Daily Horoscope: ಈ ರಾಶಿಯವರಿಗಿಂದು ಉದ್ಯೋಗ ಪ್ರಾಪ್ತಿ!

Suvarna News   | Asianet News
Published : Nov 26, 2021, 06:19 AM IST
Daily Horoscope: ಈ  ರಾಶಿಯವರಿಗಿಂದು  ಉದ್ಯೋಗ ಪ್ರಾಪ್ತಿ!

ಸಾರಾಂಶ

26 ನವೆಂಬರ್ 2021, ಶುಕ್ರವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಇಂದಿನ ದಿನಭವಿಷ್ಯ ಕುಂಭ ರಾಶಿಯವರಿಗೆ ಬಯಸಿದ ಸಂತಾನ ಪ್ರಾಪ್ತಿ

ಮೇಷ(Aries): ಸಮೃದ್ಧ ಫಲಗಳಿವೆ. ಅತ್ಯುತ್ತಮವಾಗಿ ಕೌಟುಂಬಿಕ ಸಹಕಾರ ಸಿಕ್ಕಲಿದೆ. ಸರಕಾರಿ ಕೆಲಸ ಕಾರ್ಯಗಳಿಗೆ ಯಶಸ್ಸು. ಕೋರ್ಟ್ ವ್ಯವಹಾರಗಳಲ್ಲಿ ಜಯ. ನೆಮ್ಮದಿಯ ದಿನ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಂಡು ಬರುವುದರಿಂದ ಧನಲಾಭವಾಗಲಿದೆ. ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ. 
ವೃಷಭ(Taurus): ಹೊಸ ಕಾರ್ಯಾರಂಭಕ್ಕೆ ಸಿದ್ಧತೆ. ಸಹೋದರರ ಸಹಕಾರ ಇರಲಿದೆ. ಮಂಗಲ ಕಾರ್ಯ, ಕಂಕಣ ಬಲ ಯೋಗ. ಇಷ್ಟಾರ್ಥ ಸಿದ್ಧಿ. ಆರೋಗ್ಯ ಅನುಕೂಲವಿದ್ದರೂ ಅಸಡ್ಡೆ ಮಾಡದಿರಿ, ಉದ್ಯೋಗದಲ್ಲಿ ಅನುಕೂಲ, ಕೃಷ್ಣ ಪ್ರಾರ್ಥನೆ ಮಾಡಿ.
ಮಿಥುನ(Gemini): ವ್ಯಾಪಾರಿಗಳಲ್ಲಿ ಜಾಗ್ರತೆ ಬೇಕು, ಧನಲಾಭ, ಆಹಾರದಲ್ಲಿ ಕೊರತೆ ಇಲ್ಲ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಪರರಿಂದ ವಂಚನೆ, ಮಾನ- ಮನಸ್ಸುಗಳಿಗೆ ಭಂಗ ಉಂಟಾಗಬಹುದು. ಹೆಚ್ಚಿನ ನಷ್ಟ ತಪ್ಪಿಸಿಕೊಳ್ಳಲು ಲಕ್ಷ್ಮೀ-ನಾರಾಯಣ ಪ್ರಾರ್ಥನೆ ಮಾಡಿ.

