'ಕೋಟಿ ಕೋಟಿ ಆಫರ್ ಬೇಡ ಅಂದೆ; ಕಪಾಳಕ್ಕೆ ಬಿದ್ದದ್ದು ನಿಜ ಅಂತೆ'..!

By Kannadaprabha NewsFirst Published Nov 2, 2019, 12:50 PM IST
Highlights

ನನ್ನ ಕಪಾಳಕ್ಕೆ ಬಾರಿಸಿದ್ದು ನಿಜ ಎಂದು ಮಾಜಿ ಶಾಸಕ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವ ಹೇಳಿದ್ದಾರೆ. ನಗರದ ಖಾಸಗಿ ಹೊಟೇಲಲ್ಲಿ ಸುದ್ದಿಗೋಷ್ಠಿ ಮುಗಿಸಿ ಹೊರಬರುವಾಗ ನಡೆದ ವಾಗ್ವಾದದ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ಅಭ್ಯರ್ಥಿ ಆಕಾಂಕ್ಷಿಯೊಬ್ಬರು ನನಗೆ ಕೋಟಿ ರು. ಆಫರ್ ಮಾಡಿದ್ದರು. ಬೇಡ ಎಂದಿದ್ದೇನೆ ಎನ್ನುವುದನ್ನೂ ಅವರು ತಿಳಿಸಿದ್ದಾರೆ.

ಮಂಗಳೂರು(ನ.02): ನನ್ನ ಕಪಾಳಕ್ಕೆ ಬಾರಿಸಿದ್ದು ನಿಜ ಎಂದು ಮಾಜಿ ಶಾಸಕ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವ ಹೇಳಿದ್ದಾರೆ. ನಗರದ ಖಾಸಗಿ ಹೊಟೇಲಲ್ಲಿ ಸುದ್ದಿಗೋಷ್ಠಿ ಮುಗಿಸಿ ಹೊರಬರುವಾಗ ನಡೆದ ವಾಗ್ವಾದದ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಖಾಸಗಿ ಹೊಟೇಲಲ್ಲಿ ಸುದ್ದಿಗೋಷ್ಠಿ ಮುಗಿಸಿ ಹೊರಬರುವಾಗ ಗುಲ್ಜಾರ್ ಬಾನು, ಅವರ ಪುತ್ರ ಮತ್ತೊಬ್ಬ ವ್ಯಕ್ತಿ ಮೂವರೇ ಇದ್ದರು. ಅವರನ್ನು ಸಮಾಧಾನ ಮಾಡಿ ಕಳಿಸೋಣ ಎಂದುಕೊಂಡು ಹೋದರೆ ಗುಲ್ಜಾರ್ ಪುತ್ರ ನನ್ನ ಮೇಲೆ ಏಕಾಏಕಿ ಕೆನ್ನೆಗೆ ಬಾರಿಸಿದರು. ನಾನು ಪ್ರಕರಣ ದಾಖಲಿಸಲು ಹೋಗಿಲ್ಲ. ನನ್ನ ಆಪ್ತ ಕಾರ್ಯದರ್ಶಿಗೆ ಕೂಡ ಪೆಟ್ಟು ಬಿದ್ದಿದ್ದರಿಂದ ಕೇಸ್ ದಾಖಲಿಸಿದ್ದಾರೆ. ಕೆನ್ನೆಗೆ ಬಾರಿಸಿದ್ದರಿಂದ ರಾತ್ರಿ ಕಿವಿನೋವು ಆರಂಭವಾಗಿ ನಿದ್ದೆ ಬರಲಿಲ್ಲ. ಗುರುವಾರ ಆಸ್ಪತ್ರೆಗೆ ದಾಖಲಾಗಿ ಶುಕ್ರವಾರ ಬಿಡುಗಡೆ ಆಗಿದ್ದೇನೆ ಎಂದು ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವ ಹೇಳಿದ್ದಾರೆ.

ಮಂಗಳೂರು ಮೇಯರ್ ಟಿಕೆಟ್: ಕೈ ಮುಖಂಡರ ಗುದ್ದಾಟ

‘ಕಾಂಗ್ರೆಸ್ ಮಾಜಿ ಮೇಯರ್ ಗುಲ್ಜಾರ್ ಬಾನು ಪುತ್ರ ಅಜೀಂ ನನ್ನ ಕೆನ್ನೆಗೆ ಹೊಡೆದದ್ದು ನಿಜ. ನನ್ನ ಆಪ್ತ ಕಾರ್ಯದರ್ಶಿಗೂ ಪೆಟ್ಟು ಬಿದ್ದಿರುವುದರಿಂದ ಕೇಸ್ ದಾಖಲಿಸಿದ್ದಾರೆ. ಆದರೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕೇಸ್ ವಾಪಸ್ ಪಡೆಯಲು ನನ್ನ ಮೇಲೆ ಒತ್ತಡ ಹೇರಿದ್ದಾರೆ’ ಎಂದು ಮಾಜಿ ಶಾಸಕ ಬಾವ ಗಂಭೀರ ಆರೋಪ ಮಾಡಿದ್ದಾರೆ.

