2 ಜನವರಿ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಕ್ಕಳ ತಪ್ಪುಗಳಿಗೆ ತಲೆ ಕೊಡಬೇಕಾದ ಸ್ಥಿತಿ ಕಟಕ ರಾಶಿಯವರದ್ದು..
ಮೇಷ(Aries): ನಿಮ್ಮ ಹುರುಪನ್ನು ನೀರಸಗೊಳಿಸುವಂಥ ಘಟನೆಗಳು ನಡೆಯಬಹುದು. ಭೇಟಿಯಾಗುತ್ತೇನೆಂದವರು ಕೈ ಕೊಡಬಹುದು. ಹತ್ತಿರದವರ ಗುಟ್ಟೊಂದು ತಿಳಿದು ಬಂದು ನಿಮ್ಮನ್ನು ವಿಚಲಿತಗೊಳಿಸಬಹುದು. ಯಾವುದಕ್ಕೂ ಕೂಡಲೇ ಪ್ರತಿಕ್ರಿಯೆ ನೀಡಬೇಡಿ. ಆದಿತ್ಯ ಹೃದಯ ಪಠಣ ಮಾಡಿ.
ವೃಷಭ(Taurus): ಸಣ್ಣಪುಟ್ಟ ತಿರುಗಾಟದಿಂದ ಸಂತಸ. ಮನರಂಜನೆ ವಿಷಯಗಳಿಗಾಗಿ ಹೆಚ್ಚಿನ ಧನ ವ್ಯಯ ಮಾಡಬಹುದು. ಅದಾಗ್ಯೂ ಹೆಚ್ಚುವ ಆರೋಗ್ಯ ಸಮಸ್ಯೆಗಳು ಕಿರಿಕಿರಿ ಮಾಡಬಹುದು. ವ್ಯಾಪಾರಸ್ಥರಿಗೆ ಉತ್ತಮ ಲಾಭವಿದೆ. ಸೂರ್ಯನಿಗೆ ಅರ್ಘ್ಯ ನೀಡಿ.
undefined
ಮಿಥುನ(Gemini): ಬಿರುಕು ಬಿಟ್ಟಿದ್ದ ಸಂಬಂಧವೊಂದು ಅನಿರೀಕ್ಷಿತವಾಗಿ ಮತ್ತೆ ಸರಿಯಾಗುವ ಸಾಧ್ಯತೆಗಳಿವೆ. ವಾಗ್ಬಲ ಚೆನ್ನಾಗಿದ್ದು, ಹೆಚ್ಚು ಜನಮನ್ನಣೆ ಗಳಿಸುವಿರಿ. ಆರೋಗ್ಯ ಬಲ ಚೆನ್ನಾಗಿರಲಿದೆ. ನಿರುದ್ಯೋಗಿಗಳಿಗೆ ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ಕುಲ ದೇವರಿಗೆ ನಮಸ್ಕರಿಸಿ.
ಕಟಕ(Cancer): ಮಕ್ಕಳ ತಪ್ಪುಗಳಿಗೆ ನೀವೇ ಕಾರಣವಾಗಿ ಮನ ನೋಯುವ, ಬೈಸಿಕೊಳ್ಳುವ ಪ್ರಮೇಯ ಬರಬಹುದು. ಮಕ್ಕಳ ಕಡೆ ತಾಳ್ಮೆಯಿಂದ ವರ್ತಿಸಿ. ಪ್ರೇಮಿಗಳಿಗೆ ದುಃಖದಾಯಕ ವಿಷಯ ಕೇಳ ಸಿಗಬಹುದು. ಆಸ್ತಿ ವಿಚಾರಗಳು ಮುಂದೆ ಹೋಗದೆ ಮನಸ್ಸು ಹಾಳಾಗಲಿದೆ. ಬಡವರಿಗೆ ಅನ್ನ ದಾನ ಮಾಡಿ.
ಸಿಂಹ(Leo): ಅವಿವಾಹಿತರು ಸೂಕ್ತ ಸಂಬಂಧವನ್ನು ಭೇಟಿಯಾಗಲಿರುವರು. ವ್ಯಾಪಾರ, ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಹೊಸ ಯೋಚನೆಗಳು ಫಲ ಕೊಡಲಿವೆ. ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ವಿದೇಶದಲ್ಲಿ ಅವಕಾಶಗಳು ಸಿಗಬಹುದು. ಹಸುವಿಗೆ ಹಸಿರು ಸೊಪ್ಪುಗಳನ್ನು ನೀಡಿ.
ಕನ್ಯಾ(Virgo): ಆರೋಗ್ಯದ ಸಮಸ್ಯೆಗಳು ಕಂಗಾಲಾಗಿಸುವುವು. ಧೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ವೈದ್ಯರನ್ನು ಎಡ ತಾಕಬೇಕಾದ ಪ್ರಮೇಯಗಳು ಎದುರಾಗಬಹುದು. ಮನೆ ಸದಸ್ಯರ ಕಷ್ಟಕಾರ್ಪಣ್ಯಗಳು ಹೈರಾಣಾಗಿಸಲಿವೆ. ಯೋಗ, ಪ್ರಾಣಾಯಾಮ ರೂಢಿ ಮಾಡಿಕೊಳ್ಳಿ. ಮನೆ ದೇವರಲ್ಲಿ ಪ್ರಾರ್ಥಿಸಿ.
