Daily Horoscope: ಮೇಷಕ್ಕೆ ಕಾಡುವ ಒಂಟಿತನ, ಸಿಂಹದ ಕೆಲಸಕ್ಕೆ ಮೆಚ್ಚುಗೆ..

Published : Feb 01, 2022, 07:03 AM IST
Daily Horoscope: ಮೇಷಕ್ಕೆ ಕಾಡುವ ಒಂಟಿತನ, ಸಿಂಹದ ಕೆಲಸಕ್ಕೆ ಮೆಚ್ಚುಗೆ..

ಸಾರಾಂಶ

1 ಫೆಬ್ರವರಿ 2022, ಮಂಗಳವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಕಟಕದವರು ಹಿರಿಯರಿಗೆ ಅವಮಾನಿಸಿ ಮನಸ್ಸು ಕೆಡಿಸಿಕೊಳ್ಳಬೇಡಿ..

ಮೇಷ(Aries): ಉದ್ಯೋಗದಲ್ಲಿ ಏಳ್ಗೆ ಇರುತ್ತದೆ, ಮನೆಯಲ್ಲೂ ಕಾಣಿಸುವಂಥ ಸಮಸ್ಯೆ ಇರುವುದಿಲ್ಲ. ಆದರೂ ನೀವು ಒಂಟಿತನ ಅನುಭವಿಸಬಹುದು. ನಿಮ್ಮ ಭಾವನೆಗಳು ಯಾರಿಗೂ ಅರ್ಥವಾಗುತ್ತಿಲ್ಲ ಎನಿಸಬಹುದು. ಆಂಜನೇಯನ ಸ್ಮರಣೆ ಮಾಡಿ. 

ವೃಷಭ(Taurus): ಪರಿಚಿತರು ಹೇಳಿದ ಮಾತನ್ನು ನಂಬಿ ಯಾರನ್ನೋ ದ್ವೇಷಿಸುವುದು, ಅನುಮಾನಿಸುವುದು, ಸಿಟ್ಟಾಗುವುದು ಮಾಡಬೇಡಿ. ಹೇಳಿದ್ದು, ಕೇಳಿದ್ದು ಎಲ್ಲ ಸುಳ್ಳಾಗಿರಬಹುದು ಎಂಬ ಪ್ರಜ್ಞೆ ಇರಲಿ. ಶೇರು ವ್ಯವಹಾರಗಳಲ್ಲಿ ಲಾಭವಿರಲಿದೆ. ಲಲಿತಾ ಸಹಸ್ರನಾಮ ಪಠಣ ಮಾಡಿ. 

ಮಿಥುನ(Gemini): ನಿಮ್ಮನ್ನು ಸ್ನೇಹಿತರು ಉಪಯೋಗಿಸಿಕೊಳ್ಳುತ್ತಿದ್ದಾರೆ ಎನಿಸಬಹುದು. ಬೇಕಾದಾಗ ಮಾತ್ರ ನಿಮ್ಮಲ್ಲಿಗೆ ಬರುತ್ತಾರೆ, ನಿಮಗೆ ಬೇಕಾದಾಗ ಸಾಥ್ ನೀಡುವುದಿಲ್ಲ ಎನಿಸಬಹುದು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಿಮ್ಮ ಒಳ್ಳೆಯತನ ಮುಂದುವರಿಸಿ. ಧೀರ್ಘ ಸಮಯದಲ್ಲಿ ನಿಮ್ಮ ಒಳ್ಳೆತನ ಅರ್ಥವಾಗುವುದು. ಗಣಪತಿಗೆ ದರ್ಬೆ ಸಲ್ಲಿಸಿ. 

ಕಟಕ(Cancer): ಯಾವುದೇ ಕಾರಣಕ್ಕೂ ಹಿರಿಯರ ಮಾತನ್ನು ಅಲಕ್ಷಿಸಬೇಡಿ, ಅವರನ್ನು ಅವಮಾನಿಸಬೇಡಿ. ಮನೆ ಮಂದಿಯೊಂದಿಗೆ ಜಗಳ ಮಾಡಿಕೊಂಡು ಮನಸ್ಸು ಕೆಡಿಸಿಕೊಳ್ಳಬೇಡಿ. ಅವರು ಹೇಳುವ ಮಾತಿನಲ್ಲಿ ಸತ್ಯ ಇರಬಹುದೇ ಎಂದು ಅವಲೋಕಿಸಿ. ನವಗ್ರಹ ಪೂಜೆ ಮಾಡಿ. 

ಸಿಂಹ(Leo): ಹಿರಿಯ ಸಹೋದ್ಯೋಗಿಗಳ ಸಹಕಾರ ಚೆನ್ನಾಗಿ ದೊರಕಲಿದೆ. ಇದರಿಂದ ನಿಮ್ಮ ಕೆಲಸಗಳು ಕಚೇರಿಯ ದೊಡ್ಡ ಹುದ್ದೆಯಲ್ಲಿರುವವರ ಗಮನಕ್ಕೆ ಬರಲಿವೆ. ಮನೆಯಲ್ಲಿ ಪತ್ನಿ ಮಕ್ಕಳ ಸಹಕಾರ ಇರಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಆಂಜನೇಯನಿಗೆ ಕೆಂಪು ವಸ್ತ್ರ ಸಮರ್ಪಿಸಿ. 

