13 ಮೇ 2022, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೀನಕ್ಕೆ ಪ್ರೇಮ ವಿಚಾರಗಳಲ್ಲಿ ಸಂಯಮ ಅಗತ್ಯ
ಮೇಷ(Aries): ಮನೆಯಲ್ಲಿ ಸಂತೋಷ ಇರುತ್ತದೆ. ನೀವು ಇಂದು ಕೌಟುಂಬಿಕ ವಿಷಯಗಳಲ್ಲಿ ಪ್ರಾಮುಖ್ಯತೆಯನ್ನು ತೋರಿಸುತ್ತೀರಿ. ಮನೆಯ ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಸಹೋದರರ ನೆರವು ದೊರೆಯಲಿದೆ. ಕೆಲವು ವಿಚಾರಗಳಲ್ಲಿ ನಿಮ್ಮ ಹಟಮಾರಿ ಧೋರಣೆ ಬಿಟ್ಟರೆ ಎಲ್ಲವೂ ಸಾಂಗವಾಗಲಿದೆ. ಲಕ್ಷ್ಮೀ ಸ್ತ್ರೋತ್ರ ಹೇಳಿ.
ವೃಷಭ(Taurus): ಮನೆಯ ಹಿರಿಯರನ್ನ ಹೆಚ್ಚು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳಿ. ಅವರ ಮನಸ್ಸಿಗೆ ಬೇಸರ ಉಂಟು ಮಾಡಬೇಡಿ. ಕೆಲ ವಸ್ತುಗಳು ರಿಪೇರಿಗೆ ಬರಬಹುದು. ವೈವಾಹಿಕ ಜೀವನ ಬೇಗ ಸ್ಪಂದಿಸದೇ ಹೋದರೆ ಮತ್ತಷ್ಟು ಕಗ್ಗಂಟಾಗಬಹುದು. ಲಲಿತಾ ಸಹಸ್ರನಾಮ ಪಠಿಸಿ.
undefined
ಮಿಥುನ(Gemini): ಸಂಬಂಧಗಳು ಸುಧಾರಿಸುತ್ತವೆ. ಕುಟುಂಬಸ್ಥರ ಸಂಪೂರ್ಣ ಬೆಂಬಲ ನಿಮಗಿರುತ್ತದೆ. ತಾಳ್ಮೆಯಿಂದ ಕೆಲಸ ಮಾಡುವಿರಿ. ಬ್ಯಾಂಕಿಂಗ್ ಕೆಲಸದಲ್ಲಿ ಆಸಕ್ತಿ ಹೆಚ್ಚುತ್ತದೆ. ಗುರಿಗಳ ಕಡೆ ಗಮನ ಹೆಚ್ಚುತ್ತದೆ. ಪ್ರಯಾಣ ಸುಖಕರವಾಗಿರುತ್ತದೆ. ದುರ್ಗಾ ಅಷ್ಟೋತ್ತರ ಪಠಿಸಿ.
ಕಟಕ(Cancer): ಬಂದ ಅವಕಾಶವನ್ನು ಬಳಸಿಕೊಳ್ಳುತ್ತೀರಿ. ಮನೆಯ ಸದಸ್ಯರಿಗೆ ನಿಮ್ಮ ಕಾಳಜಿ ಅರ್ಥವಾಗದಿರಬಹುದು. ಆದರೂ ನೀವು ತಾಳ್ಮೆ ಪ್ರದರ್ಶಿಸಬೇಕು. ಪ್ರಯಾಣಕ್ಕೆ ಮಳೆ ತೊಡಕಾಗಬಹುದು. ಕಾರ್ಯಗಳು ಹರಸಾಹಸದಲ್ಲಿ ಕೈಗೂಡುವಂತಾಗಬಹುದು. ದುರ್ಗಾ ಕವಚ ಪಠಣ ಮಾಡಿ.
ಸಿಂಹ(Leo): ನಿಮ್ಮ ಸಂವಹನ ಕೌಶಲ್ಯಗಳು ಪ್ರಭಾವಶಾಲಿಯಾಗಿರುತ್ತವೆ. ಹಣಕಾಸಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ವಾಣಿಜ್ಯ ವಿಷಯಗಳಲ್ಲಿ ಹೊಂದಾಣಿಕೆ ಇರುತ್ತದೆ. ಪ್ರೀತಿಪಾತ್ರರ ಸಹವಾಸವನ್ನು ನೀವು ಆನಂದಿಸುವಿರಿ. ಸೌಂದರ್ಯ ಲಹರಿ ಹೇಳಿಕೊಳ್ಳಿ.
Astro Tips : ಅಪ್ಪಿತಪ್ಪಿಯೂ ಈ ದಿನ ಹಣದ ವಹಿವಾಟು ಮಾಡ್ಬೇಡಿ
ಕನ್ಯಾ(Virgo): ಹೊಸ ಸ್ನೇಹಿತರನ್ನು ಪಡೆಯಲಿದ್ದೀರಿ. ತಾಳ್ಮೆಯಿಂದಿರಿ ಮತ್ತು ತಪ್ಪು ವಿಷಯಗಳಲ್ಲಿ ಇತರರ ಮನವೊಲಿಸುವ ಮೂಲಕ ದಾರಿ ತಪ್ಪಿಸಬೇಡಿ. ನಿಮ್ಮ ಸಂಬಂಧದಲ್ಲಿನ ಕೆಲವು ತೊಂದರೆಗಳನ್ನು ನಿವಾರಿಸಲು, ಈಗ ಅದರ ಬಗ್ಗೆ ಆರೋಗ್ಯಕರ ದೃಷ್ಟಿಕೋನವನ್ನು ಉಳಿಸಿಕೊಳ್ಳಬೇಕು. ಮುತ್ತೈದೆಗೆ ಬಾಗೀನ ನೀಡಿ.
