Daily Horoscope: ಮೇಷಕ್ಕೆ ಹತಾಶೆ, ಮಕರಕ್ಕೆ ವೃತ್ತಿ ಸಂಬಂಧಿ ಬದಲಾವಣೆ

By Suvarna News  |  First Published Mar 23, 2022, 5:00 AM IST

23 ಮಾರ್ಚ್ 2022, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕನ್ಯಾ ರಾಶಿಗೆ ವೃತ್ತಿಯಲ್ಲಿ ಹೊಸ ಸವಾಲು


ಮೇಷ(Aries): ದಾಂಪತ್ಯದಲ್ಲಿ ವಿರಹ ಹೆಚ್ಚಲಿದೆ. ತೊಂದರೆಗಳು ಬಾಧಿಸಲಿವೆ, ಹತಾಶೆ, ಅಯಾಸದ ದಿನವಾಗಿದ್ದು, ಬದುಕಿನ ಬಗ್ಗೆ ಜಿಜ್ಞಾಸೆ ಮೂಡುವುದು. ಉದ್ಯೋಗದಲ್ಲಿ ನಿರೀಕ್ಷೆಯಷ್ಟು ಯಶ ದಕ್ಕದೆ ಹೋಗುವುದು. ಮನೆ ದೇವರ ಸ್ಮರಣೆ ಮಾಡಿ. 

ವೃಷಭ(Taurus): ಮನೆಯಲ್ಲಿ ನೆಮ್ಮದಿ ಹೆಚ್ಚಲಿದೆ. ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುವಿರಿ. ತಂದೆ ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದು ಸಮಾಧಾನವಾಗುವುದು. ವ್ಯಾಪಾರದಲ್ಲಿ ಅಲ್ಪ ಲಾಭ, ಉದ್ಯೋಗದಲ್ಲಿ ಶುಭ ದಿನ. ಪಕ್ಷಿಗಳಿಗೆ ಧಾನ್ಯ, ನೀರು ನೀಡಿ. 

Tap to resize

Latest Videos

ಮಿಥುನ(Gemini): ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಕಡಿಮೆ ಆಗಲು ನೀವು ಕೂಡಾ ಹೆಚ್ಚಿನ ಪ್ರಯತ್ನ ಹಾಕುವ ಅಗತ್ಯವಿದೆ. ನೀವು ಊಹಿಸದ ರೀತಿಯಲ್ಲಿ ಸಹೋದ್ಯೋಗಿಗಳು ನಿಮ್ಮ ವಿರುದ್ಧ ತಿರುಗಿ ಬಿದ್ದು ನಿಮ್ಮ ಮೇಲೆ ವೃಥಾರೋಪ ಹೊರಿಸಬಹುದು. ಸಂಧಾನ ಚತುರರಾಗಿರುವ ನೀವು ಅದನ್ನು ಸಮರ್ಥವಾಗಿ ಎದುರಿಸುವಿರಿ. ಗಣಪತಿಗೆ ಕಡಲೆ ನೈವೇದ್ಯ ಮಾಡಿ. 

ಕಟಕ(Cancer): ಉದ್ಯೋಗದಲ್ಲಿ ಮೆಚ್ಚುಗೆ ಕೇಳಿ ಬಂದು ಉತ್ಸಾಹ ಹೆಚ್ಚುವುದು. ಮಾತುಕತೆಯ ಮೂಲಕ ಬಂಧುಗಳೊಡನೆ ಸಂಬಂಧ ಗಟ್ಟಿಗೊಳ್ಳುವುದು. ಹೂಡಿಕೆಗೆ ಶುಭ ದಿನ. ಆರೋಗ್ಯ ಸ್ಥಿರವಾಗಿರಲಿದೆ. ಬೇಡದ ವಿಷಯಗಳಲ್ಲಿ ಮೂಗು ತೂರಿಸಬೇಡಿ. ಮೃತ್ಯುಂಜಯ ಪ್ರಾರ್ಥನೆ ಮಾಡಿ.