ಕನ್ಯಾ(Virgo): ತಮಾಷೆಯನ್ನು ತಮಾಷೆಯಾಗೇ ತೆಗೆದುಕೊಳ್ಳದೆ ಕೋಪ ತೋರಿದರೆ ಜನರನ್ನು ಕಳೆದುಕೊಳ್ಳಲಿದ್ದೀರಿ. ಸ್ವಂತದ ಖುಷಿಯನ್ನು ಕೂಡಾ. ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳಲು ಹೋಗಬೇಡಿ. ಧನ ವ್ಯಯ ಹೆಚ್ಚಿರುತ್ತದೆ. ದುರ್ಗಾ ಅಷ್ಟೋತ್ತರ ಪಠಣ ಮಾಡಿ. 

ತುಲಾ(Libra): ಏಕಾಗ್ರತೆ ಸಾಧಿಸುವುದು ಕಷ್ಟವಾಗಬಹುದು. ಮಾಡುವ ಕೆಲಸದಲ್ಲಿ ಎಡವಟ್ಟುಗಳಾಗಿ ಬೈಸಿಕೊಳ್ಳುವ ಇಲ್ಲವೇ ಕೆಲಸ ಮುಂದೆ ಸಾಗದಂತಾಗಬಹುದು. ದೊಡ್ಡ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬೇಡಿ. ಅನೈತಿಕ ಸಂಬಂಧಗಳು ತಲೆನೋವು ತರಲಿವೆ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

Mental Illness And Astrology: ಡಿಪ್ರೆಶನ್, ಆತ್ಮಹತ್ಯೆಗಳಿಗೆ ಈ ಗ್ರಹಗಳು ಕಾರಣ!

ವೃಶ್ಚಿಕ(Scorpio): ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಇರಲಿವೆ. ಸ್ನೇಹಿತರ ಮಾತು ಮನಸ್ಸಿಗೆ ಚುಚ್ಚಬಹುದು. ವೃತ್ತಿರಂಗದಲ್ಲಿ ಏಳ್ಗೆ ಇರುತ್ತದೆ. ಹೊಸ ವಸ್ತುಗಳ ಖರೀದಿ ಖುಷಿ ತರಲಿದೆ. ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿವೆ. ಲಲಿತಾ ಸಹಸ್ರನಾಮ ಪಠಣ ಮಾಡಿ. 

ಧನುಸ್ಸು(Sagittarius): ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿ ಬರಲಿವೆ. ಉದ್ಯೋಗಿಗಳು ಪರಿಶ್ರಮ ಹೆಚ್ಚಿಸಬೇಕು. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ. ಮಕ್ಕಳ ಆರೋಗ್ಯ ಸಂಬಂಧಿ ಸಮಸ್ಯೆಗಳು ಚಿಂತೆ ತರಬಹುದು. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

ಮಕರ(Capricorn): ಬಹುಕಾಲದಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆ ಕೊಂಚ ಕಡಿಮೆಯಾಗಿ ಭರವಸೆ ಹುಟ್ಟಿಸಬಹುದು. ಬರಬೇಕಾದ ದೊಡ್ಡ ಮೊತ್ತದ ಹಣ ಕೈ ಸೇರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿದೆ. ಅಸೂಯೆ ಬೇಡ. ದುರ್ಗಾ ಅಷ್ಟೋತ್ತರ ಪಠಿಸಿ. 

Weekly Horoscope: ಮಕರಕ್ಕೆ ಆಸ್ತಿ ಖರೀದಿಗೆ ಸಕಾಲ, ಉಳಿದ ರಾಶಿಗಳ ವಾರ ಭವಿಷ್ಯ ಏನಿದೆ?

ಕುಂಭ(Aquarius): ಮನೆಯಿಂದ ದೂರದಲ್ಲಿ ಇರುವವರಿಗೆ ಕುಟುಂಬ ಸದಸ್ಯರ ಭೇಟಿ ಮಾಡಿ ಸಂತೋಷವಾಗಬಹುದು. ಉದ್ಯೋಗದಲ್ಲಿ ಏಳ್ಗೆ ಇರಲಿದೆ. ಸಂಗಾತಿಯ ಮನಸ್ಸನ್ನು ಅರ್ಥ ಮಾಡಿಕೊಂಡು ಹೊಂದಿಕೊಂಡು ಹೋಗಲು ಕಲಿಯಿರಿ. ಮಕ್ಕಳಿಗಾಗಿ ಸಮಯ ವ್ಯಯಿಸಿ. ಬಡವರಿಗೆ ದಾನ ಮಾಡಿ. 

ಮೀನ(Pisces): ಉದ್ಯೋಗದಲ್ಲಿ ಸಹೋದ್ಯೋಗಿಗಳ ಕಿರಿಕಿರಿ ಹೆಚ್ಚಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಕ್ಕದೆ ನಿರಾಸೆಯಾಗಲಿದೆ. ಮನೆಯಲ್ಲಿ ನೆಮ್ಮದಿ ಕಡಿಮೆಯಾಗಲಿದೆ. ಮನೆಯ ಸದಸ್ಯರ ಆರೋಗ್ಯ ಸಮಸ್ಯೆಗಳು ಕಂಗಾಲಾಗಿಸಲಿವೆ. ಕೆಂಪು ಧಾನ್ಯವನ್ನು ದಾನ ಮಾಡಿ. 

PREV
Read more Articles on
click me!

Recommended Stories

ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