Daily Horoscope: ವೃಶ್ಚಿಕಕ್ಕೆ ನೆಮ್ಮದಿಯ ದಿನ, ಕುಂಭಕ್ಕೆ ಕಸಿವಿಸಿ

By Suvarna News  |  First Published Mar 4, 2022, 5:06 AM IST

4 ಮಾರ್ಚ್ 2022, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕೆಟ್ಟ ಸಹವಾಸದ ಕೆಟ್ಟ ಪರಿಣಾಮಗಳನ್ನೆದುರಿಸುವ ಕನ್ಯಾ


ಮೇಷ(Aries): ಸಣ್ಣಪುಟ್ಟ ಆಸೆಗಳನ್ನು ಗಂಟಿಕ್ಕಿಕೊಂಡರೆ ದೊಡ್ಡ ಯೋಜನೆಗೆ ಕೈ ಹಾಕಬಹುದು. ಒಂದು ಬೇಕೆಂದರೆ ಮತ್ತೊಂದನ್ನು ಬಿಡಬೇಕಾಗುತ್ತದೆ ಎಂಬ ಅರಿವಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಿ. ಮನೆಯ ಸದಸ್ಯರ ನಡುವೆ ಸಮನ್ವಯ ಕೊರತೆ ಮುಂದುವರಿಯುವುದು. ಲಲಿತಾ ಸಹಸ್ರನಾಮ ಪಠಣ ಮಾಡಿ. 

ವೃಷಭ(Taurus): ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಲಸಗಳು ಆಗಿ ಸಮಾಧಾನ ತರಬಹುದು. ನಿಮಗಾಗಿ ಕೊಂಚ ಸಮಯ ಮಾಡಿಕೊಳ್ಳುವತ್ತ ಗಮನ ಹರಿಸಿ. ಮಕ್ಕಳ ಶಾಲಾ ಚಟುವಟಿಕೆಗಳಿಗೆ ನಿಮ್ಮ ಸಹಾಯ ಬೇಕಾಗಬಹುದು. ಕಾಲು ನೋವು ಕಂಗೆಡಿಸಬಹುದು. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ. 

Latest Videos

undefined

ಮಿಥುನ(Gemini): ಮನೆಯ ಸ್ವಚ್ಛತೆ ಕಡೆ ಗಮನ ವಹಿಸಿ. ಅಸ್ತವ್ಯಸ್ತ ಸರಕುಗಳಿಂದಾಗಿ ಮನಸ್ಸಿಗೆ ಗೊಂದಲ ಉಂಟಾಗಬಹುದು. ತಂದೆತಾಯಿಯ ಮನಸ್ಸಿಗೆ ನೋವುಂಟು ಮಾಡುವಂತೆ ಮಾತಾಡಬೇಡಿ. ನಿಮ್ಮ ವ್ಯಸನಗಳನ್ನು ದೂರವಿಡದೆ ಸಾಮಾಜಿಕ ಗೌರವಗಳನ್ನು ನಿರೀಕ್ಷಿಸಬೇಡಿ. ಗೋ ಗ್ರಾಸ ನೀಡಿ. 

ಕಟಕ(Cancer): ನಿಮ್ಮನ್ನು ಹೈರಾಣು ಮಾಡಿರುವ ನ್ಯಾಯಾಲಯದ ಕೆಲಸದಿಂದ ಮುಕ್ತರಾಗಬಹುದು. ನಿಮ್ಮ ತ್ಯಾಗದಿಂದ ಆಪ್ತರ ಬದುಕು ಸರಿ ಹೋಗಬಹುದು. ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಿ. ಧೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ತಪಾಸಣೆ ಮಾಡಿಸಿ. ಆಹಾರದ ಕುರಿತ ಎಚ್ಚರಿಕೆ ಅಗತ್ಯ. ತಾಯಿಯ ಆಶೀರ್ವಾದ ಪಡೆಯಿರಿ. 

ಸಿಂಹ(Leo): ಪ್ರೇಮ ವ್ಯವಹಾರಗಳಲ್ಲಿ ದುಃಖ ಹೆಚ್ಚಬಹುದು. ಮಕ್ಕಳ ಮಾನಸಿಕ ಆರೋಗ್ಯದ ವಿಷಯಕ್ಕಾಗಿ ಹೆಚ್ಚು ಗಮನ ಹರಿಸಬೇಕಾದ ಅಗತ್ಯವಿದೆ. ಕೋಪದಿಂದ ಕೆಲಸ ಕೆಡುತ್ತದೆ ಎಂಬ ಎಚ್ಚರಿಕೆ ಇರಲಿ. ದೂರ ಪ್ರಯಾಣ ಕೈಗೊಳ್ಳಬೇಕಾಗಬಹುದು. ದುರ್ಗಾ ಅಷ್ಟೋತ್ತರ ಪಠಣ ಮಾಡಿ. 

Gemstones For Luck: ಈ ಎರಡು ಹರಳಿಂದ ಬದಲಾಗುತ್ತೆ ನಿಮ್ಮ ಅದೃಷ್ಟ!

ಕನ್ಯಾ(Virgo): ಎಷ್ಟೇ ನಂಬಿಕೆಯ ಜನರಾದರೂ ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಸ್ನೇಹಿತರ ಸಹವಾಸದಿಂದ ವ್ಯಕ್ತಿತ್ವಕ್ಕೆ ಕುಂದು ಬರುತ್ತಿದ್ದರೆ ಅಂಥ ಸ್ನೇಹದಿಂದ ದೂರ ಉಳಿಯುವುದೇ ಒಳ್ಳೆಯದು.  ಕೆಲಸ ಸಂಬಂಧ ಪ್ರಯಾಣ ಇರಲಿದೆ. ಚರ್ಮ ಸಮಸ್ಯೆಗಳು ಕಾಡಬಹುದು. ಕುಲದೇವತಾ ಸ್ಮರಣೆ ಮಾಡಿ. 

