Daily Horoscope: ಕಾಮದಹನದ ಈ ದಿನ ನಿಮ್ಮ ಭವಿಷ್ಯ ಹೇಗಿರಲಿದೆ ನೋಡಿ..

By Suvarna News  |  First Published Mar 17, 2022, 5:06 AM IST

17 ಮಾರ್ಚ್ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೇಷಕ್ಕಿದೆ ಅದೃಷ್ಟದ ಬೆಂಬಲ, ಮೀನಕ್ಕೆ ನೋವು


ಮೇಷ(Aries): ಅದೃಷ್ಟದ ಬೆಂಬಲವಿದೆ. ನಾಯಕತ್ವ ಕಾರ್ಯಗಳನ್ನು ಚೆನ್ನಾಗಿ ನಿಭಾಯಿಸಲಿರುವಿರಿ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇರಲಿದೆ. ಸೋಮಾರಿಗಳಿಗೆ ತಕ್ಕ ಶಾಸ್ತಿಯಾಗಲಿದೆ. ಸಂಗಾತಿಯೊಂದಿಗೆ ತಿರುಗಾಟದಿಂದ ಸಂತಸ. ಹೆಚ್ಚುತ್ತಿರುವ ಖರ್ಚುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಗುರುವಿನ ಸ್ಮರಣೆ ಮಾಡಿ. 

ವೃಷಭ(Taurus): ಪ್ರೇಮಿಗಳಿಗೆ ಸುಮಧುರ ದಿನವಾಗಿದೆ. ಹೊಸ ಹೊಸ ಪರಿಚಯದಿಂದ ವ್ಯವಹಾರದಲ್ಲಿ ಲಾಭವಿರಲಿದೆ. ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ. ಹೊಗಳಿಕೆ ಮಾತನ್ನು ಕೇಳಿಸಿಕೊಂಡು ಸಂತೋಷ ಹೆಚ್ಚುವುದು. ವಿದ್ಯಾರ್ಥಿಗಳಿಗೆ ಉತ್ಸಾಹದ ದಿನ. ವಿಷ್ಣು ಸಹಸ್ರನಾಮ ಪಠಿಸಿ. 

Latest Videos

undefined

ಮಿಥುನ(Gemini): ಭ್ರಷ್ಟರು ಸಿಕ್ಕಿ ಬೀಳುವ ಸಾಧ್ಯತೆ ಇದೆ. ನಿಮ್ಮ ವಂಚನೆಗಳು, ಅವ್ಯವಹಾರ, ಅನೈತಿಕ ಸಂಬಂಧಗಳು ಬೆಳಕಿಗೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ. ಪ್ರಾಮಾಣಿಕತೆಗೆ ಬೆಲೆ ಇರಲಿದೆ. ದುಷ್ಟ ಯೋಚನೆಗಳನ್ನು ಬದಿಗೆ ಹಾಕಿ ಹೊಸ ಬದುಕು ಕಂಡುಕೊಳ್ಳುವತ್ತ ಚಿತ್ತ ಹರಿಸಿ. ರಾಯರ ಸ್ಮರಣೆ ಮಾಡಿ. 

ಕಟಕ(Cancer): ಕಷ್ಟಗಳು ಹೆಚ್ಚುತ್ತಿವೆ ಎನಿಸಬಹುದು. ಆದರೆ, ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇದೆ ಎಂದು ನಂಬಿ ಮುನ್ನಡೆಯಿರಿ. ಕೊಟ್ಟ ಮಾತಿಗೆ ತಪ್ಪಿ ಕೆಟ್ಟ ಹೆಸರು ಪಡೆಯಬೇಕಾದೀತು. ಸಮರ್ಥನೆಗೆ ನಿಲ್ಲದೆ ಪ್ರಮಾದ ಒಪ್ಪಿಕೊಳ್ಳುವುದು ಸದ್ಗುಣ. ಮನೆ ದೇವರನ್ನು ಸ್ಮರಿಸಿಕೊಳ್ಳಿ. 

ಸಿಂಹ(Leo): ಜೀವನ ನಿಂತ ನೀರಾದಂತೆ ಎನಿಸಬಹುದು. ಆದರೆ, ಅದು ಕೆಲವೊಮ್ಮೆ ವೇಗಗತಿಯಲ್ಲಿ ಕೆಲವೊಮ್ಮೆ ಮಂದಗತಿಯಲ್ಲಿ ಸಾಗುವುದು ಸಾಮಾನ್ಯ ಎಂದು ನಂಬಿ ಮುನ್ನಡೆಯಿರಿ. ಔದ್ಯೋಗಿಕ ಜೀವನ ಸಾಮಾನ್ಯವಾಗಿರಲಿದೆ. ಮಕ್ಕಳ ಆರೋಗ್ಯ ಚಿಂತೆ ತರಲಿದೆ. ನರಸಿಂಹ ಪ್ರಾರ್ಥನೆ ಮಾಡಿ.

Holi 2022: ಅದೃಷ್ಟ ಬದಲಾಗ್ಬೇಕೆಂದ್ರೆ ರಾಶಿಗನುಗುಣವಾಗಿ ಬಳಸಿ ಬಣ್ಣ

ಕನ್ಯಾ(Virgo): ಖರ್ಚು ವೆಚ್ಚಗಳು ಹೆಚ್ಚಿ ಚಿಂತೆಯಾಗಲಿದೆ. ಆದಷ್ಟು ಜಾಗರೂಕತೆಯಿಂದ ವ್ಯವಹಾರ ಮಾಡಿ. ಇಷ್ಟದ ವ್ಯಕ್ತಿಗಳೊಂದಿಗೆ ಸಮಯ ಕಳೆಯುವಿರಿ. ಸಂಗಾತಿಯ ಸಹಕಾರದಿಂದ ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ.

