ಮಂಗಳೂರು ಪಾಲಿಕೆ ಚುನಾವಣೆ: 21 ವಾರ್ಡ್‌ಗಳಲ್ಲಿ ಪ್ರಾಬಲ್ಯ ಕಳೆದುಕೊಂಡ ಕಾಂಗ್ರೆಸ್

By Kannadaprabha News  |  First Published Nov 15, 2019, 8:08 AM IST

ಪಾಲಿಕೆಯ ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಕೇವಲ 20 ಸ್ಥಾನಗಳನ್ನು ಪಡೆದು ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿದ್ದರೆ, ಈ ಬಾರಿ 24 ಹೆಚ್ಚು ಸ್ಥಾನಗಳನ್ನು ತನ್ನ ತೆಕ್ಕೆಗೆ ಸೆಳೆಯುವಲ್ಲಿ ಸಫಲವಾಗಿದೆ. ಈ ಹಿಂದೆ 35 ವಾರ್ಡ್‌ಗಳಲ್ಲಿ ಗೆದ್ದು ಅಧಿಕಾರ ಪಡೆದು ಬೀಗಿದ್ದ ಕಾಂಗ್ರೆಸ್‌ ಈ ಬಾರಿ 21 ವಾರ್ಡ್‌ಗಳಲ್ಲಿ ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಸ್ಥಳೀಯ ಚುನಾವಣೆಯಲ್ಲೂ ಗೆಲ್ಲಲಾಗದೆ ಕಾಂಗ್ರೆಸ್‌ ಮುಖ ಮುಚ್ಚಿಕೊಳ್ಳುವಂತಾಗಿದೆ.


ಮಂಗಳೂರು(ನ.15): ಕಡಲನಗರಿ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದಿದೆ. ಒಟ್ಟು 60 ವಾರ್ಡ್‌ಗಳಲ್ಲಿ 44ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದರೆ, ಕಾಂಗ್ರೆಸ್‌ ಕೇವಲ 14 ಸ್ಥಾನಗಳನ್ನು ಗಳಿಸಿ ಹೀನಾಯವಾಗಿ ಸೋಲು ಕಂಡಿದೆ. ಉಳಿದೆರಡು ಸ್ಥಾನಗಳು ಎಸ್‌ಡಿಪಿಐ ಪಾಲಾಗಿವೆ.

ನ.12ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಗರದ ಪಾಂಡೇಶ್ವರ ರೊಜಾರಿಯೊ ಶಾಲೆಯಲ್ಲಿ ಗುರುವಾರ ಮಧ್ಯಾಹ್ನದವರೆಗೆ ನಡೆಯಿತು. ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮತ ಎಣಿಕೆಯ ಆರಂಭದಿಂದ ಅಂತ್ಯದವರೆಗೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಅಂತಿಮವಾಗಿ ಬಹುಮತಕ್ಕಿಂತ 13 ಸ್ಥಾನಗಳನ್ನು ಹೆಚ್ಚಿಗೆ ಪಡೆದು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

Tap to resize

Latest Videos

24 ಪ್ಲಸ್‌, 21 ಮೈನಸ್‌!:

ಪಾಲಿಕೆಯ ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಕೇವಲ 20 ಸ್ಥಾನಗಳನ್ನು ಪಡೆದು ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿದ್ದರೆ, ಈ ಬಾರಿ 24 ಹೆಚ್ಚು ಸ್ಥಾನಗಳನ್ನು ತನ್ನ ತೆಕ್ಕೆಗೆ ಸೆಳೆಯುವಲ್ಲಿ ಸಫಲವಾಗಿದೆ. ಈ ಹಿಂದೆ 35 ವಾರ್ಡ್‌ಗಳಲ್ಲಿ ಗೆದ್ದು ಅಧಿಕಾರ ಪಡೆದು ಬೀಗಿದ್ದ ಕಾಂಗ್ರೆಸ್‌ ಈ ಬಾರಿ 21 ವಾರ್ಡ್‌ಗಳಲ್ಲಿ ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಸ್ಥಳೀಯ ಚುನಾವಣೆಯಲ್ಲೂ ಗೆಲ್ಲಲಾಗದೆ ಕಾಂಗ್ರೆಸ್‌ ಮುಖ ಮುಚ್ಚಿಕೊಳ್ಳುವಂತಾಗಿದೆ.

