Daily Horoscope: ವೃಶ್ಚಿಕಕ್ಕೆ ಆಸ್ತಿ ಖರೀದಿಗೆ ಸುದಿನ, ಇತರ ರಾಶಿಗೆ ಹೇಗಿದೆ ದಿನ?

Published : Mar 20, 2022, 07:36 AM IST
Daily Horoscope: ವೃಶ್ಚಿಕಕ್ಕೆ ಆಸ್ತಿ ಖರೀದಿಗೆ ಸುದಿನ, ಇತರ ರಾಶಿಗೆ ಹೇಗಿದೆ ದಿನ?

ಸಾರಾಂಶ

20 ಮಾರ್ಚ್ 2022, ಭಾನುವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಭವಿಷ್ಯ ಬದಲಾಗುವ ಸುಸಂದರ್ಭ ಕನ್ಯಾ ರಾಶಿಗೆ

ಮೇಷ(Aries): ನೀವು ಕೈ ಹಾಕಿದ ಕೆಲಸ ಕೈಗೂಡಲಿಲ್ಲವೆಂದ ಮಾತ್ರಕ್ಕೆ ಅದೃಷ್ಟ ಕೈ ಕೊಟ್ಟಿತು ಎಂದುಕೊಳ್ಳಬೇಡಿ. ಪ್ರಯತ್ನ ತಪ್ಪಾಗಿರಬಹುದು ಎಂದು ಭಾವಿಸಿ. ಅವಿವಾಹಿತರಿಗೆ ಸಂಬಂಧ ಅರಸಿ ಬರಲಿದೆ. ಬೇಡದ ವಾಗ್ವಾದಗಳಿಂದ ಮನಸ್ಸು ಹಾಳು. ಸೂರ್ಯನಿಗೆ ಅರ್ಘ್ಯ ಬಿಡಿ. 

ವೃಷಭ(Taurus): ಕೆಲಸ ಕಾರ್ಯಗಳೇನೇ ಇರಲಿ, ಸ್ನೇಹಿತರು, ಸಹೋದರರ ಸಹಕಾರ ಸಿಗಲಿದೆ. ಪ್ರೇಮ ವ್ಯವಹಾರಗಳಿಗೆ ಕೂಡಾ ಸ್ನೇಹಿತರ ಸಹಕಾರ ಸಿಗಲಿದೆ. ಪಿತ್ರಾರ್ಜಿತ ಆಸ್ತಿ ಸಂಬಂಧ ಧನಾತ್ಮಕ ಬೆಳವಣಿಗೆಗಳು ಕಂಡುಬರಲಿವೆ. ವಿಷ್ಣು ಸಹಸ್ರನಾಮ ಪಠಿಸಿ. 

ಮಿಥುನ(Gemini): ಆರೋಗ್ಯದಲ್ಲಿ ಶೀತ, ಕೆಮ್ಮು, ಗಂಟಲ ಕಿರಿಕಿರಿ ಕಂಡು ಬರಬಹುದು. ಮನೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗುವಿರಿ. ಬೇಡದ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ. ಅವುಗಳು ವಾಸ್ತು ದೋಷ ತರುತ್ತಿರಬಹುದು. ಹೊರಗೆ ಸುತ್ತಾಡುವ ಅವಕಾಶವಿದೆ. ಆದಿತ್ಯ ಹೃದಯ ಪಠಣ ಮಾಡಿ. 

