Daily Horoscope: ಮಿಥುನಕ್ಕೆ ಸುಖ ಸಂತೋಷ ವರ್ಧನೆ, ಧನಸ್ಸಿಗೆ ಉದಾಸೀನ

By Suvarna News  |  First Published Feb 27, 2022, 5:00 AM IST

27 ಫೆಬ್ರವರಿ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕಟಕಕ್ಕೆ ಮಂದ ಗತಿಯಲ್ಲಿ ಸಾಗುವ ಕೆಲಸಗಳು


ಮೇಷ(Aries): ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ. ಪ್ರವಾಸ ಯೋಜನೆಗಳಿಂದ ಸಂತಸ. ಮನಸ್ಸನ್ನು ಪ್ರಶಾಂತವಾಗಿರಿಸಿಕೊಂಡು ಮುಂದುವರಿಯಿರಿ. ಸೂರ್ಯನಿಗೆ ಅರ್ಘ್ಯ ಬಿಡಿ

ವೃಷಭ(Taurus): ಬೆಳ್ಳಿ, ಬಂಗಾರ ಇತರೆ ಆಭರಣ ಉದ್ಯಮದಲ್ಲಿರುವವರಿಗೆ ಅಧಿಕ ಲಾಭ. ಸ್ನೇಹಿತರ ಕಡೆಯಿಂದ ಸಂತಸದ ಸುದ್ದಿ ಕೇಳಿಬರುವುದು. ಮಕ್ಕಳ ವಿಷಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಿರಿ. ಹಿಂದಿನ ಹರಕೆಗಳು ಬಾಕಿಯಿದ್ದರೆ ತೀರಿಸುವತ್ತ ಗಮನ ಹರಿಸಿ. ವಿಷ್ಣು ಸಹಸ್ರನಾಮ ಶ್ರವಣ ಮಾಡಿ. 

Latest Videos

undefined

ಮಿಥುನ(Gemini): ಮಕ್ಕಳ ಸಂಬಂಧಿ ಶುಭ ಕಾರ್ಯಗಳು ಜರುಗುವುವು. ಇಂದು ಸುಖಸಂತೋಷ ವರ್ಧಿಸಲಿದೆ. ಸಂಗಾತಿಯ ಸಂಪೂರ್ಣ ಸಹಕಾರ ಸಿಗಲಿದೆ. ಹೊಸ ವಸ್ತುಗಳ ಖರೀದಿ ಮಾಡುವಿರಿ. ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗೆ ಸಿಹಿಸುದ್ದಿ. ಆದಿತ್ಯ ಹೃದಯ ಪಠಣ ಮಾಡಿ. 

ಕಟಕ(Cancer): ಮನೆಯ ಸದಸ್ಯರನ್ನು ಕೊರೆಯುತ್ತಿರುವ ವಿಚಾರಗಳು ಏನೆಂದು ವಿಚಾರಿಸಿ. ಮಕ್ಕಳು ದಾರಿ ತಪ್ಪುತ್ತಿದ್ದಾರೆಯೇ ಎಂಬ ಬಗ್ಗೆ ವಿಶೇಷ ಗಮನ ಹರಿಸುವುದು ಅಗತ್ಯ. ಮಂದಗತಿಯಲ್ಲಿ ಸಾಗುವ ಕೆಲಸಗಳಿಂದ ಕಿರಿಕಿರಿ. ಹಣಕಾಸಿನ ಅಡಚಣೆಗಳು ಕಂಗೆಡಿಸಬಹುದು. ಆಪ್ತರ ಮಾತು ನೋವುಂಟು ಮಾಡಲಿದೆ. ಅಶ್ವತ್ಥ ಕಟ್ಟೆಗೆ ದೀಪ ಹಚ್ಚಿ ನಮಸ್ಕರಿಸಿ. 

ಸಿಂಹ(Leo): ಜೀವನ ಸಂಗಾತಿಯಿಂದ ಪ್ರೀತಿ ಮತ್ತು ಸಹಕಾರ ಚೆನ್ನಾಗಿ ಸಿಗಲಿದೆ. ಅವಿವಾಹಿತರಿಗೆ ಮನೆಯಲ್ಲಿ ಮದುವೆ ಸಂಬಂಧ ಒತ್ತಡ ಹೆಚ್ಚಲಿದೆ. ವಿಪರೀತ ಧನ ವ್ಯಯದಿಂದ ಕಂಗಾಲಾಗುವಿರಿ. ಶತ್ರುಗಳು ನಿಮ್ಮ ಕಾರ್ಯವೈಖರಿಯಿಂದಲೇ ಪರಾಭವ ಹೊಂದುತ್ತಾರೆ. ಗಣಪತಿ ಸ್ಮರಣೆ ಮಾಡಿ.

Name Astrology: ಈ ಅಕ್ಷರಗಳ ಹೆಸರಿನವರು ಉತ್ತಮ ಪತಿಯಾಗಬಲ್ಲರು

ಕನ್ಯಾ(Virgo): ಧೀರ್ಘ ಕಾಲದ ಆರೋಗ್ಯ ಸಮಸ್ಯೆಗಳು ಕೊಂಚ ಆತಂಕ ಹೆಚ್ಚಿಸಲಿವೆ. ಮನೋರಂಜನೆಗಾಗಿ ಹೆಚ್ಚು ಧನ ವ್ಯಯವಾಗುವುದು. ಸ್ನೇಹಿತರ ಭೇಟಿಯಿಂದ ಉಲ್ಲಾಸ. ಸಹೋದರರ ಸಹಕಾರದಿಂದ ಗೃಹಕಾರ್ಯಗಳು ಸುಲಭವಾಗುವುವು. ಮಕ್ಕಳು ಜ್ಞಾನಾರ್ಜನೆಗೆ ಒಲವು ತೋರಲಿದ್ದಾರೆ. ಬಡವರಿಗೆ ಆಹಾರ ನೀಡಿ. 

