ತಾಯಿಯ ಕಾಲಿನಿಂದ ವಿಷ ಹೀರಿದ ಮಗಳು; ಕಚ್ಚಿದ್ದು ನಾಗರಹಾವಲ್ಲ ಎಂಬ ಸುದ್ದಿ ಸುಳ್ಳು ಎಂದ ಯುವತಿ

By Vinutha PerlaFirst Published Mar 24, 2023, 10:14 AM IST
Highlights

ವಿಷಪೂರಿತ ನಾಗರಹಾವು ಕಡಿತಕ್ಕೊಳಗಾದ ತಾಯಿಯನ್ನ ಮಗಳೇ ಹಾವಿನ ವಿಷ ಹೀರಿ ರಕ್ಷಿಸಿಕೊಂಡ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ನಡೆದಿತ್ತು. ಆದ್ರೆ ಈ ಪ್ರಕರಣಕ್ಕೆ ಟ್ವಿಸ್ಟ್‌ ದೊರಕಿದ್ದು, ಕಚ್ಚಿದ್ದು ನಾಗರಹಾವು ಅಲ್ಲ, ಮಲಬಾರ್‌ ಪಿಟ್ ವೈಪರ್ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇದು ಸುಳ್ಳು, ಕಚ್ಚಿದ್ದು ನಾಗರಹಾವೇ ಎಂದು ವಿದ್ಯಾರ್ಥಿನಿ ಶ್ರಮ್ಯಾ ಹೇಳಿದ್ದಾರೆ.

ಪುತ್ತೂರು: ವಿಷಪೂರಿತ ಹಾವು ಕಡಿತಕ್ಕೊಳಗಾದ ತಾಯಿಯನ್ನು ಮಗಳೇ ಹಾವಿನ ವಿಷ ಹೀರಿ ರಕ್ಷಿಸಿದ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ನಡೆದಿತ್ತು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಹಾಗೂ ಸ್ಕೌಟ್ಸ್ ಅಂಡ್ ಗೈಡ್ ರೇಂಜರ್ ಆಗಿರುವ ಶ್ರಮ್ಯಾ ತನ್ನ ಸಾಹಸ, ಸಮಯಪ್ರಜ್ಞೆಯಿಂದ ತಾಯಿಯನ್ನು ರಕ್ಷಿಸಿದ್ದರು. ಶ್ರಮ್ಯಾಳ ಧೈರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಈ ಪ್ರಕರಣದ ಕುರಿತಾಗಿ ಸುದ್ದಿಯೊಂದು ಹರಿದಾಡ್ತಿದೆ. ಮಹಿಳೆಗೆ ಕಚ್ಚಿರುವುದು ನಾಗರ ಹಾವು ಅಲ್ಲ ಮಲಬಾರ್ ಪಿಟ್ ವೈಪರ್ ಎಂಬ ವಿಚಾರ ವೈರಲ್ ಆಗ್ತಿದೆ. ಈ ಕುರಿತಾಗಿ ಸ್ವತಃ ಯುವತಿ ಶ್ರವ್ಯಾ ಸ್ಪಷ್ಟನೆ ನೀಡಿದ್ದಾರೆ.

ಕಚ್ಚಿದ್ದು ನಾಗರಹಾವಲ್ಲ ಎಂಬ ಸುದ್ದಿಯ ಕುರಿತು ಯುವತಿಯ ಸ್ಪಷ್ಟನೆ
ಕಚ್ಚಿರುವುದು ನಾಗರಹಾವು ಅಲ್ಲ ಎಂಬುದರ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಯುವತಿ ಶ್ರಮ್ಯಾ, ಕಚ್ಚಿದ್ದು ನಾಗರಹಾವೇ. ಆಸ್ಪತ್ರೆಗೆ ತೆರಳಿದಾಗ ವೈದ್ಯರು ಸಹ ಇದಕ್ಕೆ ಸಂಬಂಧಿಸಿದಂತೆಯೇ ಚಿಕಿತ್ಸೆ ನೀಡಿದ್ದಾರೆ. ಈ ಕುರಿತು ವೈದ್ಯರು ಟ್ರೀಟ್‌ಮೆಂಟ್ ನೀಡಿದ ದಾಖಲೆಯೂ ಇದೆ ಎಂದು ಹೇಳಿದ್ದಾರೆ. ಮಾತ್ರವಲ್ಲ ಸದ್ಯ ಚಿಕಿತ್ಸೆ ನೀಡಿದ ವೈದ್ಯರಲ್ಲದೆ ಉಳಿದವರು ಇದು ನಾಗರಹಾವು ಅಲ್ಲ ಎಂದು ತಪ್ಪಾದ ಹೇಳಿಕೆ ನೀಡುತ್ತಿದ್ದು, ವೃಥಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಶ್ರಮ್ಯಾ ತಿಳಿಸಿದ್ದಾರೆ.

