ಈಶ್ವರಪ್ಪ ಬಂಧನ ಆಗುವವರೆಗೆ ಜಿಲ್ಲಾದ್ಯಂತ ಹೋರಾಟ: ಹರೀಶ್‌ ಕುಮಾರ್‌

Published : Apr 16, 2022, 04:25 AM IST
ಈಶ್ವರಪ್ಪ ಬಂಧನ ಆಗುವವರೆಗೆ ಜಿಲ್ಲಾದ್ಯಂತ ಹೋರಾಟ: ಹರೀಶ್‌ ಕುಮಾರ್‌

ಸಾರಾಂಶ

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ ಈಶ್ವರಪ್ಪ ಅವರ ಬಂಧನ ಆಗುವವರೆಗೂ ಪ್ರತಿಭಟನೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಹೇಳಿಕೆ

ಮಂಗಳೂರು: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ನೀಡಿರುವ ಈಶ್ವರಪ್ಪ(Ishwarappa) ಅವರ ಬಂಧನ ಆಗುವವರೆಗೂ ಜಿಲ್ಲೆಯ ಪ್ರತಿ ಬ್ಲಾಕ್‌ ಮತ್ತು ವಿಧಾನಸಭಾ ಕ್ಷೇತ್ರದಲ್ಲೂ ಹೋರಾಟ ನಡೆಸುವುದಾಗಿ ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ (Harish Kumar) ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಮಧ್ಯಾಹ್ನ 2 ಗಂಟೆಗೆ ಮಂಗಳೂರಿನ ಕ್ಲಾಕ್‌ ಟವರ್‌ ಬಳಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಬೃಹತ್‌ ಪ್ರತಿಭಟನೆ ಆಯೋಜಿಸಲಾಗಿದೆ. ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ಹಾಗೂ ಕೆಪಿಸಿಸಿ ಉಪಾಧ್ಯಕ್ಷೆ ಪದ್ಮಾವತಿ (Padmavathi)ಮತ್ತಿತರ ಮುಖಂಡರು ಭಾಗವಹಿಸಲಿದ್ದಾರೆ. ಇದರೊಂದಿಗೆ ಜಿಲ್ಲಾದ್ಯಂತ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದರು.

ಈಶ್ವರಪ್ಪ ರಾಜೀನಾಮೆ ನೀಡುವ ಮೂಲಕ ತಪ್ಪು ಮಾಡಿದ್ದನ್ನು ಒಪ್ಪಿಕೊಂಡಂತಾಗಿದೆ. ಹಾಗಾಗಿ ಕೂಡಲೆ ಸಂತೋಷ್‌ ಆತ್ಮಹತ್ಯೆ ವಿಚಾರವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಮಾತ್ರವಲ್ಲದೆ, ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಇಲ್ಲದಿದ್ದರೆ ಎರಡೂ ತನಿಖೆಯನ್ನು ಸಿಬಿಐಗೆ ಒಪ್ಪಿಸಲಿ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರದ ಅಧೀನ ಸಂಸ್ಥೆಗಳಿಂದ ತನಿಖೆ ನಡೆಸಲೇ ಬಾರದು ಎಂದು ಹರೀಶ್‌ ಕುಮಾರ್‌ ಆಗ್ರಹಿಸಿದರು.

ಈಶ್ವರಪ್ಪ ಮೊತ್ತ ಭರಿಸಲಿ: ಸಂತೋಷ್‌ ಪಾಟೀಲ್‌ ಅವರು ಈಶ್ವರಪ್ಪರ ಮೌಖಿಕ ಆದೇಶದ ಮೇರೆಗೆ 4.18 ಕೋಟಿ ರು. ಕಾಮಗಾರಿ ನಡೆಸಿದ್ದರಿಂದ ಆ ಮೊತ್ತವನ್ನು ಸರ್ಕಾರದಿಂದ ಭರಿಸದೆ ಈಶ್ವರಪ್ಪ ಅವರಿಂದಲೇ ಭರಿಸಬೇಕು. ಈಶ್ವರಪ್ಪ ಅವರ ಆಸ್ತಿ ಮುಟ್ಟುಗೋಲು ಹಾಕಿ ಹಣ ನೀಡಲಿ ಎಂದು ಆಗ್ರಹಿಸಿದರು.

ಕಾಂಗ್ರೆಸಿಗರು ಜೈಲಿನೊಳಗಿರಬೇಕಿತ್ತು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು (Nalin Kumar) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗ ರಾಜ್ಯ, ಕೇಂದ್ರದಲ್ಲೂ ಬಿಜೆಪಿಯದ್ದೇ ಸರ್ಕಾರವಿದೆ. ಅವರದ್ದೇ ಸರ್ಕಾರ ಇರುವಾಗ ಆರೋಪ ಮಾಡುತ್ತ ಕೂರುವುದು ಸರಿಯಾ? ಬಂಧಿಸುವುದಾದರೆ ಬಂಧಿಸಲಿ ಎಂದು ತಿರುಗೇಟು ನೀಡಿದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ (Manjunatha Bhandari), ಮಾಜಿ ಸಚಿವ ಅಭಯಚಂದ್ರ ಜೈನ್‌(Abhayachandra Jain), ಮಾಜಿ ಎಂಎಲ್ಸಿ ಐವನ್‌ ಡಿಸೋಜ (Ivan D'Souza), ಮುಖಂಡರಾದ ಪಿ.ವಿ. ಮೋಹನ್‌ (Mohan), ಲುಕ್ಮಾನ್‌ ಬಂಟ್ವಾಳ್‌, ನೀರಜ್‌ಪಾಲ್‌ (Neerajpal), ಶುಭೋದಯ ಆಳ್ವ(Shubodaya Alva), ಕೃಪಾ ಅಮರ್‌ ಆಳ್ವ ಮತ್ತಿತರರಿದ್ದರು.

PREV
Read more Articles on
click me!

Recommended Stories

ಜಾತಿ ವ್ಯವಸ್ಥೆಗೆ ಪರಿಹಾರ ರೂಪದ ವಿದ್ಯೆ ಅಗತ್ಯ: ಸಿಎಂ ಸಿದ್ದರಾಮಯ್ಯ
ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?