Date of Birth and Luck: ಈ ದಿನ ಹುಟ್ಟಿದ ಹುಡುಗಿಯರಿಂದ ಗಂಡಂದಿರಿಗೆ ಅದೃಷ್ಟ..!
ಕಟಕ(Cancer): ದೇಹಸೌಖ್ಯ, ಆರೋಗ್ಯದಲ್ಲಿ ಬಲವಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭಿವೃದ್ದಿ ಇದೆ. ಹಾಗಂಥ ಪರಿಶ್ರಮ ಹಾಕುವುದರಲ್ಲಿ ಅಸಡ್ಡೆ ಬೇಡ. ವ್ಯಾಪಾರದಲ್ಲಿ ಲಾಭ, ಸಿವಿಲ್ ಉದ್ಯಮಿಗಳಿಗೆ ಅನುಕೂಲ, ಸ್ಥಿರಾಸ್ಥಿ ಜಯ. ಅವಿವಾಹಿತರಿಗೆ ಕಂಕಣಬಲ. ಹಸುವಿಗೆ ಅಕ್ಕಿಬೆಲ್ಲ ತಿನ್ನಿಸಿ. 
ಸಿಂಹ(Leo): ಹಣ ಹೂಡಿಕೆ ಮಾಡುವ ದಿನ, ಆಲೋಚನೆಗಳು ವ್ಯತಿರಿಕ್ತವಾಗಲಿವೆ. ಕೆಲಸ ಕಾರ್ಯಗಳಲ್ಲಿ ಆದಷ್ಟು ತಾಳ್ಮೆ, ಸಮಾಧಾನ, ಪ್ರಯತ್ನ ಬಲದಿಂದ ಮುಂದುವರಿಯಬೇಕಾಗುತ್ತದೆ. ಸಹೋದರರಲ್ಲಿ ಅಸಮಾಧಾನ ಇರಲಿದೆ. ಒಳ್ಳೆಯ ರೀತಿಯ ಮಾತುಕತೆಯಿಂದ ತೊಡಕು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಮಕ್ಕಳ ಬಗ್ಗೆ ಆತಂಕ ಬೇಡ, ಸೂರ್ಯ ಪ್ರಾರ್ಥನೆ ಮಾಡಿ.
ಕನ್ಯಾ(Virgo): ಪ್ರಯಾಣದಲ್ಲಿ ತೊಡಕು, ಕಟ್ಟಡ ನಿರ್ಮಾಣ ಕೆಲಸಗಾರರಿಗೆ ತೊಡಕು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಅಸಮಾಧಾನ ಇರಲಿದೆ. ಮಾಡದ ತಪ್ಪಿಗೆ ದಂಡ ತೆರಬೇಕಾದೀತು. ಪಡೆದ ಸಾಲವನ್ನು ತೀರಿಸುವತ್ತ ಗಮನ ಹರಿಸಿದರೆ ನೆಮ್ಮದಿಯ ದಿನಗಳನ್ನು ಎದುರು ನೋಡಬಹುದು. ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ.

A, K, P, R ನಿಂದ ಶುರುವಾಗೋ ಹೆಸರಿನ ಹುಡುಗರು ತುಂಬಾ ಕೇರಿಂಗ್..!
ತುಲಾ(Libra): ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲದಿಂದಲೇ ಮುಂದುವರಿಯಬೇಕಾಗುತ್ತದೆ. ಅರ್ಧಕ್ಕೆ ನಿಲ್ಲಿಸಿದ ಕಾರ್ಯವನ್ನು ಪೂರ್ತಿಗೊಳಿಸುವುದರಿಂದ ಕೊಂಚ ನೆಮ್ಮದಿ. ವ್ಯಯ ಹೆಚ್ಚಾಗಲಿದೆ, ಉದ್ಯೋಗದಲ್ಲಿ ಹೊಸ ಅವಕಾಶ. ಮಂಗಲ ಕಾರ್ಯ, ಕಂಕಣಬಲಕ್ಕಾಗಿ ನರಸಿಂಹ ಪ್ರಾರ್ಥನೆ ಮಾಡಿ.
ವೃಶ್ಚಿಕ(Scorpio): ಆಹಾರದಲ್ಲಿ ವ್ಯತ್ಯಾಸದಿಂದ ಆರೋಗ್ಯದಲ್ಲಿ ಏರುಪೇರು. ಆಸ್ಪತ್ರೆ ಓಡಾಟ. ಕುಟುಂಬದಲ್ಲಿ ಸ್ವಲ್ಪ ಕಹಿಯಾದ ವಾತಾವರಣ. ಮಾತಿನಿಂದ ಬೇಸರ, ಹಣ ವ್ಯವಹಾರ ಬೇಡ. ಹೊಸ ಹೂಡಿಕೆ ಫಲಕಾರಿಯಾಗದು. ಮಾನಸಿಕ ಕಿರಿಕಿರಿಯಿಂದ ಪಾರಾಗಲು ಕುಲದೇವತಾ ಪ್ರಾರ್ಥನೆ ಮಾಡಿ.
ಧನುಸ್ಸು(Sagittarius): ಆರ್ಥಿಕ ಅಡಚಣೆ ಇದ್ದರೂ ಅನುಕೂಲಕರ ಸ್ಥಿತಿಯಲ್ಲಿ ಕೆಲಸಗಳು ಸಾಗಲಿವೆ. ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ತಾಳ್ಮೆ, ಸಮಾಧಾನಕ್ಕೆ ಹೆಚ್ಚು ಗಮನ ನೀಡುವುದು ಉತ್ತಮ. ಪ್ರಯಾಣಕ್ಕೆ ಸಿದ್ಧತೆ. ನಿರುದ್ಯೋಗಿಗಳಿಗೆ ಆಕಸ್ಮಿಕ ಉದ್ಯೋಗ ಪ್ರಾಪ್ತಿಯಾಗಲಿದೆ. ನವಗ್ರಹ ಪ್ರಾರ್ಥನೆ ಮಾಡಿ.
ಮಕರ(Capricorn): ಖರ್ಚು ಹೆಚ್ಚಾಗಲಿದೆ, ಉದ್ಯೋಗ ನಿಮಿತ್ತ ವ್ಯಯ. ಸಂಗಾತಿಯ ಸಹಕಾರ, ಸ್ನೇಹಿತರ ಸಹಕಾರದಿಂದ ಮನಸ್ಸು ಪ್ರಫುಲ್ಲವಾಗಿರುವುದು. ತಂಟೆ ತಕರಾರುಗಳಿಂದ ಮುಕ್ತಿ, ಶತ್ರು ಪೀಡಾ ನಿವಾರಣೆ. ಸಾಂಸಾರಿಕ ಸುಖ ಸಂತೋಷ ಪ್ರಾಪ್ತಿಯಾಗುವುದು. ಕೃಷ್ಣನಿಗೆ ತುಳಸಿ ಅರ್ಚನೆ ಮಾಡಿ.
ಕುಂಭ(Aquarius): ವೃತ್ತಿರಂಗದಲ್ಲಿ ವಿವೇಚನೆಯಿಂದ ನಡೆಯಬೇಕಾಗುತ್ತದೆ. ಲಾಭ ಸಮೃದ್ಧಿ, ಶತ್ರುಗಳಿಂದಲೂ ಸಹಾಯ, ಮಾತಿಗೆ ಮಾನ್ಯತೆ ಸಿಗಲಿದೆ. ಲೋಹ, ಯಂತ್ರೋಪಕರಣ ವ್ಯಾಪಾರಸ್ಥರಿಗೆ ಯಶಸ್ಸು. ದಂಪತಿಗೆ ಎಣಿಸಿದ ಸಂತಾನ ಪ್ರಾಪ್ತಿಯಾಗುವುದು. ವಾತಮಯದಿಂದ ದೇಹಾಯಾಸ. ಮನೆ ದೇವರ ಪ್ರಾರ್ಥನೆ ಮಾಡಿ.
ಮೀನ(Pisces): ವೃತ್ತಿರಂಗದಲ್ಲಿ ಹಿತಶತ್ರುಗಳ ಕಾಟ ತೋರಿಬರಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ. ಬೆಳ್ಳಿ ಬಂಗಾರ ಖರೀದಿ ಮಾಡಬಹುದು. ದೂರ ಪ್ರಯಾಣಕ್ಕೆ ಸುದಿನ. ಗೃಹಿಣಿಯಿಂದಾಗಿ ಕೌಟುಂಬಿಕ ಸಮಸ್ಯೆ ನಿವಾರಣೆಯಾಗಲಿದೆ. ಗಣಪತಿ ಪ್ರಾರ್ಥನೆ ಮಾಡಿ.

PREV
Read more Articles on
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