 ಯುವಕನ ಜೀವಕ್ಕೆ ಎರವಾಯ್ತು ಹಾವಿನೊಂದಿಗಿನ ಸೆಲ್ಫಿ

ಇನ್ನು ಘಟನೆಯ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಪುತ್ತೂರಿನ ವೈದ್ಯರಾದ ಡಾ.ರವಿಪ್ರಕಾಶ್‌, 'ಹಾವು ಕಚ್ಚಿದವರು ಆಸ್ಪತ್ರೆಗೆ ಬಂದಾಗ ಅವರಿಗೆ ಚಿಕಿತ್ಸೆ ನೀಡುವುದು ನಮ್ಮ ಮೊದಲ ಆದ್ಯತೆ. ಆ ಕೆಲಸವನ್ನು ನಾವು ಮಾಡುತ್ತೇವೆ. ಎಲ್ಲಾ ರೀತಿಯ ವಿಷದ ಹಾವುಗಳು ಕಚ್ಚಿದಾಗ ಚಿಕಿತ್ಸೆ ನೀಡುವುದು ಒಂದೇ ರೀತಿಯಾಗಿರುತ್ತದೆ. ಹೀಗಾಗಿ ಅದು ಯಾವ ಹಾವು ಎಂಬ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ತಿಳಿಸಿದ್ದಾರೆ.

ಶ್ರಮ್ಯಾಳ ತಾಯಿ ಕೆಯ್ಯೂರಿನ ಗ್ರಾಪಂ ಸದಸ್ಯೆಯಾಗಿರುವ ಮಮತಾ ರೈ ಹಾವಿನ ಕಡಿತ (Snake bite)ಕ್ಕೊಳಗಾಗಿದ್ದರು.  ಶ್ರಮ್ಯಾಳ ತಾಯಿ ಮನೆ ಕೆಯ್ಯೂರಿನ ತಮ್ಮ ಮನೆಯ ಸಮೀಪವೇ ಇದ್ದು, ಇಲ್ಲಿಗೆ ಶ್ರಮ್ಯಾ ಹಾಗೂ ಅವಳ ತಾಯಿ ಮಮತಾ ರೈ ಹೋಗಿದ್ದರು. ಈ ವೇಳೆ ಮಮತಾ ರೈ ಪಂಪ್‌ಸೆಟ್ ಆನ್ ಮಾಡಲು ತೋಟಕ್ಕೆ ಹೋಗಿದ್ದರು. ಸ್ವಿಚ್ ಹಾಕಿ ತೋಟದಿಂದ ಮನೆಯ ಕಡೆ ವಾಪಸ್ಸಾಗುವಾಗ ಮಮತಾ ರೈ ಹಾವು ಇರುವುದು ತಿಳಿಯದೆ ಅದನ್ನು ತುಳಿದಿದ್ದರು. ಈ ಸಂದರ್ಭದಲ್ಲಿ ಹಾವು ಕಚ್ಚಿತ್ತು. ಮಮತಾ ರೈ  ಭಯಗೊಂಡು ಮನೆಗೆ ಓಡಿಬಂದಿದ್ದರು . ವಿಷ (Poison) ಮೇಲೇರದಂತೆ ಮನೆಯ ಕೆಲಸದಾಳು ಕಚ್ಚಿದ ಭಾಗಕ್ಕೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಿದ್ದಾರೆ.

ಮನೆಯಲ್ಲಿ ಮಲಗಿದ್ದ ಬಾಲಕನನ್ನು ಕಚ್ಚಿಕೊಂದ ವಿಷಕಾರಿ ಕೊಳಕು ಮಂಡಲ ಹಾವು

ಹೀಗೆ ಕಟ್ಟಿದಾಗಲೂ ವಿಷವೇರುವ ಸಾಧ್ಯತೆ ಹಿನ್ನೆಲೆ ಮಗಳು ಶ್ರಮ್ಯಾ ಹಾವು ಕಚ್ಚಿದ ಭಾಗಕ್ಕೆ ಬಾಯಿ ಹಾಕಿ ವಿಷ ಹೀರಿ ತೆಗೆದಿದ್ದರು. ಶ್ರಮ್ಯಾಳ ಪ್ರಥಮ ಚಿಕಿತ್ಸೆ (First aid), ಸಮಯಪ್ರಜ್ಞೆಯಿಂದ ವಿಷ ಹೊರಬಂದಿತ್ತು. ಬಳಿಕ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು (Doctor) ಸಹ ವಿಷ ತೆಗೆದು ಒಳ್ಳೆಯದೆ ಆಗಿದೆ. ಇಲ್ಲದಿದ್ರೆ ಪ್ರಾಣಕ್ಕೆ ಅಪಾಯವಿತ್ತು ಎಂದು ಹೇಳಿದ್ದರು

ಶ್ರಮ್ಯಾ, ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿನಿ. ಸ್ಕೌಟ್ಸ್‌ ಮತ್ತು ಗೈಡ್ಸ್ ನ ರೇಂಜರ್‌ ಕೂಡ ಆಗಿರುವ ಶ್ರಮ್ಯಾ ರೈ 'ಇದು ನನ್ನ ಮೊದಲ ಅನುಭವ. ಈ ಹಿಂದೆ ಕೇಳಿ ಹಾಗೂ ಸಿನೆಮಾಗಳಲ್ಲಿ ನೋಡಿ ತಿಳಿದಿದ್ದ ಮಾಹಿತಿಯ ಆಧಾರದಲ್ಲಿ ಇಂತಹ ಪ್ರಥಮ ಚಿಕಿತ್ಸೆ ನಡೆಸುವ ಧೈರ್ಯ ಮಾಡಿದೆ' ಎಂದು ಹೇಳಿದ್ದರು. 

ಹೀಗೂ ಕನಸು ನನಸಾಗಬಹುದು ನೋಡಿ: ತಮಿಳುನಾಡಿನಲ್ಲೊಂದು ವಿಚಿತ್ರ ಘಟನೆ

click me!