Daily Horoscope: ಕುಂಭಕ್ಕೆ ಉದ್ಯೋಗದಲ್ಲಿ ಬದಲಾವಣೆ, ಸಿಂಹಕ್ಕೆ ಬೇಸರ

By Suvarna NewsFirst Published Mar 16, 2022, 5:03 AM IST
Highlights

16 ಮಾರ್ಚ್ 2022, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೇಷಕ್ಕೆ ಕೋಪ ನಿಯಂತ್ರಣ ಅಗತ್ಯ

ಮೇಷ(Aries): ಎಲ್ಲವೂ ನೀವಂದುಕೊಂಡಂತೆಯೇ ಆಗಬೇಕಿಲ್ಲ. ಕೆಲ ದಿನಗಳು ವ್ಯತಿರಿಕ್ತವಾಗಿರುತ್ತವೆ ಎಂಬುದನ್ನು ಒಪ್ಪಿಕೊಳ್ಳಿ. ನಿಮ್ಮ ಅಹಂಕಾರ, ಕೋಪ ಬದಿಗಿಟ್ಟುಕೊಂಡರೆ ಕೊಂಚ ನೆಮ್ಮದಿ ಕಾಣಬಹುದು. ತಲೆನೋವು, ಒತ್ತಡ ಸೇರಿದಂತೆ ಕೆಲ ಆರೋಗ್ಯ ಕಿರಿಕಿರಿಗಳು ಬಾಧಿಸಲಿವೆ. ಗಣಪತಿಗೆ ಕಡಲೆ ಅರ್ಪಿಸಿ.

ವೃಷಭ(Taurus): ಉದ್ಯೋಗ, ವ್ಯವಹಾರದಲ್ಲಿ ಪ್ರಗತಿಯ ಹೊಸ ಮಾರ್ಗಗಳು ಕಾಣಿಸಬಹುದು. ಅವನ್ನು ಸದ್ಬಳಕೆ ಮಾಡುವತ್ತ ಶಕ್ತಿ ವ್ಯಯಿಸಿ. ಆದಾಯ ಹೆಚ್ಚಲಿದೆ. ಆಸ್ತಿ ಖರೀದಿ ಸಾಧ್ಯತೆ ಇದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಬಗ್ಗೆ ಹೆಚ್ಚಿನ ಗಮನ ವಹಿಸಿ, ಆರೋಗ್ಯ ತಪಾಸಣೆ ಮಾಡಿಸಿ. ಗಣಪತಿ ದೇವಾಲಯಕ್ಕೆ ಭೇಟಿ ನೀಡಿ. 

Latest Videos

ಮಿಥುನ(Gemini): ವಿದ್ಯಾರ್ಥಿಗಳಿಗೆ ಮಾನಸಿಕ ತುಮುಲಗಳು ಕಾಡಬಹುದು. ಪೋಷಕರ ಸಹಕಾರ ಪಡೆಯಿರಿ. ಮಕ್ಕಳ ಮನಸ್ಸಲ್ಲಿರುವುದನ್ನು ಪೋಷಕರು ನಿಧಾನವಾಗಿ ವಿಚಾರಿಸಬೇಕು. ಅವರಲ್ಲಿ ಅಭಯ ತುಂಬಬೇಕು. ಉದ್ಯೋಗಿಗಳಿಗೆ ಸಾಮಾನ್ಯ ದಿನ. ಷೇರು ವ್ಯವಹಾರಗಳಲ್ಲಿ ನಷ್ಟ. ಬಡವರಿಗೆ ದಾನ ಮಾಡಿ. 

ಕಟಕ(Cancer): ಮನೆಯಲ್ಲಿ ಯಾರೊಬ್ಬರೂ ನಿಮ್ಮ ನೋವನ್ನು ಕೇಳುತ್ತಿಲ್ಲ ಎನಿಸಬಹುದು. ಈ ಬಗ್ಗೆ ನೀವೇ ದನಿ ಎತ್ತಿ ಮಾತನಾಡಬೇಕಿದೆ. ಆರೋಗ್ಯ ಸಮಸ್ಯೆಗಳು ಕಾಡಲಿವೆ. ಹವ್ಯಾಸಗಳಿಂದ ಆರ್ಥಿಕ ಲಾಭ ಮಾಡುವತ್ತ ಗಮನ ಹರಿಸಿದರೆ ಲಾಭವಿದೆ. ನಿಮ್ಮ ಗುರುಹಿರಿಯರ ಸ್ಮರಣೆ ಮಾಡಿ ಆಶೀರ್ವಾದ ಪಡೆಯಿರಿ. 