ತುಲಾ(Libra): ವಿವಾಹಾಕಾಂಕ್ಷಿಗಳಿಗೆ ನಿರಾಸೆ. ದೂರ ಪ್ರಯಾಣಕ್ಕೆ ಉತ್ತಮ ದಿನ. ಬೇರೊಬ್ಬರು ಹೇಳಿದ್ದೆಲ್ಲ ಕೇಳುವ ಹಿತ್ತಾಳೆ ಕಿವಿ ಇಟ್ಟುಕೊಳ್ಳಬೇಡಿ. ನಿಮ್ಮ ಬುದ್ಧಿಯನ್ನೇ ಬಲವಾಗಿ ಪ್ರಯೋಗಿಸಿ. ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ನೀವು ಖರ್ಚು ಮಾಡಬೇಕಿಲ್ಲ. ಕೃಷ್ಣನಿಗೆ ಅವಲಕ್ಕಿ ನೈವೇದ್ಯ ಮಾಡಿ. 

ವೃಶ್ಚಿಕ(Scorpio): ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಕೊಂಚ ಆತಂಕ ಕಳೆಯಲಿದೆ. ಸ್ನೇಹಿತರ ನೆರವಿನಿಂದ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಿವೆ. ನಿಮ್ಮ ಉದ್ಯೋಗ, ವ್ಯಕ್ತಿತ್ವ ವಿಕಸನದ ಕಡೆ ಹೆಚ್ಚಿನ ಯೋಚನೆ ಹರಿಸಿ. ಆರೋಗ್ಯ ಸಮಸ್ಯೆಗಳು ಕಾಡಿಸಬಹುದು. ಧನ್ವಂತರಿ ಸ್ಮರಣೆ ಮಾಡಿ. 

Sunday Born Personality: ಭಾನುವಾರ ಹುಟ್ಟಿದೋರು ಅಹಂಕಾರಿಗಳಾ? ಅವ್ರ್ ಲವ್ ಲೈಫ್ ಹೇಗೆ?

ಧನುಸ್ಸು(Sagittarius): ಮನೆಯಲ್ಲಿ ಮಾನಸಿಕವಾಗಿಯೂ ಮನೆಯವರ ಜೊತೆಯೇ ಇರಲು ಪ್ರಯತ್ನಿಸಿ. ಉದಾಸೀನ ಕಾಡಿ ಯಾವ ಕೆಲಸಗಳೂ ಮುಂದೆ ಹೋಗುವುದಿಲ್ಲ. ವಿದ್ಯಾರ್ಥಿಗಳು ಸೋಮಾರಿತನಕ್ಕಾಗಿ ಬೈಸಿಕೊಳ್ಳಬೇಕಾಗಿ ಬರಬಹುದು. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಮಕರ(Capricorn): ದೂರದ ನೆಂಟರ ಸಹಕಾರದಿಂದ ದೊಡ್ಡ ಯೋಜನೆಯೊಂದಕ್ಕೆ ಕೈ ಹಾಕುವಿರಿ. ಕುಟುಂಬದೊಡನೆ ಪ್ರವಾಸದಿಂದ ಹರ್ಷೋಲ್ಲಾಸ. ನೂತನ ಗೃಹ ನಿರ್ಮಾಣ ಕಾರ್ಯಗಳು ಚುರುಕು ಪಡೆಯಲಿವೆ. ಸಣ್ಣ ಪುಟ್ಟ ತಿರುಗಾಟದಿಂದ ಸಂತಸ. ಕುಲದೇವರ ಸ್ಮರಣೆ ಮಾಡಿ. 

ಕುಂಭ(Aquarius): ಮನೆ ಸದಸ್ಯರ ಸಮಸ್ಯೆಗಳನ್ನೆಲ್ಲ ನಿಮ್ಮ ಮೈ ಮೇಲೆ ಅತಿಯಾಗಿ ಎಳೆದುಕೊಳ್ಳಬೇಡಿ. ಅದೇನೆಂದು ಆಲಿಸಿ ಪರಿಹಾರ ಯೋಚಿಸಿ. ಸಂಗಾತಿಗೆ ಹೆಚ್ಚಿನ ಸಮಯ ನೀಡಿ. ನಿರುದ್ಯೋಗಿಗಳು ನೀವು ಹುಡುಕದೆ ಇರುವ ಕ್ಷೇತ್ರದಿಂದ ಬರುತ್ತಿರುವ ಅವಕಾಶವನ್ನು ಒಪ್ಪಿಕೊಳ್ಳುವುದರಿಂದ ಒಳಿತಾಗುವುದು. ಹಸುವಿಗೆ ಹುಲ್ಲು ತಿನ್ನಿಸಿ. 

ಮೀನ(Pisces): ಬಹಳ ದಿನಗಳಿಂದ ಮುಂದೂಡಿಕೊಂಡ ಗೃಹಕೃತ್ಯಗಳೆಲ್ಲ ಮುಗಿಸಿ ನಿರಾಳವಾಗುವಿರಿ. ವಿವಾಹಿತರಿಗೆ ದಿನ ಸಂತಸ ತರುವುದು. ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದೆ. ಹೊಸ ತಂತ್ರಜ್ಞಾನ ಮತ್ತು ಜ್ಞಾನವನ್ನು ಪಡೆಯುವ ಬಯಕೆ ಇರುತ್ತದೆ. ಪೋಷಕರ ಆಶೀರ್ವಾದ ಪಡೆದುಕೊಳ್ಳಿ.

click me!