ಕಟಕ(Cancer): ಪೂರೈಕೆಯಾಗದ ಕೆಲಸಗಳ ಬಗ್ಗೆ ಚಿಂತೆ ಬೇಡ. ಗಡುವು ವಿಸ್ತರಣೆಯಾಗಲಿದೆ. ಸಾಮಾಜಿಕ ಕೆಲಸಗಳಲ್ಲಿ ತೊಡಗಿದವರಿಗೆ ಸಂತಸ ಹೆಚ್ಚಲಿದೆ. ರೈತರು, ಸಣ್ಣ ವ್ಯಾಪಾರಿಗಳಿಗೆ ಆದಾಯ ಹೆಚ್ಚಲಿದೆ. ಧೀರ್ಘ ಕಾಲೀನ ಆರೋಗ್ಯ ಸಮಸ್ಯೆಗಳು ಬಾಧಿಸುವುವು. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಸಿಂಹ(Leo): ಇಂದು ಉದಾಸೀನದಲ್ಲಿ ದಿನ ಕಳೆಯುವಿರಿ. ಮಾಡಬೇಕಾದ ಕೆಲಸಗಳು ಸಾಕಷ್ಟಿದ್ದರೂ ಯಾವುದೂ ಮಾಡದೆ ಕಳೆದು ದಿನಾಂತ್ಯದಲ್ಲಿ ಪಶ್ಚಾತ್ತಾಪ ಅನುಭವಿಸುವಿರಿ. ಗೆಳೆಯರಿಂದ ಸಂತಸ ಇರಲಿದೆ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಜೀವನಶೈಲಿ ಉತ್ತಮ ಪಡಿಸಿಕೊಳ್ಳುವ ಬಗ್ಗೆ ಗಮನ ಹರಿಸಿ. ಗೋ ಗ್ರಾಸ ನೀಡಿ. 

Manikarnika Ghat: ಇಲ್ಲಿ ಬಣ್ಣಗಳಿಂದಲ್ಲ, ಚಿತಾಭಸ್ಮದಿಂದ ಆಡುತ್ತಾರೆ ಹೋಳಿ!

ಕನ್ಯಾ(Virgo): ನಿಮ್ಮ ಭವಿಷ್ಯ ಬದಲಾಗುವಂಥ ಘಟನೆಗಳು, ನಿರ್ಧಾರಗಳು ಇಂದು ಆಗಬಹುದು. ಯುವಕರಲ್ಲಿ ಉತ್ಸಾಹ ಹೆಚ್ಚಲಿದೆ. ವ್ಯಾಪಾರಿಗಳಿಗೆ ಉತ್ತಮ ಆದಾಯವಿದೆ. ಉದ್ಯೋಗಿಗಳಿಗೆ ದೇಹ, ಮನಸ್ಸಿಗೆ ಕೊಂಚ ಬಿಡುವು ದೊರೆತು ನಿರಾಳವೆನಿಸುವುದು. ಗೃಹ ಕೆಲಸಗಳಲ್ಲಿ ಭಾಗವಹಿಸುವಿರಿ. ಸೂರ್ಯ ದೇವನನ್ನು ಸ್ಮರಿಸಿ. 

ತುಲಾ(Libra): ಸಣ್ಣಪುಟ್ಟ ಪ್ರವಾಸದಿಂದ ಸಂತೋಷ, ಧಾರ್ಮಿಕ ಕೆಲಸಕಾರ್ಯಗಳಲ್ಲಿ ಭಾಗಿಯಾಗುವಿರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆವ ಸೂಚನೆಗಳು ಸಿಗಲಿವೆ. ಹೊಸಬರ ಭೇಟಿ ಲಾಭದಾಯಕವಾಗುವುದು. ಹವ್ಯಾಸಗಳು ಮನಸ್ಸಿಗೆ ಮುದ ತರಲಿವೆ. ಹಳದಿ ಹಾಗೂ ಬಿಳಿಯ ಧಾನ್ಯಗಳನ್ನು ದಾನ ಮಾಡಿ.

ವೃಶ್ಚಿಕ(Scorpio): ಆಸ್ತಿ ಖರೀದಿಗೆ ಸುದಿನ. ಗೆಳೆಯರು, ನೆಂಟರಿಷ್ಟರಲ್ಲಿ ನಿಮ್ಮ ಬಗ್ಗೆ ಉಂಟಾಗಿರುವ ತಪ್ಪು ತಿಳಿವಳಿಕೆಗಳು, ಗೊಂದಲಗಳು ನಿವಾರಣೆಯಾಗಿ ಮನಸ್ಸು ಹಗುರಾಗುವುದು. ಹೊಸ ಹವ್ಯಾಸದಿಂದ ಸಂತಸ. ತಾಯಿಯ ಸಹಕಾರದಿಂದ ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ. 

