Daily Horoscope: ಧನುವಿಗೆ ನೋವಿನ ವಿಷಯ, ಮಿಥುನಕ್ಕೆ ಅವಮಾನ

Published : Jan 31, 2022, 05:04 AM IST
Daily Horoscope: ಧನುವಿಗೆ ನೋವಿನ ವಿಷಯ, ಮಿಥುನಕ್ಕೆ ಅವಮಾನ

ಸಾರಾಂಶ

31 ಜನವರಿ 2022, ಸೋಮವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮೇಷ ರಾಶಿಯ ಮಂಗಳ ಕಾರ್ಯಕ್ಕೆ ಪುಷ್ಠಿ, ಉಳಿದ ರಾಶಿಗಳ ಫಲವೇನಿದೆ?

ಮೇಷ(Aries): ಕಾರ್ಯ ಕ್ಷೇತ್ರದಲ್ಲಿ ಎಂದಿನಂತೆ ಇಂದೂ ಸೈ ಎನಿಸಿಕೊಳ್ಳುವಿರಿ. ನಿಮ್ಮ ಕಾರ್ಯಕ್ಷಮತೆ ಹೆಚ್ಚಲಿದೆ. ಮನೆಯಲ್ಲಿ ಸಂಗಾತಿಯ ಜೊತೆ ಜಗಳವಾಗಬಹುದು. ವಿವಾಹಾದಿ ಮಂಗಳಕಾರ್ಯಕ್ಕೆ ಪುಷ್ಠಿ ಸಿಕ್ಕೀತು. ಸುಬ್ರಹ್ಮಣ್ಯನ ಸ್ಮರಣೆ ಮಾಡಿ. 

ವೃಷಭ(Taurus): ಲಾಭದಾಯಕ ಆದಾಯವಿದ್ದರೂ ಖರ್ಚು ವೆಚ್ಚಗಳು ಹೆಚ್ಚಿ ಆತಂಕವಾಗಲಿದೆ. ಕುಟುಂಬದಲ್ಲಿ ಸಂಗಾತಿಯ ಸಹಕಾರ್ಯದಿಂದ ಶುಭ ಕಾರ್ಯಗಳು ನಡೆಯಲಿವೆ. ವಾತ ಸಮಸ್ಯೆಗಳು ಕಂಗೆಡಿಸಬಹುದು. ಗಣಪತಿಯ ಪ್ರಾರ್ಥನೆ ಮಾಡಿ. 

ಮಿಥುನ(Gemini): ನಿಮ್ಮ ವೃತ್ತಿ ಜೀವನದಲ್ಲಿ ವಂಚನೆಗಳು ಬೆಳಕಿಗೆ ಬಂದು ಅವಮಾನಕರ ಘಟನೆಗಳು ಜರುಗಬಹುದು. ಕೌಟುಂಬಿಕವಾಗಿ ನಿಮ್ಮ ಮೇಲೆ ಅನುಮಾನ ವ್ಯಕ್ತವಾಗಿ ನೋವುಂಟು ಮಾಡಬಹುದು. ಪಶ್ಚಾತ್ತಾಪವೊಂದೇ ಮಾರ್ಗ. ಪ್ರಾಮಾಣಿಕತೆಯ ದಾರಿ ಹಿಡಿಯಿರಿ. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ಕಟಕ(Cancer): ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅಡ್ಡಿ ಆತಂಕಗಳು ಎದುರಾದಾವು. ಆರ್ಥಿಕ ವ್ಯಯದಿಂದ ಅಭಿಮಾನ ಭಂಗವಾಗುವುದು. ಕುಟುಂಬ ಸದಸ್ಯರಲ್ಲಿ ಅನಿರೀಕ್ಷಿತವಾಗಿ ಅನಾರೋಗ್ಯ ಎದುರಾಗಬಹುದು. ತಾಯಿಯ ಕೈಯಿಂದ ಸಿಹಿ ತಿನ್ನಿಸಿಕೊಳ್ಳಿ. 

ಸಿಂಹ(Leo): ಅದೃಷ್ಟದ ಬೆಂಬಲ ನಿಮ್ಮೆಲ್ಲ ಕೆಲಸಗಳಿಗಿರುತ್ತದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರಕಬಹುದು. ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ತುಸು ಅಭಿವೃದ್ಧಿ ಇರಲಿದೆ. ಬಾಕಿ ಇರಿಸಿದ ಹಿಂದಿನ ಕೆಲಸಗಳು ಪೂರ್ಣಗೊಂಡಾವು. ತಂದೆ ತಾಯಿಯ ಆಶೀರ್ವಾದ ಪಡೆಯಿರಿ. 

Marriage Horoscope: ಈ ಐದು ರಾಶಿಯವರಿಗೆ ಹತ್ತಿರದಲ್ಲಿದೆ ವಿವಾಹ ಯೋಗ

ಕನ್ಯಾ(Virgo): ಕೌಟುಂಬಿಕವಾಗಿ ಉತ್ತಮ ಸಹಕಾರ ದೊರೆತು ಎಲ್ಲ ಕೆಲಸಗಳು ಸರಾಗವಾಗಿ ಸಾಗುತ್ತವೆ. ದಾಂಪತ್ಯ ಜೀವನದಲ್ಲಿ ಸಂಯಮ ಇರಲಿ. ವೃತ್ತಿರಂಗದಲ್ಲಿ ಅಸೂಯಾಪರ ಸಹೋದ್ಯೋಗಿಗಳ ಕಾಟ ಇರಬಹುದು. ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ ಹಾಗೂ ಪ್ರಾಮಾಣಿಕತೆಯಿಂದ ಶ್ರಮ ಹೆಚ್ಚಿಸಿ. ಶಿವ ಧ್ಯಾನ ಮಾಡಿ. 

