ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆದ ವಿಷು ಸಂಭ್ರಮ

Published : Apr 16, 2022, 04:00 AM IST
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆದ ವಿಷು ಸಂಭ್ರಮ

ಸಾರಾಂಶ

ಸೌರಮಾನ ಯುಗಾದಿ ಹಬ್ಬದ ಸಂಭ್ರಮ ದೇವರ ಸನ್ನಿಧಿಯಲ್ಲಿ ವಿಷುಕಣಿ (ಫಲವಸ್ತು) ಉತ್ಸವ  ಉತ್ಸವ ನಡೆಸಿಕೊಟ್ಟ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸೌರಮಾನ ಯುಗಾದಿ (ವಿಷು) ಹಬ್ಬವನ್ನು ವಿಶೇಷ ಪೂಜೆ, ಉತ್ಸವದೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬೆಳಗ್ಗೆ ದೇವರ ಸನ್ನಿಧಿಯಲ್ಲಿ ವಿಷುಕಣಿ (ಫಲವಸ್ತು) ಉತ್ಸವವು ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ (Ravish tanri) ಅವರ ನೇತೃತ್ವದಲ್ಲಿ ನಡೆಯಿತು. ಸಹಸ್ರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ವಿಷುಕಣಿ ದರ್ಶನ ಪಡೆಯುವುದರೊಂದಿಗೆ ವಿಷುಕಣಿ ಉತ್ಸವದಲ್ಲಿ ಪಾಲ್ಗೊಂಡರು. ಬೆಳಗ್ಗೆ ದೇವರ ಉತ್ಸವ ಬಲಿ, ವಸಂತ ಕಟ್ಟೆಪೂಜೆ, ಮಧ್ಯಾಹ್ನ ವಿಶೇಷ ಮಹಾಪೂಜೆ ನಡೆಯಿತು.

ಪುತ್ತೂರು ಜಾತ್ರೋತ್ಸವದಲ್ಲಿ ವಿಶೇಷ ವ್ಯವಹಾರ ಮೇಳಕ್ಕೆ ಚಾಲನೆ

ಜಾತ್ರೆ ಎಂಬುದು ಮನಸ್ಸು ಮನಸ್ಸುಗಳನ್ನು ಒಂದುಗೂಡಿಸುವ ಒಂದು ಹಬ್ಬ. ಈ ನಿಟ್ಟಿನಲ್ಲಿ ಹತ್ತೂರಿನ ಒಡೆಯನಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಮನಸ್ಸುಗಳ ಜತೆ ಸಂಸ್ಥೆಗಳನ್ನು ಒಟ್ಟುಗೂಡಿಸುವ ಕೆಲಸ ಮಾಡಿದೆ. ಜನತೆಗೆ ಪ್ರಾಮಾಣಿಕ ವ್ಯವಹಾರದ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದೆ ಎಂದು ಮೂಡುಬಿದಿರೆ ಶ್ರೀ ಕ್ಷೇತ್ರ ಕರಿಂಕೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು. ಅವರು ಗುರುವಾರ ಸಂಜೆ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಅಂಗವಾಗಿ ಸಭಾಭವನದ ಪ್ರಥಮ ಮಹಡಿಯಲ್ಲಿ ಹಮ್ಮಿಕೊಳ್ಳಲಾದ ವಿಶೇಷ ವ್ಯವಹಾರ ಮೇಳವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ ಪುತ್ತೂರಿನ ಜಾತ್ರೆಗೆ ಬರುವ ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲ ವಸ್ತುಗಳ ಸಿಗಬೇಕು ಎಂಬ ದೃಷ್ಟಿಯಿಂದ ಈ ವಿಶೇಷ ವ್ಯವಹಾರ ಮೇಳವನ್ನು ಆಯೋಜಿಸಲಾಗಿದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ, ಈ ಸಭಾಭವನ ಹಲವಾರು ವರ್ಷಗಳಿಂದ ಖಾಲಿ ಇದ್ದು, ಸಭಾಭವನದ ಉತ್ತರಾಭಿಮುಖವಾಗಿ ದ್ವಾರ ನಿರ್ಮಿಸಿದಲ್ಲಿ ಅನುಕೂಲತೆಗಳನ್ನು ಪಡೆಯಬಹುದು ಎಂಬುದನ್ನು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈ ಕೆಲಸ ಕಾರ್ಯಗಳನ್ನು ಮಾಡಲಾಗುವುದು. ಆದರೆ ಈ ಬಾರಿ ಜಾತ್ರೆಗೆ ವ್ಯವಹಾರ ಮೇಳದೊಂದಿಗೆ ತೆರೆದುಕೊಂಡಿದೆ ಎಂದರು.

