Daily Horoscope: ವೃಷಭಕ್ಕೆ ಕೈ ಹಿಡಿವ ಅದೃಷ್ಟ, ತುಲಾ ರಾಶಿಗೆ ಧನನಷ್ಟ

Published : Mar 15, 2022, 08:07 AM IST
Daily Horoscope: ವೃಷಭಕ್ಕೆ ಕೈ ಹಿಡಿವ ಅದೃಷ್ಟ, ತುಲಾ ರಾಶಿಗೆ ಧನನಷ್ಟ

ಸಾರಾಂಶ

15 ಮಾರ್ಚ್ 2022, ಮಂಗಳವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ವೃಶ್ಚಿಕಕ್ಕೆ ಒಂಟಿತನ, ನಿಮ್ಮ ರಾಶಿ ಫಲ ಏನಿದೆ ನೋಡಿ..

ಮೇಷ(Aries): ವ್ಯಾಪಾರ, ವ್ಯವಹಾರಗಳು ಅಷ್ಟಕ್ಕಷ್ಟೇ ಆಗಿದ್ದರೂ ದಿನ ಉಲ್ಲಾಸದಾಯಕವಾಗಿರಲಿದೆ. ಹತ್ತಿರದ ಸಂಬಂಧಿಗಳ ಆಗಮನ ಎಷ್ಟು ಸಂತೋಷ ತರುವುದೋ, ಅಷ್ಟೇ ಕೆಲಸಗಳು ಹೆಚ್ಚಿ ದಣಿವಾಗುವುದು. ಮೈ ಕೈ ನೋವಿನಿಂದ ದೇಹ ಜರ್ಝರಿತವಾಗುವುದು. ಕೆಂಪು ಧಾನ್ಯಗಳ ದಾನ ಮಾಡಿ. 

ವೃಷಭ(Taurus): ಇಂದು ಅದೃಷ್ಟ ಜೊತೆಗೂಡುವುದು. ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಸಾಧಿಸುವಿರಿ. ಮಹತ್ತರ ನಿರ್ಧಾರಗಳನ್ನು ತೆಗೆದುಕೊಳ್ಳಲು ಉತ್ತಮ ದಿನ. ಆರೋಗ್ಯ ಚೆನ್ನಾಗಿರುವುದು. ಮನೆ ಹಿರಿಯರ ಆರೋಗ್ಯಕ್ಕಾಗಿ ವೈದ್ಯರನ್ನು ಭೇಟಿಯಾಗಲಿರುವಿರಿ. ಆಂಜನೇಯ ಸ್ಮರಣೆ ಮಾಡಿ. 

ಮಿಥುನ(Gemini): ಮಾತಿನಿಂದಲೇ ಮನ ಗೆಲ್ಲುವಿರಿ. ಆತ್ಮವಿಶ್ವಾಸದ ಮಾತುಗಳು ಮತ್ತೊಬ್ಬರ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ. ಷೇರು ವ್ಯವಹಾರಗಳು, ರಿಯಲ್ ಎಸ್ಟೇಟ್, ವ್ಯಾಪಾರ, ಉದ್ದಿಮೆಗಳು ಉತ್ತಮ ಲಾಭ ತಂದು ಕೊಡಲಿವೆ. ಸಂಗಾತಿಯ ಮನಸ್ಸಿನ ಮಾತನ್ನು ಕೇಳಿಸಿಕೊಳ್ಳಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಕಟಕ(Cancer): ಪೋಷಕರೊಂದಿಗಿನವ ಭಿನ್ನಾಭಿಪ್ರಾಯ ಹೆಚ್ಚಬಹುದು. ಉದ್ಯೋಗರಂಗದಲ್ಲಿ ಹಿರಿಯರಿಂದ ಬೈಸಿಕೊಳ್ಳಬಹುದು. ಇಲ್ಲವೇ ಸಹೋದ್ಯೋಗಿಗಳ ಗಾಸಿಪ್‌ಗೆ ಆಹಾರವಾಗುವಿರಿ. ಮನಸ್ಸಿನ ಕಸಿವಿಸಿಯನ್ನು ಮಕ್ಕಳ ಎದುರು ತೋರಿಸಬೇಡಿ. ಅವರನ್ನು ಪ್ರೀತಿಯಿಂದ ಮಾತನಾಡಿಸಿ. ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಿ.

