Daily Horoscope: ಸೂರ್ಯಗ್ರಹಣದ ಈ ದಿನ ನಿಮ್ಮ ಭವಿಷ್ಯ ಹೇಗಿರಲಿದೆ?

By Chirag DaruwallaFirst Published Oct 25, 2022, 5:00 AM IST
Highlights

25 ಅಕ್ಟೋಬರ್ 2022, ಮಂಗಳವಾರ ಇಂದು ಕಟಕಕ್ಕೆ ಸಂತೋಷದ ದಿನ, ತುಲಾ ರಾಶಿಗೆ ಬಂಧುಮಿತ್ರರ ಭೇಟಿಯಿಂದ ಸಂತಸ

ಮೇಷ(Aries): ನಿಮ್ಮನ್ನು ಸ್ನೇಹಿತರು ಉಪಯೋಗಿಸಿಕೊಳ್ಳುತ್ತಿದ್ದಾರೆ ಎನಿಸಬಹುದು. ಬೇಕಾದಾಗ ಮಾತ್ರ ನಿಮ್ಮಲ್ಲಿಗೆ ಬರುತ್ತಾರೆ, ನಿಮಗೆ ಬೇಕಾದಾಗ ಸಾಥ್ ನೀಡುವುದಿಲ್ಲ ಎನಿಸಬಹುದು. ಅಶಕ್ತರಿಗೆ ದಾನ ಮಾಡಿ. ಅವಿವಾಹಿತ ಸದಸ್ಯರಿಗೆ ಉತ್ತಮ ಸಂಬಂಧವು ಕೂಡಿ ಬಂದು ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. 

ವೃಷಭ(Taurus): ವಿಶ್ರಾಂತಿಯ ದಿನ. ಸವಿಯಾದ ಭೋಜನ ಸವಿಯುವ ಅವಕಾಶ. ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗಾಗಿ ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ಅವರು ಹೊಸ ಮಾಹಿತಿ ಮತ್ತು ಯಶಸ್ಸನ್ನು ತರಬಹುದು. ನೀವು ವಿಶ್ರಾಂತಿ ಮತ್ತು ಚೈತನ್ಯವನ್ನು ಅನುಭವಿಸಬಹುದು. 

Latest Videos

ಮಿಥುನ(Gemini): ನೆಂಟರಿಷ್ಟರ ಮನೆಗೆ ಭೇಟಿ ನೀಡುವಿರಿ. ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಇರಲಿವೆ. ಸಮಸ್ಯೆಯಿದ್ದರೆ ನಿಮ್ಮ ತತ್ವಗಳೊಂದಿಗೆ ಸ್ವಲ್ಪ ರಾಜಿ ಮಾಡಿಕೊಳ್ಳಬೇಕಾಗಬಹುದು. ಕೆಲವು ಹಂತದಲ್ಲಿ ಆಯಾಸದಿಂದಾಗಿ ದೌರ್ಬಲ್ಯವನ್ನು ಅನುಭವಿಸಬಹುದು. 

Surya Grahan: ಗ್ರಹಣದ ಸಂದರ್ಭದಲ್ಲಿ ತುಳಸಿ ಆರೈಕೆ ಹೀಗಿರಲಿ

ಕಟಕ(Cancer): ಹೊಸ ವಸ್ತುಗಳ ಖರೀದಿ, ಅವುಗಳ ಬಳಕೆ ಸಂತೋಷ ತರುವುದು. ಕೆಲಸವನ್ನು ಶಾಂತಿಯುತವಾಗಿ ಯೋಚಿಸುವ ಮೂಲಕ ಪೂರ್ಣಗೊಳಿಸಿ. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ತಾಳ್ಮೆ ಕಳೆದುಕೊಳ್ಳುವುದು ಸೂಕ್ತವಲ್ಲ. 

ಸಿಂಹ(Leo): ದೇವರ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ಕುಟುಂಬದೊಂದಿಗೆ ಸಂತೋಷದಲ್ಲಿ ಸಮಯ ಕಳೆಯುವಿರಿ. ಈ ಸಮಯದಲ್ಲಿ ಸದಸ್ಯರೊಬ್ಬರ ಕಾರಣದಿಂದ ಮನೆಯ ಸಂತೋಷ ಹಾಳಾಗಬಹುದು. ಭವಿಷ್ಯದ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚಿಸಿ. ಕುಲದೇವರ ಸ್ಮರಣೆ ಮಾಡಿ.

ಕನ್ಯಾ(Virgo): ಹಬ್ಬದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ದೇವಸ್ಥಾನಕ್ಕೆ ಭೇಟಿ ನೀಡುವಿರಿ. ಜೀವನದಲ್ಲಿ ಎಲ್ಲದರ ಹೊರತಾಗಿಯೂ ಸ್ವಲ್ಪ ಒಂಟಿತನವನ್ನು ಅನುಭವಿಸಬಹುದು. ಇಂದು ಕೆಲಸದ ಸ್ಥಳದಲ್ಲಿ ಚಟುವಟಿಕೆಗಳು ಸ್ವಲ್ಪ ನಿಧಾನವಾಗಬಹುದು. ಕೌಟುಂಬಿಕ ವಾತಾವರಣ ಸಂತೋಷವಾಗಿರಬಹುದು.

