ಕಾಂಗ್ರೆಸ್ ಮಾಜಿ ಕಾರ್ಪೋರೇಟರ್‌ಗಳ ಮಧ್ಯೆ ಬಿಜೆಪಿ ಹೊಸ ಮುಖಗಳ ಗೆಲುವು

Published : Nov 14, 2019, 02:39 PM IST
ಕಾಂಗ್ರೆಸ್ ಮಾಜಿ ಕಾರ್ಪೋರೇಟರ್‌ಗಳ ಮಧ್ಯೆ ಬಿಜೆಪಿ ಹೊಸ ಮುಖಗಳ ಗೆಲುವು

ಸಾರಾಂಶ

ಮಂಗಳೂರು ಮಹಾನಗರಪಾಲಿಕೆ ಚುನಾವಣೆ ಫಲಿತಾಂಶ ಬಂದಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಹೀನಾಯ ಸೋಲನುಭವಿಸಿದ್ದು ಈ ಬಗ್ಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ‌ಕಾಮತ್ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರು(ನ.14): ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಗಳ ಮಧ್ಯೆ ಬಿಜೆಪಿ ಹೊಸ ಮುಖಗಳು ಗೆದ್ದಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ‌ಕಾಮತ್ ಹೇಳಿದ್ದಾರೆ.

ಮಹಾನಗರಪಾಲಿಕೆ ಚುನಾವಣೆ ಫಲಿತಾಂಶ ಬಂದಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಹೀನಾಯ ಸೋಲನುಭವಿಸಿದ್ದು ಈ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಗೆಲ್ಲಿಸಿಕೊಟ್ಟ ಎಲ್ಲಾ ಮತದಾರ ದೇವರುಗಳಿಗೆ ನನ್ನ ಧನ್ಯವಾದಗಳು. ಯಡಿಯೂರಪ್ಪನವರು ಮೂರು ತಿಂಗಳಲ್ಲಿ ಮಂಗಳೂರಿಗೆ ಕೋಟ್ಯಾಂತರ ಅನುದಾನ ಕೊಟ್ಟಿದ್ದಾರೆ. ನಮ್ಮ ರಾಜ್ಯಾಧ್ಯಕ್ಷ ನಳಿನ್ ಅವರ ತವರು ಮತ್ತೆ ಬಿಜೆಪಿ ತೆಕ್ಕೆಗೆ ಬಂದಿದೆ ಎಂದಿದ್ದಾರೆ.

ಮಂಗಳೂರು ಪಾಲಿಕೆ ಚುನಾವಣೆ: BJPಗೆ ಭರ್ಜರಿ ಜಯ

ಮುಂದಿನ ದಿನಗಳಲ್ಲಿ ಯಶಸ್ಸಿಯಾಗಿ ಪಾಲಿಕೆ ಆಡಳಿತ ನಡೆಸುತ್ತೇವೆ. ನಾನು ಮತ್ತು ಶಾಸಕ ಭರತ್ ಶೆಟ್ಟಿ ಮೇಲೆ ಜವಾಬ್ದಾರಿ ಜಾಸ್ತಿಯಾಗಿದೆ. ಎಲ್ಲಾ ದೇವರು, ದೈವಗಳಿಗೆ ಈ ಗೆಲುವಿನ ಧನ್ಯವಾದ ಸಲ್ಲಿಸುತ್ತೇನೆ. ಅಭ್ಯರ್ಥಿ ಮುಖ ನೋಡಬೇಡಿ, ಬಿಜೆಪಿ ಚಿಹ್ನೆ ನೋಡಿ ಅಂದಿದ್ದೆ. ಅದನ್ನ ಸ್ವೀಕರಿಸಿ ನಮ್ಮನ್ನು ಜನತೆ ಗೆಲ್ಲಿಸಿ ಕೊಟ್ಟಿದ್ದಾರೆ ಎಂದಿದ್ದಾರೆ.

ಕೆಲಸ ಕಾಯಂ ಆಮಿಷ: ಅತಿಥಿ ಉಪನ್ಯಾಸಕಿ ಮೇಲೆ ಅತ್ಯಾಚಾರ

ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ  ಪ್ರಕಟವಾಗಲಿದೆ. ಒಟ್ಟು 409 ವಾರ್ಡ್‌ಗಳಿಗೆ ಮಂಗಳವಾರ ಮತದಾನ ನಡೆದಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.

PREV
click me!

Recommended Stories

ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!
ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