Food remedies: ಜಾತಕದ ದುರ್ಬಲ ಗ್ರಹಕ್ಕೆ ಬಲ ತುಂಬಲು ಈ ಆಹಾರ ಸೇವಿಸಿ

ಸಿಂಹ(Leo): ಆದಾಯ ಮೂಲಗಳು ಹೆಚ್ಚಾಗುವವು. ಖರ್ಚು ವೆಚ್ಚಗಳಿಗೆ ಸರಿಯಾದ ಲೆಕ್ಕವಿಡುವ ಅಭ್ಯಾಸ ಒಳ್ಳೆಯದು. ಆಸ್ತಿ ಪಾಲು ಕುರಿತು ಚರ್ಚೆಯಾಗಬಹುದು. ಕುಟುಂಬದಲ್ಲಿ ಒಗ್ಗಟ್ಟು ಮೂಡಲಿದೆ. ಪತ್ನಿಯ ಆರೋಗ್ಯ ಸುಧಾರಣೆಯಿಂದ ನೆಮ್ಮದಿ ಎನಿಸುವುದು. ಹಿಡಿದ ಕೆಲಸ ಕೈಗೂಡಲು ನವಗ್ರಹ ಆರಾಧನೆ ಮಾಡಿ.

ಕನ್ಯಾ(Virgo): ವೃತ್ತಿಯಲ್ಲಿ ಹೊಸ ಹೊಸ ಸವಾಲು, ಸಮಸ್ಯೆಗಳು ಎದುರಾಗುವವು. ನಿಮ್ಮ ನಿಲುವನ್ನು ಯಾವುದೇ ಕಾರಣಕ್ಕೂ ಬದಲಾಯಿಸಬೇಡಿ. ಆತ್ಮವಿಶ್ವಾಸದಿಂದ ಎದುರಿಸಿ. ಆರೋಗ್ಯ ಸಮಸ್ಯೆಗಳು ಕಂಗೆಡಿಸಲಿವೆ. ಪೋಷಕರೊಂದಿಗೆ ವಾಗ್ವಾದ ಬೇಡ. ಗಣಪತಿ ಸ್ಮರಣೆ ಮಾಡಿ. 

ತುಲಾ(Libra): ಆರ್ಥಿಕವಾಗಿ ಸದೃಢ ದಿನವಾಗಿದೆ. ನಿಮ್ಮ ಹಣಕಾಸಿನ ವ್ಯವಸ್ಥೆ ಸುಭದ್ರವಾಗಿರುವುದು. ವೃತ್ತಿಯಲ್ಲಿ ಅತ್ಯಂತ ಉನ್ನತ ಸ್ಥಾನಮಾನಕ್ಕೆ ಏರುವಿರಿ. ಸಾಮಾಜಿಕ ಚಟುವಟಿಕೆಯಲ್ಲಿ ಒಳ್ಳೆಯ ಹೆಸರು ಸಿಗಲಿದೆ. ಅವಿವಾಹಿತರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಗಣಪತಿ ದೇವಾಲಯಕ್ಕೆ ಭೇಟಿ ನೀಡಿ. 

ವೃಶ್ಚಿಕ(Scorpio): ಮಗನಿಂದ ಸಿಹಿ ಸುದ್ದಿ ಕೇಳುವಿರಿ. ಸಣ್ಣ ಪುಟ್ಟ ವಿಷಯಗಳಿಗೆ ಮನಸ್ತಾಪ ಉಂಟಾಗುವ ಸಂಭವವಿದೆ. ಆದಷ್ಟು ಮನಸ್ಸು ಕೆಡಿಸಿಕೊಳ್ಳದೆ ಶಾಂತಚಿತ್ತರಾಗಿ ಸಂದರ್ಭಗಳನ್ನು ಎದುರಿಸಿ. ಚರ್ಮ ಸಮಸ್ಯೆಗಳು ಕಾಡಬಹುದು. ಕುಲದೇವರ ಆರಾಧನೆ ಮಾಡಿ. 

