ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಎ.20): ದಾವಣಗೆರೆ ಎನ್ ಹೆಚ್ 4 ರಸ್ತೆಯಲ್ಲಿರುವ ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ವಿಭಾಗಮಟ್ಟದ ಸಮಾವೇಶದಲ್ಲಿ ಯಡಿಯೂರಪ್ಪ ಗುಡುಗಿದ್ದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ ದೇಶದಲ್ಲಿ 2011ರಿಂದ 2019 ರವರೆಗು 11.6 ರಷ್ಟು ಬಡತನ ಕಡಿಮೆಯಾಗಿದೆ.ಇದಕ್ಕೆ ಕಾರಣ ಮೋದಿಯವರ ಆಡಳಿತ. 70 ವರ್ಷಗಳ ನಂತರ ರಪ್ತು ಹೆಚ್ಚಾಗಿರುವ ದೇಶ ಭಾರತವಾಗಿದೆ. ನರೇಂದ್ರ ಮೋದಿಯವರ ಸರ್ಕಾರ ದೇಶದಲ್ಲಿ ಭ್ರಷ್ಟಾಚಾರ ಮುಕ್ತಗೊಳಿಸಿ ಸಬ್ ವಿಕಾಸ್ ಸಬ್ ಕಾ ಸಾತ್ ಧಿಕ್ಕಿನಲ್ಲಿ ಮುನ್ನೆಡೆಯುತ್ತಿದೆ. ದೇಶದಲ್ಲಿ ಸಾಮಾಜಿಕ , ಆರ್ಥಿಕ, ಕೃಷಿ ಮಹಿಳಾಸಬಲೀಕರಣ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸುಧಾರಣೆಯಾಗಿದೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ 377 ಜನ ಕಾಂಗ್ರೆಸ್ ನವರು ಠೇವಣಿ ಕಳೆದುಕೊಂಡವರು. ಗೆದ್ದವರು ಎರಡು ಮಾತ್ರ. ಎಲ್ಲಿದೆ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಆದೋಗತಿಯಲ್ಲಿದೆ. ಇಡೀ ವಿಶ್ವವೇ ಭಾರತವನ್ನು ನೋಡುತ್ತಿದೆ. ಶೇ 80 ರಷ್ಟು ಜನರಿಗೆ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದೆ.ಇದು ಸಾಮಾನ್ಯವಿಷಯವಲ್ಲ. ಬೇರೆ ದೇಶದ ಹಸಿವು ನೀಗಿಸಲು ಸಿದ್ಧವಾಗಿದೆ. ಕಾಂಗ್ರೆಸ್ ಈಗ ತಬ್ಬಲಿಯ ಮಕ್ಕಳು, ಮುಳುಗುತ್ತಿರುವ ಹಡಗು, ಕರ್ನಾಟಕ ದಲ್ಲಿ ಕಾಂಗ್ರೆಸ್ ಉಸಿರಾಡುತ್ತಿದೆ.
Garbage collection fee Hike ಚಿಕ್ಕಮಗಳೂರು ನಗರಸಭೆ ಕಸ ಸಂಗ್ರಹ ವಿರುದ್ಧ ಕಾಂಗ್ರೆಸ್
ಇನ್ನೊಂದು ವಾರದಲ್ಲಿ ಪ್ರತಿ ಜಿಲ್ಲಾ ಕೇಂದ್ರಕ್ಕೆ ಹೋಗುತ್ತಿದ್ದೇವೆ. ಪ್ರಧಾನಿ ಮಂತ್ರಿ ಕೊಟ್ಟಿರುವ 150 ಗುರಿ ಮುಟ್ಟುತ್ತೇವೆ. ನರೇಂದ್ರ ಮೋದಿಯವರು 7 ವರೆ ವರ್ಷದಲ್ಲಿ ಒಂದು ದಿನ ವಿಶ್ರಾಂತಿ ಪಡೆದಿಲ್ಲ. ನಾವು ಹೇಗೆ ಕೆಲಸ ಮಾಡಬೇಕು ಯೋಚಿಸಿ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು. ನಾವು 7 ಕ್ಷೇತ್ರಗಳನ್ನು ಗೆಲ್ಲಬೇಕು.ದಾವಣಗೆರೆ ಬೆಣ್ಣೆದೋಸೆ ಅಷ್ಟೇ ಅಲ್ಲ ಬಿಜೆಪಿಗು ಬೆಣ್ಣೆದೋಸೆಯಾಗಬೇಕು.ಜಿಎಂ ಸಿದ್ದೇಶ್ವರ್ ಅಂತಹ ಒಳ್ಳೆ ಲೀಡರ್ ಇದ್ದಾರೆ ಅವರ ಶಕ್ತಿ ಬಳಸಿಕೊಳ್ಳಿ ಎಂದರು.
