ಮಕ್ಕಳು ನೀರು ಕುಡಿಯದೇ ಬಾಟಲ್ ವಾಪಸ್ ತರ್ತಾರ..? ಈ ಶಾಲೆಯಲ್ಲಿದೆ ಹೊಸ ಐಡಿಯಾ..!

By Kannadaprabha NewsFirst Published Oct 18, 2019, 9:05 AM IST
Highlights

ಮಕ್ಕಳಿಗೆ ಬಾಟಲ್‌ನಲ್ಲಿ ಕುಡಿಯೋಕೆ ಎಂದು ನೀರು ಕೊಟ್ಟರೆ ಅದನ್ನು ಹಾಗೆಯೇ ಹೊತ್ತುಕೊಂಡು ಮನೆಗೆ ಬರುತ್ತಾರೆ. ಇದನ್ನು ತಪ್ಪಿಸಿ, ಮಕ್ಕಳು ಅಗತ್ಯದಷ್ಟು ನೀರು ಕುಡಿಯುವಂತೆ ಮಾಡಲು ಉಪ್ಪಿನಂಗಡಿಯ ಶಾಲೆಯೊಂದು ಹೊಸ ಐಡಿಯಾ ಮಾಡಿದೆ. ಇದೇನು ಹೊಸ ಐಡಿಯಾ, ಇದರಿಂದ ಮಕ್ಕಳಿಗೇನು ಲಾಭ ಎನ್ನೋದನ್ನು ತಿಳಿಯಲು ಈ ಸುದ್ದಿ ಓದಿ.

ಮಂಗಳೂರು(ಅ.18): ‘ಶುದ್ಧ ನೀರು ವಿಶ್ವದ ಮೊದಲ ಮತ್ತು ಅಗ್ರಗಣ್ಯ ಔಷಧವಾಗಿದೆ’ ಎಂಬ ತತ್ವದಡಿ ವಿದ್ಯಾರ್ಥಿಗಳಿಗೆ ನಿತ್ಯ ಹಾಗೂ ನಿಯಮ ಬದ್ಧವಾಗಿ ನೀರು ಕುಡಿಯುವ ಯೋಜನೆಯೊಂದನ್ನು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಅನುಷ್ಠಾನಿಸಲಾಗಿದೆ.

ಶಾಲಾ ದಿನಗಳಲ್ಲಿ ಮಕ್ಕಳು ಸಾಕಷ್ಟುನೀರು ಕುಡಿಯದೇ ಇರುವುದು ದೇಹದಲ್ಲಿ ನಿರ್ಜಲೀಕರಣದಂತಹ ನಿರಂತರ ಸಮಸ್ಯೆಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಆಗಾಗ ಕಂಡು ಬರುವ ಜ್ವರ, ಹೊಟ್ಟೆನೋವು, ತಲೆನೋವಿನಂತಹ ಬಾಧೆಗಳಿಗೆ ವಿದ್ಯಾರ್ಥಿಗಳು ಕುಡಿಯುವ ನೀರಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿರುವುದೇ ಕಾರಣವಾಗಿರುವುದನ್ನು ಮನಗಂಡ ಹಿನ್ನೆಲೆಯಲ್ಲಿ ಈ ಯೋಜನೆ ಅನುಷ್ಠಾನಿಸಲಾಗಿದೆ.

ಪೋಷಕರ ಆತಂಕ:

ಹಲವು ಪೋಷಕರು ‘ನಮ್ಮ ಮಕ್ಕಳು ಬೆಳಗ್ಗೆ ಬಾಟಲಿಯಲ್ಲಿ ತುಂಬಿದ ನೀರನ್ನು ಕುಡಿಯದೆ ಹಾಗೆಯೇ ವಾಪಸ್‌ ತರ್ತಾರೆ’ ಇನ್ನು ಕೆಲವರು ‘ನೀರು ಯಾಕೆ ಕುಡೀಲಿಲ್ಲ ಅಂದ್ರೆ, ಟೈಮೇ ಇರ್ಲಿಲ್ಲ’ ಇಲ್ಲವೇ ‘ಶಾಲೆಯಲ್ಲೇ ನೀರಿನ ವ್ಯವಸ್ಥೆ ಇದೆ ಅದನ್ನೆ ಕುಡಿದೆ ಅಂತ ಸುಳ್ಳು ಹೇಳ್ತಾರೆ’ ಎಂದು ದೂರಿರುವ ಹಿನ್ನೆಲೆಯಲ್ಲಿ ಶಾಲೆಯ ಅವಧಿಯಲ್ಲಿ ಒಟ್ಟು ಮೂರು ಬಾರಿ ನೀರು ಕುಡಿಯುವ ಉದ್ದೇಶದಿಂದಲೇ ವಾಟರ್‌ ಬೆಲ್‌ ಎಂಬ ಯೋಜನೆಯನ್ನು ಪಠ್ಯದ ನಡುವೆ ಜೋಡಿಸಲಾಗಿದೆ. ಈ ಅವಧಿಯಲ್ಲಿ ಮಕ್ಕಳು ನೀರು ಕುಡಿಯಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಲಾ ಸಂಚಾಲಕ ಯು.ಎಸ್‌.ಎ. ನಾಯಕ್‌ ತಿಳಿಸಿದ್ದಾರೆ.

ಲಂಚಕ್ಕೆ ಬೇಡಿಕೆ ಇಟ್ಟವರನ್ನು ಸ್ಥಳದಲ್ಲೇ ಅಮಾನತು ಮಾಡಿದ ಸಚಿವ

ಯುನೈಟೆಡ್‌ ನೇಷನ್ಸ್‌ ಹೊರತಂದಿರುವ “Water Action Decade" 2018-2028ರ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗುವಂತೆ ಮಕ್ಕಳಲ್ಲಿ ನೀರಿನ ಮಹತ್ವದ ಕುರಿತು ತಿಳಿಯಪಡಿಸುವಲ್ಲಿ ಇಂದ್ರಪ್ರಸ್ಥ ಶಾಲೆಯು ವಿಶೇಷ ಒತ್ತನ್ನು ನೀಡುತ್ತಿದೆ. ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ 2018ರ ಕುರಿತು ಗ್ಲೋಬಲ್‌ ಬೆಸ್‌ ಲೈನ್‌ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆ, ಮತ್ತು ಯುನಿಸೆಫ್‌ ಜಂಟಿ ಮಾನಿಟರಿಂಗ್‌ ಪ್ರೋಗ್ರಾಂ ತಯಾರಿಸಿದೆ. ಶಿಕ್ಷಣ ಸಂಪನ್ಮೂಲ ಮಾಹಿತಿ ಕೇಂದ್ರ(ERIC) “Water is cool in School" ಅಭಿಯಾನವನ್ನು ಪ್ರಾರಂಭಿಸಿದೆ.

ಶಿಕ್ಷಕರಿಲ್ಲ: ಸರ್ಕಾರಿ ಶಾಲೆ ಗೇಟ್‌ಗೆ ಬಿತ್ತು ಬೀಗ..!

click me!