ಗುದ್ದಲಿ, ಹಾರೆ ಹಿಡಿದು ರಸ್ತೆ ಹೊಂಡ ಮುಚ್ಚಿದ್ದ ಪೊಲೀಸ್ ಸಿಬ್ಬಂದಿ..!

Published : Nov 03, 2019, 11:22 AM IST
ಗುದ್ದಲಿ, ಹಾರೆ ಹಿಡಿದು ರಸ್ತೆ ಹೊಂಡ ಮುಚ್ಚಿದ್ದ ಪೊಲೀಸ್ ಸಿಬ್ಬಂದಿ..!

ಸಾರಾಂಶ

ಪಾಲಿಕೆಗೆ ಹಲವು ಸಲ ಮನವಿ ಮಾಡಿ ಪ್ರಯೋಜನವಾಗದೆ ಕೊನೆಗ ಪೊಲೀಸರೇ ಗುದ್ದಲಿ ಹಾರೆ ಹಿಡಿದು ಕಲ್ಲು, ಮಣ್ಣು ತಂದು ರಸ್ತೆ ಹೊಂಡ ಸರಿಪಡಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕದ್ರಿಯ ಸಂಚಾರಿ ಪೂರ್ವ ಠಾಣೆಯ ಸಿಬ್ಬಂದಿ ಪುಟ್ಟರಾಮ ಎಂಬವರು ತಾನೇ ಕಲ್ಲು, ಮಣ್ಣು ತಂದು ಹಾಕಿ ಹೊಂಡ ಮುಚ್ಚಿದ್ದಾರೆ.

ಮಂಗಳೂರು(ನ.03): ನಗರದ ಬಂಟ್ಸ್‌ಹಾಸ್ಟೆಲ್‌ ಸರ್ಕಲ್‌ ಸಮೀಪ ರಸ್ತೆಯ ಅಂಚಿನಲ್ಲಿದ್ದ ಗುಂಡಿಯೊಂದನ್ನು ಕದ್ರಿಯ ಸಂಚಾರಿ ಪೂರ್ವ ಠಾಣೆಯ ಸಿಬ್ಬಂದಿ ಪುಟ್ಟರಾಮ ಎಂಬವರು ತಾನೇ ಕಲ್ಲು, ಮಣ್ಣು ತಂದು ಹಾಕಿ ಮುಚ್ಚಿದ ವಿದ್ಯಮಾನ ಶನಿವಾರ ನಡೆದಿದೆ.

ಈ ಗುಂಡಿಯಲ್ಲಿ ಕಾರು ಮತ್ತು ಘನವಾಹನ ಸವಾರರು ಸಲೀಸಾಗಿ ಹೋಗುತ್ತಿದ್ದರೆ ದ್ವಿಚಕ್ರ ವಾಹನ, ರಿಕ್ಷಾ ಸವಾರರು ಭಾರೀ ಸಂಕಷ್ಟಪಡುತ್ತಿದ್ದರು. ಅದರಲ್ಲೂ ದ್ವಿಚಕ್ರ ಸವಾರರು ಅವಘಡಕ್ಕೀಡಾದದ್ದೇ ಹೆಚ್ಚು. ಈ ದುರವಸ್ಥೆಯ ಬಗ್ಗೆ ಟ್ರಾಫಿಕ್‌ ಸಿಬ್ಬಂದಿ ಪುಟ್ಟರಾಮ ಅವರು ವಿಡಿಯೋ ಮಾಡಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಅವರು ಈ ದೂರಿಗೆ ಸ್ಪಂದಿಸಲೇ ಇಲ್ಲ. ಇದನ್ನು ನೋಡಿದ ಪುಟ್ಟರಾಮ ಅವರು ತಾನೇ ಗುಂಡಿ ಮುಚ್ಚಲು ನಿರ್ಧರಿಸಿದ್ದಾರೆ.

ರಾಜ್ಯದಲ್ಲಿ ಜನಸಂಖ್ಯೆ ಇಳಿಸುವ ಬದಲು ಹೆಚ್ಚಿಸಿ!.

ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಬಂಟ್ಸ್‌ಹಾಸ್ಟೆಲ್‌ ಸಮೀಪ ಖಾಲಿ ಪಿಕಪ್‌ ಹೋಗುತ್ತಿದ್ದಾಗ ಅದನ್ನು ನಿಲ್ಲಿಸಿ ಕರಂಗಲ್ಪಾಡಿಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ಕಲ್ಲು ಮಿಶ್ರಿತ ಮಣ್ಣು ಮತ್ತು ಜಲ್ಲಿ ತರಿಸಿಕೊಂಡಿದ್ದಾರೆ. ಬಳಿಕ ತಾನೇ ಪಿಕಪ್‌ ಹತ್ತಿ ಹಾರೆ ಹಿಡಿದು ಮಣ್ಣನ್ನು ಕೆಳಗೆ ಹಾಕಿ ಬಳಿಕ ಗುಂಡಿ ಮುಚ್ಚಿದ್ದಾರೆ. ಇದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಪುಟ್ಟರಾಮ ಅವರ ಸಾಮಾಜಿಕ ಕಾಳಜಿಗೆ ನಗರ ಪೊಲೀಸ್‌ ಕಮಿಷನರ್‌ ಡಾ. ಪಿ.ಎಸ್‌. ಹರ್ಷ ಶ್ಲಾಘನೆ ವ್ಯಕ್ತಪಡಿಸಿದ್ದಲ್ಲದೆ, ಸೋಮವಾರ ಬೆಳಗ್ಗೆ 11.30ಕ್ಕೆ ಕಚೇರಿಗೆ ಆಹ್ವಾನಿಸಿು ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.

NEET, CET ನಂತರ ಪಿಯು ಫಲಿತಾಂಶ ಪ್ರಕಟ..?

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!