ಸಿಂಹ(Leo): ಎಷ್ಟೇ ಪ್ರಯತ್ನಿಸಿದರೂ ಯಾವ ಕೆಲಸವೂ ಮುಂದೆ ಹೋಗುತ್ತಿಲ್ಲ ಎನಿಸಿ ಕಿರಿಕಿರಿಯಾಗುತ್ತದೆ. ಸ್ವಂತ ಉದ್ಯಮಗಳು ಅವಿರತ ಶ್ರಮದ ನಂತರವೂ ಕೈ ಹಿಡಿಯುತ್ತಿಲ್ಲ ಎಂದು ಬೇಸರವಾಗಲಿದೆ. ಮಗುವಿನ ಆರೋಗ್ಯದ ಕಡೆ ಗಮನ ಹರಿಸುವಿರಿ. ಕುಟುಂಬದವರೊಡನೆ ವಾಗ್ವಾದವಾಗಬಹುದು. ವಿನಾಯಕ ಶ್ಲೋಕಗಳನ್ನು ಹೇಳಿ. 

ಶುಕ್ರ ಗೋಚಾರದಿಂದ ಖುಲಾಯಿಸಲಿದೆ ಮೂರು ರಾಶಿಗಳ ಅದೃಷ್ಟ

ಕನ್ಯಾ(Virgo): ಆಸ್ತಿ ವಿಚಾರದ ಗಲಭೆಗಳು ತಾತ್ಕಾಲಿಕವಾಗಿ ತಣ್ಣಗಾಗುವವು. ಮನೆಯಲ್ಲಿ ಮದುವೆ, ಮುಂಜಿ ಮತ್ತಿತರೆ ಶುಭ ಸಮಾರಂಭಕ್ಕೆ ನಾಂದಿ ಹಾಡುವಿರಿ. ನೆಂಟರಿಷ್ಟರೊಂದಿಗೆ ಹೊಂದಿಕೊಂಡು ಹೋಗಲು ಮುಂದಡಿ ಇಡುವಿರಿ. ಹದಿಹರೆಯದ ಮಕ್ಕಳ ತಾಪತ್ರಯಗಳು ತಲೆನೋವು ತರಬಹುದು. ನಿರ್ಗತಿಕರಿಗೆ ಸಾಧ್ಯವಾದುದನ್ನು ದಾನ ಮಾಡಿ. 

ತುಲಾ(Libra): ಪತ್ನಿ- ಪುತ್ರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರ ವ್ಯವಹಾರಗಳಲ್ಲಿ ಹೊಸ ಒಪ್ಪಂದಗಳು ತೋರಿಬಂದಾವು. ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿ ಬಂದು ಮನೆಯಲ್ಲಿ ಸಂತಸ ಹೆಚ್ಚಲಿದೆ. ನಿರುದ್ಯೋಗಿಗಳು ಪ್ರಯತ್ನ ಹೆಚ್ಚಿಸಬೇಕು. ಮನೆದೇವರಿಗೆ ತುಪ್ಪದ ದೀಪ ಹಚ್ಚಿ. 

ವೃಶ್ಚಿಕ(Scorpio): ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ಎಲ್ಲೋ ಎಡವಿರುವ ಬಗ್ಗೆ ತಿಳಿಯಬಹುದು. ಈ ಬಗ್ಗೆ ಮುಂದೇನು ಮಾಡಬಹುದು ಪರಾಂಬರಿಸಿ. ಬೆನ್ನಿನಿಂದ ಚೂರಿ ಹಾಕುವವರನ್ನು ದೂರವಿಡಿ. ಸುಳ್ಳಿನ ಸಹವಾಸಕ್ಕೆ ಹೋಗದಿರಿ. ಗಣಪತಿಗೆ ದೂರ್ವೆ ಅರ್ಪಿಸಿ. 

