ಧರ್ಮಸ್ಥಳ ವಿವಾದಿತ ಕೇಸ್, ಎಸ್ಐಟಿ ತನಿಖೆ ಆದೇಶ ನಿರ್ಧಾರ ಸ್ವಾಗತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ

Published : Jul 20, 2025, 09:34 PM ISTUpdated : Jul 20, 2025, 11:15 PM IST
Dharmasthala Case

ಸಾರಾಂಶ

ಧರ್ಮಸ್ಥಳದಲ್ಲಿ ನಡೆದಿದೆ ಎಂದು ಆರೋಪಿಸಿರುವ ಹಲವು ಪ್ರಕರಣಗಳನ್ನು, ಪ್ರಮುಖವಾಗಿ ಶವ ಹೂತಿಟ್ಟ ಆರೋಪ, ಅತ್ಯಾ*ರ ಪ್ರಕರಣಳ ಸಂಪೂರ್ಣ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶ ನೀಡಿದೆ. ಈ ಆದೇಶವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಾಗತಿಸಿದೆ.

ಮಂಗಳೂರು (ಜು.20) ಕಳೆದ ಹಲವು ದಿನಗಳಿಂದ ಧರ್ಮಸ್ಥಳ ವಿರುದ್ಧ ಸತತ ಆರೋಪಗಳು ಕೇಳಿಬರುತ್ತಿದೆ. ಧರ್ಮಸ್ಥಳದ ಮಾಜಿ ನೌಕರ ಎಂದು ಹೇಳಿಕೊಂಡ ಅನಾಮಿಕ ವ್ಯಕ್ತಿ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವುದಾಗಿ ಆರೋಪಿಸಿದ್ದಾನೆ. ಈ ಆರೋಪ ಗಂಭೀರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ರಾಜ್ಯ ಸರ್ಕಾರ ವಿವಾದಿತ ಪ್ರಕರಣಗಳ ಸಂಪೂರ್ಣ ತನಿಖೆಗೆ ಎಸ್ಐಟಿ ತನಿಖೆಗೆ ಆದೇಶಿಸಿದೆ. ರಾಜ್ಯ ಸರ್ಕಾರ ಧರ್ಮಸ್ಥಳದ ಮೇಲೆ ಕೇಳಿಬಂದ ಆರೋಪ, ವಿವಾದಗಳ ಸತ್ಯಾಸತ್ಯತೆ ತಿಳಿಯಲು ಸರ್ಕಾರ ಎಸ್ಐಟಿ ತನಿಖೆಗೆ ಆದೇಶ ನೀಡಿದ ನಿರ್ಧಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಾಗತಿಸಿದೆ. ಸತ್ಯ ಹೊರಬರಬೇಕು. ನ್ಯಾಯಯುತ, ನಿಸ್ಪಕ್ಷಪಾತ ತನಿಖೆಯಾಗಿ ಸತ್ಯವನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಆಗ್ರಹಿಸಿದೆ.

ತನಿಖೆ ಸ್ವಾಗತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ

ಈ ಪ್ರಕರಣ ಹಾಗೂ ಎಸ್ಐಟಿ ತನಿಖೆ ಕುರಿತು ಧರ್ಮಸ್ಥಳ ಕ್ಷೇತ್ರದ ವಕ್ತಾರ ಕೆ.ಪಾರ್ಶ್ವನಾಥ್‌ ಜೈನ್‌ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ‘ಹಲವಾರು ಶವಗಳನ್ನು ಹೂತಿದ್ದೆ’ ಎಂಬ ದೂರು ಪ್ರಕರಣವು ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ತರ್ಕಗಳು, ಊಹಾಪೋಹಗಳು ಹಾಗೂ ಗೊಂದಲಗಳನ್ನು ಹುಟ್ಟುಹಾಕಿದೆ. ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್.ಐ.ಟಿ.)ಗೆ ರಾಜ್ಯ ಸರ್ಕಾರ ಹಸ್ತಾಂತರಿಸಿದೆ. ಸರ್ಕಾರದ ಈ ನಿಲುವು ಉತ್ತಮವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಾಗತಿಸಿದೆ.

ತನಿಖೆ ನಡೆಸಿ ಸತ್ಯ ಬಹಿರಂಗಪಡಿಸಿ-ಧರ್ಮಸ್ಥಳದ ಆಗ್ರಹ

ಸಮಾಜದ ನೈತಿಕತೆ ಹಾಗೂ ಶ್ರದ್ಧೆಗೆ ನಿಲುಕುವ ಬಲವಾದ ಆಧಾರವೆಂದರೆ ‘ಸತ್ಯ’. ಹೀಗಾಗಿ ಈ ಪ್ರಕರಣದಲ್ಲಿ ಎಸ್.ಐ.ಟಿ. ತನಿಖಾ ತಂಡ ಸತ್ಯಾಂಶವನ್ನು ಅತಿ ಶೀಘ್ರವಾಗಿ ಪ್ರಾಮಾಣಿಕ ತನಿಖೆ ನಡೆಸಿ ಹೊರತರಬೇಕಿದೆ. ಈ ಸತ್ಯವನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂಬುದು ನಮ್ಮ ಆಶಯ ಎಂದು ಕೆ.ಪಾರ್ಶ್ವನಾಥ್‌ ಜೈನ್‌ ಆಗ್ರಹಿಸಿದ್ದಾರೆ.

ಪದೇ ಪದೇ ಆರೋಪಗಳನ್ನು ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಕುರಿತು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಕೆಲಸಗಳು ನಡೆಯುತ್ತಿದೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇದರ ಸತ್ಯಾಸತ್ಯತೆ ಸಾರ್ವಜನಿಕರ ಮುಂದೆ ತನಿಖೆ ಮೂಲಕ ಬಹಿರಂಗಪಡಿಸಬೇಕು ಎಂದು ಧರ್ಮಸ್ಥಳ ಆಗ್ರಹಿಸುತ್ತಿದೆ ಎಂದಿದ್ದಾರೆ.

ಗಂಭೀರ ಆರೋಪ ಮಾಡಿದ ಅನಾಮಿಕ

ಧರ್ಮಸ್ಥಳದಲ್ಲಿ ಸ್ವಚ್ಚತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವೇಳೆ ಹಲವು ಪ್ರಭಾವಿಗಳ ಸೂಚನೆ ಮೇರೆಗೆ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ. ರಕ್ಷಣೆ ನೀಡಿದರೆ ಕಳೇಬರಹ ಹೊರತೆಗೆಯುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಪ್ರಕರಣ ಕುರಿತು ಇತ್ತೀಚೆಗೆ ಮಾತನಾಡಿದ್ದ ಅಡ್ವೋಕೇಟ್ ಕೆವಿ ಧನಂಜಯ್, ಈ ಶವಗಳ ಹೂತಿಟ್ಟ ಪ್ರಕರಣಕ್ಕೂ ಸೌಜನ್ಯ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

 

PREV
Read more Articles on
click me!

Recommended Stories

ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?
ಕರಾವಳಿಯಲ್ಲಿ ಶಿವಗಿರಿ ಮಠ ಶಾಖೆಗೆ 5 ಎಕರೆ: ಸಿಎಂ ಸಿದ್ದರಾಮಯ್ಯ ಭರವಸೆ