Daily Horoscope: ಕುಂಭಕ್ಕೆ ಹೊಸ ಮನೆ ಖರೀದಿ ಸಾಧ್ಯತೆ, ಮಿಥುನಕ್ಕೆ ತಂದೆಯೊಂದಿಗೆ ಜಗಳ

Published : Feb 07, 2022, 05:05 AM IST
Daily Horoscope: ಕುಂಭಕ್ಕೆ ಹೊಸ ಮನೆ ಖರೀದಿ ಸಾಧ್ಯತೆ, ಮಿಥುನಕ್ಕೆ ತಂದೆಯೊಂದಿಗೆ ಜಗಳ

ಸಾರಾಂಶ

7 ಫೆಬ್ರವರಿ 2022, ಸೋಮವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಕೈ ತಪ್ಪಿ ಹೋದ ಯೋಜನೆ ಮರಳಿದ ಸಂತಸದಲ್ಲಿ ಮೇಷ 

ಮೇಷ(Aries): ಕೈ ತಪ್ಪಿ ಹೋಯಿತೆಂದು ಬೇಸರ ತಂದಿದ್ದ ಯೋಜನೆಯೊಂದು ಮರಳಿ ನಿಮ್ಮ ಕೈಗೆ ಬರುವುದು. ವಿವಾಹಾಕಾಂಕ್ಷಿಗಳಿಗೆ ನಿರಾಸೆ. ತಿರುಗಾಟದಿಂದ ದೇಹಾಲಸ್ಯ ಹೆಚ್ಚುವುದು. ಸಾಂಸಾರಿಕವಾಗಿ ಮೌನ ಮುನಿಸುಗಳು ಇರುವುವು. ಶಿವ ಪಾರ್ವತಿಯ ಧ್ಯಾನ ಮಾಡಿ. 

ವೃಷಭ(Taurus): ಅನಿರೀಕ್ಷಿತವಾಗಿ ತಿರುಗಾಟ ಸಾಧ್ಯತೆ ಏಳಬಹುದು. ಮೂತ್ರಪಿಂಡ ಸಮಸ್ಯೆ ಎದುರಾಗಬಹುದು. ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡಿಸಿ. ಆರ್ಥಿಕ ಖರ್ಚುವೆಚ್ಚಗಳು ಹೆಚ್ಚಲಿವೆ. ಸಹೋದರಿಯ ಸಹಕಾರದಿಂದ ಕಾರ್ಯ ಸಾಧನೆ, ರುದ್ರಾಭಿಷೇಕ ಮಾಡಿಸಿ.

ಮಿಥುನ(Gemini): ಪೋಷಕರೊಂದಿಗಿನವ ಭಿನ್ನಾಭಿಪ್ರಾಯ ಹೆಚ್ಚಬಹುದು. ತಂದೆಯ ಚಟಗಳು, ನಡುವಳಿಕೆ ಅವಮಾನಕಾರಿ ಎನಿಸುವುದು. ಉದ್ಯೋಗದಲ್ಲಿ ಪ್ರಗತಿ ಇರುವುದಾದರೂ ಹೊಸ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ಕಟಕ(Cancer): ವ್ಯಾಪಾರದಲ್ಲಿ ಲಾಭ ಹೆಚ್ಚಿರಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ. ಅವಿವಾಹಿತರಿಗೆ ಕಂಕಣಬಲವಿದೆ. ಜೀವನ ಸಂಗಾತಿಯ ಜೊತೆಗೆ ಆನಂದಮಯ ಕ್ಷಣಗಳನ್ನು ಕಳೆಯುವಿರಿ. ಪ್ರಯಾಣ ಯೋಗವಿದೆ. ಲಕ್ಷ್ಮೀ ವೆಂಕಟೇಶ್ವರ ಪ್ರಾರ್ಥನೆ ಮಾಡಿ. 

ಸಿಂಹ(Leo): ಕ್ರೀಡಾ ಚಟುವಟಿಕೆ ಇಡೀ ದಿನ ಮನಸ್ಸಿಗೆ ಚೈತನ್ಯ ನೀಡುವುದು. ಕಚೇರಿಯ ಕಾರ್ಯ ವಿಪರೀತವಿದ್ದರೂ, ನೀವದನ್ನು ಚೆನ್ನಾಗಿ ನಿಭಾಯಿಸಬಲ್ಲಿರಿ. ವ್ಯಾಪಾರಿಗಳಿಗೆ ಕೊಂಚ ನಿರಾಶೆ. ಆರೋಗ್ಯ ಚೆನ್ನಾಗಿರಲಿದೆ. ಹೂಡಿಕೆ ಫಲ ಕೊಡುವುದು. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ. 

Weekly Horoscope: ಮೇಷಕ್ಕೆ ಅಭಿವೃದ್ಧಿಯ ವಾರ, ಮಿಥುನಕ್ಕೆ ಚಿಂತೆಗಳ ಭಾರ

ಕನ್ಯಾ(Virgo): ಏಕಾಂಗಿತನ ಬಾಧಿಸುವುದು. ಎಲ್ಲ ಇದ್ದೂ ಒಂಟಿ ಎನಿಸುವುದು. ಹಿಂದೆ ಮಾಡಿದ ತಪ್ಪುಗಳು ಇಂದು ದೊಡ್ಡದಾಗಿ ಬಾಧಿಸಬಹುದು. ವಾತಾವರಣ ಸಂಬಂಧಿ ಕಾಯಿಲೆಗಳು ಕಂಡು ಬಂದಾವು. ನಿರುದ್ಯೋಗಿಗಳಿಗೆ ಅವಕಾಶ ಬರಬಹುದು. ಗಣೇಶ ಪ್ರಾರ್ಥನೆ ಮಾಡಿ. 

