Daily Horoscope: ಮೇಷಕ್ಕೆ ಸ್ನೇಹದಲ್ಲಿ ವಂಚನೆ, ಮೀನಕ್ಕೆ ಹೆಚ್ಚುವ ನೋವು

Published : Apr 29, 2022, 07:03 AM IST
Daily Horoscope: ಮೇಷಕ್ಕೆ ಸ್ನೇಹದಲ್ಲಿ ವಂಚನೆ, ಮೀನಕ್ಕೆ ಹೆಚ್ಚುವ ನೋವು

ಸಾರಾಂಶ

29 ಏಪ್ರಿಲ್ 2022, ಶುಕ್ರವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ವೃಷಭ ರಾಶಿಗಿಂದು ಹೂಡಿಕೆಗಳಲ್ಲಿ ಫಲ

ಮೇಷ(Aries): ನೀವು ಯೋಜಿಸಿದ ದೂರ ಪ್ರಯಾಣಕ್ಕೆ ಹೋಗುವ ಮುನ್ನವೇ ಅಡೆತಡೆಗಳು ಎದುರಾಗಬಹುದು. ಸ್ನೇಹಿತನ ಕುಟಿಲತನ ಬಯಲಾಗಿ ಆಘಾತ ಸಾಧ್ಯತೆ. ಉದ್ಯೋಗದಲ್ಲಿ ಏಕಾಗ್ರತೆ ಸಿಗದೆ ಹೋಗಲಿದೆ. ಸಂಗಾತಿಯೊಂದಿಗೆ ಮಾತುಕತೆ ಜಗಳಕ್ಕೆ ತಿರುಗುವ ಸಾಧ್ಯತೆ. ಮಹಾಲಕ್ಷ್ಮೀ ಸ್ಮರಣೆ ಮಾಡಿ. 

ವೃಷಭ(Taurus): ಆರ್ಥಿಕ ಅಡಚಣೆಗಳಿದ್ದರೂ ಕಾರ್ಯದಲ್ಲಿ ಪ್ರಗತಿ ಇರಲಿದೆ. ವ್ಯಾಪಾರ, ಉದ್ದಿಮೆಗಳಲ್ಲಿ, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಉತ್ತಮ ಲಾಭ ಕಾಣುವಿರಿ. ನಿರುದ್ಯೋಗಿಗಳು ಹೊಸ ಮಾರ್ಗಗಳನ್ನು ಹುಡುಕುವತ್ತ ಗಮನ ಹರಿಸಬೇಕು. ಗೋ ಗ್ರಾಸ ನೀಡಿ. 

ಮಿಥುನ(Gemini): ಆರೋಗ್ಯ ಸಮಸ್ಯೆಗಳು ಬಾಧಿಸಲಿವೆ. ಮಕ್ಕಳ ವಿಷಯದಲ್ಲಿ ಆತಂಕ ಹೆಚ್ಚಬಹುದು. ಕಾರ್ಯಗಳಲ್ಲಿ ಎಡವಟ್ಟಾಗುವ ಸಾಧ್ಯತೆ. ಕಚೇರಿಯಲ್ಲಿ ಮಾತಿನಲ್ಲಿ ಎಡವಟ್ಟಾಗಬಹುದು. ತಂದೆತಾಯಿಯ ಸೌಖ್ಯ ವಿಚಾರಿಸಿ. ಶಿವ ಶಕ್ತಿಯರ ಸ್ಮರಣೆ ಮಾಡಿ. 

ಕಟಕ(Cancer): ಹೂಡಿಕೆಗಳು ಫಲ ನೀಡಲಿವೆ. ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ನಿಮ್ಮಿಂದ ಕುಟುಂಬದ ಇತರ  ಸದಸ್ಯರಿಗೆ ಸಮಸ್ಯೆಯಾಗುತ್ತಿರಬಹುದು. ಅದರ ಪರಿಹಾರದಿಂದಲೇ ಮನೆಯಲ್ಲಿ ನೆಮ್ಮದಿ ಸಾಧ್ಯ. ಕೊಂಚ ಹೊಂದಾಣಿಕೆ ಮಾಡಿಕೊಳ್ಳಿ. ತಾಯಿಯ ಆಶೀರ್ವಾದ ಪಡೆಯಿರಿ. 