ಧನುಸ್ಸು(Sagittarius): ವಿಶ್ರಾಂತಿ ಸಿಗಲಿದೆ. ಪೋಷಕರ ಅನಾರೋಗ್ಯ ಕಂಗೆಡಿಸಬಹುದು. ದೂರ ಪ್ರಯಾಣಗಳು ಉತ್ತಮ ಅನುಭವಗಳನ್ನು ನೀಡಲಿವೆ. ನಿರುದ್ಯೋಗಿಗಳು ಹೊಸ ಕೌಶಲ್ಯಗಳ ಕಲಿಕೆಯತ್ತ ಗಮನ ಹರಿಸಿ. ಮನೆಯ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಆದಿತ್ಯ ಹೃದಯ ಪಠಿಸಿ. 

Vermilion Remedies: ಹಣಕಾಸಿನ ಸಮಸ್ಯೆಗೆ ಕುಂಕುಮದ ಪರಿಹಾರ

ಮಕರ(Capricorn): ದೇಹಕ್ಕೆ ವೈದ್ಯಕೀಯ ಆರೈಕೆ ಬೇಕಾಗಬಹುದು. ಮನಸ್ಸಿನ ಹಳೆಯ ಗಾಯಗಳನ್ನು ಕೆದಕಿ ಮತ್ತಷ್ಟು ನೋವು ಅನುಭವಿಸುವಿರಿ. ಮಕ್ಕಳಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ. ಆಸ್ತಿ ವ್ಯವಹಾರಗಳು ಲಾಭ ತರಲಿವೆ. ಮನೆಯ ಸ್ಥಳಾಂತರ ಕಾರ್ಯ ನಡೆಯಬಹುದು. ಕುಲದೇವರಿಗೆ ತುಪ್ಪದ ದೀಪ ಹಚ್ಚಿ. 

ಕುಂಭ(Aquarius): ಹೊಸ ವಸ್ತುಗಳ ಖರೀದಿಯಿಂದ ಸಂತಸ. ಉದ್ಯೋಗದ ವಿಷಯದಲ್ಲಿ ಅಸ್ಥಿರತೆ ಕಾಡಲಿದೆ. ಮನೋರಂಜನೆಗಾಗಿ ವ್ಯಯಿಸುವಿರಿ. ಹಳೆ ಸ್ನೇಹಿತರಿಂದ ಅಚ್ಚರಿ ಕಾದಿದೆ. ನಿಮ್ಮ ಒಳ್ಳೆಯ ಮನಸ್ಸಿನ ಕೆಲಸಗಳಿಗೆ ಉತ್ತಮ ಫಲ ದೊರೆಯಲಿದೆ. ಮನೆದೇವರನ್ನು ಸ್ಮರಿಸಿ. 

ಮೀನ(Pisces): ಪ್ರೇಮಿಗಳಿಗೆ ಸಂತಸದ ದಿನ. ವಿವಾಹಿತರು ಸಂಗಾತಿಯೊಂದಿಗೆ ತಿರುಗಾಟ ಮಾಡುವರು. ಸವಿ ಮಾತುಗಳು ದಾಂಪತ್ಯ ಜೀವನದ ಸಿಹಿ ಹೆಚ್ಚಿಸಲಿವೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕತೆ ಅಗತ್ಯ. ಅಪರಿಚಿತರ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆಯಿಂದ ಮುಂದುವರಿಯಿರಿ. ಸೂರ್ಯನಿಗೆ ಅರ್ಘ್ಯ ಬಿಡಿ. 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