ತುಲಾ(Libra): ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಪ್ರಮುಖ ಕೆಲಸವನ್ನು ತ್ವರಿತವಾಗಿ ಮಾಡುತ್ತೀರಿ. ನಿಮ್ಮ ಭರವಸೆಯನ್ನು ಪೂರೈಸಲು ಪ್ರಯತ್ನಿಸಿ. ಅತಿಥಿಗಳ ಆಗಮನ ಕಿರಿಕಿರಿ ತರುತ್ತದೆ. ಅವಿವಾಹಿತರಿಗೆ ವಿವಾಹದ ವಿಷಯಗಲ್ಲಿ ಒತ್ತಡ ಹೆಚ್ಚುತ್ತದೆ. ತಾಯಿಯ ಆಶೀರ್ವಾದ ಪಡೆಯಿರಿ.
ವೃಶ್ಚಿಕ(Scorpio): ಕೆಲಸದಲ್ಲಿ ಉತ್ತಮ ದಿನವನ್ನು ನಿರೀಕ್ಷಿಸಬಹುದು. ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಬೇಕು. ಸಕಾರಾತ್ಮಕ ಕೆಲಸದ ವಾತಾವರಣವು ನಿಮ್ಮ ಉತ್ಪಾದಕತೆಗೆ ಸಹಾಯ ಮಾಡುತ್ತದೆ. ಜೀವನಶೈಲಿ ಉತ್ತಮ ಪಡಿಸಿಕೊಳ್ಳಿ. ಅಗತ್ಯವಿದ್ದವರಿಗೆ ಧನ ಸಹಾಯ ಮಾಡಿ.
ಧನುಸ್ಸು(Sagittarius): ಆರ್ಥಿಕ ವಿಷಯಕ್ಕೆ ಬಂದರೆ, ಹಿಂದಿನ ಹೂಡಿಕೆಯಿಂದ ಉತ್ತಮ ಲಾಭಗಳನ್ನು ಪಡೆಯಲಿದ್ದೀರಿ. ಉತ್ತಮ ಬ್ಯಾಂಕ್ ಬ್ಯಾಲೆನ್ಸ್‌ನೊಂದಿಗೆ, ನಿಮ್ಮ ಖರ್ಚುಗಳು ಕೂಡಾ ಹೆಚ್ಚಲಿವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಲಲಿತಾ ಸಹಸ್ರನಾಮ ಪಠಣ ಮಾಡಿ.
Sita Navami 2022: ಸೀತೆ ರಾವಣನ ಮಗಳು! ಈ ಕತೆ ಕೇಳಿದ್ರೆ ಯಾಕಿರಬಾರ್ದು ಅಂತೀರಿ..
ಮಕರ(Capricorn): ಅಸ್ತಿತ್ವದಲ್ಲಿರುವ ಸಂಬಂಧದ ವಿಷಯದಲ್ಲಿ ಮುಂದುವರಿಯ ಬಯಸಿದಲ್ಲಿ ಈಗ ಅಡಿಪಾಯ ಹಾಕಬೇಕು. ಇದು ನೀವು ಹುಡುಕುತ್ತಿರುವುದು ಅಲ್ಲದಿರಬಹುದು. ಆದರೆ ಅದರ ಬಗ್ಗೆ ಸರಿಯಾದ ಗಮನವನ್ನು ನೀಡಬೇಕಾಗಿದೆ. ಶಾರದಾಂಬೆಯ ಸ್ಮರಣೆ ಮಾಡಿ.
ಕುಂಭ(Aquarius): ನೀವು ಇತ್ತೀಚೆಗೆ ನಿರ್ಲಕ್ಷಿಸುತ್ತಿರುವ ಎಲ್ಲ ವಿಷಯಗಳ ಮೇಲೆ ಗಮನ ಹರಿಸಿದರೆ, ನಿಮ್ಮ ಪಾಲಿಗೆ ಒಳಿತಾಗಲಿದೆ. ತಾಳ್ಮೆಯು ದೊಡ್ಡ ಮಟ್ಟಿನ ಲಾಭ ತಂದು ಕೊಡಲಿದೆ. ಇತರರ ಸಣ್ಣ ತಪ್ಪುಗಳನ್ನು ಕ್ಷಮಿಸಿಬಿಡಿ. ತಪ್ಪು ಎಲ್ಲರೂ ಮಾಡುತ್ತಾರೆ. ಇದರಿಂದ ನೆಮ್ಮದಿ ಸಿಗುವುದು. ಶಿವ ಶಕ್ತಿಯ ಆರಾಧನೆ ಮಾಡಿ.
ಮೀನ(Pisces): ನಿಮ್ಮ ಪ್ರೇಮಿಯ ವಿಚಾರವಾಗಿ ಪೋಷಕರ ಮನವೊಲಿಸಲು ಗಡಿಬಿಡಿ ಮಾಡಬೇಡಿ. ಅವರ ಮೇಲೆ ಹೆಚ್ಚು ಒತ್ತಡ ಹೇರಿದರೆ, ಅವರು ಬೇರೆ ರೀತಿಯಲ್ಲಿ ನೋಡಲು ನಿರ್ಧರಿಸಬಹುದು. ಹೀಗಾಗಿ, ಯೋಚಿಸಲು ಅವರಿಗೆ ಕೊಂಚ ಸಮಯ ಕೊಡಿ. ಪಾರ್ವತಿಗೆ ಬಿಳಿ ಹೂಗಳನ್ನು ಅರ್ಪಿಸಿ.