3 ಜನವರಿ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಷಭಕ್ಕೆ ಬದಲಾಗುವ ನಿರ್ಧಾರ, ಕುಂಭಕ್ಕೆ ಒತ್ತಡ
ಮೇಷ(Aries): ಅಲಂಕಾರಿಕ ವಸ್ತುಗಳು, ಕೃಷಿ, ಪಶು, ಹೈನು ವ್ಯವಹಾರಗಳಿಂದ ಅಧಿಕ ಲಾಭ. ಉದ್ಯೋಗದಲ್ಲಿ ಎಡವಟ್ಟುಗಳಾಗುವ ಸಾಧ್ಯತೆ. ಎಲ್ಲ ಕೆಲಸಗಳನ್ನು ಎರಡೆರಡು ಬಾರಿ ಪರಿಶೀಲಿಸಿ ಮುಂದುವರಿಯಿರಿ. ದಾಂಪತ್ಯ ಜೀವನದಲ್ಲಿ ಸಂಯಮ ಅಗತ್ಯ. ದುರ್ಗಾಷ್ಟೋತ್ತರ ಹೇಳಿಕೊಳ್ಳಿ.
ವೃಷಭ(Taurus): ವಾಹನಗಳು ದುರಸ್ಥಿಗೆ ಬರುವ ಸಾಧ್ಯತೆ. ಹಿಂದೆ ತೆಗೆದುಕೊಂಡ ನಿರ್ಧಾರವೊಂದು ತದ್ವಿರುದ್ಧವಾಗಿ ಬದಲಾಗಬಹುದು. ದಿಢೀರಿ ಪ್ರಯಾಣ ಕೈಗೊಳ್ಳಬಹುದು. ಆದಷ್ಟು ಸಾತ್ವಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ. ಅಮ್ಮನವರನ್ನು ಪ್ರಾರ್ಥಿಸಿ.
undefined
ಮಿಥುನ(Gemini): ಬಹುಕಾಲದಿಂದ ಬಾಧಿಸುತ್ತಿರುವ ಆರೋಗ್ಯ ತೊಡಕುಗಳಲ್ಲಿ ಕೊಂಚ ಸುಧಾರಣೆ. ಬಾಕಿ ಉಳಿದ ಗೃಹ ಕಾರ್ಯಗಳು ಪೂರ್ಣಗೊಳ್ಳಲಿವೆ. ಗೃಹಕೆಲಸಗಳಿಗೆ ಪ್ರಶಂಸೆ. ಧಾರ್ಮಿಕ, ಶುಭ ಸಮಾರಂಭಗಳಿಗೆ ಭೇಟಿಯಿಂದ ಸಂತಸ. ಕುಲದೇವರ ಸ್ಮರಣೆ ಮಾಡಿ.
ಕಟಕ(Cancer): ಈ ದಿನ ಬರುವ ಉತ್ತಮ ಅವಕಾಶಗಳನ್ನು ಬಳಸಿಕೊಂಡಲ್ಲಿ ಮುಂದೆ ಒಳಿತಾಗುವುದು. ನೀರು, ಬೆಂಕಿಯ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ನೆಂಟರಿಷ್ಟರ ಆಗಮನ, ಭಕ್ಷ್ಯ ಭೋಜನ ಸವಿಯುವ ಅವಕಾಶ. ಲಲಿತಾ ಸಹಸ್ರನಾಮ ಪಠಣ ಮಾಡಿ.
Happy New Year 2022 : ಈ ಇಸ್ವಿಯಲ್ಲಿರುವ ಸಂಖ್ಯೆಗಳ ವಿಶೇಷವೇನು?
ಸಿಂಹ(Leo): ಹಿಂದೆ ಪಡೆದ ಸಾಲಗಳು ಕಂಗೆಡಿಸಲಿವೆ. ಷೇರು ವ್ಯವಹಾರದಲ್ಲಿ ಧನನಷ್ಟವಾಗುವುದು. ವ್ಯಾಪಾರದಲ್ಲಿ ಮಿಶ್ರಫಲ. ಪ್ರವಾಸಗಳಿಂದ ಸಂತಸ. ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಿರಿ. ಮಕ್ಕಳ ಕಲಿಕೆಯಲ್ಲಿ ಪ್ರಗತಿ ಕಂಡು ಬರುವುದು. ಮಹಾಲಕ್ಷ್ಮೀ ಆರಾಧನೆ ಮಾಡಿ.
ಕನ್ಯಾ(Virgo): ಗೌರವ ವೃದ್ಧಿಯಾಗಲಿದೆ. ಕುಟುಂಬವರ್ಗದವರಿಂದ ನಿಮ್ಮ ಕಾರ್ಯ ವೈಖರಿಗೆ ಟೀಕೆಗಳು ಬರಬಹುದು. ವಾದಿಸುವ ಬದಲು ಅವರು ಹೇಳುವ ಮಾತಿನಲ್ಲಿ ಸತ್ವ ಇದೆಯೇ ಎಂದು ಯೋಚಿಸಿ. ಸರಿ ತಪ್ಪುಗಳನ್ನು ಪರಾಮರ್ಶಿಸಿ ಮುಂದುವರಿಯಿರಿ. ಹಸುವಿಗೆ ಹುಲ್ಲು ತಿನ್ನಿಸಿ.
