Daily Horoscope: ಸಿಂಹಕ್ಕಿರಲಿದೆ ಆತ್ಮಶಕ್ತಿ, ಮಕರ ವಂಚನೆಗೊಳಗಾಗುವ ಸಾಧ್ಯತೆ

By Suvarna News  |  First Published Mar 3, 2022, 5:05 AM IST

3 ಮಾರ್ಚ್ 2022, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಷಭಕ್ಕೆ ಸಂಯಮ ಮೀರಬಾರದ ದಿನ


ಮೇಷ(Aries): ಸರ್ಕಾರಿ ವಲಯದ ಕೆಲಸಗಳಲ್ಲಿ ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ಕೆಲಸದಲ್ಲಿ ಕ್ರಿಯಾಶೀಲತೆ ಹೆಚ್ಚಿಸುವತ್ತ ಗಮನ ಹರಿಸಿದರೆ ಲಾಭವಿದೆ. ನಿರುದ್ಯೋಗಿಗಳಿಗೆ ಉದ್ಯಮ ಆರಂಭಿಸಲು ಸಕಾಲ. ಬಡವರಿಗೆ ವಸ್ತ್ರ ದಾನ ಮಾಡಿ. ರಾಮ ಧ್ಯಾನ ಮಾಡಿ. 

ವೃಷಭ(Taurus): ಕೌಟುಂಬಿಕವಾಗಿ ಸಣ್ಣ ಸಣ್ಣ ವಿಚಾರಗಳು ಮನಸ್ಸಿನ ನೆಮ್ಮದಿಗೆಡಿಸಲಿವೆ.  ತಾಳ್ಮೆ- ಸಂಯಮದಿಂದ ಮುಂದುವರಿಯಿರಿ. ಮನಸ್ಸು ಬಿಚ್ಚಿ ಮಾತನಾಡುವುದರಿಂದ ಬಹುಕಾಲದಿಂದ ಮನಸ್ಸನ್ನು ಹದಗೆಡಿಸಿದ್ದ ಸಮಸ್ಯೆಗೆ ಪರಿಹಾರ ಸಿಗಲಿದೆ. ರಾಘವೇಂದ್ರ ಸ್ವಾಮಿಯ ಸ್ಮರಣೆ ಮಾಡಿ.

Tap to resize

Latest Videos

ಮಿಥುನ(Gemini): ಮತ್ತೊಬ್ಬರಿಗೆ ಕೆಡುಕು ಬಯಸ ಹೋಗಬೇಡಿ. ಅದು ತಿರುಗು ಬಾಣವಾದೀತು. ಯಾರೊಂದಿಗೂ ವಿನಾ ಕಾರಣ ವಾದ ಮಾಡಬೇಡಿ. ವಾಹನಗಳ ಚಾಲನೆಯಲ್ಲಿ ಎಚ್ಚರ ಅಗತ್ಯ. ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯಿದೆ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ಕಟಕ(Cancer): ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ. ಆಕಸ್ಮಿಕ ಧನಲಾಭದಿಂದ ಕಾರ್ಯಸಿದ್ಧಿಯಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ರಾಯರ ಸ್ಮರಣೆ ಮಾಡಿ. 

ಸಿಂಹ(Leo): ನೀವೇನೇ ಯೋಚನೆ ಮಾಡಿದರೂ ಅದು ತಾನಾಗಿಯೇ ಸಿದ್ದಿಸುವ ಮೂಲಕ ನಿಮ್ಮ ಆತ್ಮಶಕ್ತಿಯ ಬಗ್ಗೆ ನಿಮಗೇ ಅಚ್ಚರಿಯೆನಿಸುವುದು. ಬಂಧುಮಿತ್ರರ ಸಹಕಾರದಿಂದ ಕಾರ್ಯಗಳು ಮುಂದೆ ಸಾಗುವುವು. ಕುಲದೇವತಾ ಪ್ರಾರ್ಥನೆ ಮಾಡಿ. 

Temples Of India: ದೋಸೆ, ಚಾಕ್ಲೇಟ್, ನೂಡಲ್ಸ್... ಇವೇ ಇಲ್ಲಿ ದೇವರಿಗೆ ನೈವೇದ್ಯ, ಭಕ್ತರಿಗೆ ಪ್ರಸಾದ! ಎಲ್ಲಿ ಅಂದ್ರಾ?

ಕನ್ಯಾ(Virgo): ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಹಲವಾರು ಅವಕಾಶಗಳು ಕಂಡುಬರುತ್ತದೆ. ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ಹೆಚ್ಚುವುದು. ಪಿತ್ರಾರ್ಜಿತ ಆಸ್ತಿಯ ನಿರೀಕ್ಷೆಯಲ್ಲಿದ್ದಲ್ಲಿ ಆ ಸಂಬಂಧ ಶುಭ ಸಮಾಚಾರ ಕೇಳಲಿದ್ದೀರಿ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ತುಲಾ(Libra): ಶೈಕ್ಷಣಿಕ ರಂಗದಲ್ಲಿ, ಪರೀಕ್ಷೆಗಳಲ್ಲಿ ಭಾಗವಹಿಸಿದವರಿಗೆ ಹಾಗೂ ಸಂದರ್ಶನ ಎದುರಿಸಿದವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಕೋಪ ನಿಯಂತ್ರಿಸಿಕೊಳ್ಳಿ. ಹೊಸ ಸಾಹಸಗಳಿಗೆ ಕೈ ಹಾಕುವಿರಿ. ಉದರ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. ಗೋವಿಗೆ ಆಹಾರ ನೀಡಿ. 

ವೃಶ್ಚಿಕ(Scorpio):  ದೊಡ್ಡ ಲಾಭಕ್ಕಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಕೆಲವು ಜನರು ತಪ್ಪು ಮಾಹಿತಿ ನೀಡುವ ಮೂಲಕ ನಿಮ್ಮನ್ನು ದಾರಿ ತಪ್ಪಿಸಲು ಪ್ರಯತ್ನಿಸಬಹುದು. ಅಧಿಕಾರಿ ವರ್ಗಕ್ಕೆ ಸ್ಥಾನ ಬದಲಾವಣೆ ಸಾಧ್ಯತೆ ಇದೆ. ಮನೆದೇವರಿಗೆ ತುಪ್ಪದ ದೀಪ ಹಚ್ಚಿ. 

Capricorn Personality Traits: ಹಟ, ಛಲ, ಮಹತ್ವಾಕಾಂಕ್ಷೆ.. ಇದು ಮಕರ ರಾಶಿಯವರ ಹುಟ್ಟುಗುಣ

ಧನುಸ್ಸು(Sagittarius): ಉದ್ಯೋಗದಲ್ಲಿರುವ ಜನರು ತಮ್ಮ ಬಾಕಿ ಇರುವ ಕೆಲಸವನ್ನು ಕಚೇರಿಯಲ್ಲಿ ಮೊದಲು ಪೂರ್ಣಗೊಳಿಸಿ. ನಿರೀಕ್ಷೆಯನ್ನೇ ಕೈ ಬಿಟ್ಟಿದ್ದ ದೊಡ್ಡ ಮೊತ್ತದ ಸಾಲ ಹಿಂದಿರುಗಿ ಬರಲಿದೆ. ಮಕ್ಕಳ ಪ್ರಗತಿ ಸಂತಸ ತರಲಿದೆ. ಸಂಗಾತಿಯ ಸಂಪೂರ್ಣ ಸಹಕಾರ ಇರಲಿದೆ. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ. 

ಮಕರ(Capricorn): ಪರರಿಂದ ವಂಚನೆಗೆ ಒಳಗಾಗುವ ಸಂಭವಗಳಿವೆ. ಕೆೈ ಕೆಳಗೆ ಕೆಲಸಕ್ಕಿರುವವರಿಂದ ತೊಂದರೆ ಎದುರಾಗಬಹುದು. ಆದಷ್ಟು ಮೈಯ್ಯೆಲ್ಲ ಕಣ್ಣಾಗಿರಿ. ಮಾನ-ಮನಸ್ಸಿಗೆ ಭಂಗ ಉಂಟಾಗಬಹುದು. ಹೊಸ ವ್ಯಕ್ತಿಗಳ ಪರಿಚಯವಾಗಬಹುದು. ರಾಘವೇಂದ್ರ ಶತನಾಮಾವಳಿ ಹೇಳಿ. 

ಕುಂಭ(Aquarius): ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಕೌಟುಂಬಿಕವಾಗಿ ಕಿರಿಕಿರಿಗಳು ತಪ್ಪಲಾರವು. ಉದ್ಯೋಗ ವ್ಯವಹಾರದಲ್ಲಿಯೂ ಸಹ, ಅನೇಕ ರೀತಿಯ ಕೆಲಸಗಳ ಜವಾಬ್ದಾರಿ ನಿಮ್ಮ ಮೇಲೆ ಬೀಳಲಿವೆ. ಆರೋಗ್ಯ ಚೆನ್ನಾಗಿರಲಿದೆ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಮೀನ(Pisces): ರಾಜಕೀಯ ವರ್ಗದವರಿಗೆ ಸ್ಥಾನಮಾನ ಬಲಪಡಿಸುವ ಅವಕಾಶಗಳು ಒದಗಿ ಬರಲಿವೆ. ಮನೆ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಆಶೀರ್ವಾದ ಬಲ ಸಿಗಲಿದೆ. ನೆಂಟರಿಷ್ಟರ ಆಗಮನದಿಂದ ಸಂತಸ, ನಿಮ್ಮ ಶ್ರಮ, ಪ್ರಾಮಾಣಿಕತೆಗೆ ತಕ್ಕ ಫಲ ಪ್ರಾಪ್ತಿಯಾಗುವುದು. ಹಕ್ಕಿಗಳಿಗೆ ಧಾನ್ಯ ನೀಡಿ. 

click me!