1 ಮೇ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ತುಲಾ ರಾಶಿಗೆ ಹೆಚ್ಚುವ ಚಿಂತೆ
ಮೇಷ(Aries): ಶುಭ ದಿನ. ಚಿನ್ನ ಖರೀದಿ ಮಾಡುವಿರಿ. ದೂರ ಪ್ರಯಾಣವು ಅನುಭವಗಳ ಗುಚ್ಛವನ್ನೇ ಕೊಡುವುದು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಹೊಸ ವಸ್ತ್ರ ಖರೀದಿ ಮಾಡುವಿರಿ. ಸೂರ್ಯನಿಗೆ ಅರ್ಘ್ಯ ಸಲ್ಲಿಸಿ.
ವೃಷಭ(Taurus): ಬದುಕಲ್ಲಾದ ಬದಲಾವಣೆ ಇರಿಸು ಮುರಿಸು ತರುವುದು. ಕೆಲವೊಂದನ್ನು ಬಾಯಿ ಬಿಟ್ಟು ಹೇಳದೆ ಸರಿಯಾಗದು. ನಿಮ್ಮ ಸಮಸ್ಯೆಗಳನ್ನು ಸಂಬಂಧಿಸಿದವರಲ್ಲಿ ಹೇಳಿಕೊಳ್ಳಿ. ಕೌಶಲ ಅಭಿವೃದ್ಧಿಯತ್ತ ಗಮನ ಹರಿಸಿ. ಆದಿತ್ಯ ಹೃದಯ ಪಠಣ ಮಾಡಿ.
undefined
ಮಿಥುನ(Gemini): ಉದ್ಯೋಗಸ್ಥರು ಸಂಬಳ ಹೆಚ್ಚಳವನ್ನು ಸಂಭ್ರಮಿಸಲಿದ್ದೀರಿ. ಹೊಸ ನಿವೇಶನ ಖರೀದಿಗೆ ಕೈ ಹಾಕಬಹುದು. ರೈತರು, ವ್ಯಾಪಾರಿಗಳಿಗೆ ಶುಭದಿನ. ಸಂಗಾತಿಯ ಜೊತೆ ಸಮಾಧಾನದಿಂದಿರಿ. ತಂದೆಯ ಕಡೆಯಿಂದ ಸಹಾಯ ದೊರಕುವುದು. ವಿಷ್ಣು ಸಹಸ್ರನಾಮ ಪಠಣ ಮಾಡಿ.
ಕಟಕ(Cancer): ಸುಲಭಕ್ಕೆ ಗುರಿ ಸೇರಬಹುದು ಎಂದು ಅಡ್ಡ ದಾರಿ ಹಿಡಿಯುವ ಪ್ರಯತ್ನ ಮಾಡುವುದು ಬೇಡ. ಸ್ನೇಹಿತರ ಭೇಟಿಯಲ್ಲಿ ವಾಗ್ವಾದಗಳಾಗಬಹುದು. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ನಿಮ್ಮ ಉಳಿತಾಯ ಯೋಜನೆಯನ್ನು ಪರಾಮರ್ಶಿಸಿಕೊಳ್ಳಿ. ಗೋ ಗ್ರಾಸ ನೀಡಿ.
ಅಕ್ಷಯ ತೃತೀಯದಂದು, ಚಿನ್ನ ಮಾತ್ರವಲ್ಲ ಇವುಗಳನ್ನು ಖರೀದಿಸಿದರೆ ಲಕ್ಷ್ಮೀ ಕೃಪೆ ಇರುತ್ತೆ
ಸಿಂಹ(Leo): ಆದಾಯ ಹೆಚ್ಚಾದರೂ ಅದಕ್ಕೆ ತಕ್ಕಂತೆ ಖರ್ಚು ಬರಲಿದೆ. ನಿತ್ಯವೂ ಇರುತ್ತಿದ್ದ ಜಂಜಾಟಗಳು ಇಂದು ಇರುವುದಿಲ್ಲ. ಹಾಗೆಂದು ಸಂಪೂರ್ಣ ಸೋಮಾರಿಗಳಾಗಬೇಡಿ. ಕನಸುಗಳ ಬೆನ್ನಟ್ಟಲು ನಿರಂತರ ಶ್ರಮ ಇರಲಿ. ಸಂಗಾತಿಯೊಂದಿಗೆ ಚೆಂದದ ದಿನ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ.
ಕನ್ಯಾ(Virgo): ನಿಮಗೆ ಬೇಕಾದುದನ್ನು ಹೇಳದೆ, ಗುಮ್ಮನ ಗುಸ್ಕನ ಹಾಗಿದ್ದರೆ ಯಾರಿಗೂ ನೆಮ್ಮದಿ ಇಲ್ಲ. ಭವಿಷ್ಯದ ದೃಷ್ಟಿಯಿಂದ ದೃಢವಾದ ನಿರ್ಧಾರ ತೆಗೆದುಕೊಳ್ಳಿ. ಯಾರ ಬಗ್ಗೆಯೂ ಲಘುವಾಗಿ ಮಾತನಾಡದಿರಿ. ಸ್ವಕಾಳಜಿ ಅಗತ್ಯ. ಮನೆ ದೇವರನ್ನು ಸ್ಮರಿಸಿ.
