ಮುಡಿಪು ಭಾಗದಲ್ಲಿ ಮಣ್ಣು ಅಕ್ರಮ ಗಣಿಗಾರಿಕೆ

By Kannadaprabha News  |  First Published Oct 25, 2019, 12:23 PM IST

ಅಕ್ರಮ ಮರಳು ದಂಧೆ ಸುದ್ದಿಯಾದ ಬೆನ್ನಲ್ಲೇ ಇದೀ ಕರಾವಳಿಯಲ್ಲಿ ಅಕ್ರಮ ಮರಳು ದಂಧೆ ಸದ್ದು ಮಾಡಿದೆ. ಕೃಷಿ ಪ್ರಧಾನ ಪ್ರದೇಶವಾದ ಬಂಟ್ವಾಳದ ಪಜೀರು ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಕೃಷಿಗೆ ಸಂಕಷ್ಟಎದುರಾಗಿದೆ.


ಮಂಗಳೂರು(ಅ.25): ಕೃಷಿ ಪ್ರಧಾನ ಪ್ರದೇಶವಾದ ಬಂಟ್ವಾಳದ ಪಜೀರು ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಕೃಷಿಗೆ ಸಂಕಷ್ಟಎದುರಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪಜೀರು ಗ್ರಾಮದ ಸರ್ವೆ ನಂಬ್ರ 406 /2ಬಿ7 ಮತ್ತು 402 /2ಪಿ7 ನಲ್ಲಿ ಖಾಸಗಿ ವ್ಯಕ್ತಿಯೋರ್ವರಿಗೆ ನೀಡಿರುವ 1.05 ಎಕರೆ ವಿಸ್ತೀರ್ಣದಲ್ಲಿ ಅಕ್ರಮವಾಗಿ ಮಣ್ಣಿನ ಗಣಿಗಾರಿಕೆ ನಡೆಯುತ್ತಿದೆ.

Tap to resize

Latest Videos

undefined

ಕರಾವಳಿಗೆ ಅಪ್ಪಳಿಸಲಿದ್ಯಾ ಸೈಕ್ಲೋನ್‌ ಕ್ಯಾರ್‌...?

ಮುಡಿಪು ಇಸ್ಫೋಸಿಸ್‌ ಸಂಸ್ಥೆ ಸಮೀಪದಲ್ಲೇ ಇರುವ ಜಾಗದಲ್ಲಿ ಭಾರಿ ಪ್ರಮಾಣದಲ್ಲಿ ಮುರ ಮಣ್ಣನ್ನು (ಕೆಂಪು ಕಲ್ಲಿನ ಮಣ್ಣು) ಹೊರರಾಜ್ಯಗಳಿಗೆ ಸಾಗಿಸುವ ದೊಡ್ಡ ದಂಧೆ ನಡೆಯುತ್ತಿದೆ. ದಿನದಲ್ಲಿ ಸಾವಿರಾರು ಟನ್‌ ಮಣ್ಣು ಆಂಧ್ರ, ತಮಿಳುನಾಡು ನೋಂದಾಯಿತ ಲಾರಿಗಳ ಮೂಲಕ ಸಾಗಾಟ ನಡೆಯುತ್ತಿದೆ. ಸಿಮೆಂಟ್‌ ತಯಾರಿಕೆಗೆ ಮಣ್ಣು ಸಾಗಾಟ ನಡೆಯುತ್ತಿದೆ ಎಂದು ಮಣ್ಣು ಅಗೆಯುವ ಕಾರ್ಮಿಕರು ಹೇಳುತ್ತಿದ್ದಾರೆ.

ಅವೈಜ್ಞಾನಿಕ ರೀತಿಯಲ್ಲಿ ಗಣಿಗಾರಿಕೆ

ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ಆಸುಪಾಸಿನಲ್ಲಿ ಕೃಷಿಕರೇ ಹೆಚ್ಚಿದ್ದಾರೆ. ಜನವಸತಿ ಪ್ರದೇಶವೂ ಹೌದು. ಕಾನೂನು ಪ್ರಕಾರ ಗಣಿಗಾರಿಕೆ ನಡೆಸಲು ಅನುಮತಿಯಿದ್ದರೂ, ಇಂತಿಷ್ಟುಜಾಗಕ್ಕೆ ಇಷ್ಟೇ ಮಣ್ಣು ತೆಗೆಯಬೇಕು ಅನ್ನುವ ಷರತ್ತುಗಳಿವೆ. ಆದರೆ ಷರತ್ತುಗಳನ್ನು ಮೀರಿ ಟನ್‌ ಗಟ್ಟಲೆ ಮಣ್ಣು ಅಗೆದು ದಿನದಲ್ಲಿ 30ಕ್ಕೂ ಅಧಿಕ ಲಾರಿಗಳ ಮೂಲಕ ಸಾಗಾಟ ನಡೆಸಲಾಗುತ್ತಿದೆ.

