Daily Horoscope: ಮಹಾ ಶಿವರಾತ್ರಿಯಂದು ನಿಮ್ಮ ರಾಶಿ ಭವಿಷ್ಯ ಹೇಗಿವೆ?

By Suvarna NewsFirst Published Mar 1, 2022, 5:14 AM IST
Highlights

1 ಮಾರ್ಚ್ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕಾಯಕವೇ ಕೈಲಾಸ ಎಂದವರಿಗೆ ಸಮೃದ್ಧಿ

ಮೇಷ(Aries): ಇಂದು ನಿಮ್ಮ ಕಾಯಕವೇ ಕೈಲಾಸ ಎಂಬ ನಂಬಿಕೆಗೆ ಪುಷ್ಠಿ ದೊರೆಯುವುದು. ನಿಮ್ಮ ಪರಿಶ್ರಮಕ್ಕೆ ಅಪಾರ ಮೆಚ್ಚುಗೆ ಸಿಗುವುದು. ಉದ್ಯೋಗ, ವ್ಯಾಪಾರ, ಉದ್ಯಮ, ಕೃಷಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಿರುವಿರಿ. ನಿಮ್ಮ ಕೆಲಸಕ್ಕೆ ಸಂಗಾತಿಯ ಸಾಥ್ ಸಿಗುವುದು. ಶಿವಧ್ಯಾನ ಮಾಡಿ. 

ವೃಷಭ(Taurus): ಮತ್ತೊಬ್ಬರನ್ನು ಮೆಚ್ಚಿಸಲು ವಿನಾ ಕಾರಣ ಮಾತನಾಡಬೇಡಿ. ನಿಜವೇನೋ ಅಷ್ಟನ್ನೇ ಮಾತನಾಡಿ. ಮಗುವಿಗೆ ಅನಾರೋಗ್ಯ ಕಾಡಿ ಕಂಗಾಲಾಗುವಿರಿ. ಉದ್ಯೋಗದಲ್ಲಿ ಮೇಲಧಿಕಾರಿಗಳು ನಿಮ್ಮನ್ನು ಪ್ರಶ್ನಿಸಿ ಬೆವರಿಳಿಸಬಹುದು. ನಿಮ್ಮ ತಪ್ಪಿಲ್ಲದಿದ್ದರೂ ಸರಿಯಾದ ಉತ್ತರ ಕೊಡಲಾಗದೆ ಪೇಚಾಡಬಹುದು. ಆಂಜನೇಯ ಸ್ಮರಣೆ ಮಾಡಿ. 

Latest Videos

ಮಿಥುನ(Gemini): ಆಸ್ತಿ ಖರೀದಿ ಇಲ್ಲವೇ ಮಾರಾಟ ಕೆಲಸಕ್ಕೆ ಶುಭ ದಿನ. ಆಭರಣ ಖರೀದಿಸಲಿರುವಿರಿ. ಧಾರ್ಮಿಕ ವಿಚಾರಗಳಲ್ಲಿ ಮನಸ್ಸು ತೊಡಗಲಿದೆ. ಧಾರ್ಮಿಕ ಪ್ರವಾಸ ನಡೆಸಬಹುದು. ನೆಂಟರಿಷ್ಟರ ಭೇಟಿಯಿಂದ ಸಂತಸ ಹೆಚ್ಚುವುದು. ಶಿವನಿಗೆ ಬಿಲ್ವಪತ್ರೆ ಅರ್ಪಿಸಿ. 

ಕಟಕ(Cancer): ಮನೆಯಲ್ಲಿ ಶುಭ ಕಾರ್ಯಗಳು, ಪೂಜೆ, ವ್ರತ ಕತೆಗಳು ನಡೆದು ಮನಸ್ಸು ಪ್ರಫುಲ್ಲಿತವಾಗುವುದು. ಸ್ತ್ರೀಯರು ಉತ್ಸಾಹದಿಂದ ಹಬ್ಬಾಚರಣೆಯಲ್ಲಿ ತೊಡಗುವರು. ಹಿಂದಿನಿಂದ ಮಾತನಾಡುವವರ ಬಗ್ಗೆ, ಹಲ್ಲು ಮಸೆಯುವವರ ಬಗ್ಗೆ ಎಚ್ಚರಿಕೆ ಅಗತ್ಯ. ಹತ್ತಿರದ ಶಿವ ದೇವಾಲಯಕ್ಕೆ ಭೇಟಿ ನೀಡಿ. 

ಸಿಂಹ(Leo): ದೊಡ್ಡದೊಂದು ನಿರ್ಧಾರ ತೆಗೆದುಕೊಳ್ಳುವಿರಿ. ಮನೆಯಲ್ಲಿ ಮದುವೆ ಮಾತುಕತೆ ನಡೆಯಲಿದೆ. ಹಣಕಾಸಿನ ವಿಚಾರದಲ್ಲಿ ಸಂಗಾತಿಯ ಸಹಕಾರ ದೊರಕಲಿದೆ. ಮಕ್ಕಳ ವಿಚಾರದಲ್ಲಿ ಗೊಂದಲ ಕಾಡುವುದು. ಸಂಗಾತಿಯೊಂದಿಗೆ ಮನ ಬಿಚ್ಚಿ ಮಾತನಾಡಿ. ಶಿವ ನಾಮ ಜಪ ಮಾಡಿ.