ಹಣ ಹೆಂಡ ಹಂಚಿ ಚುನಾವಣೆ ಗೆಲ್ಲುವ ವಾತವರಣ ಹೋಗಿದೆ. ಪ್ರತಿವಾರ್ಡ್ ನಲ್ಲು ಕಾರ್ಯಕರ್ತರನ್ನು ಗಟ್ಟಿಮಾಡಿ ಮೋದಿಯವರ ಸಾಧನೆ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ ಎಂದರು. ಚುನಾವಣೆಗೆ ಒಂದು ವರ್ಷ ಇದೆ ಗ್ರಾಮ ಮಟ್ಟದಲ್ಲಿ ಪಕ್ಷ ಬಲಗೊಳ್ಳಬೇಕು ಅದಕ್ಕೆ ಪ್ರತಿಯೊಂದು ಊರಲ್ಲಿ ಬಿಜೆಪಿ ಮೊಳಗಬೇಕು ಎಂದರು.
Mangaluru ಪ್ರಾಧ್ಯಾಪಕಿ ಬಗ್ಗೆ ಅಶ್ಲೀಲ ಬರಹ, ಕಾಲೇಜಿನ ಸಂಚಾಲಕ ಸೇರಿ ಸಿಬ್ಬಂದಿ ಬಂಧನ
ಕಾಂಗ್ರೆಸ್ ಮುಖಂಡರು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ವಾತವರಣ ಅನುಕೂಲಕರವಾಗಿದೆ. ಯಡಿಯೂರಪ್ಪ ಇನ್ನು ಒಂದು ವರ್ಷ ಮನೆ ಸೇರುವ ಪ್ರಶ್ನೆ ಇಲ್ಲ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಬಹುದು , ನಾನು ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ. ಆ 150 ಗುರಿಯನ್ನು ಮುಟ್ಟುವವರೆಗು ನಾನು ವಿರಮಿಸುವುದಿಲ್ಲ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸವಲತ್ತುಗಳನ್ನು ಪಡೆದ ಮನೆ ಹುಡುಕಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಅಟಲ್ ಜೀ ಸೋತಿದ್ದು ನಾವು ಕಾರ್ಯಕ್ರಮಗಳನ್ನು ತಲುಪಿಸಲಿಲ್ಲ. ಅದಕ್ಕೆ ಅಟಲ್ ಜೀ ಸೋತರು. ಮೋದಿಯವರ ಕಾರ್ಯಕ್ರಮಗಳನ್ನು ತಲುಪಿಸುವ ಕೆಲಸ ಮಾಡಬೇಕು. ನಾನು ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಕೆಲವರು ಮಾತನಾಡುತ್ತಿದ್ದಾರೆ. ಪಕ್ಷ ಹಿರಿಯರು ಕಿರಿಯರು ಯಾರಿಗು ಹೇಳಿದ್ರು ಅವರು ಸ್ಪರ್ಧಿಸಬೇಕು ಎಂದು ಹೇಳುವ ಮೂಲಕ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಗೋವಿಂದ ಕಾರಜೋಳ: ಕಾಂಗ್ರೆಸ್ ನವರು ಬಹಳ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ.ನಿನ್ನೆ ಮೊನ್ನೆ ಮಠಾದೀಶರನ್ನು ಬಳಕೆಮಾಡಿಕೊಂಡು ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.ಇದು ಕಾಂಗ್ರೆಸ್ ಕೀಳುಮಟ್ಟದ ರಾಜಕಾರಣ.ರಾಜ್ಯದಲ್ಲಿನ ಮಠಗಳಿಗೆ ಭಕ್ತರು ರೂಪಾಯಿ ಕಾಣಿಕೆ ನೀಡುತ್ತಿದ್ದರು.ಯಡಿಯೂರಪ್ಪ ಸಿ ಎಂ ಆದಾಗ ಎಲ್ಲಾ ಮಠಾಧೀಶರಿಗೆ ಕೋಟಿ ಕೋಟಿ ರೂಪಾಯಿ ಕೊಟ್ಟರು.ಗರಿಷ್ಠ 10 ಕೋಟಿಯವರಿಗು ಹಣ ಕೊಟ್ಟಿದ್ದೇವೆ.
