Daily Horoscope: ಮಿಥುನಕ್ಕೆ ಅಪಘಾತ ಭೀತಿ, ತುಲಾ ರಾಶಿಗೆ ಪ್ರಲೋಭನೆ ತರುವುದು ಪಜೀತಿ

Published : May 14, 2022, 07:04 AM IST
Daily Horoscope: ಮಿಥುನಕ್ಕೆ ಅಪಘಾತ ಭೀತಿ, ತುಲಾ ರಾಶಿಗೆ ಪ್ರಲೋಭನೆ ತರುವುದು ಪಜೀತಿ

ಸಾರಾಂಶ

14 ಮೇ 2022, ಶನಿವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಈ ರಾಶಿಗೆ ಖರ್ಚು ಹೆಚ್ಚು

ಮೇಷ(Aries): ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚುತ್ತದೆ. ವ್ಯಾಪಾರಗಳಲ್ಲಿ ಕೊಂಚ ಲಾಭಕ್ಕೆ ತೃಪ್ತಿ ಪಡಬೇಕಾಗುವುದು. ಹಳೆಯ ಪಶ್ಚಾತ್ತಾಪಗಳನ್ನು ಬದಿಗೊತ್ತದೇ ಮುಂದೆ ಹೋಗುವುದು ಕಷ್ಟ. ಮೊದಲು ತಪ್ಪುಗಳಿಗೆ ಕಾಯಕಲ್ಪ ಮಾಡಿಕೊಳ್ಳಿ. ಅಶ್ವತ್ಥ ಕಟ್ಟೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ ಪ್ರಾರ್ಥಿಸಿ. 

ವೃಷಭ(Taurus): ಸಂದರ್ಭಗಳಿಗೆ ಅನುಗುಣವಾಗಿ ವರ್ತಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾವುದಾದರೂ ವಿಷಯ ನಿಮ್ಮಿಂದ ಸಾಧ್ಯವಿಲ್ಲವೆಂದಾದರೆ ಅದನ್ನು ಬಾಯಿ ಬಿಟ್ಟು ಹೇಳಿ. ಕುಟುಂಬ ಸದಸ್ಯರ ವಿಶ್ವಾಸವನ್ನು ಗಳಿಸುವಿರಿ. ಶನಿ ಸ್ಮರಣೆ ಮಾಡಿ. 

ಮಿಥುನ(Gemini): ನೀತಿ ನಿಯಮಗಳನ್ನು ಯಾವ ವಿಷಯದಲ್ಲೂ ನಿರ್ಲಕ್ಷಿಸಬೇಡಿ. ವಾಹನ ಚಾಲಕರು ಎಚ್ಚರಿಕೆಯ ಚಾಲನೆ ಅಗತ್ಯ. ಅಪಾಯಕಾರಿ ಪ್ರಯತ್ನಗಳನ್ನು ತಪ್ಪಿಸಿ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ . ಪ್ರೀತಿಯ ವಿಷಯಗಳಲ್ಲಿ ಆತುರ ಪಡಬೇಡಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಕಟಕ(Cancer): ಮನಸ್ಸಲ್ಲೇ ಮಂಡಿಗೆ ತಿನ್ನಬೇಡಿ. ನಿಮಗೆ ಬೇಕಾದುದನ್ನು ಕೇಳಿ ಪಡೆದುಕೊಳ್ಳಿ. ಪಡೆಯಲು ಬೇಕಾದ ಪರಿಶ್ರಮ ಹಾಕಿ. ಹಿರಿಯರು ನೀಡಿದ ಸಲಹೆಗಳನ್ನು ಪರಿಗಣಿಸಿ. ನಿಮ್ಮ ನೈತಿಕತೆಯನ್ನು ಕಾಪಾಡಿಕೊಳ್ಳಿ. ತಾಯಿಯ ಆಸೆ ಈಡೇರಿಸಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಸಿಂಹ(Leo): ನಿರುದ್ಯೋಗಿಗಳು ಸಂಪೂರ್ಣ ಸಿದ್ಧತೆಯೊಂದಿಗೆ ಮುಂದುವರಿಯಿರಿ. ಅನುಭವಿಗಳ ಸಲಹೆಗಳಿಗೆ ಗಮನ ಕೊಡಿ. ಕುಟುಂಬದ ಸದಸ್ಯರ ಬೆಂಬಲವಿರುತ್ತದೆ ಮತ್ತು ನಿಮ್ಮನ್ನು ಘನತೆಯಿಂದ ನಡೆಸಿಕೊಳ್ಳಲಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಕಪ್ಪು ವಸ್ತುಗಳನ್ನು ದಾನ ಮಾಡಿ. 

ಆದಾಯ ಹೆಚ್ಚಿಸುವ ಏಕಮುಖಿ ರುದಾಕ್ಷಿ, ಈ ರಾಶಿಗೆ ಧಾರಣೆಯ ವಿಶೇಷ ಫಲ

ಕನ್ಯಾ(Virgo): ಗಂಟೆಗಟ್ಟಲೆ ಕೆಲಸ  ಮಾಡುತ್ತಾ ಕೂರುವ ಬದಲು ಸ್ಮಾರ್ಟ್ ಆಗಿ ಯೋಚಿಸಿ ಮಾಡಿದರೆ ಸಮಯ ಉಳಿಯುತ್ತದೆ. ಅದನ್ನು ಬೇರೆ ಕೆಲಸಗಳಿಗೆ ಉಪಯೋಗಿಸಬಹುದು. ಈ ಬಗ್ಗೆ ಗಮನ ಹರಿಸಿ. ದಾಂಪತ್ಯದಲ್ಲಿ ಕೊರಗು ಹೆಚ್ಚುವುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಕಿರಿಕಿರಿ ಇರಲಿದೆ. ಭಜರಂಗ ಬಾಣ ಹೇಳಿ. 