ಸಿಂಹ(Leo): ಬಹಳಷ್ಟು ಕೆಲಸಗಳು ಎಲ್ಲ ಕಡೆಗಳಿಂದಲೂ ಬಂದು ಹೆಗಲೇರಿ ಕುಳಿತುಕೊಳ್ಳಲಿವೆ. ತಾಳ್ಮೆಯಿಂದ ಒಂದೊಂದಾಗಿ ನಿಭಾಯಿಸಿ. ನಿಮ್ಮ ಜವಾಬ್ದಾರಿಗಳ ಭಾರದ ಕೋಪವನ್ನು ಇತರರ ಮೇಲೆ ತೋರಬೇಡಿ. ಮಾತಾಡುವ ಮುಂಚೆ ಎಚ್ಚರ ವಹಿಸಿ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ. 

ಕನ್ಯಾ(Virgo): ವಾಗ್ವಾದಗಳಲ್ಲಿ ನನ್ನದೇನೂ ತಪ್ಪೇ ಇಲ್ಲ, ಎಲ್ಲವೂ ಇನ್ನೊಬ್ಬರದೇ ಎಂಬ ಧೋರಣೆಯಿಂದ ಹೊರ ಬನ್ನಿ. ಮನುಷ್ಯ ಮಾತ್ರರೆಲ್ಲರೂ ತಪ್ಪು ಮಾಡುವುದು ಸಹಜ. ಒಪ್ಪಿಕೊಂಡರೆ ದೊಡ್ಡವರಾಗಬಹುದು. ಕರ್ತವ್ಯ ನಿಷ್ಠೆ ಇರಲಿ. ದುರ್ಗಾ ಅಷ್ಟೋತ್ತರ ಹೇಳಿಕೊಳ್ಳಿ. 

ತುಲಾ(Libra): ಇಷ್ಟ ಮಿತ್ರರ ಸಹಕಾರದಿಂದ ಮಾನಸಿಕ ಸಮಾಧಾನ ತೋರಿ ಬರುವುದು. ಪ್ರಾಮಾಣಿಕ ಕಾರ್ಯ ವಿಧಾನಗಳಿಂದ ಹಣದ ಆದಾಯ ಹೆಚ್ಚಲಿದೆ. . ಬಹಳ ಕಾಲದಿಂದ ಎದುರು ನೋಡುತ್ತಿದ್ದ ವಾರ್ತೆಯೊಂದು ಸಿಕ್ಕು ಸಮಾಧಾನ, ಸಂತಸವಾಗುವುದು. ಶಾರದಾಂಬೆಯ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ನಿಮ್ಮ ಮನಸ್ಸನ್ನು ಸೀಕ್ರೆಟ್ ಲಾಕರ್ ಮಾಡಿಕೊಂಡರೆ ಪ್ರಯೋಜನವಿಲ್ಲ. ಮನದ ಮಾತನ್ನು ಅಗತ್ಯವಿದ್ದಲ್ಲಿ ಹೇಳಿಕೊಳ್ಳಿ. ದೂರ ಪ್ರಯಾಣ ಇರಲಿದೆ. ಯಾವುದೇ ಕಾರಣಕ್ಕೂ ಮುಂದಿಟ್ಟ ಹೆಜ್ಜೆ ಹಿಂದಿಡಬೇಡಿ. ಅಮ್ಮನವರಿಗೆ ಕೆಂಪು ಹಾಗೂ ಬಿಳಿ ಹೂಗಳಿಂದ ಪೂಜೆ ಮಾಡಿ. 

ಶನೈಶ್ಚರಿ ಅಮಾವಾಸ್ಯೆ 2022: ಶನಿ ದೋಷದ ಸಮಸ್ಯೆಗಳಿಂದ ಮುಕ್ತರಾಗಲು ನೀವೇನು ಮಾಡಬೇಕು ಗೊತ್ತಾ?

