Daily Horoscope: ಕಟಕಕ್ಕೆ ವಿವಾಹ ಕಂಟಕ, ಕುಂಭದ ಕನಸು ನನಸು

Published : Feb 20, 2022, 07:10 AM IST
Daily Horoscope: ಕಟಕಕ್ಕೆ ವಿವಾಹ ಕಂಟಕ, ಕುಂಭದ ಕನಸು ನನಸು

ಸಾರಾಂಶ

20 ಫೆಬ್ರವರಿ 2022, ಭಾನುವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ವೃಶ್ಚಿಕ ರಾಶಿಗೆ ಮಾನಸಿಕ ಕಿರಿಕಿರಿ ಹೆಚ್ಚಳ

ಮೇಷ(Aries): ಹಿಂದಿನಿಂದ ಮಾತನಾಡುವವರ ಬಗ್ಗೆ, ಹಲ್ಲು ಮಸೆಯುವವರ ಬಗ್ಗೆ ಎಚ್ಚರಿಕೆ ಅಗತ್ಯ. ನಿಮ್ಮ ನೇರಾನೇರ ನುಡಿಗಳು ಶತ್ರುಗಳನ್ನು ಹೆಚ್ಚಿಸಬಹುದು. ಕೆಲಸದಲ್ಲಿ ಸಿಕ್ಕ ಯಶಸ್ಸನ್ನು ಹಬ್ಬದಂತೆ ಆಚರಿಸುವಿರಿ. ಕುಟುಂಬಕ್ಕಾಗಿ ಸಮಯ ಮೀಸಲಿಡುವಿರಿ. ವೆಂಕಟೇಶ್ವರನಲ್ಲಿ ಪ್ರಾರ್ಥನೆ ಮಾಡಿ. 

ವೃಷಭ(Taurus): ಮನೆಯಲ್ಲಿ ಧಾರ್ಮಿಕ, ಕೌಟುಂಬಿಕ ಶುಭ ಕಾರ್ಯಗಳು ನಡೆಯುವುದರಿಂದ ಮನಸ್ಸು ಆಹ್ಲಾದಕರವಾಗಿರುವುದು. ಈ ಕಾರ್ಯಗಳ ವಿಷಯದಲ್ಲಿ ತಪ್ಪಾಗದಂತೆ ಎಚ್ಚರ ವಹಿಸಿ. ಮನೆಗೆ ಬಂದವರು ಮಾತಾಡಿದ್ದೆಲ್ಲ ನಿಜವಿರಬೇಕಿಲ್ಲ ಎಂಬ ಎಚ್ಚರ ಇರಲಿ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಮಿಥುನ(Gemini): ಮನರಂಜನಾ ಕ್ಷೇತ್ರದಲ್ಲಿರುವವರಿಗೆ ಪ್ರತಿಭೆಗೆ ತಕ್ಕ ಫಲ ಸಿಗಲಿದೆ. ಅನಿರೀಕ್ಷಿತ ಮೂಲಗಳಿಂದ ಧನ ಲಾಭವೂ ಇದೆ.  ಸ್ನೇಹಿತರ ಸಾಧನೆಗೆ ಶ್ಲಾಘನೆ ನೀಡಿ. ವ್ಯಾಪಾರಿಗಳು, ರೈತರು, ಸಣ್ಣ ಪುಟ್ಟ ಮಾರಾಟಗಾರರಿಗೆ ಲಾಭ, ಕುಲದೇವರಿಗೆ ತುಪ್ಪದ ದೀಪ ಹಚ್ಚಿ. 

ಕಟಕ(Cancer): ವೈವಾಹಿಕ ಜೀವನದಲ್ಲಿ ಬಿರುಕುಗಳು ಮೂಡಬಹುದು. ನಿಮ್ಮ ವರ್ತನೆಯನ್ನು ಆತ್ಮವಿಮರ್ಶೆಗೆ ಹಚ್ಚಿ. ದಿನಸಿ ಅಂಗಡಿ ಇರುವವರಿಗೆ ಬಹಳಷ್ಟು ಲಾಭ. ನಿಮ್ಮ ಅನಿರೀಕ್ಷಿತ ಪ್ರಗತಿ ಇತರರಿಗೆ ಆಶ್ಚರ್ಯವೆನಿಸಬಹುದು. ಸ್ನೇಹಿತರ ಕಾರಣದಿಂದ ಮನೆಯಲ್ಲಿ ಕಲಹ. ಆದಿತ್ಯ ಹೃದಯ ಪಠಣ ಮಾಡಿ. 

ಸಿಂಹ(Leo): ಬದುಕಿನಲ್ಲಿ ಹೊಸ ಕನಸುಗಳ ಕಟ್ಟುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿ ಮನಸ್ಸಿಗೆ ಸಂತಸ. ಸ್ನೇಹಿತರು, ಪರಿಚಿತ ಹಿರಿಯರ ಭೇಟಿಯಿಂದ ಸಂತಸ. ಹವ್ಯಾಸಕ್ಕಾಗಿ ಸಮಯ ಮಾಡಿಕೊಳ್ಳುವಿರಿ. ಸಹೋದರರ ಕಡೆಯಿಂದ ಸಹಾಯ ಸಿಗಲಿದೆ. ಸೂರ್ಯನಿಗೆ ಅರ್ಘ್ಯ ಬಿಡಿ. 

