Daily Horoscope: ವೃಶ್ಚಿಕಕ್ಕೆ ಕೋಪ ತರುವ ಕೊರಗು, ಕಟಕಕ್ಕೆ ಪ್ರೇಮ ವೈಫಲ್ಯ

Published : Jan 08, 2022, 07:20 AM IST
Daily Horoscope: ವೃಶ್ಚಿಕಕ್ಕೆ ಕೋಪ ತರುವ ಕೊರಗು, ಕಟಕಕ್ಕೆ ಪ್ರೇಮ ವೈಫಲ್ಯ

ಸಾರಾಂಶ

8 ಜನವರಿ 2022, ಶನಿವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಸಿಂಹಕ್ಕೆ ಆಸ್ತಿ ಖರೀದಿಯಲ್ಲಿ ಆಸಕ್ತಿ, ನಿಮ್ಮ ರಾಶಿ ಫಲ ಹೇಗಿದೆ ನೋಡಿ..

ಮೇಷ(Aries): ವೈವಾಹಿಕ ಜೀವನದಲ್ಲಿ ಬಿರುಕುಗಳು ಮೂಡಬಹುದು. ನಿಮ್ಮ ವರ್ತನೆಯನ್ನು ಆತ್ಮವಿಮರ್ಶೆಗೆ ಹಚ್ಚಿ. ವೃಥಾ ಅನುಮಾನಗಳನ್ನು ಬಿಡಿ. ಶೇರು ವ್ಯವಹಾರಗಳಲ್ಲಿ ನಷ್ಟ. ಹಠಾತ್ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಕಪ್ಪು ಬಟ್ಟೆಗಳ ದಾನ ನೀಡಿ. 

ವೃಷಭ(Taurus): ಬುದ್ಧಿ ಹೇಳಲು ಹೋಗಿ ಸಂಬಂಧ ಕೆಡಿಸಿಕೊಳ್ಳುವ ಸಾಧ್ಯತೆ ಇದೆ. ದಿನಸಿ ಅಂಗಡಿ ಇರುವವರಿಗೆ ಬಹಳಷ್ಟು ಲಾಭ. ನಿರುದ್ಯೋಗಿಗಳಿಗೆ ಅವಕಾಶಗಳು ಬರಲಿವೆ. ದೇವರನ್ನು ಸ್ಮರಿಸಲು ಮರೆಯದಿರಿ. ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗರೂಕತೆ ಅಗತ್ಯ. ಶನಿ ಸ್ಮರಣೆ ಮಾಡಿ. 

ಮಿಥುನ(Gemini): ಹಿರಿಯರೊಂದಿಗಿನ ಮುನಿಸಿಗೆ ವಿದಾಯ ಹಾಡಲು ಅವಕಾಶಗಳು ಒದಗುವುವು. ಆಸ್ತಿ ವಿಚಾರವಾಗಿ ಹೆಚ್ಚು ಕೆದಕಲು ಹೋಗಬೇಡಿ. ಸಂಶೋಧನಾ ಕ್ಷೇತ್ರದಲ್ಲಿರುವವರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೊಸ ಕಲಿಕೆಯಿಂದ ಮನಸ್ಸು ಮುದಗೊಳ್ಳುವುದು. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

Gemstones: ಹವಳ ಧಾರಣೆಯಿಂದ ಈ ರಾಶಿಯವರಿಗೆ ಸಖತ್ ಲಕ್..!

ಕಟಕ(Cancer): ಸಂಗಾತಿಯ ಮಾತುಗಳು ಮನಸ್ಸನ್ನು ಘಾಸಿ ಮಾಡಲಿವೆ. ಪ್ರೇಮ ವ್ಯವಹಾರಗಳಲ್ಲಿ ಬಿರುಕು ಮೂಡಬಹುದು. ಉದ್ಯೋಗದಲ್ಲಿ ಏರುಪೇರಿಲ್ಲ. ಮಕ್ಕಳು ಹಾದಿ ತಪ್ಪಿದ ಸೂಚನೆ ಸಿಕ್ಕಲಿದೆ. ತಾಳ್ಮೆಯಿಂದ ಮುಂದುವರಿಯಿರಿ. ಹತ್ತಿರದ ದೇವಸ್ಥಾನ ಭೇಟಿಯಿಂದ ಮನಸ್ಸು ಕೊಂಚ ನಿರಾಳವಾಗಬಹುದು. 

ಸಿಂಹ(Leo): ಆಸ್ತಿ ಖರೀದಿಯಲ್ಲಿ ಆಸಕ್ತಿ ಹೆಚ್ಚಲಿದೆ. ಆದರೂ ಪ್ರಚಲಿತ ವಿದ್ಯಮಾನಗಳು ಗೊಂದಲ ಹುಟ್ಟು ಹಾಕಲಿವೆ. ಅಪರಿಚಿತರ ಕರೆಯಿಂದ ನಿರ್ಧಾರ ಬದಲಾಗಬಹುದು. ಪತ್ನಿಯ ಸಹಕಾರ ಚೆನ್ನಾಗಿರಲಿದೆ. ಮಕ್ಕಳ ಜೊತೆ ಹೆಚ್ಚಿನ ಸಮಯ ವ್ಯಯಿಸುವುದರಿಂದ ಚೈತನ್ಯ. ಆಂಜನೇಯ ಪ್ರಾರ್ಥನೆ ಮಾಡಿ. 

Personality Traits and Zodiacs: ಈ 4 ರಾಶಿಯ ಪುರುಷರು ಸಂಬಂಧವನ್ನು ಕಂಟ್ರೋಲ್ ಮಾಡ ಬಯಸುತ್ತಾರೆ!