ಧನುಸ್ಸು(Sagittarius): ಹೇಳಬೇಕಾದುದನ್ನು ಹೇಳದೆ, ಬೇರೆಲ್ಲ ಎಷ್ಟು ಮಾತಾಡಿದರೂ ಪ್ರಯೋಜನವಿಲ್ಲ. ಕೃಷಿ ಸೇರಿದಂತೆ ಅಧಿಕ ದೈಹಿಕ ಶ್ರಮದ ಪ್ರವೃತ್ತಿಗಳಲ್ಲಿ ನಿರಾಶೆ ಉಂಟಾಗಬಹುದು. ಕಚೇರಿ ಉದ್ಯೋಗಗಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಲಲಿತಾ ಸಹಸ್ರನಾಮ ಹೇಳಿಕೊಳ್ಳಿ. 

ಮಕರ(Capricorn): ಸಮಸ್ಯೆಗಳು ಹೆಚ್ಚಿದಂತೆನಿಸಬಹುದು. ಆದರೆ, ನಿಮಗಿಂತ ಹೆಚ್ಚು ಸಮಸ್ಯೆ ಇರುವವರೇ ಸುತ್ತಲಿದ್ದಾರೆ ಎಂಬುದನ್ನು ಗಮನಿಸಿ. ಅವನ್ನು ಎದುರಿಸುವ ಧೈರ್ಯ ಪಡೆದುಕೊಳ್ಳಿ. ಯಾರಿಗೂ ಸಾಲ ನೀಡಬೇಡಿ. ಆರೋಗ್ಯ ಸಮಸ್ಯೆಗಳು ಕಾಡಬಹುದು. ಅನ್ನಪೂರ್ಣೇಶ್ವರಿಯನ್ನು ಸ್ಮರಿಸಿ.

Saturn Transit: 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ಪ್ರವೇಶ, ದ್ವಾದಶ ರಾಶಿಗಳ ಮೇಲೆ ಹೀಗಿವೆ ಪ್ರಭಾವ

ಕುಂಭ(Aquarius): ಕಾರ್ಯರಂಗದಲ್ಲಿ ನಿಮ್ಮ ಕೀರ್ತಿಯು ಮೇಲ್ಮಟ್ಟಕ್ಕೆ ಏರುವುದು. ಮನೆಯ ಸದಸ್ಯರ ವರ್ತನೆ ಬೇಸರ ಮೂಡಿಸುವುದು. ಸಂಗಾತಿಯ ಸಹಕಾರ ಇರಲಿದೆ. ಧನ ಲಾಭ ಇರಲಿದೆ. ಅದಕ್ಕಿಂತ ಹೆಚ್ಚಿನ ಖರ್ಚುಗಳು ಎದುರಾಗಲಿವೆ. ಸಂಗಾತಿಯ ಕಷ್ಟಗಳಿಗೆ ಹೆಗಲು ನೀಡಿ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ. 

ಮೀನ(Pisces): ಹತ್ತಿರದವರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಬಹಳಷ್ಟು ನೋವು ಅನುಭವಿಸಬೇಕಾಗುವುದು. ವಾಹನಗಳು ದುರಸ್ತಿಗೆ ಬರಬಹುದು. ಕಚೇರಿಯಲ್ಲಿ ಬೈಸಿಕೊಳ್ಳಬೇಕಾಗುವುದು. ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ದುರ್ಗಾ ಅಷ್ಟೋತ್ತರ ಹೇಳಿಕೊಳ್ಳಿ. 

PREV
Read more Articles on
click me!

Recommended Stories

ಗುರುವಾರ 19 ಇಂದು ಸಿದ್ಧಿ ಯೋಗ ಈ ರಾಶಿಗೆ ಬಂಪರ್‌ ಲಾಟರಿ
ಬುಧವಾರ ಮಾರ್ಚ್ 18 ಇಂದು ದ್ವಿಗುರು ಯೋಗ, ಈ ರಾಶಿಗೆ ಡಬಲ್ ಲಾಟರಿ