ಈ ವಸ್ತುಗಳು ಮನೆಯಲ್ಲಿದ್ದರೆ ವಿನಾಶ ಖಂಡಿತಾ! ಕೂಡಲೇ ಹೊರ ಹಾಕಿ..

ಧನುಸ್ಸು(Sagittarius): ನಿಮ್ಮ ತಾಳ್ಮೆಯನ್ನು ಇತರರು ತಪ್ಪಾಗಿ ಅರ್ಥೈಸಿಕೊಳ್ಳುವರು. ಆದರೆ ಕೆಲಸ ಕಾರ್ಯಗಳಲ್ಲಿನ ನಿಮ್ಮ ತನ್ಮಯತೆ ಹೆಚ್ಚಿನ ಗೌರವ ತರುವುದು. ಪ್ರೀತಿ ಪಾತ್ರ ವ್ಯಕ್ತಿಗಳಿಂದ ಸಂತೋಷದ ಸಮಾಚಾರ ಕಿವಿಗೆ ಬೀಳುವುದು. ಮನಃಶಾಂತಿಗಾಗಿ ಕುಲದೇವರನ್ನು ಪ್ರಾರ್ಥಿಸಿ. 

ಮಕರ(Capricorn): ಈ ರಾಶಿಯ ಕೆಲವರಿಗೆ ಬಹುಮಾನ ರೂಪದಲ್ಲಿ ಪ್ರವಾಸ ಕೈಕೊಳ್ಳುವ ಅವಕಾಶ ಬರುವುದು. ಕಚೇರಿಯಲ್ಲಿ ಒಂದಷ್ಟು ಒಳ್ಳೆಯ ಬದಲಾವಣೆಗಳು ಆಗುವವು. ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಿ. ಗಣಪತಿಗೆ ದೂರ್ವೆ ಅರ್ಪಿಸಿ. 

ಕುಂಭ(Aquarius): ನಿಮ್ಮ ಸಮಸ್ಯೆಗಳಿಗೆ ಸಂಗಾತಿ ಇಲ್ಲವೇ ಇನ್ನಾವುದೇ ಆತ್ಮೀಯರಿಂದ ಉತ್ತಮ ಸಲಹೆ ಸಿಗುವುದು. ಖಾಸಗಿ ಕಂಪನಿ ನೌಕರರಿಗೆ ಸಂತಸದ ಸುದ್ದಿ ದೊರೆಯುವುದು. ತಾಯಿ ಕಡೆಯಿಂದ ಆರ್ಥಿಕ ನೆರವು ಸಿಗಲಿದೆ. ಜ್ವರ, ಮೈ ಕೈ ನೋವು, ಶೀತದಂಥ ಸಮಸ್ಯೆಗಳು ಬಾಧಿಸುವುವು. ಪ್ರಥಮ ಪೂಜಿತನ ಆರಾಧನೆ ಮಾಡಿ. 

ಮೀನ(Pisces): ಬಹಳ ದಿನಗಳಿಂದ ಆಮೆ ವೇಗದಲ್ಲಿ ಸಾಗುತ್ತಿದ್ದ ಕೆಲಸಗಳು ವೇಗ ಹೆಚ್ಚಿಸಿಕೊಳ್ಳುವವು. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಬರುವುದು. ಸ್ವ ಉದ್ಯಮವು ಲಾಭದಾಯಕವಾಗಲಿದೆ. ವೈವಾಹಿಕ ಜೀವನದಲ್ಲಿ ತೊಂದರೆಗಳು ಎದುರಾಗುವುದು. ಗಣಪತಿ ಸ್ಮರಣೆ ಮಾಡಿ. 

click me!