ಮಾನ್ಯ ಸಿದ್ದರಾಮಯ್ಯ ನವರು ಮಠಾಧೀಶರ ಬಗ್ಗೆ ಲಘುವಾಗಿ ಮಾತನಾಡಿದರು. ಅದರಿಂದ ಬಹಳ ನೋವಾಗಿದೆ. ಲ್ಯಾಂಡ್ ಆರ್ಮಿ ಕಮಿಷನ್ ಬಗ್ಗೆ ನಿಮಗೆ ಹೇಳುತ್ತೇನೆ.ಶೇ 27 ರಷ್ಟು ಟ್ಯಾಕ್ಸ್ ತೆರಿಗೆ ರೂಪದಲ್ಲಿ ಹೋಗುತ್ತದೆ.ಅದರಲ್ಲಿ 100 ರೂಪಾಯಿ ಕೊಟ್ಟರೆ ಶೇ 27 ರಷ್ಟು ಹೋಗುತ್ತದೆ. ಅದಕ್ಕೆ ಮಠಾಧೀಶರು ತಮ್ಮ ಹೇಳಿಕೆಗಳನ್ನು ಇನ್ನೊಮ್ಮೆ ಪರಿಶೀಲಿಸಬೇಕು.
ಮೋದಿಯವರು ಬಂದ ಮೇಲೆ ಬೇಕಾದಷ್ಟು ಸುಧಾರಣೆಗಳಾಗಿವೆ. ಕಾಂಗ್ರೆಸ್ ಅವಧಿಯಲ್ಲಿ ಗರೀಬ್ ಹಟಾವ್ ಆಗಿಲಿಲ್ಲ. ಕಾಂಗ್ರೆಸ್ಸಿಗರು ಉದ್ಧಾರ ಆದ್ರು. ಅನೇಕ ರೈತರಿಗೆ ಪೆನ್ಷನ್ ಮೋದಿ ಸರ್ಕಾರ ಕೊಟ್ಟರು.ಆರು ಸಾವಿರ ಪ್ರತಿ ವರ್ಷ ಮೋದಿಯವರು ಕೊಟ್ಟರು.ನಾವು ನಾಲ್ಕು ಸಾವಿರ. ಸೇರಿಸಿ ಕೊಟ್ಟಿವಿ. ಕಾಂಗ್ರೆಸ್ ಸರ್ಕಾರ ಇದ್ದಾಗ ಕಮಿಷನರ್ ಗಳು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು.ಇವತ್ತು ಯಾರ ಸಹಕಾರ ಇಲ್ಲದೇ ರೈತರ ಅಕೌಂಟ್ ರೈತರ ಜೇಬಿಗೆ ಹೋಗುತ್ತಿದೆ. 60 ಲಕ್ಷ ಜನರಿಗೆ ಪೆನ್ಷನ್ ಕೊಡುತ್ತಿದ್ದೇವೆ ಅವರು ಅಕೌಂಟ್ ಗೆ ನೇರವಾಗಿ ಹಣ ಹೋಗುತ್ತಿದೆ. 37 ಸಾವಿರ ದೇವದಾಸಿಗೆ ಹೆಣ್ಣು ಮಕ್ಕಳಿಗೆ ಪೆನ್ಷನ್ ಕೊಟ್ಟಿದ್ದು ಯಡಿಯೂರಪ್ಪ.ಭ್ರಷ್ಟಾಚಾರ ತಾಯಿನೇ ಕಾಂಗ್ರೆಸ್ ..ಅವರು ಭಂಡತನದಿಂದ ನಮಗೆ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಇದೀಗ ಕೋಮು ಗಲಭೆ ಕಡೆ ಕಾಂಗ್ರೆಸ್ ಮುಖಮಾಡಿದೆ.ದೇಶದ ಭದ್ರತೆ ಸಮರ್ಥ ನಾಯಕ ಮೋದಿಯವರು ಆಗಿದ್ದಾರೆ.
ಇವತ್ತು ವಿದ್ಯಾವಂತರು ಸಮರ್ಥ ನಾಯಕ ಎಂದು ಮೋದಿಯನ್ನು ಹೊಗಳುತ್ತಿದ್ದಾರೆ. ಯಡಿಯೂರಪ್ಪ ನಂತರ ಬಸವರಾಜ್ ಬೊಮ್ಮಾಯಿ ಅನೇಕ ಸುಧಾರಣೆಗಳನ್ನು ಮಾಡಿದ್ರು.ಕರೊನೊ ಸಂದರ್ಭದಲ್ಲಿ ರಾಜ್ಯದಲ್ಲಿ ಒಂದು ಲ್ಯಾಬೋರೇಟರಿ ಇತ್ತು. ಇವತ್ತು ಎಷ್ಟು ಲ್ಯಾಬ್ ಗಳಿವೆ.ಇಡೀ ದೇಶಕ್ಕೆ ವ್ಯಾಕ್ಸಿನ್ ನೀಡಿದ ಕೀರ್ತಿ ಮೋದಿಯವರದು. ದೇಶದ ಉದ್ದಗಲಕ್ಕು ಇವತ್ತು ಜಿಲ್ಲಾ ತಾಲ್ಲೂಕ್ ಮಟ್ಟದಲ್ಲಿ ಆಕ್ಸಿಜನ್ ಘಟಕಗಳಿವೆ. ಕರೋನೊ ಟೆಸ್ಟಿಂಗ್ ಸೆಂಟರ್ ಗಳನ್ನು ಹೆಚ್ವಿಸಿದ್ದು ಮೋದಿಯವರು.
