Daily Horoscope: ಮಿಥುನಕ್ಕೆ ಸಂಗಾತಿಯೊಂದಿಗೆ ವಿರಸ, ಕನ್ಯಾ ರಾಶಿಗೆ ಹೆಚ್ಚುವ ಆತ್ಮವಿಶ್ವಾಸ

Published : Feb 28, 2022, 05:05 AM IST
Daily Horoscope: ಮಿಥುನಕ್ಕೆ ಸಂಗಾತಿಯೊಂದಿಗೆ ವಿರಸ, ಕನ್ಯಾ ರಾಶಿಗೆ ಹೆಚ್ಚುವ ಆತ್ಮವಿಶ್ವಾಸ

ಸಾರಾಂಶ

28 ಫೆಬ್ರವರಿ 2022, ಸೋಮವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮೇಷಕ್ಕೆ ಉದ್ಯೋಗದಲ್ಲಿ ಭಡ್ತಿ

ಮೇಷ(Aries): ನಿಮ್ಮ ಸ್ಥಾನದಲ್ಲಿ ಬದಲಾವಣೆಯಾಗಿ ಉದ್ಯೋಗದಲ್ಲಿ ಉತ್ತಮ ಅಭಿವೃದ್ಧಿ ಪಡೆಯುವಿರಿ. ನೀವಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಂಬಳ ಹೆಚ್ಚಳ ಸಿಗಲಿದೆ. ಅಧ್ಯಯನ ವಿಷಯದಲ್ಲಿ ವಿದ್ಯಾರ್ಥಿಗಳು ಶ್ರಮ ಹಾಕಲಿದ್ದಾರೆ. ವೈವಾಹಿಕ ಜೀವನ ಸಾಮಾನ್ಯವಾಗಿರುತ್ತದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ವೃಷಭ(Taurus): ಸ್ವಂತ ಉದ್ಯೋಗ ಮಾಡುವವರಿಗೆ ಅಭಿವೃದ್ಧಿ ಇದೆ. ಸರ್ಕಾರಿ ಉದ್ಯೋಗಿಗಳಿಗೆ ಉತ್ತಮ ಫಲ. ಹಣಕಾಸಿನ ವಿಚಾರದಲ್ಲಿ ಸಾಲದ ಒತ್ತಡ ಹೆಚ್ಚಾಗಬಹುದು. ಆರೋಗ್ಯ ಸಮಸ್ಯೆಗಳು ಹೆಚ್ಚಬಹುದು. ಮಕ್ಕಳಿಂದ ಸಂತಸ ಇರಲಿದೆ. ಶಿವ ಶಕ್ತಿಯರ ಸ್ಮರಣೆ ಮಾಡಿ. 

ಮಿಥುನ(Gemini): ಮನೆಯಲ್ಲಿ ಸಂಗಾತಿಯ ಮಾತು ಕೋಪ ತರಿಸಬಹುದು. ತಾಳ್ಮೆಯಿಂದ ಅದರಲ್ಲಿ ಸತ್ಯಾಂಶವಿದೆಯೇ ಎಂದು ಯೋಚಿಸಿ. ಅವರ ಸ್ಥಾನದಿಂದ ಯೋಚಿಸಲು ಪ್ರಯತ್ನಿಸಿ. ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಸಾಕಷ್ಟು ತೊಂದರೆ ಕೊಡಬಹುದು. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಕಟಕ(Cancer): ನಿಮ್ಮ ಒಡಹುಟ್ಟಿದವರೊಂದಿಗೆ ನೀವು ಕೆಲವು ಸಮಸ್ಯೆಗಳನ್ನು ಅನುಭವಿಸುವಿರಿ. ತಾಯಿ ಮತ್ತು ಸಂಗಾತಿಯ ಆರೋಗ್ಯದ ಏರುಪೇರು ನಿಮ್ಮನ್ನು ಕಂಗಾಲಾಗಿಸಬಹುದು. ಯಾವುದೇ ದಾಖಲೆಗೆ ಸಹಿ ಮಾಡುವಾಗ ಅದನ್ನು ಎಚ್ಚರಿಕೆಯಿಂದ ಓದಿ. ಶಿವ ಶತನಾಮಾವಳಿ ಪಠಿಸಿ.

ಸಿಂಹ(Leo): ನಿಮ್ಮ ಸಂವಹನ ಸಾಮರ್ಥ್ಯ ಇಂದು ಚೆನ್ನಾಗಿರಲಿದಗೆ. ಆದ್ದರಿಂದ, ಯಾವುದೇ ಹೊಸ ಉದ್ಯಮಕ್ಕೆ, ಮಾತಿನ ಮೂಲಕ ಆಗಬೇಕಾದ ಕೆಲಸಗಳನ್ನು ಮುಗಿಸಿಕೊಳ್ಳಲು ಇಂದು ಉತ್ತಮ ಸಮಯ. ಆಭರಣ ಮತ್ತು ಬಟ್ಟೆಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ. 

ಕನ್ಯಾ(Virgo): ಆತ್ಮವಿಶ್ವಾಸ ಮತ್ತು ಶಕ್ತಿ ನಿಮ್ಮ ಕೈ ಹಿಡಿಯಲಿವೆ. ನಿಮ್ಮ ಪ್ರಯತ್ನಗಳಲ್ಲಿ ನೀವು ಸರ್ವತೋಮುಖ ಯಶಸ್ಸನ್ನು ಸಾಧಿಸುವಿರಿ. ಹೀಗಾಗಿ, ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಲಿರುವಿರಿ. ಅವಿವಾಹಿತರಿಗೆ ಸಂತಸದ ಸುದ್ದಿ ಇರಲಿದೆ. ವಿವಾಹಿತರಲ್ಲಿ ಹೊಂದಾಣಿಕೆ ಚೆನ್ನಾಗಿರಲಿದೆ. ಶಿವನಿಗೆ ಜಲಾಭಿಷೇಕ ಮಾಡಿ. 

