಕಾಶ ಕಲ್ಪಿಸಿದವರು.
ಯಾರು ಗುರುತಿಸದ ಕಾಲದಲ್ಲಿ ಅವರು‌ ನನ್ನನ್ನು ಗುರುತಿಸಿದರು. ಸಿದ್ದರಾಮಯ್ಯ ಒಬ್ಬ  ಯೋಗ ರಾಮಯ್ಯ ನವರು ಎಂದು ವೇದಿಕೆಯಲ್ಲಿ ಹೊಗಳಿದರು.

click me!