ಜೆಡಿಎಸ್‌ ಶೂನ್ಯ, ಎಸ್‌ಡಿಪಿಐ ಬಲವೃದ್ಧಿ:

ಒಟ್ಟು 60 ವಾರ್ಡ್‌ಗಳಿಗೆ ಬಿಜೆಪಿಯಿಂದ 60 ಅಭ್ಯರ್ಥಿಗಳು, ಕಾಂಗ್ರೆಸ್‌ನಿಂದ 60, ಜೆಡಿಎಸ್‌ನಿಂದ 12, ಸಿಪಿಎಂನಿಂದ 7, ಸಿಪಿಐನಿಂದ 1, ಎಸ್‌ಡಿಪಿಐನಿಂದ 6, ಜೆಡಿಯು 2, ಡಬ್ಲೂಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 2 ಹಾಗೂ ಪಕ್ಷೇತರರು 27 ಸೇರಿ ಒಟ್ಟು 180 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಅಂತಿಮವಾಗಿ ಗೆದ್ದವರು ಮಾತ್ರ ಮೂರೇ ಪಕ್ಷದ ಅಭ್ಯರ್ಥಿಗಳು. ಕಳೆದ ಅವಧಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹೊರತುಪಡಿಸಿ ಜೆಡಿಎಸ್‌ನಿಂದ ಇಬ್ಬರು, ಒಬ್ಬರು ಪಕ್ಷೇತರ, ಒಬ್ಬರು ಎಸ್‌ಡಿಪಿಐನಿಂದ ಗೆದ್ದು ಕಾರ್ಪೊರೇಟರ್‌ಗಳಾಗಿದ್ದರು. ಈ ಬಾರಿ ಜೆಡಿಎಸ್‌ ಇದ್ದ 2 ಸ್ಥಾನಗಳನ್ನು ಕಳೆದುಕೊಂಡು ಶೂನ್ಯ ಸಂಪಾದನೆ ಮಾಡಿದ್ದರೆ, ಎಸ್‌ಡಿಪಿಐ ಒಂದು ಸ್ಥಾನವನ್ನು ಹೆಚ್ಚಿಸಿ ಬಲ ವೃದ್ಧಿಸಿಕೊಂಡಿದೆ. ಯಾವೊಬ್ಬ ಪಕ್ಷೇತರರಿಗೂ ಮತದಾರ ಈ ಬಾರಿ ಮಣೆ ಹಾಕಿಲ್ಲ.

ಚುನಾವಣೆಯಲ್ಲಿ ಪಾಲಿಕೆ ವ್ಯಾಪ್ತಿಯ 3,94,894 ಮತದಾರರಲ್ಲಿ 2,35,628 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಶೇ. 59.67 ಮತದಾನವಾಗಿತ್ತು.

‘ಯುದ್ಧ’ ಗೆದ್ದು ಬಂದವರು

ಸುರತ್ಕಲ್‌ (ಪಶ್ಚಿಮ)- ಶೋಭಾ ರಾಜೇಶ್‌(ಬಿಜೆಪಿ), ಸುರತ್ಕಲ್‌ (ಪೂರ್ವ)- ಎ.ಶ್ವೇತಾ (ಬಿಜೆಪಿ), ಕಾಟಿಪಳ್ಳ (ಪೂರ್ವ)- ಲೋಕೇಶ್‌ ಬೊಳ್ಳಾಜೆ (ಬಿಜೆಪಿ), ಕಾಟಿಪಳ್ಳ (ಕೃಷ್ಣಾಪುರ)- ಲಕ್ಷ್ಮಿ ಶೇಖರ್‌ (ಬಿಜೆಪಿ), ಕಾಟಿಪಳ್ಳ (ಉತ್ತರ)- ಶಂಶಾದ್‌ ಅಬೂಬಕ್ಕರ್‌ (ಎಸ್‌ಡಿಪಿಐ), ಇಡ್ಯಾ(ಪೂರ್ವ)- ಸರಿತಾ ಶಶಿಧರ್‌ (ಬಿಜೆಪಿ), ಇಡ್ಯಾ (ಪಶ್ಚಿಮ)- ನಯನ ಆರ್‌. ಕೋಟ್ಯಾನ್‌ (ಬಿಜೆಪಿ), ಹೊಸಬೆಟ್ಟು- ವರುಣ್‌ ಚೌಟ (ಬಿಜೆಪಿ), ಕುಳಾಯಿ- ಜಾನಕಿ ಯಾನೆ ವೇದಾವತಿ (ಬಿಜೆಪಿ), ಕುಂಜತ್ತಬೈಲ್‌ (ದಕ್ಷಿಣ)- ಸುಮಂಗಲ(ಬಿಜೆಪಿ), ಬೈಕಂಪಾಡಿ- ಸುಮಿತ್ರಾ (ಬಿಜೆಪಿ), ಬಂಗ್ರ ಕೂಳೂರು- ಕಿರಣ್‌ ಕುಮಾರ್‌ (ಬಿಜೆಪಿ), ಪಣಂಬೂರು- ಸುನಿತಾ (ಬಿಜೆಪಿ), ದೇರೇಬೈಲ್ (ಉತ್ತರ)- ಮನೋಜ್‌ ಕುಮಾರ್‌ (ಬಿಜೆಪಿ).