ಕನ್ಯಾ(Virgo): ಸಂಗಾತಿಯ ಕಡೆಯಿಂದ ಧನಲಾಭವಿರಲಿದೆ. ಆರೋಗ್ಯ ಸಮಸ್ಯೆಗಳು ಕಂಗೆಡಿಸಬಹುದು. ಮನೆ ಮದ್ದು ಮಾಡಿಕೊಳ್ಳಿ. ಹೊಸದಾಗಿ ಶುರು ಮಾಡಿರುವ ಯೋಜನೆಗಳು ಆತಂಕ ಹೆಚ್ಚಿಸುವುವು. ಪಾರಂಪರಿಕ ಉದ್ಯೋಗದಲ್ಲಿ ತೊಡಗಿರುವವರಿಗೆ ಲಾಭ. ಕರಿ ಎಳ್ಳನ್ನು ದಾನ ನೀಡಿ. 

ತುಲಾ(Libra): ಯಾವುದೋ ವಿಷಯಕ್ಕೆ ಭಯ ಕಾಡುವುದು. ಸಂಜೆಯ ಹೊತ್ತಿಗೆ ಮನಸ್ಸಿಗೆ ಸಮಾಧಾನ ಸಿಗಲಿದೆ. ಹಿರಿಯರ ಮಾತುಗಳು ನೋಯಿಸಬಹುದು. ಎದುರಾಡದಿರಿ. ಭೂರಿ ಭೋಜನ ಉಣ್ಣುವ ಅವಕಾಶವಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಜರುಗಲಿವೆ. ನವಗ್ರಹ ಜಪ ಮಾಡಿ. 

Astrology And Personality Traits: ಈ ರಾಶಿಯವರು ಸಂಗಾತಿಗೆಂದೂ ಮೋಸ ಮಾಡಲ್ಲ!

ವೃಶ್ಚಿಕ(Scorpio): ಅತಿಯಾದ ಕೋಪದಿಂದ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವಿರಿ. ನಂತರ ಕೊರಗುವಿರಿ. ಹೊಸ ವಸ್ತು ಖರೀದಿ ಸಮಾಧಾನ ತರುವುದಿಲ್ಲ. ಶೀತ, ಜ್ವರ, ಕೆಮ್ಮಿನಂಥ ಕಿರಿಕಿರಿಗಳು ಬಾಧಿಸುವುದು. ನಿಮ್ಮ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ನಿರಂತರ ಪ್ರಯತ್ನ ಅಗತ್ಯ. ಗೋ ಗ್ರಾಸ ನೀಡಿ.

ಧನಸ್ಸು(Sagittarius): ಕೌಟುಂಬಿಕ ಜೀವನದಲ್ಲಿ ಕೆಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ. ಅಧಿಕಾರಿ ವರ್ಗದವರಿಗೆ ರಾಜಕಾರಣಿಗಳ ಕಿರುಕುಳ ಹೆಚ್ಚಲಿದೆ. ಹೊಸ ಆರ್ಥಿಕ ಮೂಲಗಳ ಬಗ್ಗೆ ತಿಳಿಯುವಿರಿ. ಮಕ್ಕಳ ಕಡೆಯಿಂದ ನೆರವು ದೊರಕಿ ಅಂದುಕೊಂಡ ಕಾರ್ಯಗಳು ಆಗುವುವು. ಹನುಮಾನ್ ಚಾಲೀಸ್ ಹೇಳಿಕೊಳ್ಳಿ. 

ಮಕರ(Capricorn): ಸಾಲ ವಾಪಾಸಾತಿಯಿಂದ ಖುಷಿಯಾಗುವುದು. ಧಾರ್ಮಿಕ ವಿಚಾರಗಳಲ್ಲಿ ಮನಸ್ಸು ತೊಡಗಿಸಿಕೊಳ್ಳುವುದು. ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಸೇವನೆ ಮಾಡಿ. ಮನೆಯ ಕೆಲ ವಸ್ತುಗಳು ರಿಪೇರಿಗೆ ಬರಬಹುದು. ಪಕ್ಷಿಗಳಿಗೆ ಧಾನ್ಯ ನೀಡಿ.  

ಕುಂಭ(Aquarius): ಎಲ್ಲರನ್ನೂ ಮೆಚ್ಚಿಸಲು ಹೋಗಿ ನಿರಾಶೆ ಅನುಭವಿಸುವಿರಿ. ವಾತ ಸಂಬಂಧಿ ಆರೋಗ್ಯ ಸಮಸ್ಯೆಗಳು ಕಾಣಿಸುವುವು. ಕುಟುಂಬದ ಸಮಸ್ಯೆಗಳ ಬಗ್ಗೆ ಗಮನ ಹರಿಸಿ. ಜಗಳಗಂಟ ನಡುವಳಿಕೆಯಿಂದ ಸ್ನೇಹ ಕಡಿದು ಹೋಗಬಹುದು. ಶಿವ ಸ್ಮರಣೆ ಮಾಡಿ. 

ಮೀನ(Pisces): ಬದುಕಿನ ಕಷ್ಟಗಳು ಮುಗಿದಂತೆ ಕಾಣುತ್ತಿಲ್ಲ. ಆದರೆ, ಭರವಸೆ ಕಳೆದುಕೊಳ್ಳಬೇಡಿ. ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿ. ಹವ್ಯಾಸಗಳಿಂದ ಧನಲಾಭವಾಗುವುದು. ಪಾಲುದಾರಿಕೆಯಿಂದ ಕೆಲಸಗಳು ಸುಲಭವಾಗುವುವು. ಶಿವ ಸಹಸ್ರನಾಮ ಹೇಳಿಕೊಳ್ಳಿ. 

PREV
Read more Articles on
click me!

Recommended Stories

ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