
ಮೇಷ(Aries): ವೃತ್ತಿಯಲ್ಲಿ ಅನುಕೂಲ, ಬಿಡುವಿಲ್ಲದ ದುಡಿಮೆಯಿಂದ ದೇಹಾಯಾಸ. ಆಕಸ್ಮಿಕ ಧನಲಾಭದಿಂದ ಕಾರ್ಯಸಿದ್ಧಿಯಾಗಲಿದೆ. ಕುಟುಂಬದಲ್ಲಿ ಕಹಿ ವಾತಾವರಣ, ದಾಂಪತ್ಯದಲ್ಲಿ ಉತ್ತಮ ಸಹಕಾರದಿಂದ ಕುಟುಂಬದ ವೈಮನಸ್ಸು ಶಮನ. ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.
ವೃಷಭ(Taurus): ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗಳಿಗಾಗಿ ಅಲೆದಾಟ. ಖರ್ಚು ವಿಪರೀತ, ವಸ್ತು ನಷ್ಟ. ಸ್ತ್ರೀಯರಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯ. ಕೋರ್ಟ್ ವ್ಯವಹಾರಗಳಲ್ಲಿ ಹಿನ್ನಡೆ. ವಿದ್ಯಾರ್ಥಿಗಳಿಗೆ ನಿರಾಸೆ, ಸಮಯ ಪೋಲು ಮಾಡಬೇಡಿ. ನಿರುದ್ಯೋಗಿಗಳಿಗೆ ನಿರಾಸೆ. ದುರ್ಗಾ ಕವಚ ಪಠಿಸಿ.
ಮಿಥುನ(Gemini): ಸ್ತ್ರೀಯರಿಂದ ನಷ್ಟಫಲ, ದಾಂಪತ್ಯದಲ್ಲಿ ಅಸಮಾಧಾನ, ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳ ಕಿರಿಕಿರಿ ಕಾಡಬಹುದು. ಮೌನಂ ಸರ್ವತ್ರ ಸಾಧನಂ ಎಂಬ ಮಾತು ನೆನಪಿಡಿ. ಹಿತ್ತಾಳೆ ಕಿವಿಯವರಾಗದಂತೆ ಎಚ್ಚರ ವಹಿಸಿ. ಉದ್ಯೋಗಿಗಳಿಗೆ ಉತ್ತಮ ಫಲ, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ.
ಕಟಕ(Cancer): ಆರೋಗ್ಯ ಬಾಧೆ, ಸಾಲದಿಂದ ತತ್ತರಿಸುತ್ತೀರಿ, ಕೆಲವೊಂದು ದುಡುಕಿನ ಕೆಲಸಗಳಿಂದ ನೆಮ್ಮದಿ ಹಾಳು. ದೊಡ್ಡ ದೊಡ್ಡ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬೇಡಿ. ಜಾಗ್ರತೆ ಇರಲಿ, ವೃತ್ತಿಯಲ್ಲಿ ಬಲವಿದೆ, ರಸ ವ್ಯಾಪಾರಿಗಳಿಗೆ ಉತ್ತಮ ಫಲ, ದುರ್ಗಾ ದೇವಸ್ಥಾನಕ್ಕೆ ಕ್ಷೀರ ದಾನ ಮಾಡಿ.
ಸಿಂಹ(Leo): ಸಹೋದರರ ಸಹಕಾರ, ಮಕ್ಕಳಿಂದ ವಿರೋಧ, ಮಾತಿನ ಕಲಹ, ಮನಸ್ಸು ಕಹಿಯಾಗುತ್ತದೆ. ಸಮಾಧಾನ ಚಿತ್ತದಿಂದ ಯೋಚಿಸಿ ದೃಢ ನಿರ್ಧಾರ ಕೈಗೊಳ್ಳಿ. ಪ್ರಭಾವ ಹಾಗೂ ಸಹಕಾರದಿಂದ ವೃತ್ತಿರಂಗದಲ್ಲಿ ಮುನ್ನಡೆ. ವಾಹನ ವ್ಯಾಪಾರಿಗಳಿಗೆ ಲಾಭದ ದಿನ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ.
ಕನ್ಯಾ(Virgo): ವೃತ್ತಿರಂಗದಲ್ಲಿ ವಿವೇಚನೆಯಿಂದ ನಡೆಯಿರಿ. ತಾಳಿದವನು ಬಾಳಿಯಾನು ಎಂಬ ಮಾತನ್ನು ಆಗಾಗ ಹೇಳಿಕೊಂಡು ಮುನ್ನಡೆಯುವುದರಿಂದ ಯಶಸ್ಸು, ಪ್ರಯಾಣದಲ್ಲಿ ತೊಡಕು, ಸ್ತ್ರೀಯರು ಜಾಗ್ರತೆಯಿಂದ ಇರಬೇಕು. ಕೃಷಿ-ಹಣ್ಣು-ಹೂವಿನ ವ್ಯಾಪಾರಿಗಳಿಗೆ ಲಾಭ, ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ.
