Daily Horoscope: ಮಿಥುನಕ್ಕೆ ಧನಲಾಭ, ಕನ್ಯಾ ರಾಶಿಗೆ ಹೆಚ್ಚುವ ಒತ್ತಡ

By Suvarna News  |  First Published Mar 14, 2022, 5:00 AM IST

14 ಮಾರ್ಚ್ 2022, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕಟಕಕ್ಕೆ ಮಹತ್ವದ ದಿನ


ಮೇಷ(Aries): ಪಾಲುದಾರಿಕೆ ವ್ಯಾಪಾರ, ವ್ಯವಹಾರಗಳಿಂದ ಹೆಚ್ಚಿನ ಲಾಭ. ಉದ್ಯೋಗದಲ್ಲಿ ನಾಯಕರಂತೆ ವರ್ತಿಸಿ ಆತ್ಮವಿಶ್ವಾಸದಿಂದ ಕಾರ್ಯ ಸಾಧಿಸುವಿರಿ. ಸಂಗಾತಿಯ ಆರೋಗ್ಯ ಸಮಸ್ಯೆ ಕಂಗೆಡಿಸಬಹುದು. ಮತ್ತೊಬ್ಬರ ಚುಚ್ಚುಮಾತುಗಳಿಗೆ ನಿರ್ಲಕ್ಷ್ಯವೇ ಮದ್ದು. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ವೃಷಭ(Taurus): ಉದ್ಯೋಗದಲ್ಲಿ ದೇಹಾಯಾಸ. ಆದಾಯ ಸಾಲುತ್ತಿಲ್ಲ ಎಂದರೆ ಮೊದಲು ಹೊಸ ಹೊಸ ಕಲಿಕೆಯಲ್ಲಿ ತೊಡಗಿಸಿಕೊಳ್ಳಿ. ಕೌಶಲ್ಯಾಭಿವೃದ್ಧಿ ಕಡೆ ಗಮನ ಹರಿಸಿ. ವ್ಯಾಪಾರ, ವ್ಯವಹಾರಗಳಲ್ಲಿ ನಿಮ್ಮದೇ ಎಡವಟ್ಟು ನಿರ್ಧಾರಗಳು ನಿಮ್ಮನ್ನು ಸೋಲಿಸುತ್ತಿರಬಹುದು. ಪರಾಂಬರಿಸಿ. ಶಿವ ಧ್ಯಾನ ಮಾಡಿ. 

Latest Videos

undefined

ಮಿಥುನ(Gemini): ಹಳೆಯ ಸಾಲ ಮರುಪಾವತಿ ಮಾಡಿ ನಿರಾಳರಾಗುವಿರಿ. ಷೇರು ವ್ಯವಹಾರಗಳಲ್ಲಿ ಲಾಭವಿರಲಿದೆ. ಹೂಡಿಕೆಗಳು ಫಲ ಕೊಡುತ್ತವೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ, ಶ್ರದ್ಧೆ ಸಿದ್ಧಿಸುತ್ತದೆ. ಹೊಸ ವಿಷಯಗಳ ಕಲಿಕೆಯಲ್ಲಿ ತೊಡಗುತ್ತಾರೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಕಟಕ(Cancer): ಪ್ರೇಮದ ವಿಚಾರದಲ್ಲಿ ಮಹತ್ತರ ನಿರ್ಧಾರ ತೆಗೆದುಕೊಳ್ಳಲಿರುವಿರಿ. ವೈವಾಹಿಕ ಜೀವನದಲ್ಲೂ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಗಿ ಬರುವುದು. ಉದ್ಯೋಗ ಸ್ಥಳದಲ್ಲಿ ನೀವು ಬಯಸಿದ ಕೆಲಸವೇನೋ ಸಿಗಬಹುದು, ಆದರೆ ಅದಕ್ಕಾಗಿ ನೀವು ಕೆಲವೊಂದಿಷ್ಟು ತ್ಯಾಗ ಮಾಡಬೇಕಾಗುತ್ತದೆ. ಗೋ ಗ್ರಾಸ ನೀಡಿ. 

ಸಿಂಹ(Leo): ಅತಿಯಾದ ಒಳ್ಳೆಯತನದಿಂದಲೇ ಮತ್ತೊಬ್ಬರಿಗೆ ಹಿಂಸೆ ಮಾಡುವಿರಿ. ಮಕ್ಕಳ ಕಡೆಗಣನೆ ಮಾಡಬೇಡಿ. ಅವರಿಗೆ ಅಗತ್ಯವಿರುವ ಗಮನ ನೀಡಿ. ಉದ್ಯೋಗದಲ್ಲಿ ಉತ್ತಮ ಫಲಿತಾಂಶವಿದೆ. ಭಡ್ತಿ ಹಾಗೂ ಆದಾಯ ಹೆಚ್ಚಳ ಸಾಧ್ಯತೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಲಿಂಗಾಸ್ಟಕ ಹೇಳಿಕೊಳ್ಳಿ. 

