ಮಂಗಳೂರು ಪಾಲಿಕೆ ಚುನಾವಣೆ: ಫುಡ್ ಡೆಲಿವರಿ ಗರ್ಲ್‌ಗೆ ಸೋಲು

By Kannadaprabha NewsFirst Published Nov 15, 2019, 7:35 AM IST
Highlights

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಮಂಗಳೂರಿನ ಫುಡ್ ಡೆಲಿವರಿ ಗರ್ಲ್ ಮೇಘನಾಗೆ ಮಂಗಳೂರು ಪಾಲಿಕೆ ಚುನಾವಣೆಯಲ್ಲಿ ಸೋಲಾಗಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಹುಮತಗಳನ್ನು ಗೆದ್ದಿದ್ದು, ಕಾಂಗ್ರೆಸ್‌ ಹೀನಾಯ ಸೋಲನುಭವಿಸಿದೆ.

ಮಂಗಳೂರು(ನ.15): ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದ ಫುಡ್‌ ಡೆಲಿವರಿ ಗರ್ಲ್‌ ಆಗಿ ಕೆಲಸ ಮಾಡುತ್ತಿದ್ದ ಮೇಘನಾ ದಾಸ್‌ಗೆ ಸೋಲಾಗಿದೆ. ಅವರಿಗೆ ಕಾಂಗ್ರೆಸ್‌ ಪಕ್ಷ ಮಣ್ಣಗುಡ್ಡೆ ವಾರ್ಡ್‌ನಲ್ಲಿ ಟಿಕೆಟ್‌ ನೀಡಿತ್ತು. ಟಿಕೆಟ್‌ ಸಿಕ್ಕಿದ ಬಳಿಕ ತಮ್ಮದೇ ಫುಡ್‌ ಡೆಲಿವರಿಯ ಹಲವು ಸ್ನೇಹಿತರನ್ನು ಕಟ್ಟಿಕೊಂಡು ಮನೆ ಮನೆ ಪ್ರಚಾರ ನಡೆಸಿದ್ದರು. ಆದರೆ ಮೇಘನಾ ಅವರು ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ.

ಫುಡ್ ಡೆಲಿವರಿ ಗರ್ಲ್ ಈಗ ಮಂಗಳೂರು ಪಾಲಿಕೆ ಅಭ್ಯರ್ಥಿ

ಅವರ ಸ್ನೇಹಿತರೂ ಜೀವನೋಪಾಯದ ಕೆಲಸಕ್ಕೆ ಅಷ್ಟೂದಿನ ರಜೆ ಹಾಕಿ ಸಾಥ್‌ ನೀಡಿದ್ದರು. ಪ್ರಚಾರ ಸಂದರ್ಭದಲ್ಲಿ ಬೀದಿದೀಪ, ಮತ್ತಿತರ ಜನರ ಕೆಲಸಗಳನ್ನೂ ಮೇಘನಾ ಮಾಡಿಕೊಟ್ಟು ಜನರ ಪ್ರೀತಿಗೂ ಪಾತ್ರರಾಗಿದ್ದರು. ಹೋದಲ್ಲೆಲ್ಲ ಆದರಿಸಿ ಕರೆದು ಸತ್ಕರಿಸುತ್ತಿರುವುದನ್ನು ನೋಡಿ ನನಗೆ ಭರವಸೆ ಬಂದಿತ್ತು. ಆದರೆ ಫಲಿತಾಂಶ ನೋಡಿ ನಿರಾಸೆಯಾಗಿದೆ ಎಂದು ಮೇಘನಾ ದುಃಖ ತೋಡಿಕೊಂಡರು.

ಮಂಗಳೂರು ಪಾಲಿಕೆ ಚುನಾವಣೆ: BJPಗೆ ಭರ್ಜರಿ ಜಯ

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾಡ್ ಗರ್ಳಲ್ಲಿ ಕಣಕ್ಕಿಳಿದ 180 ಮಂದಿ ಸ್ಪರ್ಧಿಗಳ ಭವಿಷ್ಯ ನ.14ರಂದು ತೀರ್ಮಾನವಾಗಿದೆ. 21 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ನಡೆದಿದ್ದು, 24 ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 9 ವಾರ್ಡ್ ಗಳಲ್ಲಿ ತಲಾ 4 ಅಭ್ಯರ್ಥಿಗಳಿದ್ದರೆ, 6 ವಾರ್ಡ್‌ಗಳಲ್ಲಿ ಗರಿಷ್ಠ ತಲಾ 5 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಿರ್ಧಾರವಾಗಿದೆ.

click me!