ತುಲಾ(Libra): ಬಂಧುಮಿತ್ರರು ನಿಮ್ಮ ಮನೆಗೆ ಭೇಟಿ ನೀಡುವರು. ಉಡುಗೊರೆಗಳ ವಿನಿಮಯವಾಗುವುದು. ಬಯಸಿದ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ಮನೆಯ ಸ್ವಚ್ಛತೆಯಲ್ಲಿ ತೊಡಗುವಿರಿ. ಆರೋಗ್ಯ ಕಿರಿಕಿರಿ ಇರಬಹುದು. ಸ್ನಾನ ದಾನ ಮರೆಯದಿರಿ.

ವೃಶ್ಚಿಕ(Scorpio): ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಹಣ ಮಾಡುವುದೊಂದೇ ಅಲ್ಲ, ಬದುಕನ್ನು ಅನುಭವಿಸುವುದನ್ನೂ ಕಲಿಯಬೇಕಿದೆ. ನಕಾರಾತ್ಮಕತೆಯು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ ಮತ್ತು ನಿಮ್ಮನ್ನು ಕಾರ್ಯನಿರತವಾಗಿರಿಸಿಕೊಳ್ಳಿ. ಋತುಮಾನದ ಕಾಯಿಲೆಗಳ ಚಿಹ್ನೆಗಳನ್ನು ಕಾಣಬಹುದು.

ಸೂರ್ಯ ಗ್ರಹಣ; ವಿಜ್ಞಾನ ಏನು ಹೇಳುತ್ತದೆ? ಗ್ರಹಣ ನೋಡೋದು ಹೇಗೆ?

ಧನುಸ್ಸು(Sagittarius): ಗ್ರಹಣ ಕಾಲದಲ್ಲಿ ಎಚ್ಚರಿಕೆಯಿಂದಿರಿ. ಮನೆಯೊಳಗೇ ಇರಿ. ಧನ ವ್ಯಯ ಹೆಚ್ಚಿರುತ್ತದೆ. ದುರ್ಗಾ ಅಷ್ಟೋತ್ತರ ಪಠಣ ಮಾಡಿ. ಮನೆಯ ಯಾವುದೇ ಪ್ರಮುಖ ವಿಷಯದ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಯೋಜನೆ ಇರುತ್ತದೆ. ಇಂದು ಹೊರ ಹೋಗುವುದನ್ನು ತಪ್ಪಿಸಿ. ಮಕ್ಕಳಿಗೆ ಜ್ಞಾನ ತುಂಬುವತ್ತ ಗಮನ ಹರಿಸಿ.

ಮಕರ(Capricorn): ಮೋಜು ಮಸ್ತಿನಿಂದ ಉತ್ಸಾಹ. ವ್ಯಾಪಾರ ಪರಿಸರದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಉದ್ಯೋಗಿಗಳೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಿ. ಯುವಕರು ತಮ್ಮ ಯೋಗ್ಯತೆಗೆ ತಕ್ಕಂತೆ ಸರಿಯಾದ ಫಲಿತಾಂಶವನ್ನು ಪಡೆಯುತ್ತಾರೆ. ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಸ್ವಲ್ಪ ಸಮಯ ಕಳೆಯಿರಿ. 

ಕುಂಭ(Aquarius): ನಿಮ್ಮ ಶ್ರಮ, ಪ್ರಾಮಾಣಿಕತೆಗೆ ತಕ್ಕ ಫಲ ಪ್ರಾಪ್ತಿಯಾಗುವುದು. ಹೊಸ ಕೆಲಸ ಅಥವಾ ಹೂಡಿಕೆ ಮಾಡುವ ಮೊದಲು, ಅದನ್ನು ಸರಿಯಾಗಿ ಪರಿಶೀಲಿಸಿ. ಕಳೆದ ಕೆಲವು ವರ್ಷಗಳಿಂದ ಕೆಲಸದ ಸ್ಥಳದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಇಂದು ಯಶಸ್ವಿಯಾಗುವ ಸಾಧ್ಯತೆಯಿದೆ. ಸಣ್ಣ ಪುಟ್ಟ ಕಿರಿಕಿರಿಗಳು ಇರಲಿವೆ. 

ಸೂರ್ಯಗ್ರಹಣ 2022: ಯಾವ ರಾಶಿಗೆ ಲಾಭ, ಯಾವ ರಾಶಿಗೆ ಸಂಕಷ್ಟ?

ಮೀನ(Pisces):  ಇಂದು ಅದೃಷ್ಟದ ನಕ್ಷತ್ರಗಳು ಮೇಲುಗೈ ಸಾಧಿಸುತ್ತವೆ ಮತ್ತು ನಿಮ್ಮ ಬಾಕಿ ಉಳಿದ ಕಾರ್ಯಗಳನ್ನು ವೇಗಗೊಳಿಸುತ್ತವೆ. ಪ್ರೀತಿಯ ಸಂಬಂಧಗಳಲ್ಲಿ ಪರಸ್ಪರರ ಭಾವನೆಗಳನ್ನು ಗೌರವಿಸಿ. ಹಣದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬೇಡಿ. ಬಹಳ ಸಮಯದ ನಂತರ, ಕುಟುಂಬದೊಂದಿಗೆ ಎಲ್ಲರೂ ಆನಂದಿಸುವಿರಿ.

click me!