ತುಲಾ(Libra): ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಬಹುದು. ನೋವು ಸಹಜ. ಆದರೆ ಅದನ್ನೇ ಚಿಂತಿಸುವುದು ಬೇಡ. ಹೊಸ ಉತ್ಸಾಹದಿಂದ ಮುಂದೆ ಸಾಗಿದರೆ ಸಂತೋಷ ಇದ್ದೇ ಇದೆ. ಸಂಗಾತಿಗೆ ಹೆಚ್ಚಿನ ಸಮಯ ನೀಡಿ. ಆದಿತ್ಯ ಹೃದಯ ಪಠಣ ಮಾಡಿ.
ವೃಶ್ಚಿಕ(Scorpio): ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವ ಹಾಗೆ ಮಾಡಿದ ಕಾರ್ಯ ಮಣ್ಣು ಪಾಲಾಗಲಿದೆ. ಚಿಂತೆ ಮಾಡುತ್ತಾ ಕೂರಬೇಡಿ. ಮುಂದಿನ ದಾರಿ ಹುಡುಕಿ. ಮನೆಗೆಲಸಗಳು ಹೈರಾಣಾಗಿಸುವುವು. ತಾಯಿಯ ಮುನಿಸು ಶಮನವಾಗಲಿದೆ. ಬಡವರಿಗೆ ಹಳದಿ ವಸ್ತುಗಳನ್ನು ದಾನ ಮಾಡಿ.
Astrology: ಸದಾ ಸಕಾರಾತ್ಮಕ ಆಲೋಚನೆ ಮಾಡ್ತಾರೆ ಈ ರಾಶಿ ಹುಡುಗಿಯರು
ಧನುಸ್ಸು(Sagittarius): ಸೋಮಾರಿಯಾಗಿ ದಿನ ಕಳೆಯಬೇಡಿ. ನಾಳೆ ನೆಮ್ಮದಿಯಾಗಿ ಇರಬೇಕು ಎಂದರೆ ಇಂದು ತುಸು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ತಂದೆಯ ಮಾತಿಗೆ ಹೆಚ್ಚಿನ ಬೆಲೆ ಕೊಡಿ. ಎಲ್ಲರೂ ಹೇಳುವುದು ನಿಮ್ಮ ಒಳ್ಳೆಯದ್ದಕ್ಕೆ ಎಂಬುದು ತಿಳಿದಿರಲಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ.
ಮಕರ(Capricorn): ತಪ್ಪು ಆಗುತ್ತದೆ. ಅದು ಸಹಜ. ಹಾಗಂಥ ನಿಮ್ಮನ್ನು ನೀವೇ ಶಿಕ್ಷಿಸಿಕೊಂಡು ಕೂರಬೇಡಿ. ಹೆಚ್ಚಿನ ಬಾರಿ ಸಾರಿ ಎಂಬ ಪದದಿಂದ ತಪ್ಪುಗಳು ಸರಿಯಾಗುತ್ತವೆ, ಸಂಬಂಧಗಳು ಮರುಗೂಡುತ್ತವೆ ಎಂಬುದು ಅರಿತು ಮುನ್ನಡೆಯಿರಿ. ವಿಷ್ಣು ಸಹಸ್ರನಾಮ ಪಠಣ ಮಾಡಿ.
ಕುಂಭ(Aquarius): ವಾಹನ ಚಾಲನೆ ಮಾಡುವಾಗ ಎಚ್ಚರ ಇರಲಿ. ಸಂಬಂಧಗಳು ಕೆಡದಂತೆ ಕಾಪಾಡಿಕೊಳ್ಳಿ. ವೃಥಾ ಖರ್ಚು ಮಾಡಬೇಡಿ. ಹಣಕಾಸಿನ ವ್ಯವಹಾರದಲ್ಲಿ ಬಿಡಿ ಹಿಡಿತ ಇದ್ದರೆ ತುಂಬಾ ಒಳ್ಳೆಯದು. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಸೂರ್ಯ ನಮಸ್ಕಾರ ಮಾಡಿ.
ಮೀನ(Pisces): ಗರಿಷ್ಠ ಸಮಯ ಸಿಕ್ಕುತ್ತದೆ. ಆದರೆ ಆಗಬೇಕಾದ ಕಾರ್ಯಗಳು ಹೆಚ್ಚಾಗಿ ಆಗುವುದಿಲ್ಲ. ನಾನೇ ಸರಿ ಎಂಬ ಧೋರಣೆ ಬೇಡ. ಅನಗತ್ಯ ವಸ್ತುಗಳಿಗಾಗಿ ಖರ್ಚು ಹೆಚ್ಚುವುದು. ಆರೋಗ್ಯ ಕಿರಿಕಿರಿ ಇರುವುದು. ಮನೆ ಹಿರಿಯರ ಆಶೀರ್ವಾದ ಪಡೆಯಿರಿ.