ತುಲಾ(Libra): ಆರೋಗ್ಯದ ಬಗ್ಗೆ ಗಮನ ಹೆಚ್ಚಿಸಿ. ದೇಹದಂಡನೆ ಅಗತ್ಯ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭ. ವ್ಯಾಪಾರದಲ್ಲಿ ಲಾಭ ಹೆಚ್ಚುವುದು. ಸಂಗಾತಿಯ ಸಹಕಾರದಿಂದ ಕೆಲಸಗಳು ಸುಗಮವಾಗಿ ಸಾಗುವುವು. ಕಚೇರಿ ಕಾರ್ಯಾಲಯಗಳ ಕೆಲಸಗಳಿಂದ ತಾಳ್ಮೆಗೆಡುವಂತಾಗಬಹುದು. ಶಿವ ಶತನಾಮಾವಳಿ ಹೇಳಿಕೊಳ್ಳಿ.
Weekly Horoscope: ಕನ್ಯಾ ರಾಶಿಗೆ ಈ ವಾರ ರಾಜಯೋಗ, ಕುಂಭಕ್ಕೆ ಹೆಚ್ಚುವ ಖರ್ಚು
ವೃಶ್ಚಿಕ(Scorpio): ಅನಾರೋಗ್ಯದಿಂದ ಕಿರಿಕಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳು. ಅಧಿಕಾರಿ ವರ್ಗದವರಿಂದ ಮಾತು ಕೇಳಬೇಕಾಗಬಹುದು. ಕೋರ್ಟ್ ವ್ಯಾಜ್ಯಗಳು ಮುಂದೆ ಹೋಗುವುದಿಲ್ಲ. ಮನೆಯಲ್ಲಿ ಮದುವೆ ಸಂಬಂಧ ಒತ್ತಡ ಹೆಚ್ಚಲಿದೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ.
ಧನುಸ್ಸು(Sagittarius): ಕೆಲಸ ಕಾರ್ಯಗಳಲ್ಲಿ ನಿಲ್ಲದ ಏಕಾಗ್ರತೆ. ವಿದ್ಯಾರ್ಥಿಗಳಿಗೂ ಚಂಚಲ ಮನಸ್ಥಿತಿ, ದೇಹಾಲಸ್ಯ. ರೈತಾಪಿ ವರ್ಗಕ್ಕೆ ಉತ್ತಮ ಲಾಭ. ನಿಮ್ಮ ಶತ್ರುಗಳ ಕಾರ್ಯವೈಖರಿ ಮೇಲೆ ಹದ್ದಿನ ಕಣ್ಣಿಡಿ. ಉದ್ಯೋಗಿಗಳಿಗೆ ಒತ್ತಡ ಹೆಚ್ಚು. ಕುಲದೇವರ ಸ್ಮರಣೆ ಮಾಡಿ.
ಮಕರ(Capricorn): ಅರೋಗ್ಯ ಸಂಬಂಧಿ ಸಣ್ಣಪುಟ್ಟ ಸಮಸ್ಯೆಗಳು ಕಾಡಬಹುದು. ವ್ಯಾಪಾರದಲ್ಲಿ ಅಧಿಕ ಲಾಭವಾಗಿ ಮನಸ್ಸು ಸಂತೋಷಗೊಳ್ಳುವುದು. ಹೆಚ್ಚಿನ ಜನರ ಭೇಟಿಯಿಂದ ಉಲ್ಲಾಸ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಭಾಗಿ. ವಿದ್ಯಾರ್ಥಿಗಳಿಗೆ ಪ್ರಗತಿ ಇರಲಿದೆ. ಶಿವನಿಗೆ ಜಲಾಭಿಷೇಕ ಮಾಡಿ.
ಕುಂಭ(Aquarius): ಕಚೇರಿ ಕೆಲಸಗಳಲ್ಲಿ ಮುಳುಗಿ ಮನೆಯ ಕೆಲಸಗಳು ಹಾಗೂ ಬಾಹ್ಯ ಇತರೇ ಕೆಲಸಗಳು ಗುಡ್ಡೆಯಾಗುತ್ತಾ ಹೋಗಿ ತಲೆ ನೋವು ತರಲಿವೆ. ಮಕ್ಕಳ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ. ವೃಥಾ ಆತಂಕ ಬೇಡ. ಗೃಹಿಣಿಯರಿಗೆ ಮನರಂಜನೆ, ಶಿವಶಕ್ತಿಯರಲ್ಲಿ ಪ್ರಾರ್ಥಿಸಿ.
ಮೀನ(Pisces): ಸಣ್ಣ ವಿಷಯಕ್ಕೆ ಅತಿಯಾಗಿ ಕೊರಗುವುದು ಬಿಟ್ಟರೆ ಮಾತ್ರ ನೆಮ್ಮದಿ ಸಾಧ್ಯ. ಕೆಲಸ ಕಾರ್ಯಗಳಲ್ಲಿ ಹುರುಪು ಹೆಚ್ಚಲಿದೆ. ನೆಂಟರಿಷ್ಟರ ಭೇಟಿ ಇರಲಿದೆ. ಮಾತಿನ ಮೇಲೆ ನಿಗಾ ಇರಲಿ. ಸಹಾಯ ಬೇಡಿ ಬಂದವರಿಗೆ ಸುಮ್ಮನೆ ಹಾಗೇ ಕಳಿಸಬೇಡಿ. ಬಡವರಿಗೆ ವಸ್ತ್ರ, ದವಸ ಧಾನ್ಯ ದಾನ ಮಾಡಿ.