ತುಲಾ(Libra): ಯಾವುದಾದರೂ ಪ್ರಲೋಭನೆಗೆ ಒಳಗಾಗುವ ಸಂಭವವಿದೆ. ಇದರಿಂದ ಒಳಿತಾಗುವುದಿಲ್ಲ. ಈ ಬಗ್ಗೆ ಎಚ್ಚರ ವಹಿಸಿ. ಅಪರಿಚಿತರಿಂದ ದೂರವಿರಿ ಮತ್ತು ವಿನಮ್ರತೆ, ಸಭ್ಯತೆ ಕಾಪಾಡಿಕೊಳ್ಳಿ. ವಾತಾವರಣ ಸಂಬಂಧಿ ಅನಾರೋಗ್ಯಗಳು ಕಾಡುವುವು. ಶನಿ ಬೀಜ ಮಂತ್ರ ಹೇಳಿ. 

ವೃಶ್ಚಿಕ(Scorpio): ವ್ಯಾಪಾರದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿ. ಲಾಭ ಹೆಚ್ಚಿಸಲು ಏನು ಮಾಡಬಹುದೆಂಬ ಬಗ್ಗೆ ಯೋಚನೆ ಹರಿಸಿ.  ಜಂಕ್ ಫುಡ್ ಅನ್ನು ತಪ್ಪಿಸಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ವಿಳಂಬ ಧೋರಣೆಯು ಇತರರಿಗೆ ಸಮಸ್ಯೆಯಾಗಿರಬಹುದು. ಶನಿ ಗಾಯತ್ರಿ ಮಂತ್ರ ಹೇಳಿಕೊಳ್ಳಿ. 

ಧನುಸ್ಸು(Sagittarius): ತಾಳ್ಮೆ ಕಳೆದುಕೊಳ್ಳಬೇಡಿ. ಆರೋಗ್ಯಕ್ಕಾಗಿ ಉತ್ತಮ ಆಹಾರಕ್ರಮಕ್ಕೆ ಬದಲಾಗಬೇಕು. ದೂರದೃಷ್ಟಿಯಿಂದ ಹೊಸ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಕಲಿಕೆಗಳು ಫಲಪ್ರದವಾಗಲಿವೆ. ಮಕ್ಕಳಿಂದ ಸಂತಸ ಹೆಚ್ಚಲಿದೆ. ಹಣಕಾಸಿನ ನಿರ್ವಹಣೆ ಬಗ್ಗೆ ಎಚ್ಚರಿಕೆ ವಹಿಸಿ. ಎಳ್ಳು ದಾನ ಮಾಡಿ. 

ಶುಕ್ರ ಗೋಚಾರದಿಂದ ಈ ರಾಶಿಯವರಿಗೆ ಶುಭವೋ ಶುಭ..

ಮಕರ(Capricorn): ದೂರದೃಷ್ಟಿ ಹೆಚ್ಚಾಗಲಿದೆ. ಕೆಲಸವು ಅತ್ಯುತ್ತಮವಾಗಿರುತ್ತದೆ. ಯಶಸ್ಸಿನ ಶೇಕಡಾವಾರು ಹೆಚ್ಚಾಗಿರುತ್ತದೆ. ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಇನ್ಯಾರೋ ಬೇಕಾಬಿಟ್ಟಿ ಖರ್ಚು ಮಾಡುವುದು ನೋಡಿ ಪ್ರಲೋಭನೆಗೊಳಗಾಗಿ ವೃಥಾ ಧನವ್ಯಯ ಮಾಡಬೇಡಿ. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ಕುಂಭ(Aquarius): ಪೋಷಕರ ಕೆಲಸದಲ್ಲಿ ಆಸಕ್ತಿ ವಹಿಸುವಿರಿ. ಸಂಬಂಧಗಳು ಸುಧಾರಿಸುತ್ತವೆ. ಆತ್ಮೀಯರಿಗೆ ಸಮಯ ಕೊಡುವಿರಿ. ಕೌಶಲ್ಯಗಳು ಅವಕಾಶ ಗಿಟ್ಟಿಸುತ್ತವೆ. ಮನೆಯ ಸಣ್ಣಪುಟ್ಟ ಸಮಸ್ಯೆಗಳನ್ನು ಕಡೆಗಣಿಸಿದರೆ ಮಾನಸಿಕವಾಗಿ ನೆಮ್ಮದಿ. ಶನಿ ದೇವಾಲಯಕ್ಕೆ ಭೇಟಿ ನೀಡಿ. 

ಮೀನ(Pisces): ಕೆಲಸದ ವೇಗವು ನಿರೀಕ್ಷೆಗಿಂತ ಉತ್ತಮವಾಗಿರುತ್ತದೆ. ನಂಬಿಕೆಯಿಂದ ಮುನ್ನಡೆಯುವಿರಿ. ಪ್ರಯಾಣದ ಸಾಧ್ಯತೆ ಇರುತ್ತದೆ. ಉತ್ತಮವಾಗಿ ಕಾರ್ಯ ನಿರ್ವಹಿಸುವಿರಿ. ಗಂಭೀರ ವಿಷಯಗಳಲ್ಲಿ ಆಸಕ್ತಿ ಇರುತ್ತದೆ. ಕೆಲಸದ ವಿಷಯದಲ್ಲಿ ಕಿರಿಕಿರಿ ಹೆಚ್ಚಬಹುದು. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 
 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