Astrology And Relationship: ಸಂಗಾತಿ ಜೊತೆ ಸರಸ ಹೆಚ್ಚಲು ಸರಳ ಟಿಪ್ಸ್
ತುಲಾ(Libra): ಆಸ್ತಿ ಖರೀದಿ ವಿಚಾರ ಹಿಂದೆ ಕಾಲಿಡಬಹುದು. ಮಕ್ಕಳು ಹಾಗೂ ಮನೆಯವರ ಆರೋಗ್ಯಕ್ಕಾಗಿ ಬಹಳಷ್ಟು ಖರ್ಚುವೆಚ್ಚಗಳು ಹೆಚ್ಚಲಿವೆ. ದೂರ ಪ್ರಯಾಣದಲ್ಲಿ ಅಡ್ಡಿ ಆತಂಕಗಳು ಎದುರಾಗಲಿವೆ. ದಂಪತಿಗೆ ಸಂತಾನ ವಿಷಯದಲ್ಲಿ ಸಕಾರಾತ್ಮಕ ಸುದ್ದಿ ಸಿಗಬಹುದು. ಬಡವರಿಗೆ ವಸ್ತ್ರ ದಾನ ಮಾಡಿ.
ವೃಶ್ಚಿಕ(Scorpio): ಒಳಗೊಳಗೇ ಕೊರಗಿದರೆ ಪ್ರಯೋಜನವಿಲ್ಲ. ನಿಮ್ಮ ಮನಸ್ಸು ಯಾರಿಗೂ ಅರ್ಥವಾಗುವುದಿಲ್ಲ. ಬಾಯಿ ಬಿಟ್ಟು ಸಮಸ್ಯೆಗಳನ್ನು ಹೇಳಿಕೊಂಡಾಗಷ್ಟೇ ಪರಿಹಾರಗಳು ಗೋಚರವಾಗುವುವು. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ಲಲಿತಾ ಸಹಸ್ರನಾಮ ಪಠಣ ಮಾಡಿ.
2022 Numerology Predictions: ನಿಮ್ಮ ಸಂಖ್ಯೆ ಆಧಾರದ ಮೇಲೆ ಭವಿಷ್ಯ ಹೇಗಿರಲಿದೆ?
ಧನುಸ್ಸು(Sagittarius): ಎಡೆಬಿಡದ ದುಡಿಮೆ ಆಯಾಸವೆನಿಸಲಿದೆ. ಆದರೂ ಉತ್ತಮ ಉದ್ದೇಶಕ್ಕಾಗಿ ತಯಾರಾಗುವ ಹುರುಪು ಹೆಚ್ಚಲಿದೆ. ಜ್ಞಾನಾರ್ಜನೆ ಇರಲಿದೆ. ಮಕ್ಕಳ ಸಂಬಂಧಿ ಸಮಸ್ಯೆಗಳು ತಾತ್ಕಾಲಿಕ ಶಮನ ಕಂಡು ಸಮಾಧಾನವಾಗುವುದು. ಕೃಷ್ಣನಿಗೆ ತುಳಸಿ ಅರ್ಪಿಸಿ.
ಮಕರ(Capricorn): ವಿದ್ಯಾರ್ಥಿಗಳ ಶಿಕ್ಷಣ ವಿಷಯ ತಲೆ ಕೆಡಿಸಲಿದೆ. ಮನೆಯ ಸೌಕರ್ಯಗಳಿಗಾಗಿ ಖರ್ಚು ವೆಚ್ಚಗಳು ಏರಬಹುದು. ಹೊಸ ವರ್ಷಕ್ಕಾಗಿ ಮಾಡಿಕೊಂಡ ರೆಸಲ್ಯೂಶನ್‌ಗಳನ್ನು ಕೈ ಬಿಡಬೇಡಿ. ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸಲು ಬಿಡದಿದ್ದರೆ ಉತ್ತಮ. ಗಣಪತಿಗೆ ದರ್ಬೆ ಅರ್ಪಿಸಿ.
ಕುಂಭ(Aquarius): ಸಾಕು ಪ್ರಾಣಿಗಳ ವಿಚಾರದಲ್ಲಿ ನೋವಿನ ಸುದ್ದಿ ಕೇಳಲಿದ್ದೀರಿ. ನವ ವಿವಾಹಿತರು ಸಂತೋಷವಾಗಿ ದಿನ ಕಳೆಯಲಿದ್ದೀರಿ. ಸಂಗಾತಿಯ ಕಡೆಯಿಂದ ಧನ ಲಾಭ ಇರಬಹುದು. ಹೊಸ ವ್ಯಕ್ತಿಗಳ ಪರಿಚಯದಿಂದ ಸಹಾಯಗಳು ಒದಗಲಿವೆ. ಆದಿತ್ಯ ಹೃದಯ ಪಠಣ ಮಾಡಿ.
ಮೀನ(Pisces): ನಿಮ್ಮ ಒಳ್ಳೆಯ ಮಾತುಗಳಿಂದ ಇತರರ ನಡುವಿನ ಬಿಕ್ಕಟ್ಟು ಶಮನ ಕಾಣಲಿದೆ. ಮತ್ತೊಬ್ಬರ ಮನಸ್ಸಿನ ನೋವನ್ನು ಅರಿತು ಪರಿಹಾರ ನೀಡಲಿರುವಿರಿ. ವ್ಯಾಪಾರಿಗಳಿಗೆ ದೊಡ್ಡ ಲಾಭಗಳು ಸಿಕ್ಕಿ ಸಂತೋಷ ಹೆಚ್ಚಲಿದೆ. ಬುದ್ಧಿ ಬಲ ಚೆನ್ನಾಗಿದ್ದು ಸದ್ಬಳಕೆಯಿಂದ ಸುಖ ಹೆಚ್ಚುವುದು. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ.