Daily Horoscope: ಮೇಷಕ್ಕೆ ತಪ್ಪುವ ಆರೋಗ್ಯ, ಸಿಂಹಕ್ಕೆ ಹೆಚ್ಚುವ ಸವಾಲು

By Suvarna NewsFirst Published Mar 25, 2022, 5:02 AM IST
Highlights

25 ಮಾರ್ಚ್ 2022, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಿಥುನಕ್ಕೆ ನೀವಾಡಿದ ಮಾತು ನಿಮಗೇ ಮುಳುವಾಗುವ ಸಂಭವ

ಮೇಷ(Aries): ನಿಮ್ಮ ಜೀವನಶೈಲಿ ತಪ್ಪಿನಿಂದಾಗಿ ಅನಾರೋಗ್ಯ, ಒತ್ತಡಗಳು ಹೆಚ್ಚಲಿವೆ. ಉತ್ತಮ ಜೀವನಶೈಲಿಗೆ ಹೊರಳಿಕೊಳ್ಳುವತ್ತ ಗಮನ ಹರಿಸಿ. ಅನಗತ್ಯ ಖರ್ಚುಗಳ ಬಗ್ಗೆ ಪರಾಮರ್ಶೆ ಅಗತ್ಯ. ಸರಳ ಜೀವನ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ಮಾಡಿ. ಲಲಿತಾ ಸಹಸ್ರನಾಮ ಪಠಣ ಮಾಡಿ. 

ವೃಷಭ(Taurus): ಪ್ರೇಮ ವೈಫಲ್ಯದಿಂದ ಹೊರ ಬರುವ ದಾರಿಗಳನ್ನು ಕಂಡುಕೊಳ್ಳದಿದ್ದರೆ ವೃತ್ತಿ ಜೀವನವೂ ಹಾಳಾಗುತ್ತದೆ. ಕೂಡಲೇ ಮನಸ್ಸನ್ನು ನಿಗ್ರಹಿಸುವ ದಾರಿಗಳ ಕಡೆ ಗಮನ ಹರಿಸಿ. ಹವ್ಯಾಸಗಳು ನಿಮ್ಮ ಸಹಾಯಕ್ಕೆ ಬರಬಹುದು. ತಾಯಿ ದುರ್ಗಾ ಪರಮೇಶ್ವರಿಯ ಸ್ಮರಣೆ ಮಾಡಿ. 

Latest Videos

ಮಿಥುನ(Gemini): ಮಾತು ಆಡಿದ ಮೇಲೆ ಹೋಯ್ತು, ಮುತ್ತು ಒಡೆದ ಮೇಲೆ ಹೋಯ್ತು ಎಂಬ ಗಾದೆ ಮಾತು ಅನುಭವವಾಗಿ ಅರ್ಥವಾಗಬಹುದು. ನಿಮ್ಮ ನಾಲಿಗೆ ಮೇಲೆ ನಿಯಂತ್ರಣ ಅಗತ್ಯ. ಹೊಸ ವಸ್ತುಗಳ ಖರೀದಿ ನಂತರದಲ್ಲಿ ಅನಗತ್ಯವೆನಿಸುವುದು. ತಾಯಿಯ ಆರೋಗ್ಯದ ಕಡೆ ಗಮನ ಹರಿಸಿ. ಮಹಾಲಕ್ಷ್ಮೀ ಸ್ಮರಣೆ ಮಾಡಿ.

ಕಟಕ(Cancer): ಆಪ್ತರು ನಿಮ್ಮ ಮನಸ್ಸನ್ನು ನೋಯಿಸಲು ಪದೇ ಪದೆ ಯತ್ನಿಸಿ ಬೇಜಾರು ಉಂಟಾಗುವುದು. ಹಣಕಾಸಿನ ವಿಚಾರದಲ್ಲಿ ಕಂಗಾಲಾಗುವ ಸನ್ನಿವೇಶ ಎದುರಾಗುವುದು. ಅನಾರೋಗ್ಯ ಕಾರಣಕ್ಕಾಗಿ ಆಸ್ಪತ್ರೆ ಅಲೆದಾಟ ಹೆಚ್ಚುವುದು. ಯಾರೂ ಸಹಾಯಕ್ಕಿಲ್ಲ ಎಂಬ ಅಸಹಾಯಕತೆ ಕಾಡಲಿದೆ. ದುರ್ಗಾ ಅಷ್ಟೋತ್ತರ ಪಠಣ ಮಾಡಿ. 

ಸಿಂಹ(Leo): ಕಚೇರಿಯಲ್ಲಿ ವಾಗ್ವಾದಗಳಾಗುವುವು. ಹೊಸ ಜವಾಬ್ದಾರಿರ ಹೊರೆ ತಾಳಲಾಗದೆ ಒದ್ದಾಡುವಿರಿ. ಸ್ವಉದ್ದಿಮೆಯಲ್ಲಿ ಕೂಡಾ ಸಾಕಷ್ಟು ಸವಾಲುಗಳು ಎದುರಾಗಲಿವೆ. ಇವೆಲ್ಲ ಅನುಭವ ಪಾಠವಾಗಿಲಿದೆ ಎಂಬ ಆಶಾವಾದದಿಂದ ಮುಂದುವರಿಯಿರಿ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ. 

ಈ ರಾಶಿಯ ಜನ ಹಠಮಾರಿಗಳು, ಅಂದುಕೊಂಡದ್ದನ್ನು ಮಾಡಿಯೇ ತೀರುತ್ತಾರೆ!