ತುಲಾ(Libra): ಉದ್ಯೋಗದಲ್ಲಿ ಒತ್ತಡದ ದಿನ. ಸಂಗಾತಿಯ ಅನಾರೋಗ್ಯ ಕಾರಣಕ್ಕೆ ಪ್ರಯಾಣ ಮಾಡಬೇಕಾಗಬಹುದು. ವಿದ್ಯಾರ್ಥಿಗಳಿಗೆ ಜವಾಬ್ದಾರಿಗಳು ಹೆಚ್ಚಿ ಒತ್ತಡವೆನಿಸಬಹುದು. ಹೊರಾಂಗಣ ಆಟಗಳಲ್ಲಿ ತೊಡಗಿರಿ. ನವಗ್ರಹ ಪ್ರಾರ್ಥನೆ ಮಾಡಿ. 

ವೃಶ್ಚಿಕ(Scorpio): ಪ್ರತಿಭಾನ್ವಿತರಿಗೆ ಅವಕಾಶಗಳು ಹೆಚ್ಚಲಿವೆ. ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿರುವಿರಿ. ಹೆಚ್ಚಲಿರುವ ಆತ್ಮವಿಶ್ವಾಸದಿಂದ ಪ್ರಗತಿ ಕಾಣುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಪ್ರಶಂಸೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಪ್ರವಾಸದಿಂದ ಹೆಚ್ಚುವ ಚೈತನ್ಯ. ಗಣಪತಿಗೆ ಕಡಲೆ ಬೆಲ್ಲ ಅರ್ಪಿಸಿ. 

Bedroom Vastu : ಹಾಸಿಗೆಯಲ್ಲಿ ಕುಳಿತು ತಿನ್ನುತ್ತೀರಾ? ಇದರಿಂದಲೇ ಹಣ ಕೈಲಿ ನಿಲ್ಲುತ್ತಿಲ್ಲ!

ಧನುಸ್ಸು(Sagittarius): ಆಪ್ತರೆನಿಸಿಕೊಂಡವರು ಕಡೆಗಣನೆ ಮಾಡುವುದರಿಂದ ಬೇಸರವಾಗುವುದು. ಬಹು ಕಾಲದ ಕನಸೊಂದು ಸುಲಭವಾಗಿ ಈಡೇರುವುದು. ವಿಮಾನ ಯಾನ ಸಾಧ್ಯತೆ. ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಗುವುದು. ರೈತರಿಗೆ ಲಾಭವಿರಲಿದೆ. ಶಿವ ಶಕ್ತಿಯ ಪ್ರಾರ್ಥನೆ ಮಾಡಿ. 

ಮಕರ(Capricorn): ಸುಮ್ಮನೆ ಕನಸು ಕಾಣುತ್ತಾ ಕಾಲಹರಣ ಮಾಡುವಿರಿ. ಪ್ರಭಾವ ಹಾಗೂ ಸಹಕಾರದಿಂದ ವೃತ್ತಿರಂಗದಲ್ಲಿ ಮುನ್ನಡೆ. ವಿದ್ಯಾರ್ಥಿಗಳು ಸ್ನೇಹಿತರೊಂದಿಗೆ ಹರಟೆಯಲ್ಲಿ ತೊಡಗಿ ಓದು ಹಿಂದುಳಿಯಬಹುದು. ಸ್ತ್ರೀಯರು ನೀರಿನ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಶಿ ಶತನಾಮಾವಳಿ ಹೇಳಿ. 

ಕುಂಭ(Aquarius): ನೂತನ ಗೃಹ ನಿರ್ಮಾಣಕ್ಕೆ, ವಾಹನ ಖರೀದಿಗೆ ಸಕಾಲ. ನಿತ್ಯದ ಕೆಲಸದಲ್ಲಿ ತುಸು ಶ್ರಮ ಎನಿಸಲಿದೆ. ಕೌಟುಂಬಿಕವಾಗಿ ಕಿರಿ ಕಿರಿಗಳು ತಪ್ಪಲಾರವು. ಹೆತ್ತವರ ಅನಾರೋಗ್ಯದಿಂದ ಮನಸ್ಸಿನ ನೆಮ್ಮದಿ ಕೆಡಲಿದೆ. ಕೇವಲ ಒಳ್ಳೆಯ ವಿಷಯ ಗ್ರಹಿಸಲು ಪ್ರಯತ್ನಿಸಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಮೀನ(Pisces): ಹತ್ತಿರದ ಸಂಬಂಧಿಗಳ ಆಗಮನ ಎಷ್ಟು ಸಂತೋಷ ತರುವುದೋ, ಅಷ್ಟೇ ಕೆಲಸಗಳು ಹೆಚ್ಚಿ ದಣಿವಾಗುವುದು. ಬಿಡುವಿಲ್ಲದ ಕೆಲಸ. ನಿಮ್ಮ ಬಗ್ಗೆಯೇ ಹೇಳಿಕೊಳ್ಳುವುದು ಬಿಟ್ಟು ಇತರರ ಬದುಕಿನ ಬಗ್ಗೆಯೂ ವಿಚಾರಿಸಿ. ಸ್ವಂತ ಉದ್ಯಮ ಪ್ರಗತಿ ಕಾಣಲಿದೆ. ಸುಬ್ರಹ್ಮಣ್ಯ ಸ್ಮರಣೆ ಮಾಡಿ. 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