1.05 ಎಕರೆ ಪ್ರದೇಶವನ್ನು ದೊಡ್ಡ ಹೊಂಡವಾಗಿ ಅಗೆಯಲಾಗಿದೆ. ಇಲ್ಲಿ ಇಕ್ಕಟ್ಟಾಗುವ ಮಳೆ ನೀರು, ಮಣ್ಣು ಕೃಷಿ ಭೂಮಿಗೆ ಇಳಿದಲ್ಲಿ, ಕೃಷಿಭೂಮಿ ಸಂಪೂರ್ಣ ನಾಶವಾಗಲಿದೆ. ದಂಧೆಯ ಬೆಳವಣಿಗೆ ಎಷ್ಟರಮಟ್ಟಿಗೆ ಇದೆ ಎಂದರೆ, ಈ ಬಗ್ಗೆ ಮಾತನಾಡಲು ಸ್ಥಳೀಯರು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ.

ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದಲ್ಲಿ ದಶಕದ ಹಿಂದೆ ಎಸ್‌ಇಝೆಡ್‌ ಉದ್ದೇಶಕ್ಕೆ 517 ಎಕರೆ ಜಾಗವನ್ನು ಕೆಐಎಡಿಬಿ ಸ್ವಾಧೀನ ಮಾಡಿತ್ತು. ಅದರಲ್ಲಿ 353 ಎಕರೆಯಲ್ಲಿ ಇಸ್ಫೋಸಿಸ್‌ ಸಂಸ್ಥೆ ಕಾರ್ಯಾಚರಿಸುತ್ತಿದೆ. ಉಳಿದ ಜಾಗಕ್ಕೆ 7-8 ವರ್ಷಗಳ ಹಿಂದೆ ಎಸ್‌ಈಝೆಡ್‌ಗಾಗಿ ದ್ವಿತೀಯ ಪಥದ ರಸ್ತೆ ಮಾಡುವಾಗ ಅಲ್ಲಿದ್ದ ಭಾರಿ ಮುರಕಲ್ಲಿನ ಮಣ್ಣನ್ನು ತೆಗೆದು ಕೆಐಎಡಿಬಿಗೆ ಸೇರಿದ ಎಕರೆಗಟ್ಟಲೆ ಜಾಗದಲ್ಲಿ ಪೇರಿಸಿಡಲಾಗಿತ್ತು, ಬಳಿಕ ಲಾರಿಗಳ ಮೂಲಕ ಸಾಗಾಟ ನಡೆಸಲು ಆರಂಭವಾಗಿದೆ.

ರಾತ್ರಿಯಲ್ಲೇ ಕೆಲಸ

ರಾತ್ರಿ ವೇಳೆಯಲ್ಲಿ ಮಣ್ಣು ತೆಗೆಯುವ ಕಾರ‍್ಯ ನಡೆಯುತ್ತದೆ. ಸಂಜೆ ವೇಳೆ ಲಾರಿಗಳು ಈ ಭಾಗದಲ್ಲಿ ಸಾಲುಗಟ್ಟಿನಿಂತಿರುತ್ತವೆ. ಹಿಟಾಚಿ ಯಂತ್ರಗಳನ್ನು ಬಳಸಿ ಲೋಡ್‌ ಮಾಡಿ ಕಳುಹಿಸಲಾಗುತ್ತಿದೆ. ಬೇರೆ ರಾಜ್ಯದ ನೋಂದಾಯಿತ ಲಾರಿಗಳಲ್ಲಿ ಯಾರ್‌ಮ್ಕೋ ಸಿಮೆಂಟ್‌ ಸೇರಿದಂತೆ ಬೇರೆ ಸಿಮೆಂಟ್‌ ಕಂಪನಿಯ ಹೆಸರುಗಳಿವೆ.

ಚಾರ್ಮಾಡಿ ನದಿ​ಪಾ​ತ್ರಕ್ಕೆ ಶಾಶ್ವತ ತಡೆ​ಗೋಡೆ: ಬೊಮ್ಮಾಯಿ ಭರವಸೆ

ಮುಡಿಪು ಭಾಗದಲ್ಲಿರುವ ಇತರೆ ಸರ್ಕಾರಿ ಜಾಗಗಳಿಂದಲೂ ಮುರಕಲ್ಲಿನ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಪೊಲೀಸ್‌ ಇಲಾಖೆಯೂ ಈ ಬಗ್ಗೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.illegal Soil mining in mangalore

click me!