
ಧರ್ಮಸ್ಥಳ (ಜು.30) ಧರ್ಮಸ್ಥಳ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ದೂರುದಾರ ಸೂಚಿಸಿದ ಸ್ಥಳಗಳಲ್ಲಿ ಎಸ್ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ನಡೆಸುತ್ತಿದೆ. ಇದೀಗ ದೂರುದಾರ ಗುರುತಿಸಿದ ಮೂರನೇ ಸ್ಥಳದಲ್ಲೂ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಸದ್ಯ ಮೂರನೇ ಪಾಯಿಂಟ್ ಉತ್ಖನನ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದ್ದು, ನಾಲ್ಕನೇ ಸ್ಥಳ ಅಗೆಯುವ ಕಾರ್ಯಕ್ಕೆ ಎಸ್ಐಟಿ ಮುಂದಾಗಿದೆ.
ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ಐಟಿ ತಂಡ ನೇತ್ರಾವತಿ ಸ್ನಾನಘಟ್ಟದ ಬಳಿ ತನಿಖೆ ತೀವ್ರಗೊಳಿಸಿದೆ. ಎರಡನೇ ದಿನ ಈಗಾಗಲೇ ಎರಡು ಸ್ಥಳಗಳನ್ನು ಕಾರ್ಮಿಕರು ಉತ್ಖನನ ಮಾಡಿದ್ದಾರೆ. ಆರು ಅಡಿ ಆಳದ ವರೆಗೆ ಅಗೆದು ಪರೀಕ್ಷಿಸಲಾಗಿದೆ. ಆದರೆ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಆರು ಅಡಿ ಬಳಿಕ ಮೂರನೇ ಸ್ಥಳದ ಅಗೆತ ಕಾರ್ಯ ಅಂತ್ಯಗೊಳಿಸಲಾಗಿದೆ.
ದೂರುದಾರ ನೂರಾರು ಶವಗಳನ್ನು ಹೂತಿರುವುದಾಗಿ ಆರೋಪಿಸಿದ್ದ. ಪ್ರತಿ ಶವಗಳನ್ನು 4 ರಿಂದ 6 ಅಡಿ ಆಳದಲ್ಲಿ ಹೂತಿರುವುದಾಗಿ ತನಿಖೆ ವೇಳೆ ಮಾಹಿತಿ ನೀಡಿದ್ದ. ಹೀಗಾಗಿ ದೂರುದಾರ ಸೂಚಿಸಿದ ಶವ ಹೂತ ಸ್ಥಳದಲ್ಲಿ 6 ಅಡಿ ಅಳದವರಗೆ ಅಗೆಯಲಾಗುತ್ತಿದೆ. ಆರು ಅಡಿ ಉದ್ದ, 5 ಅಡಿ ಅಗಲ ಹಾಗೂ ಆರು ಅಡಿ ಆಳದವರೆಗೂ ಅಗೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.
ಮೊದಲ ದಿನದ ಸ್ಥಳ ಮಹಜರು ವೇಳೆ ದೂರುದಾರ 13 ಸ್ಥಳಗಳನ್ನು ಗುರುತಿಸಿದ್ದ. ನೂರಾರು ಶವಗಳನ್ನು ಹೂತಿಟ್ಟ ಪೈಕಿ 13 ಸ್ಥಳ ಗುರುತಿಸಿದ್ದ. ಈ ಪೈಕಿ ಎರಡನೇ ದಿನ ಮೊದಲ ಸ್ಥಳವನ್ನು ಅಗೆಯಲಾಗಿತ್ತು. ಎಸ್ಐಟಿ ಅಧಿಕಾರಿಗಳು, ಪೊಲೀಸ್, ತಹಶಿಲ್ದಾರ್ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಮೊದಲ ಸ್ಥಳವನ್ನು 4 ಅಡಿ ವರೆಗೆ ಕಾರ್ಮಿಕರು ಅಗೆದಿದ್ದರೆ, ಬಳಿಕ ಜೆಸಿಬಿ ಮೂಲಕ 6 ಅಡಿ ಅಗೆಯಲಾಗಿತ್ತು. ಆದರೆ ಉತ್ಖನನದ ಎರಡನೇ ದಿನಾವಾದ ಇಂದು (ಜು.30) ಎರಡು ಸ್ಥಳಗಳನ್ನು ಅಗೆಯಲಾಗಿದೆ. ಇಂದು ಕಾರ್ಮಿಕರು ತಂಡ ತಂಡವಾಗಿ ಸ್ಥಳ ಅಗೆಯುತ್ತಿದ್ದಾರೆ. ಇಂದು ಅಗೆದ 2 ಸ್ಥಳದಲ್ಲೂ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಆರು ಅಡಿ ಆಳದವರೆಗೂ ಅಗೆದರೂ ಯಾವುದೇ ಕಳೇಬರ ಪತ್ತೆಯಾಗದ ಹಿನ್ನಲೆಯಲ್ಲಿ ಮೂರು ಸ್ಥಳಗಳ ಅಗೆತ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ.
