ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಕೊಕ್ಕನೂರು ಗ್ರಾಮದಲ್ಲಿ ವಿಶಿಷ್ಟ ರಥೋತ್ಸವ ನಡೆಯುತ್ತದೆ. ಅಡ್ಡಪಲ್ಲಕ್ಕಿಗೆ ನೋಟಿನ ಸಿಂಗಾರ ಮಾಡಲಾಗುತ್ತೆ. ಮನಿ ಹನುಮಪ್ಪನ ಪಲ್ಲಕ್ಕಿ ನೋಡುವುದೇ ಒಂದು ಭಾಗ್ಯ .
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಏ.12): ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಕೊಕ್ಕನೂರು ಗ್ರಾಮದಲ್ಲಿ ವಿಶಿಷ್ಟ ಅಡ್ಡಪಲ್ಲಕ್ಕಿ ಯೊಂದು ನಾಡಿನ ಗಮನ ಸೆಳೆದಿದೆ. ಆಂಜನೇಯ ಸ್ವಾಮಿ ಮೂರ್ತಿ ಹೊತ್ತ ಅಡ್ಡಪಲ್ಲಕ್ಕಿಗೆ ಗರಿ ಗರಿ ನೋಟಿನ ಕರೆನ್ಸಿ ಹೂವಿನ ರೀತಿ ಸಿಂಗಾರಗೊಂಡು ಕಂಗೊಳಿಸಿದೆ. ಹರಿಹರ ತಾಲ್ಲೂಕಿನ ಕೊಕ್ಕನೂರಿನಲ್ಲಿ ಪ್ರತಿವರ್ಷ ರಾಮನವಮಿ ನಂತರ ಸಾಂಪ್ರಾದಾಯಿಕವಾಗಿ ಗ್ರಾಮ ದೇವರು ಹನುಮಪ್ಪನ ಬ್ರಹ್ಮ ರಥೋತ್ಸವ ನಡೆಯುತ್ತದೆ.
ಎರಡು ದಿನಗಳ ಕಾಲ ರಥೋತ್ಸವ ನಡೆದ ನಂತರ ಆಂಜನೇಯ ಸ್ವಾಮಿ ಮನೆ ಮನೆಗು ಭೇಟಿ ನೀಡುವ ಧಾರ್ಮಿಕ ಪದ್ಧತಿ ಇದೆ. ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಅಡ್ಡಪಲ್ಲಕ್ಕಿ ಹೊತ್ತ ನೂರಾರು ಭಕ್ತರು ಮನೆ ಮನೆ ಬಳಿ ತೆರಳುತ್ತಾರೆ. ಈ ವೇಳೆ ಭಕ್ತರು ತಮ್ಮ ಶಕ್ತಾನುಸಾರ ನೋಟಿನ ಹರಕೆ ತೀರಿಸುವುದು ವಾಡಿಕೆ. ಐದು ರೂಪಾಯಿ ನೋಟಿನಿಂದ ಹಿಡಿದು 10 ,20, 50, 100, 500 ,2000 ರೂ ವರೆಗಿನ ಕರೆನ್ಸಿ ಹಾರಗಳನ್ನು ಅಡ್ಡಪಲ್ಲಕ್ಕಿಗೆ ಹರಕೆ ರೂಪದಲ್ಲಿ ಸಲ್ಲಿಸುತ್ತಾರೆ. ಪ್ರತಿ ಮನೆ ಬಳಿಯು ಭಕ್ತರು ನೋಟಿನ ಹಾರ ಹಾಕುತ್ತಾರೆ.
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ
ಹೀಗೆ ಗ್ರಾಮದ ಮೊದಲ ಬೀದಿಯಿಂದ ಹೊರಟ ಪಲ್ಲಕ್ಕಿ ಉತ್ಸವ ಇಡೀ ಗ್ರಾಮದ ಮನೆ ಮನೆಗು ಹೋಗುವ ವೇಳೆಗೆ ಆಂಜನೇಯ ಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ ಮುಗಿಯುವ ವೇಳೆಗೆ ಅಡ್ಡಪಲ್ಲಕ್ಕಿ ನೋಟಿನ ತೇರು ಆಗಿರುತ್ತದೆ.. ಗ್ರಾಮದಲ್ಲಿ ಆಂಜನೇಯ ಸ್ವಾಮಿ ಅಡ್ಡಪಲ್ಲಕ್ಕಿಯನ್ನು ನೋಡಿದವರಿಗೆ ನೋಟಿನ ಮೆರವಣಿಗೆ ಸಾಗುತ್ತದೆ ಎಂದು ಭಾಸವಾಗುತ್ತದೆ. ಹೂ ಹಣ್ಣು ಕಾಯಿ ಕರ್ಪೂರಕ್ಕಿಂತ ನೋಟಿನ ಅಲಂಕಾರ ದೇವರ ರಥೋತ್ಸವದ ವಿಶೇಷಗಳಲ್ಲಿ ಒಂದು.