ವಿಷು ಹಬ್ಬ ಅಂದ್ರೆ ವಿಷ್ ಮಾಡೋದಲ್ಲ!.. ತುಳುನಾಡಿನ ಸಂಪ್ರದಾಯ
 

ನಗರಸಭೆ ಅಧ್ಯಕ್ಷ ಜೀವಂಧರ್‌ ಜೈನ್‌ (Jivandhar Jain), ಉಪಾಧ್ಯಕ್ಷೆ ವಿದ್ಯಾ ಆರ್‌. ಗೌರಿ (Vidya R. Gauri), ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಶಿಕುಮಾರ್‌ ಬಾಲ್ಯೊಟ್ಟು, ಕೆಎಂಎಫ್‌ ಉಪಾಧ್ಯಕ್ಷ ಎಸ್‌.ಬಿ. ಜಯರಾಮ ರೈ, ಹಿಂದೂ ಸಂಘಟನೆಯ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್‌, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಜಾರಾಮ ಶೆಟ್ಟಿಕೋಲ್ಪೆಗುತ್ತು ಮತ್ತಿತರರು ಉಪಸ್ಥಿತರಿದ್ದರು.

ವ್ಯವಹಾರ ಮೇಳ ಸಮಿತಿ ಸಂಚಾಲಕ ಸೀತಾರಾಮ ರೈ (Sitharama Rai) ಕೆದಂಬಾಡಿಗುತ್ತು ಸ್ವಾಗತಿಸಿದರು. ಕೃಷ್ಣಪ್ರಸಾದ್‌ ಆಳ್ವ (Krishna Prasad) ವಂದಿಸಿದರು. ಕಾರ್ಯಕ್ರಮದ ಮೊದಲು ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಮಳಿಗೆಯ ಮಾಲಕರನ್ನು ಭಜನೆ, ಗೊಂಬೆ, ಕೊಂಬು ವಾದ್ಯಗಳೊಂದಿಗೆ ವ್ಯವಹಾರ ಮಳಿಗೆ ಕರೆದುಕೊಂಡು ಬರಲಾಯಿತು. ಮೇಳ ಏ.14 ರಿಂದರ 21 ರ ತನಕ ವ್ಯವಹರಿಸಲಿದೆ.

Boycott of Muslim Traders: ಪುತ್ತೂರು ಮಹಾಲಿಂಗೇಶ್ವರ ಜಾತ್ರೆಗೂ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ
 

14 ಕಡೆ ದೇವರಿಗೆ ಕಟ್ಟೆಪೂಜೆ :

ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಶುಕ್ರವಾರ ರಾತ್ರಿ 14 ಕಟ್ಟೆಗಳಲ್ಲಿ ದೇವರಿಗೆ ಕಟ್ಟೆಪೂಜೆ ನಡೆಯಿತು.

ಶುಕ್ರವಾರ ದೇವಳದಲ್ಲಿ ವಿಷು ಆಚರಣೆಯೊಂದಿಗೆ ಬೆಳಗ್ಗೆ ಉತ್ಸವ, ವಸಂತ ಕಟ್ಟೆಪೂಜೆ, ರಾತ್ರಿ ಉತ್ಸವ ಮತ್ತು ಚಂದ್ರಮಂಡಲ ಬಂಡಿ ಉತ್ಸವ ನಡೆಯಿತು. ಬಳಿಕ ದೇವರ ಪೇಟೆ ಸವಾರಿ ನಗರದ ಬನ್ನೂರು, ಅಶೋಕ ನಗರ ಮತ್ತು ರೈಲ್ವೆ ಮಾರ್ಗದಲ್ಲಿ ಸಾಗಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ, ಭರತನಾಟ್ಯ, ನೃತ್ಯ ಲಹರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ವೈವಿದ್ಯ ನಡೆಯಿತು. ನಗರದ ಬೊಳುವಾರು, ಹಾರಾಡಿ, ಪಡ್ಡಾಯೂರು, ಬನ್ನೂರು ಕಟ್ಟೆ, ಬನ್ನೂರು ಗುತ್ತು, ಪಡೀಲು ಸೇರಿದಂತೆ ನಗರದ 14 ಕಟ್ಟೆಗಳಲ್ಲಿ ದೇವರಿಗೆ ಕಟ್ಟೆಪೂಜೆ ನಡೆಯಿತು.

ಬಲ್ನಾಡು ಉಳ್ಳಾಲ್ತಿ ಕಿರುವಾಳು ಶನಿವಾರ ಬೆಳಗ್ಗೆ ತುಲಾಭಾರ ಸೇವೆ, ರಾತ್ರಿ ಉತ್ಸವ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು, ವಾಸುಕಿ ಉತ್ಸವ, ಸಣ್ಣ ರಥೋತ್ಸವ, ಕೆರೆ ಉತ್ಸವ ಮತ್ತು ತೆಪ್ಪೋತ್ಸವ ನಡೆಯಲಿದೆ.

PREV
Read more Articles on
click me!

Recommended Stories

ಜಾತಿ ವ್ಯವಸ್ಥೆಗೆ ಪರಿಹಾರ ರೂಪದ ವಿದ್ಯೆ ಅಗತ್ಯ: ಸಿಎಂ ಸಿದ್ದರಾಮಯ್ಯ
ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?