ಮಂಗಳೂರು ಪಾಲಿಕೆ ಚುನಾವಣೆ: ಪುರುಷ, ಮಹಿಳೆಯರು ಫಿಫ್ಟೀ 50!.

ಪಂಜಿಮೊಗರು- ಅನಿಲ್‌ ಕುಮಾರ್‌ (ಕಾಂಗ್ರೆಸ್‌), ಕಾವೂರು- ಎ.ಗಾಯತ್ರಿ (ಬಿಜೆಪಿ), ಕುಂಜತ್ತಬೈಲ್(ಉತ್ತರ)- ಶರತ್‌ ಕುಮಾರ್‌ (ಬಿಜೆಪಿ), ಪಚ್ಚನಾಡಿ- ಸಂಗೀತಾ ಆರ್‌.ನಾಯಕ್‌ (ಬಿಜೆಪಿ), ಮರಕಡ- ಲೋಹಿತ್‌ ಅಮೀನ್‌ (ಬಿಜೆಪಿ), ತಿರುವೈಲ್- ಹೇಮಲತಾ ರಘು ಸಾಲಿಯಾನ್‌ (ಬಿಜೆಪಿ), ದೇರೆಬೈಲು(ಪಶ್ಚಿಮ)- ಜಯಲಕ್ಷ್ಮಿ ವಿ.ಶೆಟ್ಟಿ(ಬಿಜೆಪಿ), ಪದವು (ಪಶ್ಚಿಮ)- ವನಿತಾ ಪ್ರಸಾದ್‌ (ಬಿಜೆಪಿ), ದೇರೆಬೈಲು (ನೈರುತ್ಯ)- ಗಣೇಶ್‌ (ಬಿಜೆಪಿ), ಕದ್ರಿ ಪದವು- ಜಯಾನಂದ ಅಂಚನ್‌ (ಬಿಜೆಪಿ), ಬೋಳೂರು- ಜಗದೀಶ ಶೆಟ್ಟಿ(ಬಿಜೆಪಿ), ದೇರೆಬೈಲು (ಪೂರ್ವ)- ರಂಜನಿ ಕೋಟ್ಯಾನ್‌ (ಬಿಜೆಪಿ), ಮಣ್ಣಗುಡ್ಡ- ಸಂಧ್ಯಾ(ಬಿಜೆಪಿ), ಕಂಬ್ಳ- ಲೀಲಾವತಿ (ಬಿಜೆಪಿ), ದೇರೆಬೈಲು (ದಕ್ಷಿಣ)- ಎಂ.ಶಶಿಧರ ಹೆಗ್ಡೆ(ಕಾಂಗ್ರೆಸ್‌), ಕೊಡಿಯಾಲ್‌ಬೈಲ್- ಸುಧೀರ್‌ ಶೆಟ್ಟಿ(ಬಿಜೆಪಿ), ಬಜಾಲ್‌- ಅಶ್ರಫ್‌ (ಕಾಂಗ್ರೆಸ್‌), ಬೋಳಾರ- ಭಾನುಮತಿ (ಬಿಜೆಪಿ), ಜೆಪ್ಪು- ಎಸ್‌. ಭರತ್‌ ಕುಮಾರ್‌ (ಬಿಜೆಪಿ), ಜಪ್ಪಿನಮೊಗರು- ವೀಣಾ ಮಂಗಳ (ಬಿಜೆಪಿ).

