Daily Horoscope: ಕುಂಭಕ್ಕೆ ದೈವಬಲ, ಸಿಂಹಕ್ಕೆ ಕಾಡುವ ಗೊಂದಲ

By Suvarna NewsFirst Published Mar 7, 2022, 5:13 AM IST
Highlights

7 ಮಾರ್ಚ್ 2022, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ತುಲಾಕ್ಕಿರಲಿದೆ ಅನಿರೀಕ್ಷಿತ ಸಂತಸ

ಮೇಷ(Aries): ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವ ಜೊತೆಗೆ ಏಕಾಗ್ರತೆಯೂ ಹೆಚ್ಚುವುದು. ವ್ಯಾಪಾರ, ವ್ಯವಹಾರ, ಉದ್ಯೋಗ- ವೃತ್ತಿ ಯಾವುದೇ ಇರಲಿ, ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಕೆಲಸ ಮಾಡಿ ಮುಗಿಸುವಿರಿ. ಅಕ್ರಮ ಕೆಲಸಗಳಿಗೆ ತಕ್ಕ ಶಾಸ್ತಿಯಾದೀತು ಎಚ್ಚರ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ವೃಷಭ(Taurus): ಮನಸ್ಸು ಕೊಂಚ ದುರ್ಬಲವಾಗಿರುವುದು. ಎಲ್ಲರೂ ಇದ್ದೂ ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂಬ ಕೊರಗು ಕಾಡುವುದು. ಇಂಥ ಸಂದರ್ಭದಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಬೇಡಿ. ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಂತೆನಿಸಬಹುದು. ಕಾಲ ಎಲ್ಲಕ್ಕೂ ಪರಿಹಾರ ನೀಡುತ್ತದೆ ಎಂಬುದು ನೆನಪಿರಲಿ. ಶಿವ ಶತನಾಮಾವಳಿ ಪಠಣ ಮಾಡಿ. 

Latest Videos

ಮಿಥುನ(Gemini): ನಿಮ್ಮ ಮಾತಿನಿಂದಲೇ ಎಲ್ಲರನ್ನೂ ಆಕರ್ಷಿಸುವಿರಿ. ಶುಭ ಕಾರ್ಯದಲ್ಲಿ ಭಾಗಿಯಾಗುವಿರಿ. ಬಂಧು ಮಿತ್ರರ ಭೇಟಿಯಿಂದ ಸಂತಸ. ಉದ್ಯೋಗದಲ್ಲಿ ಭಡ್ತಿ ದೊರೆಯುವುದು. ಅಲ್ಪಾವಧಿಯ ಷೇರು ವ್ಯವಹಾರಗಳು ನಷ್ಟ ತರಬಹುದು. ಸ್ವಲ್ಪ ಅಧ್ಯಯನ ನಡೆಸಿ ಮುಂದುವರಿಯಿರಿ. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ. 

ಕಟಕ(Cancer): ಎಲ್ಲರೊಂದಿಗೆ ಒಳ್ಳೆಯ ಮಾತುಗಳನ್ನೇ ಆಡಿ. ಕೋಪ, ಅಸಮಾಧಾನ ಸಲ್ಲದು. ಇದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ತಲೆನೋವು ಕಾಡಬಹುದು. ಮತ್ಯಾರದೋ ಹಣಕಾಸಿನ ವಿಷಯಕ್ಕೆ ಮೂಗು ತೂರಿಸಬೇಡಿ. ಉದ್ಯೋಗದಲ್ಲಿ ಸಾಮಾನ್ಯ ದಿನ. ಸುಬ್ರಹ್ಮಣ್ಯನಿಗೆ ಪ್ರಾರ್ಥಿಸಿ. 

ಸಿಂಹ(Leo): ಬಹಳಷ್ಟು ವಿಷಯಗಳು ತಲೆಯಲ್ಲಿ ಕೊರೆಯುತ್ತಿವೆ. ಎಲ್ಲಕ್ಕೂ ಹಣಕಾಸಿನ ನಿಭಾವಣೆ ಸಾಧ್ಯವೇ ಎಂಬ ಗೊಂದಲ ಕಾಡುತ್ತಿದೆ. ಒಂದೊಂದಾಗಿ ಹೆಜ್ಜೆ ಮುಂದಿಡಿ. ಮತ್ತೆಲ್ಲವೂ ತಾನಾಗಿಯೇ ಸಾಧ್ಯವಾಗುತ್ತದೆ. ಅದೃಷ್ಟದ ದಿನಗಳು ಹತ್ತಿರದಲ್ಲಿವೆ. ಶಿವ ಶಕ್ತಿಯರನ್ನು ಸ್ಮರಿಸಿ. 

ಕನ್ಯಾ(Virgo): ಒಳ್ಳೆಯ ಜನರ ಭೇಟಿಯಿಂದ ಮನಸ್ಸು ಹಿತಕರವಾಗಿರುವುದು. ನಿರುದ್ಯೋಗಿಗಳಿಗೆ ಅವಕಾಶಗಳು ಅರಸಿ ಬರುವುವು. ಸಾಲ ಮಾಡಲು ಇಲ್ಲವೇ ಕೊಡಲು ಹೋಗಬೇಡಿ. ಉಳಿತಾಯ ಯೋಜನೆಗಳ ಬಗ್ಗೆ ಗಮನ ಹರಿಸಿ. ಪ್ರೇಮಿಗಳಿಗೆ ದಿನ ಚೆನ್ನಾಗಿದೆ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