ಕನ್ಯಾ(Virgo): ಹಳೆಯ ಸ್ನೇಹಿತರು ಸಿಕ್ಕು ಸಂತಸವಾಗುವುದು. ಪ್ರೇಮ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ವೈವಾಹಿಕ ಜೀವನ ರಸಮಯವಾಗಿರಲಿದೆ. ಉದ್ಯೋಗದಲ್ಲಿ ಕೆಲ ಹಿತವಾದ ಬದಲಾವಣೆಗಳಾಗಬಹುದು. ಶುಭ ದಿನ, ತಾಯಿಯ ಕಾಲಿಗೆ ನಮಸ್ಕರಿಸಿ. 

ತುಲಾ(Libra): ಹಣಕಾಸಿನ ವ್ಯವಹಾರಗಳಲ್ಲಿ ವಂಚನೆ ಸಾಧ್ಯತೆ ಇದೆ. ಆದಷ್ಟು ಜಾಗರೂಕತೆ ವಹಿಸಿ. ನೀವು ಕೊಡಬೇಕಾದವರಿಗೆ ಬೇಗ ಹಣ ಹಿಂದಿರುಗಿಸುವತ್ತ ಗಮನ ಹರಿಸಿ. ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ತಪ್ಪಿದ್ದಲ್ಲ. ಮನೆಯಲ್ಲಿ ಶಾಂತಿ ಕದಡಬಹುದು. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ವೃಶ್ಚಿಕ(Scorpio): ಬದಲಾದ ಹವಾಮಾನ ಕಾರಣದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಲಿವೆ. ಉದ್ಯೋಗದಲ್ಲಿ ಸಣ್ಣಪುಟ್ಟ ತೊಡಕುಗಳು ಎದುರಾಗುವುವು. ಮನೆಯ ಸದಸ್ಯರ ನಡುವಳಿಗೆ ಗೊಂದಲ ಹುಟ್ಟಿಸುವುದು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಮುತ್ತೈದೆಗೆ ಬಾಗೀನ ನೀಡಿ. 

ಮೋದಿ, ಗಾಂಧೀಜಿಯ ಜಾತಕದಲ್ಲಿ Gaja Kesari Yoga!

ಧನುಸ್ಸು(Sagittarius): ಎಲ್ಲ ಕೆಲಸ ಕಾರ್ಯಗಳಿಗೂ ಬಾಳ ಸಂಗಾತಿಯ ಸಂಪೂರ್ಣ ಸಹಕಾರ ಸಿಗಲಿದೆ. ಹೊಸ ವಾಹನ ಖರೀದಿ ಯೋಗವಿದೆ. ಔತಣಕೂಟಗಳಲ್ಲಿ ಭಾಗಿಯಾಗುವಿರಿ. ರೈತರು, ವ್ಯಾಪಾರಿಗಳಿಗೆ ಲಾಭ ಹೆಚ್ಚಿರಲಿದೆ. ಲಲಿತಾ ಸಹಸ್ರನಾಮ ಹೇಳಿಕೊಳ್ಳಿ. 

ಮಕರ(Capricorn): ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕೋರ್ಟ್ ವ್ಯವಹಾರಗಳು, ಬ್ಯಾಂಕ್ ಕೆಲಸಗಳು ಸುಗಮವಾಗಲಿವೆ. ಸಾಲ ಕೊಡುವುದಾಗಲೀ, ಪಡೆಯುವುದಾಗಲೀ ಈ ದಿನ ಬೇಡ. ಹೊಸ ಸಾಹಸಗಳಿಗೆ ಕೈ ಹಾಕಬಹುದು. ಅವಿವಾಹಿತರಿಗೆ ಶುಭ ದಿನ. ಕುಲದೇವರ ಸ್ಮರಣೆ ಮಾಡಿ. 

ಕುಂಭ(Aquarius): ನಿಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ದೊರೆಯುವುದು. ಆತ್ಮವಿಶ್ವಾಸ ಹೆಚ್ಚಲಿದೆ. ಧನಾಗಮದಿಂದ ಸಂತಸವಾಗಲಿದೆ. ಉಳಿತಾಯದ ಬಗ್ಗೆ ಯೋಚಿಸುವಿರಿ. ಹೊಸ ಮನೆ ಖರೀದಿ ಕೆಲಸ ಮುಂದುವಿರಿದು ಸಂತೋಷ ತರಲಿದೆ. ಮಕ್ಕಳ ಆರೋಗ್ಯ ಸಮಸ್ಯೆಗಳು ನೀಗುವುದು. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ.

ಮೀನ(Pisces): ಚಿನ್ನ, ಬೆಳ್ಳಿ ಖರೀದಿಗೆ ಶುಭ ದಿನ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯಿಂದ ಸಂತಸವಾಗಲಿದೆ. ದೂರ ಪ್ರಯಾಣ ಯೋಗವಿದೆ. ಗೆಳೆಯರೊಂದಿಗೆ ಸಮಯ ಕಳೆಯುವಿರಿ. ಆರೋಗ್ಯ ಸ್ಥಿರವಾಗಿರುತ್ತದೆ. ಹೊಸ ಹುಮ್ಮಸ್ಸು ಸಿಗಲಿದೆ. ದುರ್ಗಾ ಅಷ್ಟೋತ್ತರ ಪಠಣ ಮಾಡಿ. 

click me!