ರಾಜ್ಯದಲ್ಲಿ 60 ಸಾವಿರ ಕೋಟಿ ಮಳೆಯಿಂದ ಆಸ್ತಿಪಾಸ್ತಿ ನಷ್ಟವಾಯಿತು. ಆದ್ರೆ ಕೊರೊನೊ ಸಂದರ್ಭದಲ್ಲಿ ಖರ್ಚು ಮಾಡಿದ್ದು 16 ಸಾವಿರ ಕೋಟಿ. ಆರ್ಥಿಕ ಸಂಕಷ್ಟದ ಕಾಲದಲ್ಲು ಯಡಿಯೂರಪ್ಪ ಕೊರೊನೊ ನಿಭಾಯಿಸಿದ್ದು ಒಂದು ದೊಡ್ಡ ಸಾಧನೆ ಎಂದರು.
ದಾವಣಗೆರೆ ಸಮಾವೇಶದಲ್ಲಿ ಕಂದಾಯ ಸಚಿವ ಆರ್ ಆಶೋಕ್: ದಾವಣಗೆರೆಯಲ್ಲಿ ಮೂರು ಜಿಲ್ಲೆಗಳ ವಿಭಾಗೀಯ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಕಂದಾಯ ಸಚಿವ ಆರ್ ಆಶೋಕ್ ಮಾತನಾಡಿದರು. ದೇಶ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ವಿದೆ. ಯು ಪಿ ಎಲೆಕ್ಷನ್ ಟೈಮ್ ನಲ್ಲಿ ಸಿದ್ದರಾಮಯ್ಯ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದರು. ಆದ್ರೆ ಈಗ ಆ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ಒಂದು ರೀತಿಯ ದ್ವಂಧ ನಿಲುವಿನಲ್ಲಿದೆ.ಹಿಜಾಬ್ ನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡ್ರೆ ಅವರ ಅದ್ಯಕ್ಷರು ಅದನ್ನು ವಿರೋಧಿಸುತ್ತಿದ್ದಾರೆ.ಹಾಗಾಗಿ ಕಾಂಗ್ರೆಸ್ ಧ್ವಂದ ನಿಲುವಿನಲ್ಲಿದ್ದು ಗೇಟ್ ಪಾಸ್ ತೆಗೆದುಕೊಳ್ಳುವುದಕ್ಕೆ ರೆಡಿಯಾಗಿದೆ.ಕೆಜಿ ಹಳ್ಳಿ ಡಿಜೆಹಳ್ಳಿ ಘಟನೆ, ಹುಬ್ಬಳ್ಳಿ ಘಟನೆ ಕಾಂಗ್ರೆಸ್ ನಿಲುವು ಸ್ಪಷ್ಟವಾಗಿದೆ. ಈ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಲು ಒಂದು ವರ್ಷ ಇರುವಾಗಲೇ ಬಿಜೆಪಿ ತಯಾರಿಗೆ ಮುಂದಾಗಿದೆ.
ಮುಂದೆ ನಮ್ಮದೇ ಸರ್ಕಾರ ಕರ್ನಾಟಕದ ಲ್ಲಿ ಬರುತ್ತದೆ.ಯುಪಿ ಪಂಜಾಬ್ ಚುನಾವಣೆ ಪಲಿತಾಂಶ ಇಲ್ಲು ಬರುತ್ತೇ. ಜೆಡಿಎಸ್ ರಾಜ್ಯದಲ್ಲಿ ಕಾಣೇಯಾಗುತ್ತೇ...ಕಾಂಗ್ರೆಸ್ ಬಗ್ಗೆ ಇನ್ನು ಮುಂದೆ ಮಾತಾನಾಡದ ಪರಿಸ್ಥಿತಿ ಬರುತ್ತದೆ. ನಮ್ಮ ಪರವಾಗಿ ಭಾಷಣ ಮಾಡುವುದಕ್ಕೆ ಮೋದಿ ಅಮಿತಾ ಶಾ, ಯು ಪಿ CM ಆದಿತ್ಯ ಯೋಗಿ, ಯಡಿಯೂರಪ್ಪ ಬೊಮ್ಮಾಯಿ ಹೀಗೆ ನಾಯಕರ ದಂಡಿದೆ.ಆದ್ರೆ ಕಾಂಗ್ರೆಸ್ ಗೆ ಸೋನಿಯಾ ಬರಬೇಕು, ಇನ್ನು ರಾಹುಲ್ ಬಂದ ಕಡೆ ಕಾಂಗ್ರೆಸ್ ಮುಳಗುತ್ತದೆ ಎಂದರು.