ಮೊನ್ನೆಯೂ, ನಿನ್ನೆಯೂ ಶಾಸಕ ಕಾಮತ್ ನನಗೆ ಕರೆ ಮಾಡಿ ಪ್ರಕರಣ ಹಿಂದಕ್ಕೆ ಪಡೆಯುವಂತೆ ಹೇಳಿದ್ದರು. ಕಾಮತ್ ಅವರಿಗೆ, ಅವರ ಮನೆಯವರಿಗೆ ಹೊಡೆದಿರುತ್ತಿದ್ದರೆ ಅವರು ಸುಮ್ಮನಿರುತಿದ್ರಾ ಎಂದು ಪ್ರಶ್ನಿಸಿದ್ದಾರೆ.

ಬೈಕ್ ಸವಾರನನ್ನು ಹಿಗ್ಗಾ ಮುಗ್ಗ ಎಳೆ​ದಾ​ಡಿದ ಪೊಲೀಸ್..!.

ವೇದವ್ಯಾಸ ಕಾಮತ್ ಆರೋಪಿ ಪರ ಯಾಕೆ ಒತ್ತಡ ಹೇರಿದರು ಎಂಬ ಪ್ರಶ್ನೆಗೆ, ಯಾಕೆಂದು ಅವರ ಬಳಿಯಲ್ಲೇ ಕೇಳಿ ಎಂದರು. ಶಾಸಕ ಕಾಮತ್ ನನ್ನ ಉತ್ತಮ ಸ್ನೇಹಿತ ಎಂದೂ ಹೇಳಿದರು. ಕಳೆದ ಚುನಾವಣೆಯಲ್ಲಿ ಸಾಮಾನ್ಯ ಮೀಸಲಾತಿ ಬಂದಿದ್ದಾಗ ಅಲ್ಲಿನ ಮತದಾರರು ಬೇರೆಯವರಿಗೆ ಅವಕಾಶ ನೀಡುವಂತೆ ಹೇಳಿದ್ದರೂ ಗುಲ್ಜಾರ್‌ಗೆ ಟಿಕೆಟ್ ನೀಡಲಾಗಿತ್ತು. ಆದರೆ ಎಸ್‌ಡಿಪಿಐ ಅಭ್ಯರ್ಥಿ ಅಲ್ಲಿ ಜಯ ಗಳಿಸಿದ್ದರು. ಈ ಬಾರಿ ವಾರ್ಡ್ ಮತ್ತು ಬೂತ್ ಅಧ್ಯಕ್ಷರು ಕೆಲವು ಹೆಸರುಗಳನ್ನು ಶಿಫಾರಸು ಮಾಡಿ ಕಳುಹಿಸಿದ್ದರು. ಅದರಲ್ಲಿ ಗುಲ್ಜಾರ್ ಹೆಸರೂ ಇತ್ತು. ಪಕ್ಷದ ಹೈಕಮಾಂಡ್ ವಿಚಾರ ಮಾಡಿ ಅಂತಿಮವಾಗಿ ಮಾಜಿ ಶಾಸಕರೊಬ್ಬರ ಪುತ್ರಿಗೆ ಅವಕಾಶ ನೀಡಿದೆ ಎಂದರು. ಕೋಟಿ ರು.

ಆಫರ್ ಮಾಡಿದ್ರೂ ನಿಲ್ಲಿಸಿಲ್ಲ: ಕಾಟಿಪಳ್ಳ 3ನೇ ವಾರ್ಡ್‌ನಲ್ಲಿ ಅಭ್ಯರ್ಥಿ ಆಕಾಂಕ್ಷಿಯೊಬ್ಬರು ನನಗೆ ಕೋಟಿ ರು. ಆಫರ್ ಮಾಡಿದ್ದರು. ಆದರೆ ಅಲ್ಲಿನ ಮತದಾರರು ಬೇರೊಬ್ಬ ಅಭ್ಯರ್ಥಿಯ ಪರವಾಗಿದ್ದರಿಂದ ಅವರಿಗೆ ಟಿಕೆಟ್ ಸಿಕ್ಕಿಲ್ಲ. ನಾನು ದುಡ್ಡು ಪಡೆದು ಟಿಕೆಟ್ ಕೊಡುವುದಾಗಿದ್ದರೆ ಅವರಿಗೇ ಕೊಡಬಹುದಿತ್ತಲ್ಲ? ಗುಲ್ಜಾರ್ ಬಾನು ಆಯ್ಕೆಗೆ 10 ಲಕ್ಷ ರು. ಲಂಚ ಪಡೆದ ಆರೋಪಕ್ಕೆ ಮೊಯಿದ್ದೀನ್ ಬಾವ ಪ್ರತಿಕ್ರಿಯಿಸಿದ್ದು ಹೀಗೆ.

click me!