Vastu Tips: ಶಬ್ಧ ಹಾಗೂ ಸುಗಂಧದಿಂದ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ

ಕನ್ಯಾ(Virgo): ಪ್ರಯಾಸದ ದಿನ. ತಿರುಗಾಟದಲ್ಲಿ ವಸ್ತು ಕಳುವಾಗಬಹುದು. ಕಚೇರಿಯಲ್ಲಿ ಕೆಲಸದಲ್ಲಿ ಎಡವಟ್ಟುಗಳಾಗಬಹುದು, ಸಂವಹನ ಕೊರತೆಯಿಂದ ಸಮಸ್ಯೆಗಳಾಗಬಹುದು. ತಲೆನೋವು, ಆತಂಕ ಹೆಚ್ಚುವುದು. ಒತ್ತಡ ನಿಭಾಯಿಸಲು ಪ್ರಾಣಾಯಾಮದ ಮೊರೆ ಹೋಗಿ. ಶಿವ ಶಕ್ತಿಯರ ಸ್ಮರಣೆ ಮಾಡಿ. 

ತುಲಾ(Libra): ಔದ್ಯೋಗಿಕವಾಗಿ ನಕಾರಾತ್ಮಕ ಪರಿಣಾಮ ಬೀರುವ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿ. ನಿಮ್ಮ ಹಿಡಿತದಲ್ಲಿ ಏನೂ ಇಲ್ಲ ಎನಿಸಲಿದೆ. ನಿಮ್ಮ ಅಸಹಾಯಕತೆ ಕಂಗೆಡಿಸಲಿದೆ. ಕೆಲವೊಂದು ನಷ್ಟಗಳಿಂದಾಗಿ ಕುಟುಂಬ ಸದಸ್ಯರ ಕಡೆಗಣನೆಗೆ ಒಳಗಾಗುವಿರಿ. ಸುಬ್ರಹ್ಮಣ್ಯ ಶ್ಲೋಕ ಹೇಳಿಕೊಳ್ಳಿ. 

ವೃಶ್ಚಿಕ(Scorpio): ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಲು ಇದು ಉತ್ತಮ ದಿನ. ಲೇವಾದೇವಿ ವ್ಯವಹಾರಗಳಲ್ಲಿ ಲಾಭ. ಕೌಟುಂಬಿಕ ಸೌಖ್ಯವಿಲ್ಲದೆ ಸಂಕಟವಾಗುವುದು. ಉದ್ಯೋಗದಲ್ಲಿ ಮತ್ತೊಬ್ಬರ ತಪ್ಪನ್ನು ಸರಿ ಪಡಿಸುತ್ತಾ ಸಮಯ ವ್ಯರ್ಥವಾಗಬಹುದು. ಶಿವನಿಗೆ ಬಿಲ್ವಾರ್ಚನೆ ಮಾಡಿಸಿ. 

Vastu Remedies: ಕೆಂಪುಚಂದನದ ಈ ಪರಿಹಾರಗಳು ಎಷ್ಟೆಲ್ಲ ಸಮಸ್ಯೆ ನೀಗಿಸುತ್ತವೆ ಗೊತ್ತಾ?

ಧನುಸ್ಸು(Sagittarius): ಅನಿರೀಕ್ಷಿತ ಧನಲಾಭಗಳಿಂದ ಸಂತೋಷ. ಔದ್ಯೋಗಿಕವಾಗಿ ಪ್ರಸಿದ್ಧಿ ಪಡೆಯುವ ಯೋಗವಿದೆ. ನೀವು ಹಾಕುತ್ತಿರುವ ಪರಿಶ್ರಮ ಗಣನೆಗೆ ಬರಲಿದೆ. ಮಕ್ಕಳ ಏಳ್ಗೆ ನೆಮ್ಮದಿ ತರಲಿದೆ. ಅವಿವಾಹಿತರಿಗೆ ಅವಕಾಶಗಳು ಬರಲಿವೆ. ಬಳಸಿಕೊಳ್ಳುವುದೇ ಜಾಣತನ. ಶಿವನಿಗೆ ಜಲಾಭಿಷೇಕ ಮಾಡಿ. 

ಮಕರ(Capricorn): ಕೋಪ ಮತ್ತು ಹಠಮಾರಿ ವರ್ತನೆಯಿಂದ ಯಾರಿಗೂ ನೆಮ್ಮದಿ ಇರದು. ಅವನ್ನು ಬದಿಗಿಟ್ಟು ತಾಳ್ಮೆ ವಹಿಸಿ. ಧೀರ್ಘ ಕಾಲಿಕ ಆರೋಗ್ಯ ಸಮಸ್ಯೆಗಳಲ್ಲಿ ಚೇತರಿಕೆ ಕಂಡು ಬಂದು ಸಮಾಧಾನ ಎನಿಸುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಕುಂಭ(Aquarius): ಔದ್ಯೋಗಿಕ ಜೀವನಕ್ಕೆ ಸಂಬಂಧಿಸಿದಂತೆ ಮಹತ್ತರ ಮಾತುಕತೆಗಳಲ್ಲಿ ಪಾಲ್ಗೊಳ್ಳುವಿರಿ. ಆತ್ಮವಿಶ್ವಾಸವೇ ಬಲ ಎಂಬುದು ನೆನಪಿರಲಿ. ಕುಟುಂಬದ ವಾತಾವರಣವು ಮಂಗಳಕರವಾಗಿರುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚುತ್ತದೆ. ಹಸಿರು ಪದಾರ್ಥಗಳನ್ನು ದಾನ ಮಾಡಿ. 

ಮೀನ(Pisces): ಆಸ್ತಿ ಸಂಬಂಧಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವಿರಿ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡು ಔದ್ಯೋಗಿಕ ಬೆಳವಣಿಗೆಯನ್ನು ಖಚಿತ ಪಡಿಸಿಕೊಳ್ಳಿ. ಹಸುವಿಗೆ ಹಸಿರು ತಿನ್ನಿಸಿ.

click me!