ತುಲಾ(Libra): ನಿಮ್ಮ ಹಾದಿಯಲ್ಲಿ ಒಂದಿಷ್ಟು ಸಮಸ್ಯೆಗಳೆದುರಾಗಬಹುದು. ಎದುರಿಸುವ ಛಲವಿದ್ದವರು ಗೆಲ್ಲುತ್ತಾರೆ, ಹೆದರಿದವರು ಸೋಲುತ್ತಾರೆ ಎಂಬುದನ್ನು ನೆನಪಿಡಿ. ತಿರುಗಾಟಗಳಿರಲಿವೆ. ನೆಂಟರಿಷ್ಟರಿಂದ ಅಪವಾದ ಎದುರಾಗಬಹುದು. ರಾಘವೇಂದ್ರ ಸ್ವಾಮಿಯ ಸ್ಮರಣೆ ಮಾಡಿ.

ವೃಶ್ಚಿಕ(Scorpio): ದೊಡ್ಡದೊಂದು ಕನಸಿಗೆ ಕೈ ಹಾಕುವ ಮುನ್ನ ಚಿಕ್ಕ ಚಿಕ್ಕ ಮೆಟ್ಟಿಲುಗಳನ್ನು ಹತ್ತಿಯೇ ಮೇಲೆ ಹೋಗಬೇಕೆಂಬುದು ನೆನಪಿಡಿ. ಆರೋಗ್ಯ ಕಿರಿಕಿರಿ ಹೈರಾಣಾಗಿಸುವುದು. ವಸ್ತ್ರ ಒಡವೆಗೆ ಖರ್ಚು ಹೆಚ್ಚಲಿದೆ. ತಾಯಿಯ ಕಾಲಿಗೆ ಮನಸ್ಕರಿಸಿ ದಿನ ಆರಂಭಿಸಿ.

Holi 2022: ಹೋಳಿ ಹಬ್ಬದ ದಿನ ಯಾವ ಬಣ್ಣದ ಬಟ್ಟೆ ಧರಿಸಿದ್ರೆ ಗೌರವ ಹೆಚ್ಚುತ್ತೆ?

ಧನುಸ್ಸು(Sagittarius): ಸಂಗಾತಿಗೆ ಹೆಚ್ಚಿನ ಸಮಯ ಕೊಡಿ. ದೊಡ್ಡದೊಂದು ಸವಾಲನ್ನು ಸಮರ್ಥವಾಗಿ ಎದುರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವಿರಿ. ಬಹಳ ದಿನದ ದಣಿವನ್ನು ಇಂದು ಆರಿಸಿಕೊಳ್ಳಿ. ಮಕ್ಕಳ ಶಾಲಾ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ. ನವಗ್ರಹ ಸ್ಮರಣೆ ಮಾಡಿ. 

ಮಕರ(Capricorn): ಪಾಲುದಾರಿಕೆ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಷೇರು  ಮಾರುಕಟ್ಟೆ ವ್ಯವಹಾರದಲ್ಲಿ ಲಾಭದಾಯಕ ಆದಾಯವಿರಲಿದೆ. ಗಣ್ಯವ್ಯಕ್ತಿಗಳ ಭೇಟಿಯಿಂದ ಬಹಳ ದಿನದಿಂದ ಸ್ಥಗಿತಗೊಂಡಿದ್ದ ಕೆಲಸ ಮುಂದುವರೆಯುವುದು. ರಾಯರ ಮಠಕ್ಕೆ ಭೇಟಿ ನೀಡಿ. 

ಕುಂಭ(Aquarius): ಎಲ್ಲ ಸರಿಯಾಗುತ್ತಿದೆ ಎಂದು ಭಾವಿಸುವಷ್ಟರಲ್ಲಿ ಎಲ್ಲವೂ ತಲೆ ಕೆಳಗಾಗುತ್ತದೆ. ಇದರಿಂದ ಕಂಗಾಲಾಗುವಿರಿ. ಕಚೇರಿಯ ಕೆಲಸದ ನಡುವೆ ಪ್ರೀತಿಪಾತ್ರರನ್ನು ಭೇಟಿಯಾಗಲು ಸಾಧ್ಯವಾಗದೆ ಮುನಿಸಿಗೆ ಕಾರಣವಾಗಬಹುದು. ಕೃಷ್ಣನಿಗೆ ತುಳಸಿ ಅರ್ಪಿಸಿ. 

ನಿರ್ಮಾಣ ಕಾರ್ಯದಲ್ಲಿ ವಿಘ್ನ ಬರಬಾರದೆಂದರೆ ಪಾಲಿಸಬೇಕಾದ 10 Vastu tips

ಮೀನ(Pisces): ಸಂಬಂಧಗಳ ನಡುವೆ ವೈಮನಸ್ಯ ಮೂಡುವ ಸಂದರ್ಭಗಳೆದುರಾಗಬಹುದು. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇರುವುವು. ಮನಸ್ಸು ಮುದುಡುವುದು. ಗೆಳೆಯರ ಬಳಿ ನಿಮ್ಮ ನೋವನ್ನು ಹಂಚಿಕೊಂಡು ಹಗುರಾಗಿ. ಗುರು ರಾಘವೇಂದ್ರರ ಭಜನೆ ಮಾಡಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!