Holi 2022: ಹಿರಣ್ಯಕಶಿಪು ಹಾಗೂ ಪ್ರಹ್ಲಾದನ ಕತೆಗೂ ಹೋಳಿಗೂ ಸಂಬಂಧವುಂಟು!

ಧನುಸ್ಸು(Sagittarius): ಪತಿಯ ಸಹಕಾರ, ಪ್ರೀತಿ ಮನಸ್ಸನ್ನು ಆವರಿಸುವುದು. ವೈವಾಹಿಕವಾಗಿ ಉತ್ತಮ ದಿನವಿರಲಿದೆ. ವ್ಯಾಪಾರಿಗಳಿಗೆ ಲಾಭದ ದಿನ. ವಿದೇಶದಿಂದ ಸಿಹಿ ಸುದ್ದಿ ಬರಲಿದೆ. ಹಳೆಯ ಹರಕೆಗಳನ್ನು ಈಡೇರಿಸುವತ್ತ ಗಮನ ಹರಿಸಿ. ತಾಯಿಯ ಕೈಯಿಂದ ಸಿಹಿ ತಿನ್ನಿಸಿಕೊಳ್ಳಿ.

ಮಕರ(Capricorn): ಮನೋಬಲ ಹೆಚ್ಚಿರುವುದರಿಂದ ಅಲ್ಪ ಶ್ರಮದಿಂದ ಕಾರ್ಯ ಸಾಧನೆಯಾಗುವುದು. ನಿರುದ್ಯೋಗಿಗಳು ಇಂದು ಸಂಪೂರ್ಣ ಪ್ರಯತ್ನ ಹಾಕಬೇಕು. ಅವಿವಾಹಿತರಿಗೆ ಈಗಾಗಲೇ ಪ್ರಯತ್ನಿಸುತ್ತಿರುವ ಹೊರತಾಗಿ ಬೇರೆಡೆಯಲ್ಲಿ ಸಂಬಂಧ ಹುಡುಕಿ. ಪಕ್ಷಿಗಳಿಗೆ ಬಾಯಾರಿಕೆ ನೀಗಿ, ಕಾಳುಗಳನ್ನು ತಿನ್ನಿಸಿ. 

ಕುಂಭ(Aquarius): ಕೆಲ ನೋವುಗಳು ಕಾಡಬಹುದು. ಆದರೆ, ಸದ್ಯದಲ್ಲಿ ಗ್ರಹಗತಿಗಳು ಬದಲಾಗಲಿವೆ. ಹಾಗಾಗಿ, ತಾಳ್ಮೆ ಇರಲಿ. ಔದ್ಯೋಗಿಕ ಬದುಕಿನಲ್ಲಿ ಮಹತ್ತರ ಬದಲಾವಣೆಗಳಾಗಲಿವೆ. ಮಕ್ಕಳ ವಿಷಯವಾಗಿ ಚಿಂತೆ ಹೆಚ್ಚಲಿದೆ. ದೂರ ಪ್ರಯಾಣದಿಂದ ಕಾರ್ಯ ಸಿದ್ಧಿಯಾಗಲಿದೆ. ಗಣಪತಿಗೆ ಕಡಲೆ ನೈವೇದ್ಯ ಮಾಡಿ. 

ಮೀನ(Pisces): ದೂರ ಪ್ರಯಾಣ ಫಲಕಾರಿಯಲ್ಲ. ಕಚೇರಿ ಕಾರ್ಯಾಲಯಗಳ ನಿಧಾನಗತಿಯ ಕೆಲಸಗಳಿಂದ ತಾಳ್ಮೆಗೆಡುವಂತಾಗಬಹುದು. ಅಧಿಕಾರಿ ವರ್ಗದವರಿಂದ ಮಾತು ಕೇಳಬೇಕಾಗಬಹುದು. ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಹಣ ಬಾರದೇ ಹೋಗಬಹುದು. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

click me!