ತುಲಾ(Libra): ಕೆಲಸದಲ್ಲಿ ಅಡ್ಡಿ ಆತಂಕಗಳು ಎದುರಾದಾವು. ಧೈರ್ಯ, ಪ್ರಯತ್ನ ಬಲ ಮುಂದುವರಿಯಲಿ. ಹಿರಿಯರೊಡನೆ ವಾದ ಮಾಡಲು ಹೋಗಿ ಮನಸ್ಸು ಕೆಡಿಸಿಕೊಳ್ಳಬೇಡಿ. ಆದಷ್ಟು ವಿನಯದಿಂದ ವರ್ತಿಸಿ ಅವರ ಆಶೀರ್ವಾದ ಬಲ ಪಡೆಯಿರಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

Love horoscpe: ಫೆಬ್ರವರಿಯ ಪ್ರಣಯ ಪ್ರಸಂಗ- ನಿಮ್ಮ ರಾಶಿಗೆ ಮುಂದಿನ ತಿಂಗಳು ಏನು‌ ಫಲ?

ವೃಶ್ಚಿಕ(Scorpio): ತಾಯಿಯ ಆರೋಗ್ಯ ಸುಧಾರಿಸಿ ಸಮಾಧಾನವಾಗಲಿದೆ. ಕೆಲಸವು ಪ್ರಗತಿ ಪಥದಲ್ಲಿ ಮುಂದುವರಿಯಲಿದೆ. ಪ್ರಯಾಣ ವ್ಯರ್ಥವಾಗಬಹುದು. ಶತ್ರುಗಳು ನಿಮ್ಮ ಕಾರ್ಯವೈಖರಿಗೆ ವ್ಯಾವಹಾರಿಕವಾಗಿ ಪರಾಭವಗೊಳ್ಳುವರು. ಶಿವ ಶಕ್ತಿಯರ ಆರಾಧನೆ ಮಾಡಿ. 

ಧನುಸ್ಸು(Sagittarius): ಆಪ್ತರಿಂದಲೇ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ನೋವಿನ ವಿಷಯ ಕೇಳಲಿದ್ದೀರಿ. ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಇರಲಿದೆ. ನೂತನ ಗೃಹ ನಿರ್ಮಾಣ ಕಾರ್ಯಗಳು ಅನುಕೂಲಕರ ರೀತಿಯಲ್ಲಿ ಪೂರ್ಣವಾಗಲಿವೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಹೆಚ್ಚಲಿದೆ. ಗೋ ಗ್ರಾಸ ನೀಡಿ.

ಮಕರ(Capricorn): ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿರುವಿರಿ. ಷೇರು ವ್ಯವಹಾರಗಳಲ್ಲಿ ಲಾಭವಿರಲಿದೆ. ಆತುರದಿಂದ ಯಾವ ಕಾರ್ಯಗಳನ್ನೂ ಮಾಡಲು ಹೋಗಬೇಡಿ. ಪತ್ನಿ ಪುತ್ರರ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಹೊಸ ಯೋಜನೆಯೊಂದಕ್ಕೆ ಸಿದ್ಧವಾಗಲಿರುವಿರಿ. ಹಕ್ಕಿಗಳಿಗೆ ಕಾಳುಗಳನ್ನು ನೀಡಿ. 

ಕುಂಭ(Aquarius): ಸರ್ಕಾರಿ ಕೆಲಸಗಳು ಈಡೇರಲಿವೆ. ಕೋಪದ ಕೈಗೆ ಬುದ್ಧಿಯನ್ನು ಕೊಡಬೇಡಿ. ಬರಬೇಕಾದ ಹಣ ಬರದೆ ಸತಾಯಿಸಲಿದೆ. ಪ್ರತಿಭಾ ರಂಗದಲ್ಲಿರುವವರಿಗೆ ಉತ್ತಮ ಅವಕಾಶಗಳು, ಮೆಚ್ಚುಗೆ ದೊರೆಯುತ್ತದೆ. ಯಾವುದೋ ಭಯ ಕಾಡಬಹುದು. ಶಿವ ಧ್ಯಾನ ಮಾಡಿ. 

ಮೀನ(Pisces): ಹಣದ ಹೂಡಿಕೆಗೆ ಉತ್ತಮ ದಿನ. ಇಡೀ ದಿನ ಸಂತೋಷದಿಂದ ಕಳೆಯಲಿದೆ. ಹೊಸಬರ ಭೇಟಿಯಿಂದ ಕೆಲಸಗಳು ಈಡೇರಲಿವೆ. ಮಾಡುವ ಕೆಲಸಕ್ಕೆ ಪೋಷಕಾರ ಸಂಪೂರ್ಣ ಸಹಕಾರ ಸಿಗಲಿದೆ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ. 
 

PREV
Read more Articles on
click me!

Recommended Stories

ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