ನಿರಂತರವಾಗಿ ನೇತ್ರಾವತಿ ಸ್ನಾನಘಟ್ಟದ ಬಳಿ ತನಿಖೆ, ಉತ್ಖನನ ನಡೆಯುತ್ತಿದೆ. ಇದೀಗ ಮೂರನೇ ಸ್ಥಳದ ಅಗೆತ ಕಾರ್ಯಾಚರಣೆ ಅಂತ್ಯಗೊಂಡ ಬೆನ್ನಲ್ಲೇ ಊಟಕ್ಕೆ ವಿರಾಮ ನೀಡಲಾಗಿದೆ. ಸ್ನಾನ ಘಟ್ಟದ ಬಳಿಕ ದೂರುದಾರನಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇತ್ತ ಅಧಿಕಾರಿಗಳು, ಕಾರ್ಮಿಕರು, ಪೊಲೀಸ್ ಸಿಬ್ಬಂದಿ ಎಲ್ಲರಿಗೂ ಸ್ನಾನಘಟ್ಟದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಪಾಯಿಂಟ್ ನಂಬರ್ ಮೂರರಿಂದ ಭದ್ರತೆಯಲ್ಲಿ ಸ್ನಾನಘಟ್ಟಕ್ಕೆ ಕರೆ ತಂದ ಪೊಲೀಸರು ದೂರುದಾರನಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ತನಿಖಾ ಸ್ಥಳಕ್ಕೆ ಇದೀಗ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಭೇಟಿ ನೀಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗ ಮೂಲಕ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ತನಿಖಾ ಸ್ಥಳಕ್ಕೆ ಆಗಮಿಸಿದ್ದಾರೆ.
ಮುಸುಕುದಾರ ದೂರುದಾರ ಧರ್ಮಸ್ಥಳಧ ಮಾಜಿ ನೌಕರ ಎಂದಿದ್ದಾನೆ. ತನ್ನ ಕೆಲಸದ ಅವಧಿಯಲ್ಲಿ ನೂರಾರು ಶವಗಳನ್ನು ಧರ್ಮಸ್ಥಳದ ಸುತ್ತ ಮುತ್ತ ಹೂತು ಹಾಕಿರುವುದಾಗಿ ಹೇಳಿದ್ದಾನೆ. ಪ್ರಭಾವಿಗಳ ಸೂಚನೆ, ಬೆದರಿಕೆಯಿಂದ ಈ ಮಾಹಿತಿ ಇಲ್ಲೀವರೆಗೆ ಬಹಿರಂಗಪಡಿಸಿಲ್ಲ. ಆದರೆ ಪಾಪಪ್ರಜ್ಞೆ ಕಾಡುತ್ತಿರುವ ಕಾರಣ ಈಗ ಬಹಿರಂಗಪಡಿಸುತ್ತಿದ್ದೇನೆ. ಶವಗಳನ್ನು ಹೂತುಹಾಕಿರುವ ಸ್ಥಳ ತಿಳಿದಿದೆ. ಪೂಲೀಸ್ ಹಾಗೂ ಕಾನೂನು ಪ್ರಕಾರ ಶವ ಮೇಲಕ್ಕೆತಲು ತಾನು ಸಹಕರಿಸುವುದಾಗಿ ಆರೋಪಿಸಿದ್ದ.