Mahashivratri 2022: ಶಿವನಿಗೆ ಇಷ್ಟದ ವಸ್ತುಗಳನ್ನು ಅರ್ಪಿಸಿ, ನಿಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಿ

ಕನ್ಯಾ(Virgo): ಇಟ್ಟ ಹೆಜ್ಜೆ ಹಿಂದಿಡಬೇಡಿ. ಸಂಬಂಧಗಳ ಮಧ್ಯೆ ಏರ್ಪಟ್ಟಿರುವ ಅಂತರ ಕಡಿಮೆಯಾಗಿ ಸಮಾಧಾನವಾಗುವುದು. ನಿದ್ರೆಯ ಕೊರತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗದಂತೆ ಎಚ್ಚರ ವಹಿಸಿ. ದೂರದ ಸಂಬಂಧಿಕರಿಂದ ಸಹಾಯ ದೊರಕುವುದು. ಕೆಲಸದಲ್ಲಿ ಶ್ರದ್ಧೆ ಇದ್ದರೆ ಲಾಭ ಇರುವುದು. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ. 

ತುಲಾ(Libra): ಕೆಲವೊಮ್ಮೆ ಸೋಲುವುದರಂತೆ ತೋರುವುದರಲ್ಲೇ ಗೆಲುವಿದೆ ಎಂಬುದನ್ನು ಅರಿತುಕೊಳ್ಳಿ. ಆಪ್ತರ ವಿಷಯದಲ್ಲಿ ಸೋತು ನೋಡಿ. ಮರುಕ್ಷಣದಲ್ಲೇ ಗೆಲುವು ನಿಮ್ಮದಾಗಿರುತ್ತದೆ. ಕೆಲಸದ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಯಾಗುವುದು. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ವೃಶ್ಚಿಕ(Scorpio): ಇದೀಗ ಕೊಂಚ ಸರಿಯಾದ ಹಾದಿಯಲ್ಲಿದ್ದೀರಿ. ಇನ್ನೂ ಸುಧಾರಣೆ ಅಗತ್ಯವಿದೆ. ಸಂಬಂಧಿಕರ ನೆರವಿನಿಂದ ಬಹುಕಾಲದ ಆತಂಕ ನಿವಾರಣೆಯಾಗುವುದು. ಧನ ಸಮೃದ್ಧಿಯಿಂದ ಸಂತೋಷ. ಸಂತಾನಾಪೇಕ್ಷಿ ದಂಪತಿಗೆ ಸಿಹಿ ಸುದ್ದಿ ಸಿಗಲಿದೆ. ಶಿವ ದೇವಾಲಯಕ್ಕೆ ಭೇಟಿ ನೀಡಿ. 

ಧನುಸ್ಸು(Sagittarius): ತಂದೆಯ ಬೆಂಬಲದಿಂದ ಆಸ್ತಿವ್ಯಾಜ್ಯಗಳು ಮಾತುಕತೆಯಲ್ಲೇ ಇತ್ಯರ್ಥ. ನಿಮ್ಮ ಉದ್ಯೋಗ, ವ್ಯಕ್ತಿತ್ವ ವಿಕಸನದ ಕಡೆ ಹೆಚ್ಚಿನ ಯೋಚನೆ ಹರಿಸಿ. ದೈವ ಬಲವಿರಲಿದೆ. ಕಾರ್ಯ ನಿಮಿತ್ತ ತಿರುಗಾಟಗಳಿರಬಹುದು. ಕುಟುಂಬದವರೊಡನೆ ಸಮಯ ಕಳೆಯುವಿರಿ. ಶಿವರಾತ್ರಿಯ ಭಜನೆಯಲ್ಲಿ ಪಾಲ್ಗೊಳ್ಳಿ. 

ಮಕರ(Capricorn): ಕಚೇರಿಯಲ್ಲಿ ಕೆಲಸ ವಿಪರೀತವಾಗಿ ಆಯಾಸವಾಗುವುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರ ನಡುವೆ ಗೊಂದಲಗಳು ಕಾಣಿಸಬಹುದು. ಧೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಪಥ್ಯ ತಪ್ಪಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಬಡವರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡಿ. 

Mahashivratri 2022: ಶಿವ ಪೂಜೆಯ ವಿಷಯದಲ್ಲಿ ನೆನಪಿಟ್ಟುಕೊಳ್ಳಲೇಬೇಕಾದ 18 ನಿಯಮಗಳಿವು..

ಕುಂಭ(Aquarius): ಬೆಳ್ಳಿ ಬಂಗಾರದ ಖರೀದಿಗಾಗಿ ಧನವ್ಯಯ ಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಕಷ್ಟವೊಂದು ಸಲೀಸಾಗಿ ಕರಗಿ ಹೋಗಲಿದೆ. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಹೊಸ ಉದ್ಯಮ ಆರಂಭಿಸಲು ಕಾಲ ಸರಿಯಾಗಿದೆ. ಶಿವ ಧ್ಯಾನ ಮಾಡಿ. 

ಮೀನ(Pisces): ವರ್ಗಾವಣೆ ಬಯಸುವವರಿಗೆ ಫಲ ಸಂಭಾವ್ಯತೆ.  ಬಿಡುವಿಲ್ಲದ ದುಡಿಮೆಯಾದರೂ ಧನಲಾಭದಿಂದ ಸಂತೃಪ್ತಿ. ವಿವಾಹಾದಿ ಯತ್ನಕ್ಕೆ ಫಲ ಸಿಗಲಿದೆ. ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಒಮ್ಮೆ ತಪಾಸಣೆ ಮಾಡಿಸಿ. ಶಿವ- ಪಾರ್ವತಿಯ ಸ್ಮರಣೆ ಮಾಡಿ. 

click me!