ತುಲಾ(Libra): ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಜರುಗಬಹುದು. ಪತಿ ಪತ್ನಿಯರ ನಡುವೆ ಸಮನ್ವಯ ಚೆನ್ನಾಗಿರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಅಧಿಕಾರಿಗಳೊಂದಿಗೆ ಹೆಚ್ಚು ಸೌಜನ್ಯವನ್ನು ಕಾಪಾಡಿಕೊಳ್ಳಿ. ಕಚೇರಿ ಕೆಲಸಗಳನ್ನು ಸಮಾಧಾನವಾಗಿ ನಿರ್ವಹಿಸಿ. ಶಾರದಾಂಬೆ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಬ್ಯಾಂಕ್, ಕೋರ್ಟ್ ಕೆಲಸಗಳು ಸರಾಗವಾಗಿ ನಡೆದು ನೆಮ್ಮದಿ ಸಿಗಲಿದೆ. ತಲೆನೋವು, ಬೆನ್ನುನೋವಿನ ಸಮಸ್ಯೆಗಳು ಎದುರಾಗಬಹುದು. ದೇವರ ವಿಚಾರಗಳಲ್ಲಿ ಆಸಕ್ತಿ ಹೆಚ್ಚುವುದು. ನೆರೆ ಹೊರೆಯವರಿಗೆ ನೆರವು ನೀಡುವಿರಿ. ಕಚೇರಿ ಕೆಲಸಗಳು ಸುಲಭ ಸಾಧನೆಯಾಗುವುವು. ಮಹಾಲಕ್ಷ್ಮೀ ಆರಾಧನೆ ಮಾಡಿ. 

Temples Of India: ದೋಸೆ, ಚಾಕ್ಲೇಟ್, ನೂಡಲ್ಸ್... ಇವೇ ಇಲ್ಲಿ ದೇವರಿಗೆ ನೈವೇದ್ಯ, ಭಕ್ತರಿಗೆ ಪ್ರಸಾದ! ಎಲ್ಲಿ ಅಂದ್ರಾ?

ಧನುಸ್ಸು(Sagittarius): ನಿಮ್ಮ ಮನೋಭಾವಕ್ಕೆ ಕುಟುಂಬವರ್ಗದಿಂದ ವಿರೋಧಗಳು ಕೇಳಿಬರಬಹುದು. ಕೆಲಸದಲ್ಲಿ ಪ್ರತಿಭೆಯನ್ನು ತೋರಿಸುವ ಅಗತ್ಯವಿದೆ. ಅದಕ್ಕಾಗಿ ಹೆಚ್ಚಿನ ಏಕಾಗ್ರತೆಯಿಂದ ಶ್ರಮ ಹಾಕಿ. ಪ್ರೇಮ ವ್ಯವಹಾರಗಳಲ್ಲಿ ತೊಡಕುಗಳು ಹೆಚ್ಚಬಹುದು. ಹತ್ತಿರದ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ. 

ಮಕರ(Capricorn): ಸ್ನೇಹಿತರು, ಪರಿಚಿತ ಹಿರಿಯರ ಭೇಟಿಯಿಂದ ಸಂತಸ. ಗೃಹಬಳಕೆಯ ವಸ್ತುಗಳು ಹಾಗೂ ವಸ್ತ್ರಕ್ಕಾಗೆ ಖರ್ಚು ಮಾಡುವಿರಿ. ನಿರುದ್ಯೋಗಿಗಳಿಗೆ ಅವಕಾಶಗಳು ಬರಬಹುದು. ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುವ ಸಂಭವ. ಶ್ರದ್ಧೆಯಿಂದ ಲಲಿತಾ ಸಹಸ್ರನಾಮ ಪಠಿಸಿ. 

ಕುಂಭ(Aquarius): ಉದ್ಯೋಗ, ವ್ಯಾಪಾರದ ಕಡೆ ಹೆಚ್ಚಿನ ಸಮಯ, ಶ್ರಮ ಅಗತ್ಯ. ಆಸ್ತಿ ಸಂಬಂಧ ಸಂಘರ್ಷಗಳಿಂದ ಮನಸ್ಸಿಗೆ ಕಸಿವಿಸಿ. ಸುಖಾಸುಮ್ಮನೆ ಬೇಡದ ವಿವಾದಗಳಲ್ಲಿ ಸಿಕ್ಕಿ ಬೀಳುವಿರಿ. ಅಸಮಾಧಾನದ ದಿನ. ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಲಲಿತಾ ಸಹಸ್ರನಾಮ ಪಠಿಸಿ. 

ಮೀನ(Pisces): ಹಿಂದೆ ಆಡಿದ ತಪ್ಪು ಮಾತುಗಳು ಈಗ ತಿರುಗುಬಾಣವಾಗಿ ಕಾಡಬಹುದು. ಸಾಮಾಜಿಕವಾಗಿ, ಧಾರ್ಮಿಕವಾಗಿ, ದಾನ-ಧರ್ಮಾದಿ ಸದ್ವಿನಿಯೋಗದಿಂದ ಹೆಚ್ಚುವ ನೆಮ್ಮದಿ. ಸಂಗಾತಿಯ ಸಹಕಾರದಿಂದ ಕೆಲಸಕಾರ್ಯಗಳು ಯಶಸ್ವಿಯಾಗಲಿವೆ. ಆರೋಗ್ಯ ಚೆನ್ನಾಗಿರಲಿದೆ. ನವಗ್ರಹ ಆರಾಧನೆ ಮಾಡಿ. 

click me!