ಮಂಗಳೂರು ಪಾಲಿಕೆ ಚುನಾವಣೆ: ಫುಡ್ ಡೆಲಿವರಿ ಗರ್ಲ್‌ಗೆ ಸೋಲು

ಮಂಗಳಾದೇವಿ- ಪ್ರೇಮಾನಂದ ಶೆಟ್ಟಿ(ಬಿಜೆಪಿ), ಹೊಯ್ಗೆ ಬಜಾರ್‌- ರೇವತಿ (ಬಿಜೆಪಿ), ಬೆಂಗ್ರೆ- ಮುನೀಬ್‌ ಬಂಗ್ರೆ(ಎಸ್‌ಡಿಪಿಐ), ಡೊಂಗರಕೇರಿ- ಎಂ.ಜಯಶ್ರೀ ಕುಡ್ವ(ಬಿಜೆಪಿ), ಕುದ್ರೋಳಿ- ಸಂಶುದ್ದೀನ್‌ (ಕಾಂಗ್ರೆಸ್‌), ಬಂದರ್‌- ಝೀನತ್‌ ಸಂಶುದ್ದೀನ್‌ (ಕಾಂಗ್ರೆಸ್‌), ಪೋರ್ಟ್‌- ಅಬ್ದುಲ್‌ ಲತೀಫ್‌ (ಕಾಂಗ್ರೆಸ್‌), ಕಂಟೋನ್‌ಮೆಂಚ್‌- ದಿವಾಕರ (ಬಿಜೆಪಿ), ಮಿಲಾಗ್ರಿಸ್‌- ಅಬ್ದುಲ್‌ ರವೂಫ್‌ (ಕಾಂಗ್ರೆಸ್‌), ಕಂಕನಾಡಿ ವೆಲೆನ್ಸಿಯಾ- ಸಂದೀಪ್‌ (ಬಿಜೆಪಿ), ಕಂಕನಾಡಿ- ಟಿ.ಪ್ರವೀಣ್‌ ಚಂದ್ರ ಆಳ್ವ (ಕಾಂಗ್ರೆಸ್‌), ಅಳಪೆ(ಉತ್ತರ)- ರೂಪಶ್ರೀ ಪೂಜಾರಿ (ಬಿಜೆಪಿ), ಕಣ್ಣೂರು- ಚಂದ್ರಾವತಿ (ಬಿಜೆಪಿ), ಬಿಜೈ- ಪ್ರಶಾಂತ್‌ ಆಳ್ವ (ಬಿಜೆಪಿ), ಕದ್ರಿ (ಉತ್ತರ)- ಶಕೀಲ ಕಾವ (ಬಿಜೆಪಿ), ಕದ್ರಿ(ದಕ್ಷಿಣ)- ಕದ್ರಿ ಮನೋಹರ ಶೆಟ್ಟಿ(ಬಿಜೆಪಿ), ಶಿವಭಾಗ್‌- ಕಾವ್ಯ ನಟರಾಜ ಆಳ್ವ (ಬಿಜೆಪಿ), ಪದವು (ಸೆಂಟ್ರಲ್)- ಕಿಶೋರ್‌ ಕೊಟ್ಟಾರಿ (ಬಿಜೆಪಿ), ಪದವು (ಪೂರ್ವ)- ಕೆ.ಭಾಸ್ಕರ್‌ (ಕಾಂಗ್ರೆಸ್‌), ಮರೋಳಿ- ಕೇಶವ (ಕಾಂಗ್ರೆಸ್‌), ಬೆಂದೂರ್‌- ನವೀನ್‌ ಆರ್‌. ಡಿಸೋಜ (ಕಾಂಗ್ರೆಸ್‌), ಫಳ್ನೀರ್‌- ಜೆಸಿಂತಾ ವಿಜಯ ಆಲ್ಫೆ$›ಡ್‌ (ಕಾಂಗ್ರೆಸ್‌), ಕೋರ್ಟ್‌- ಎ.ಸಿ.ವಿನಯರಾಜ್(ಕಾಂಗ್ರೆಸ್‌), ಸೆಂಟ್ರಲ್‌ ಮಾರ್ಕೆಟ್‌- ಪೂರ್ಣಿಮಾ(ಬಿಜೆಪಿ).

ಮಂಗಳೂರು ಪಾಲಿಕೆ ಚುನಾವಣೆ: BJPಗೆ ಭರ್ಜರಿ ಜಯ

click me!