ಸಿಂಹ(Leo): ಮತ್ತೊಬ್ಬರ ಏಳ್ಗೆ ಕಂಡು ಕರುಬುವುದನ್ನು ಬಿಡಿ. ನಿಮ್ಮ ಏಳ್ಗೆಗಾಗಿ ನೀವೇನು ಮಾಡಬಹುದೋ ನೋಡಿ. ವಿದ್ಯಾರ್ಥಿಗಳಿಗೆ ಅಧ್ಯಯನ ಕುರಿತ ಒತ್ತಡ ಹೆಚ್ಚಿ ಆತಂಕವಾಗುವುದು. ಹೊರಾಂಗಣ ಆಟಗಳಲ್ಲಿ ತೊಡಗಿರಿ. ನವಗ್ರಹ ಪ್ರಾರ್ಥನೆ ಮಾಡಿ. 

ಈ ನಾಲ್ಕು ರಾಶಿಯ ಹುಡುಗರ ಕಡೆ ಹುಡುಗಿಯರಿಗೆ ಆಕರ್ಷಣೆ ಹೆಚ್ಚು, ಯಾಕೆ ಗೊತ್ತಾ?

ಕನ್ಯಾ(Virgo): ಹಿರಿಯರೊಂದಿಗಿನ ಮುನಿಸಿಗೆ ವಿದಾಯ ಹಾಡಲು ಅವಕಾಶಗಳು ಒದಗುವುವು. ಶೀತ, ಜ್ವರ, ಕೆಮ್ಮಿನಂಥ ಕಿರಿಕಿರಿಗಳು ಬಾಧಿಸುವುದು. ನಿಮ್ಮ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ನಿರಂತರ ಪ್ರಯತ್ನ ಅಗತ್ಯ. ಮಾತಿನ ಮೇಲೆ ಹಿಡಿತವಿರಲಿ. ಗೋ ಗ್ರಾಸ ನೀಡಿ.

ತುಲಾ(Libra): ಕಡಿವಾಣವಿಲ್ಲದ ಖರ್ಚಿನಿಂದ ಮನಸ್ಸು ವ್ಯಾಕುಲಗೊಳ್ಳುವುದು. ಆರ್ಥಿಕ ಸಂಕಷ್ಟಗಳು ಹೆಚ್ಚುವುದು. ಉದಾಸೀನತೆಯಿಂದ ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದೀರಿ. ಬೇಗ ಎಚ್ಚೆತ್ತುಕೊಳ್ಳಿ. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

ವೃಶ್ಚಿಕ(Scorpio): ಏಕಾಂಗಿತನ ಬಾಧಿಸುವುದು. ಜನರ ನಡುವೆಯೂ ಒಂಟಿ ಎನಿಸುವುದು. ಶೀತ, ಕೆಮ್ಮಿನಿಂಥ ಆರೋಗ್ಯ ಸಮಸ್ಯೆಗಳು ಬಾಧಿಸುವುವು. ಕಚೇರಿಯಲ್ಲಿ ಕೆಲಸ ವಿಪರೀತವಾಗುವುದು. ಮನೆಯ ನವೀಕರಣ ಕಾರ್ಯಗಳು, ಸುಣ್ಣ ಬಣ್ಣ ಹೊಡೆಸುವುದು ಮುಂತಾದ ಕೆಲಸಗಳು ನಡೆಯಲಿವೆ. ಆಂಜನೇಯನಿಗೆ ವೀಳ್ಯದೆಲೆ ಹಾರ ಅರ್ಪಿಸಿ.