ಹೀಗೆ ಅಡ್ಡಪಲ್ಲಕ್ಕಿಯ ನೋಟಿನ ಮೆರವಣಿಗೆ ಮುಗಿದೆ ನಂತರ ಆ ನೋಟುಗಳನ್ನು ದೇವಸ್ಥಾನದ ಆಡಳಿತ ಮಂಡಳಿ ನೋಟುಗಳನ್ನು ಎಣಿಕೆ ಮಾಡಲಾಗುತ್ತದೆ. ಅದು ಮೊದಲಿಗೆ ಸಾವಿರ ಲೆಕ್ಕದಲ್ಲಿ ನಂತರ ಇತ್ತಿಚೆಗೆ ಲಕ್ಷ ಲಕ್ಷ ಹಣ ಸಂಗ್ರಹವಾಗುತ್ತದೆ. ವರ್ಷದಿಂದ ವರ್ಷಕ್ಕೆ ಸಂಗ್ರಹವಾಗುವ ಮೊತ್ತವು ಜಾಸ್ತಿಯಾಗಿದೆ. ಈ ಹಣವನ್ನು ದಾಸೋಹ ದೇವಸ್ಥಾನದ ಅಭಿವೃದ್ಧಿ ಕೆಲಸ ಬಳಸಲಾಗುತ್ತದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ. ಎಣಿಕೆ ಮಾಡುವುದನ್ನು ನೋಡಿದ್ರೆ ಆಶ್ಚರ್ಯವಾಗುತ್ತದೆ. ನೂರಕ್ಕು ಹೆಚ್ಚು ಜನ ಎಣಿಕೆ ಕಾರ್ಯ ನಡೆಯುತ್ತದೆ. ಒಂದು ರೂಪಾಯಿ ವ್ಯತ್ಯಾಸವಾಗದಂತೆ ಲೆಕ್ಕ ನಡೆಯುತ್ತದೆ.
ಚಿತ್ರದುರ್ಗದ ಸಿದ್ದೇಶ್ವರ ರಥೋತ್ಸವ: ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ
ಈ ದೇವರಿಗೆ ನೋಟಿನ ಹಾರ ಹಾಕುತ್ತಾರೆ ಎಂಬುದಕ್ಕೆ ಅದರದ್ದೇ ಐತಿಹ್ಯವಿದೆ. ಅನಾಧಿಕಾಲದಿಂದಲು ಈ ಗ್ರಾಮದಲ್ಲಿ ನೋಟಿನ ಮೆರವಣಿಗೆ ಮಾಡಲಾಗುತ್ತಿದ್ದು ಅದನ್ನು ಆಧುನಿಕ ಕಾಲದಿಂದಲು ಮುಂದುವರಿಸಿಕೊಂಡು ಬಂದಿದ್ದಾರೆ. ಕೊವಿಡ್ ಕಾಲದಲ್ಲಿ ಕಳೆಗುಂದಿದ್ದ ಹನುಮಪ್ಪನ ಅಡ್ಡಪಲ್ಲಕ್ಕಿ ಉತ್ಸವ ಎರಡು ವರ್ಷಗಳ ನಂತರ ಈ ಬಾರಿ ವಿಜೃಂಭಣೆಯಿಂದ ನಡೆದಿದೆ. ಆಂಜನೇಯ ಸ್ವಾಮಿ ರಥೋತ್ಸವ ಸಾಂಗವಾಗಿ ನಡೆದ್ರೆ ಇಡೀ ಗ್ರಾಮವೇ ಸುಭಿಕ್ಷ ಎಂಬ ನಂಬಿಕೆ ಇದೆ. ಈ ಆಂಜನೇಯ ಸ್ವಾಮಿ ಜಾತ್ರೆಗೆ ಹತ್ತಾರು ಹಳ್ಳಿಗಳ ಭಕ್ತರು ಆಗಮಿಸಿ ದರ್ಶನ ಪಡೆದು ತಮ್ಮ ಶಕ್ತಾನುಸಾರ ಹರಕೆ ಸಲ್ಲಿಸುವ ವಾಡಿಕೆಯು ಇಲ್ಲಿದೆ. ಇಂತಹ ಕರೆನ್ಸಿ ಮೆರವಣಿಗೆಯನ್ನು ಆದಷ್ಟು ಕ್ಯಾಮೆರಾ ಕಣ್ಣುಗಳಿಂದ ನಿರ್ಭಂದಿಸಲಾಗುತ್ತದೆ.