ತುಲಾ(Libra): ವೃತ್ತಿಯಲ್ಲಿ ಬಲ, ನಿಮ್ಮ ಕಾರ್ಯಸಾಧನೆಗೆ ಮನಸೋತು ಶತ್ರುಗಳೂ ಮೂಗಿಗೆ ಬೆರಳಿಟ್ಟಾರು. ವ್ಯಾಪಾರಿಗಳಿಗೆ ಅನುಕೂಲ, ಯಂತ್ರೋದ್ಯಮದಲ್ಲಿರುವವರಿಗೆ ಉತ್ತಮ ಫಲ. ನೂತನ ಗೃಹ ನಿರ್ಮಾಣ, ವಾಹನ ಖರೀದಿ ಸಂಬಂಧಿ ಕೆಲಸಗಳು ಸುಗಮ. ನಿತ್ಯದ ಕೆಲಸ ತುಸು ಶ್ರಮ ಎನಿಸಲಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.
ವೃಶ್ಚಿಕ(Scorpio): ಆರೋಗ್ಯದಲ್ಲಿ ಏರುಪೇರು, ಹೆಣ್ಣುಮಕ್ಕಳು ಮಾತಿನಲ್ಲಿ ಜಾಗೃತರಾಗಿರಿ, ವಿದ್ಯಾರ್ಥಿಗಳಿಗೆ ಕೋಪ ಸ್ವಭಾವ, ಉದ್ಯೋಗರಂಗದಲ್ಲಿ ಬದಲಿ ಅವಕಾಶ ಒದಗಿ ಬರಲಿವೆ. ಮನೆಯಲ್ಲಿ ಶುಭ ಕಾರ್ಯಗಳಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ. ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ.
ಧನುಸ್ಸು(Sagittarius): ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಧೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಂಗಾಲಾಗಿಸಲಿವೆ. ಸಹೋದರ ವರ್ಗದಿಂದ ಸಂತಸದ ಸುದ್ದಿ ಕಿವಿಗೆ ಬೀಳಲಿದೆ. ಶಾಂತತೆ ಇರಲಿ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರವಾಗಿರಿ. ಅವಿವಾಹಿತರಿಗೆ ಕಂಕಣಬಲ. ಮಹಾಲಕ್ಷ್ಮಿಗೆ ಕುಂಕುಮಾರ್ಚನೆ ಮಾಡಿ.
ಮಕರ(Capricorn): ಅಧಿಕ ವ್ಯಯ, ಮಾತಿನಿಂದ ಕಾರ್ಯ ಸಾಧನೆ, ವಾಗ್ಬಲ ಇರಲಿದೆ. ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ಹೆಚ್ಚುವುದು. ಸಾಮಾಜಿಕವಾಗಿ, ಧಾರ್ಮಿಕವಾಗಿ, ದಾನ-ಧರ್ಮಾದಿ ಸದ್ವಿನಿಯೋಗಕ್ಕೆಡೆಯಿದೆ. ದೂರ ಸಂಚಾರದಿಂದ ಕಾರ್ಯಾನುಕೂಲ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.
ಕುಂಭ(Aquarius): ಲಾಭ ಸಮೃದ್ಧಿ, ಕೂಡಿಟ್ಟ ಹಣದ ಸದುಪಯೋಗವಾಗಿ ಬಂಧುಮಿತ್ರರಿಂದ ಪ್ರಶಂಸೆಗೊಳಗಾಗುವಿರಿ. ಕುಟುಂಬ ಸದಸ್ಯರಿಗೆ ಆರೋಗ್ಯದಲ್ಲಿ ವ್ಯತ್ಯಾಸದಿಂದ ಚಿಂತೆ. ದೂರ ಪ್ರಯಾಣ ಮಾಡುವ ಮುನ್ನ ಮನೆದೇವರ ಪ್ರಾರ್ಥನೆ ಮಾಡಿ. ದುರ್ಗಾ ಕವಚ ಪಠಿಸಿ ಅನುಕೂಲವಾಗಲಿದೆ.
ಮೀನ(Pisces): ಮನಸ್ಸು ಚಂಚಲವಾಗಿತ್ತದೆ, ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ವೃತ್ತಿಯಲ್ಲಿ ಅಸಮಾಧಾನ, ಆರೋಗ್ಯ ವೃದ್ಧಿ, ವೈಯಕ್ತಿಕ ಸ್ಥಾನಮಾನ ಹೆಚ್ಚಿಸಿಕೊಳ್ಳಲು ಯತ್ನಿಸಿ. ಮಕ್ಕಳೊಂದಿಗೆ ಸಮಯ ಕಳೆಯಿರಿ. ದುರ್ಗಾ ಸಪ್ತಶತಿ ಪಾರಾಯಣ ಮಾಡಿ.