Virgo Personality traits: ಪರಿಪೂರ್ಣತೆ, ರಚನಾತ್ಮಕತೆ- ಇದು ಕನ್ಯಾ ರಾಶಿಯ ಸ್ವಭಾವ

ತುಲಾ(Libra): ರಂಗಭೂಮಿ, ಚಿತ್ರಕಲೆಗಳಲ್ಲಿರುವ ಕಲಾವಿದರಿಗೆ ಉತ್ತಮ ದಿನ. ಅವಕಾಶ, ಮೆಚ್ಚುಗೆ ಹೆಚ್ಚುತ್ತದೆ. ಅನಿರೀಕ್ಷಿತ ಸುದ್ದಿಗಳು ಸಂತಸ ತರಲಿವೆ. ಉದ್ಯೋಗದಲ್ಲಿ ಭಡ್ತಿ ಇರಬಹುದು ಇಲ್ಲವೇ ಬೇರೆ ಯಾವುದೋ ರೀತಿಯ ಲಾಭ ದೊರೆಯಬಹುದು. ವೈವಾಹಿಕ ಜೀವನ ಚೆನ್ನಾಗಿರಲಿದೆ. ಶಿವನಿಗೆ ಜಲಾಭಿಷೇಕ ಮಾಡಿಸಿ.

ವೃಶ್ಚಿಕ(Scorpio): ಇಷ್ಟು ದಿನ ಅನುಭವಿಸಿದ ನೋವು, ಅವಮಾನಗಳು ಕೊನೆ ಕಾಣುವ ಸಂದರ್ಭಗಳು ಬರುತ್ತವೆ. ನಂಬಿಕಸ್ಥರು ನಿಮ್ಮ ಬಳಿ ಸಹಾಯ ಯಾಚಿಸಿ ಬರಬಹುದು. ಕೈಲಾದ ಸಹಾಯ ಮಾಡಿ. ನಿಮ್ಮ ನಿಲುವನ್ನು ಬದಲಿಸಿಕೊಳ್ಳಬೇಕಾದ ಸಂದರ್ಭಗಳು ಎದುರಾಗಬಹುದು. ಲಿಂಗಾಸ್ಟಕ ಹೇಳಿಕೊಳ್ಳಿ. 

Mahabharata Weapons: ಇಂದಿನ ಅಣ್ವಸ್ತ್ರವೇ ಮಹಾಭಾರತದ ಬ್ರಹ್ಮಾಸ್ತ್ರನಾ?

ಧನುಸ್ಸು(Sagittarius): ಪೂರ್ವಪೀಡಿತ ಯೋಚನೆಯಿಂದ ಯಾರನ್ನೂ ಭೇಟಿಯಾಗಬೇಡಿ. ತೆರೆದ ಮನಸ್ಸಿನಿಂದ ಅವರೊಂದಿಗೆ ವಿಷಯಗಳನ್ನು ಚರ್ಚಿಸಿ. ನೀವಂದುಕೊಂಡ ಕೆಲಸಗಳೆಲ್ಲ ಸಂಪೂರ್ಣವಾಗಲಿವೆ. ಉದ್ಯೋಗದಲ್ಲಿ ಉತ್ತಮ ಫಲವಿದೆ. ರುದ್ರಾಭಿಷೇಕ ಮಾಡಿಸಿ. 

ಮಕರ(Capricorn): ನಿಮ್ಮ ಗುರಿಗೆ ಕುಟುಂಬ ಸದಸ್ಯರ ಸಹಾಯ ದೊರೆತು ಸಮಾಧಾನವಾಗುವುದು. ಪರಿಶ್ರಮ ಹೆಚ್ಚಿಸಿ. ಕಾನೂನು ವ್ಯವಹಾರಗಳಲ್ಲಿ ಗೆಲುವು ಇರಲಿದೆ. ಸುಳ್ಳು ಮಾತುಗಳು, ಬಣ್ಣದ ಮಾತುಗಳಿಂದ ದೂರವಿರಿ. ಚರ್ಮ ಸಮಸ್ಯೆಗಳು ಹೆಚ್ಚಬಹುದು. ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ. 

ಕುಂಭ(Aquarius): ಉತ್ತಮ ಆಲೋಚನೆಗಳಿಂದ ನವೀನ ರೀತಿಯ ಯೋಜನೆಗಳನ್ನು ರೂಪಿಸುವಿರಿ. ಷೇರು ವ್ಯವಹಾರಗಳಲ್ಲಿ ಲಾಭವಿರಲಿದೆ. ಆತ್ಮವಿಶ್ವಾಸ ಹೆಚ್ಚಾಗಬಹುದು. ದೈವಬಲ ನಿಮಗಿದೆ. ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಕಾಳಜಿ ಅಗತ್ಯ. ಮೃತ್ಯುಂಜಯ ಸ್ಮರಣೆ ಮಾಡಿ. 

ಮೀನ(Pisces): ನಿಮ್ಮನ್ನು ಪದೇ ಪದೆ ಕಾಡುವ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಯೋಗ, ಧ್ಯಾನವೇ ಮದ್ದು. ಚೆನ್ನಾಗಿ ಅಭ್ಯಾಸ ಮಾಡಿ. ಅಪ್ರಾಮಾಣಿಕತೆಯಿಂದ ಕೆಡುಕಾಗಬಹುದು. ಸೂಚನೆ ಕೊಡದೇ ಬೇರೆ ಬೇರೆ ಖರ್ಚುಗಳು ಬರಬಹುದು. ಶಿವ ಶತನಾಮಾವಳಿ ಹೇಳಿಕೊಳ್ಳಿ. 

click me!