ಮಂಗಳೂರು ಪಾಲಿಕೆ ಚುನಾವಣೆ: ಪುರುಷ, ಮಹಿಳೆಯರು ಫಿಫ್ಟೀ 50!

By Kannadaprabha NewsFirst Published Nov 15, 2019, 7:55 AM IST
Highlights

ಇದೇ ಮೊದಲ ಬಾರಿಗೆ ಪಾಲಿಕೆ ಚುನಾವಣೆಯಲ್ಲಿ ಅರ್ಧಕ್ಕರ್ಧ ಮಹಿಳಾ ಕಾರ್ಪೊರೇಟರ್‌ಗಳು ಆಯ್ಕೆಯಾಗಿದ್ದಾರೆ. ಇದುವರೆಗೆ ಮಹಿಳೆಯರ ಸಂಖ್ಯೆ ಪಾಲಿಕೆಯಲ್ಲಿ ಕಡಿಮೆಯಿತ್ತು.

ಮಂಗಳೂರು(ನ.15): ಇದೇ ಮೊದಲ ಬಾರಿಗೆ ಪಾಲಿಕೆ ಚುನಾವಣೆಯಲ್ಲಿ ಅರ್ಧಕ್ಕರ್ಧ ಮಹಿಳಾ ಕಾರ್ಪೊರೇಟರ್‌ಗಳು ಆಯ್ಕೆಯಾಗಿದ್ದಾರೆ. ಇದುವರೆಗೆ ಮಹಿಳೆಯರ ಸಂಖ್ಯೆ ಪಾಲಿಕೆಯಲ್ಲಿ ಕಡಿಮೆಯಿತ್ತು. ಈ ಚುನಾವಣೆಯಲ್ಲಿ ಶೇ.50 ಮೀಸಲಾತಿ ನಿಯಮ ಅನ್ವಯಿಸಿದ್ದರಿಂದ ಅರ್ಧದಷ್ಟುಮಹಿಳೆಯರು ರಾಜಕೀಯ ರಂಗಕ್ಕೆ ಧುಮುಕಿದ್ದಾರೆ. ಇವರಲ್ಲಿ ಹೆಚ್ಚಿನವರು ಹೊಸಬರೇ ಆಗಿರುವುದು ವಿಶೇಷ.

ಕವಿತಾ ಸನಿಲ್‌ಗೆ ಮುಖಭಂಗ

ಮಾಜಿ ಮೇಯರ್‌ ಕವಿತಾ ಸನಿಲ್‌ ಅವರಿಗೆ ತಮ್ಮ ವಾರ್ಡ್‌ನಲ್ಲಿ ಸ್ಪರ್ಧಿಸುವ ಅವಕಾಶ ಇದ್ದರೂ ತಿರಸ್ಕರಿಸಿದ್ದರು. ಅವರ ಬೆಂಬಲಿಗ ಅಭ್ಯರ್ಥಿ ವಿಶಾಲಾಕ್ಷಿ ಅವರನ್ನು ಕಣಕ್ಕಿಳಿಸಲಾಗಿತ್ತು.

ಎದುರಾಳಿ ಬಿಜೆಪಿ ಅಭ್ಯರ್ಥಿ ಸಂಗೀತಾ ನಾಯಕ್‌ ನಾಮಪತ್ರದಲ್ಲಿ ‘ಮುಸ್ಲಿಂ’ ಎಂದು ನಮೂದಿಸಿದ್ದನ್ನು ಚುನಾವಣಾಧಿಕಾರಿ ಎದುರು ಕಾಂಗ್ರೆಸ್‌ ಮುಖಂಡರು ಆಕ್ಷೇಪ ಸಲ್ಲಿಸಿದ್ದರೂ ಚುನಾವಣಾಧಿಕಾರಿ ನಾಮಪತ್ರ ಅಂಗೀಕರಿಸಿದ್ದರು. ಅದರ ಬಳಿಕ ಸುದ್ದಿಗೋಷ್ಠಿ ನಡೆಸಿದ ಐವನ್‌ ಡಿಸೋಜ ಮತ್ತು ಕವಿತಾ ಸನಿಲ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಮಂಗಳೂರು ಪಾಲಿಕೆ ಚುನಾವಣೆ: ಫುಡ್ ಡೆಲಿವರಿ ಗರ್ಲ್‌ಗೆ ಸೋಲು

ತಮ್ಮ ಸ್ವ ವಾರ್ಡ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸುವ ‘ದೊಡ್ಡ’ ಹೊಣೆಗಾರಿಕೆ ಕವಿತಾ ಮೇಲಿತ್ತು. ಅದಕ್ಕೆ ಉರಿ ಬಿಸಿಲೆನ್ನದೆ ಕ್ಷೇತ್ರಾದ್ಯಂತ ಓಡಾಡಿ ವ್ಯಾಪಕ ಪ್ರಚಾರವನ್ನೂ ನಡೆಸಿದ್ದರು. ಇದೀಗ ಬಿಜೆಪಿ ಅಭ್ಯರ್ಥಿ ಗೆದ್ದಿರುವುದರಿಂದ ಕವಿತಾ ಸನಿಲ್‌ಗೆ ಮುಖಭಂಗವಾದಂತಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾಡ್ ಗರ್ಳಲ್ಲಿ ಕಣಕ್ಕಿಳಿದ 180 ಮಂದಿ ಸ್ಪರ್ಧಿಗಳ ಭವಿಷ್ಯ ನ.14ರಂದು ತೀರ್ಮಾನವಾಗಲಿದೆ. 21 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ನಡೆದಿದ್ದು, 24 ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 9 ವಾರ್ಡ್ ಗಳಲ್ಲಿ ತಲಾ 4 ಅಭ್ಯರ್ಥಿಗಳಿದ್ದರೆ, 6 ವಾರ್ಡ್‌ಗಳಲ್ಲಿ ಗರಿಷ್ಠ ತಲಾ 5 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಿರ್ಧಾರವಾಗಿದೆ.

ಮಂಗಳೂರು ಪಾಲಿಕೆ ಚುನಾವಣೆ: BJPಗೆ ಭರ್ಜರಿ ಜಯ

click me!