Name and Astrology : ಈ ಅಕ್ಷರದಿಂದ ಹೆಸರು ಆರಂಭವಾಗುವ ಜನ ಕೈ ಇಟ್ಟದ್ದೆಲ್ಲಾ ಚಿನ್ನವಾಗುತ್ತೆ !

ಧನುಸ್ಸು(Sagittarius): ಆಸ್ತಿ ಪಾಸ್ತಿ ಖರೀದಿ ಕೆಲಸಗಳು ಮುಂದಿನ ಹಂತ ತಲುಪುವುವು. ಬಾಡಿಗೆ ಮನೆಯಲ್ಲಿರುವವರು ಬೇರೆ ಮನೆಗೆ ಹೋಗಬಹುದು. ಉದ್ಯೋಗದಲ್ಲಿ ಪ್ರಗತಿ ಇರುವುದಾದರೂ ಕೌಶಲ್ಯ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಈ ಸಂಬಂಧ ಕಲಿಕೆಯಲ್ಲಿ ಭಾಗವಹಿಸಿ. ರಾಮ ಧ್ಯಾನ ಮಾಡಿ. 

ಮಕರ(Capricorn): ಸ್ನೇಹಿತರ ಸಹಕಾರದಿಂದ ಸಾಲ ತೀರಿಸುವಿರಿ. ವಿನಾ ಕಾರಣ ಇನ್ನೊಬ್ಬರನ್ನು ಚುಚ್ಚಿ ಮಾತಾಡಿ ನೋಯಿಸಬೇಡಿ. ಮಾತಿನಲ್ಲಿ ಸಿಹಿ ಇರಲಿ. ಯಾರನ್ನು ನೋಡಿಯೇ ತೀರ್ಪು ನೀಡಲು ಹೋಗಬೇಡಿ. ಸಂತಾನ ಆಪೇಕ್ಷಿಸುತ್ತಿರುವ ದಂಪತಿಗೆ ಫಲ ಸಿದ್ಧಿ. ಕುಲದೇವರ ಸ್ಮರಣೆ ಮಾಡಿ. 

ಕುಂಭ(Aquarius): ಇಂದು ತ್ರಾಸದಾಯಕ ದಿನವಾಗಿದೆ. ಮೇಲಧಿಕಾರಿಗಳಿಂದ ಮಾತು ಕೇಳಬೇಕಾಗಿ ಬರಬಹುದು. ಸಹೋದ್ಯೋಗಿಗಳ ಗಾಸಿಪ್‌ ಕಂಗೆಡಿಸಲಿದೆ. ಉದ್ಯೋಗರಂಗದಲ್ಲಿ ನಿಮ್ಮ ಹೆಸರಿಗೆ ಮಸಿ ಬಳಿಯಲು ಕೆಲವರು ಪ್ರಯತ್ನಿಸಬಹುದು. ಸಾಂಸಾರಿಕವಾಗಿ ಮೌನ ಮುನಿಸುಗಳು ಇರುವುವು. ಮನೆ ದೇವರ ಪ್ರಾರ್ಥನೆ ಮಾಡಿ.

ಮೀನ(Pisces): ಕೆಲಸದಲ್ಲಿ ಪ್ರತಿಭೆಯನ್ನು ತೋರಿಸುವ ಅಗತ್ಯವಿದೆ. ಅದಕ್ಕಾಗಿ ಹೆಚ್ಚಿನ ಏಕಾಗ್ರತೆಯಿಂದ ಶ್ರಮ ಹಾಕಿ. ಹೊಸ ಆರ್ಥಿಕ ಮೂಲಗಳ ಬಗ್ಗೆ ತಿಳಿಯುವಿರಿ. ಮಕ್ಕಳ ಕಡೆಯಿಂದ ನೆರವು ದೊರಕಿ ಅಂದುಕೊಂಡ ಕಾರ್ಯಗಳು ಆಗುವುವು. ಹನುಮಾನ್ ಚಾಲೀಸ್ ಹೇಳಿಕೊಳ್ಳಿ. 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