Daily Horoscope: ಕಟಕಕ್ಕೆ ಅಪಘಾತ ಸಂಭವ, ಕನ್ಯಾ ರಾಶಿಗೆ ಯಶಸ್ಸು

Published : Jan 30, 2022, 07:06 AM IST
Daily Horoscope: ಕಟಕಕ್ಕೆ ಅಪಘಾತ ಸಂಭವ, ಕನ್ಯಾ ರಾಶಿಗೆ ಯಶಸ್ಸು

ಸಾರಾಂಶ

30 ಜನವರಿ 2022, ಭಾನುವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ವೃಶ್ಚಿಕಕ್ಕೆ ಕುಟುಂಬ ಸದಸ್ಯರ ಬೆಂಬಲ, ಮಕರಕ್ಕೆ ಅಪಾರ ಲಾಭ

ಮೇಷ(Aries): ದಿನದ ಆರಂಭವು ಉತ್ತಮವಾಗಿರಲಿದೆ. ಸ್ನೇಹಿತರು, ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಲಿದ್ದೀರಿ. ಸಂಬಂಧಿಕರು, ಪರಿಚಿತರ ಮನೆಯ ಶುಭ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಲಭಿಸಲಿದೆ. ಧೈರ್ಯ, ಆತ್ಮವಿಶ್ವಾಸ ಹೆಚ್ಚಲಿದೆ. ಗಣಪತಿ ಆರಾಧನೆ ಮಾಡಿ. 

ವೃಷಭ(Taurus): ತೀರಾ ನಂಬಿದವರಿಂದಲೇ ಮೋಸವಾಗಬಹುದು. ಧನನಷ್ಟ ಸಾಧ್ಯತೆ ಇದೆ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ತಪ್ಪಬಹುದು. ಮಾಡದ ತಪ್ಪಿಗೆ ಅಪವಾದ ಎದುರಿಸಬೇಕಾಗಬಹುದು. ಅಲ್ಪ ಆದಾಯ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ. 

ಮಿಥುನ(Gemini): ನೀವು ಸ್ನೇಹಿತರು ಅಥವಾ ಕುಟುಂಬದೊಂದಿಗೆ ಪ್ರವಾಸ ಮಾಡಲಿದ್ದೀರಿ. ಹಿಂದೆ ಮಾಡಿದ ಉತ್ತಮ ಕೆಲಸಗಳ ಫಲವಾಗಿ ಇಂದು ಸಂತೋಷವಾಗಿರಲಿದ್ದೀರಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಕಾರ್ಯ ಸಾಧನೆಯಾಗಲಿದೆ. ಆದಿತ್ಯ ಹೃದಯ ಪಠಣ ಮಾಡಿ. 

ಕಟಕ(Cancer): ವಾಹನ ಅಪಘಾತ ಸಾಧ್ಯತೆ ಇದ್ದು ಇದು ಅಪಾಯದ ದಿನವಾಗಿದೆ. ಎಚ್ಚರಿಕೆಯ ಚಾಲನೆ ಅಗತ್ಯ. ಬಂಧು-ಬಾಂಧವರ ಜೊತೆ ಜಗಳ, ಮಾತಿಗೆ ಮಾತು ಬೆಳೆಯುವ ಸಂಭವಗಳಿವೆ. ಕೃಷಿಯಲ್ಲಿ ಮೋಸವಾಗಬಹುದು. ಆಂಜನೇಯ ಉಪಾಸನೆ ಮಾಡಿ. 

ಸಿಂಹ(Leo): ನಿಮ್ಮ ಹಟಮಾರಿತನದಿಂದ ಕುಟುಂಬಕ್ಕೆ ಸಮಸ್ಯೆಗಳು ಹೆಚ್ಚಬಹುದು. ಯಂತ್ರೋಪಕರಣಗಳಿಂದ ನಷ್ಟ. ಉನ್ನತ ವಿದ್ಯಾಭ್ಯಾಸದಲ್ಲಿ ಅಡಚಣೆ. ಮಾತಾ ಪಿತರ ಆರೋಗ್ಯದಲ್ಲಿ ಏರುಪೇರಾಗಿ ಮನಸ್ಸು ಆತಂಕಕ್ಕೆ ಒಳಗಾಗಬಹುದು. ಸೂರ್ಯನಿಗೆ ಅರ್ಘ್ಯ ಬಿಡಿ. 

Margi Shukra 2022: ಇಂದಿನ ಶುಕ್ರ ಮಾರ್ಗಿಯಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

ಕನ್ಯಾ(Virgo): ರಾಜಕೀಯ ವ್ಯಕ್ತಿಗಳಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಶುಭ, ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲ ಸಿಗಲಿದೆ. ನಿರುದ್ಯೋಗಿಗಳಿಗೆ ಹೊಸ ಯೋಚನೆಗಳು ಬರಲಿವೆ. ಅವು ಭವಿಷ್ಯದಲ್ಲಿ ಲಾಭ ತಂದು ಕೊಡಲಿವೆ. ದೈವಾನುಕೂಲ ಇರಲಿದೆ. ತಾಮ್ರ ಪಾತ್ರೆ ದಾನ ಮಾಡಿ.