Powerful Zodiac Signs: ಕನ್ನಡತಿಯ ಭುವಿ ಪಾತ್ರದಂತೋರು ಯಾವ ರಾಶಿಯಲ್ಲಿ ಹುಟ್ಟಿರುತ್ತಾರೆ ಗೊತ್ತಾ?

ತುಲಾ(Libra): ಸ್ವಸಾಮರ್ಥ್ಯದಿಂದ ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಗಮನ ಸೆಳೆಯುವಿರಿ. ವಿದೇಶಿ ಸಂಪರ್ಕ ಹೊಂದಿರುವ ಜನರು ಕೆಲವು ಲಾಭಗಳನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ಒಳ್ಳೆಯ ಫಲಿತಾಂಶ ತೋರುತ್ತಾರೆ. ಪಠ್ಯೇತರ ಚಟುವಟಿಕೆಯಲ್ಲೂ ಹೆಸರು ಮಾಡುತ್ತಾರೆ. ಸುಬ್ರಹ್ಮಣ್ಯನ ಶ್ಲೋಕ ಹೇಳಿಕೊಳ್ಳಿ. 

ವೃಶ್ಚಿಕ(Scorpio): ಸಾಲಗಳು ಬೇಗ ತೀರದೇ ಚಿಂತೆಯಾಗಬಹುದು. ಸಾಲ ಮಾಡಲು, ಕೊಡಲು ಹೋಗಬೇಡಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಮನೆಯಲ್ಲಿ ಉತ್ತಮ ವಾತಾವರಣವಿರುತ್ತದೆ ಮತ್ತು ಕುಟುಂಬ ಸದಸ್ಯರ ಬೆಂಬಲವೂ ಇರುತ್ತದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಎದುರಾಗಲಿವೆ. ಶಿವ ದೇವಾಲಯಕ್ಕೆ ಭೇಟಿ ನೀಡಿ. 

ಧನುಸ್ಸು(Sagittarius): ಮಿತ್ರರಿಂದ ಸಹೋದ್ಯೋಗಿಗಳಿಂದ ಸಮಸ್ಯೆಗಳಾಗಬಹುದು. ಯಾವುದೇ ವಿವಾದವನ್ನು, ವಾದವನ್ನು ಹೆಚ್ಚು ಎಳೆದಾಡಲು ಹೋಗಬೇಡಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು. ನೆಮ್ಮದಿ ಕಡಿಮೆ ಆಗಬಹುದು. ಮಾನಸಿಕ ಶಾಂತಿಗಾಗಿ ಧ್ಯಾನ ಮಾಡಿ. 

ಮಕರ(Capricorn): ಬೇರೆಯವರ ನಡವಳಿಕೆ, ಮಾತಿನಿಂದ ನಿಮಗೆ ಬೇಸರವಾಗಬಹುದು. ಕೋಪ ಬರಬಹುದು, ಜಗಳ ಮಾಡುವ ಸಾಧ್ಯತೆ. ಸಮಯ ಅಷ್ಟು ಸೂಕ್ತವಾಗಿಲ್ಲ. ವ್ಯಾಪಾರದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಾ ಮುನ್ನಡೆಯಲು ಅವಕಾಶವಿರುತ್ತದೆ. ಮನೆದೇವರಲ್ಲಿ ಪ್ರಾರ್ಥನೆ ಮಾಡಿ. 

ಕುಂಭ(Aquarius): ಇಂದು ಪ್ರೇಮಿಗಳಿಗೆ ಶುಭದಿನ. ಪ್ರೇಮಿಗಳು ಸಂಬಂಧಿಕರು ಮತ್ತು ಕುಟುಂಬದೊಂದಿಗೆ ತಮ್ಮ ಪ್ರೀತಿಯ ಬಗ್ಗೆ ಮಾತನಾಡಬಹುದು. ಮನೆಯ ಸೌಕರ್ಯಗಳಿಗೆ ಸಂಬಂಧಿಸಿದ ಸರಕುಗಳಿಗಾಗಿ ಖರ್ಚು ಹೆಚ್ಚುವುದು. ಕೆಲಸದ ಬಗ್ಗೆ ನಿರ್ಲಕ್ಷ್ಯ ಬೇಡ. ಗೋವಿಗೆ ಹಸಿರು ತಿನ್ನಿಸಿ. 

Weekly Horoscope: ಕಟಕಕ್ಕೆ ಹಣಕಾಸಿನ ವಂಚನೆ, ಕನ್ಯಾಗೆ ನೆಮ್ಮದಿ ಮರೀಚಿಕೆ

ಮೀನ(Pisces): ಉದ್ಯೋಗದಲ್ಲಿ ಅಭಿವೃದ್ಧಿ, ಗೌರವ, ಮರ್ಯಾದೆ ಹೆಚ್ಚಲಿದೆ. ಉದ್ಯೋಗದಲ್ಲಿ ಒಂದು ಹಂತ ಮೇಲಕ್ಕೇರುವಿರಿ. ಸ್ವಂತ ಉದ್ಯೋಗ ಮಾಡುವವರಿಗೆ ಉತ್ತಮ ಲಾಭವಿದೆ. ನಿರುದ್ಯೋಗಿಗಳಿಗೂ ಅವಕಾಶ ಬರಲಿವೆ. ಆತ್ಮವಿಶ್ವಾಸ ಹೆಚ್ಚುವುದು. ಸಂತೋಷವಾಗಿ ದಿನ ಕಳೆಯುವಿರಿ. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ. 

PREV
Read more Articles on
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