ತುಲಾ(Libra): ನಾಗದೋಷದಿಂದ ಸಮಸ್ಯೆಗಳು ಎದುರಾಗಬಹುದು. ಏನೇ ಪ್ರಯತ್ನ ಹಾಕಿದರೂ ಫಲ ದೊರೆಯುತ್ತಿಲ್ಲವಲ್ಲ ಎನಿಸಬಹುದು. ಹಣದ ಸಮಸ್ಯೆಗಳು ಹೆಚ್ಚಲಿವೆ. ಮಾತು ಕಡಿಮೆ ಇರಲಿ. ಕೋಪ ತಾಪ ತಗ್ಗಿಸಿ. ಬಡಬಗ್ಗರಿಗೆ ಕೈಲಾದ ಸಹಾಯ ಮಾಡಿ. 

ವೃಶ್ಚಿಕ(Scorpio): ನೀವು ಕುಟುಂಬ ಸದಸ್ಯರಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ಪಡೆಯುತ್ತೀರಿ. ಕೆಲಸದ ಕ್ಷೇತ್ರದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳಿಗಿಂತ ನೀವು ಮುಂದಿರುವಿರಿ. ಎಲ್ಲ ಕೆಲಸಗಳಲ್ಲಿ ಅದೃಷ್ಟದ ಬೆಂಬಲ ನಿಮ್ಮದಾಗಲಿದೆ. ಆದಿತ್ಯ ಹೃದಯ ಪಠಣ ಮಾಡಿ. 

Gayatri Mantra: ಧೀ ಶಕ್ತಿ ಹೆಚ್ಚಿಸುವ ಗಾಯತ್ರಿ ಮಂತ್ರ, ಪಠಣದ ಲಾಭ ಒಂದೆರಡಲ್ಲ..

ಧನುಸ್ಸು(Sagittarius): ಕಾರ್ಯದಲ್ಲಿ ಅಭಿವೃದ್ಧಿ, ನೆಮ್ಮದಿಯ ದಿನ, ಮನೆಯ ಸದಸ್ಯರೊಂದಿಗೆ ನಗು ನಗುತ್ತಾ ದಿನ ಕಳೆಯುವಿರಿ. ಅಂದುಕೊಂಡ ಕೆಲಸಗಳು ಆಗಲಿವೆ. ಮನೆಯಲ್ಲಿ ಮಂಗಳ ಕಾರ್ಯಕ್ಕೆ ನಾಂದಿ ಹಾಡಲಿದ್ದೀರಿ. ಗುರುವಿನ ಆರಾಧನೆ ಮಾಡಿ.

ಮಕರ(Capricorn): ಚುರುಕುತನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿರುವಿರಿ. ವ್ಯಾಪಾರದಲ್ಲಿ ಅಪಾರ ಲಾಭ ಇರಲಿದೆ. ಸಾಮಾಜಿಕ ಕೆಲಸಗಳಿಂದ ಗೌರವ ಪ್ರಾಪ್ತಿಯಾಗಲಿದೆ. ಮನೆಯಲ್ಲಿ ಶುಭ ಕಾರ್ಯದ ಸಡಗರವಿರಲಿದೆ. ಮನೆಯಲ್ಲಿ ವ್ಯಾಜ್ಯಗಳು ಬಗೆ ಹರಿಯಲಿವೆ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ಕುಂಭ(Aquarius): ಪ್ರೇಮ ವ್ಯವಹಾರಗಳು ಚೆನ್ನಾಗಿ ನಡೆಯಲಿವೆ. ಸಂಗಾತಿಯ ಸಂಪ್ರೀತಿಯಲ್ಲಿ ಮುಳುಗೇಳುವಿರಿ. ಮಗುವಿನ ಪ್ರಗತಿ ಸಂತೋಷ ತರಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಪಡೆಯಲಿದ್ದೀರಿ. ವ್ಯಾಪಾರದಲ್ಲಿ ಅಪಾರ ಲಾಭದ ದಿನ. ಗೋವಿಗೆ ಹಸಿರು ಆಹಾರ ತಿನ್ನಿಸಿ. 

ಮೀನ(Pisces): ಹೆಚ್ಚಿನ ಜನರ ಸಂಪರ್ಕದಿಂದ ಸಂತೋಷ ಹೆಚ್ಚಲಿದೆ. ಹಣ ಉಳಿತಾಯದ ಕಡೆಗೆ ಗಮನ ಹರಿಸುವುದು ಒಳ್ಳೆಯದು. ತಾಯಿಯ ಕಡೆಯಿಂದ ಬರುವ ಸಲಹೆಗಳನ್ನು ಪರಿಗಣಿಸಿ. ಸೋಮಾರಿತನ ಬಿಟ್ಟರೆಎಲ್ಲ ಅಂದುಕೊಂಡಂತಾಗಲಿದೆ. ಪಶು ಪಕ್ಷಿಗಳಿಗೆ ಆಹಾರ ಒದಗಿಸಿ. 

PREV
Read more Articles on
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