Extramarital affair: ಈ ರಾಶಿಯವರು ದಾಂಪತ್ಯದಾಚೆಗೂ ಜಿಗಿಯಬಲ್ಲರು, ಹುಷಾರಾಗಿರಿ!

ಕನ್ಯಾ(Virgo): ಆಸ್ತಿ ಖರೀದಿಯಲ್ಲಿ ಆಸಕ್ತಿ ಹೆಚ್ಚಲಿದೆ. ಆದರೂ ಪ್ರಚಲಿತ ವಿದ್ಯಮಾನಗಳು ಗೊಂದಲ ಹುಟ್ಟು ಹಾಕಲಿವೆ. ಹೊಸ ವಸ್ತು ಖರೀದಿ ಸಮಾಧಾನ ತರುವುದಿಲ್ಲ. ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಸೇವನೆ ಮಾಡಿ. ಗೆಳೆಯರೊಂದಿಗೆ ಸಮಯ ಕಳೆಯುವಿರಿ. ಕುಲದೇವತೆಯ ಸ್ಮರಣೆ ಮಾಡಿ. 

ತುಲಾ(Libra): ಪಾರಂಪರಿಕ ಉದ್ಯೋಗದಲ್ಲಿ ತೊಡಗಿರುವವರಿಗೆ ಲಾಭ. ಮನೆಯ ಕೆಲ ವಸ್ತುಗಳು ರಿಪೇರಿಗೆ ಬರಬಹುದು. ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿ. ತಂದೆತಾಯಿಯ ಸಹಕಾರದಿಂದ ಕನಸುಗಳು ಈಡೇರುವುವು. ಸಂತಸದಿಂದ ದಿನ ಕಳೆಯುವಿರಿ. ಪಕ್ಷಿಗಳಿಗೆ ಧಾನ್ಯ ನೀಡಿ.  

ವೃಶ್ಚಿಕ(Scorpio): ಇಂದು ಕೆಲ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲಿರುವಿರಿ. ಮತ್ತೊಬ್ಬರ ಬದುಕಿನ ಕುರಿತ ಅತೀವ ಅಸೂಯೆ ಹಾಗೂ ಕುತೂಹಲ ಎರಡನ್ನೂ ಬಿಡಿ. ನಿರಾಶಾದಾಯಕ ಯೋಚನೆಗಳು ಹೆಚ್ಚಲಿವೆ. ನಿದ್ರಾಹೀನತೆ ಕಾಡಬಹುದು. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಹಸುವಿಗೆ ಹಸಿರು ಹುಲ್ಲು ತಿನ್ನಿಸಿ. 

Chanakya Niti: ವೈವಾಹಿಕ ಜೀವನ ಹಾಳು ಮಾಡುವ ಆರು ಅಭ್ಯಾಸಗಳು

ಧನುಸ್ಸು(Sagittarius): ಪ್ರಯಾಣದಿಂದ ಮನಸ್ಸು ಹಗುರಾಗಲಿದೆ. ಕುಟುಂಬದೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ದೂರದ ನೆಂಟರಿಂದ ಶುಭ ಸುದ್ದಿ ಕೇಳಲಿದ್ದೀರಿ. ವೃತ್ತಿಯಿಂದ ಕೊಂಚ ಬಿಡುವು ಸಿಗಲಿದೆ. ಉಳಿತಾಯದ ಕಡೆ ಗಮನ ಹರಿಸಿ. ಆರೋಗ್ಯ ಚೆನ್ನಾಗಿರಲಿದೆ. ಆದಿತ್ಯ ಹೃದಯ ಪಠಿಸಿ. 

ಮಕರ(Capricorn): ಅಸ್ಥಿರತೆ ಆವರಿಸಿ ಕಾಡಲಿದೆ. ಸ್ತ್ರೀಯರಿಗೆ ಅತ್ತೆ ಮಾವಂದಿರ ಮಾತುಗಳು ಚುಚ್ಚಬಹುದು. ಮನೆ ಬೇರೆ ಮಾಡುವ ಬಗ್ಗೆ ಯೋಚನೆ ಬರಬಹುದು. ಹಣಕಾಸಿನ ಸಮಸ್ಯೆಗೆ ಒಡವೆಗಳನ್ನು ಅಡ ಇಡುವ ಯೋಚನೆ ಬರಲಿದೆ. ಅನೈತಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಡಿ. ಬಡಬಗ್ಗರಿಗೆ ಸಾಧ್ಯವಾದುದನ್ನು ದಾನ ಮಾಡಿ. 

ಕುಂಭ(Aquarius): ನಿಮ್ಮ ಕನಸೊಂದು ನನಸಾಗಿರುವ ಕ್ಷಣ. ನಿಮ್ಮ ಧೈರ್ಯ ಹಾಗೂ ಬುದ್ಧಿವಂತಿಕೆ ಜನ ಮೆಚ್ಚುಗೆ ಗಳಿಸುವುದು. ಆಮದು-ರಫ್ತು ವ್ಯವಹಾರವನ್ನು ಪ್ರಾರಂಭಿಸುವ ನಿರ್ಧಾರವನ್ನು ಇಂದು ಮಾಡಬಹುದು. ಸಂಗಾತಿಯ ಸಹಕಾರ ಸಂಪೂರ್ಣ ಸಿಕ್ಕಲಿದೆ. ಆರೋಗ್ಯ ಚೆನ್ನಾಗಿರುವುದು. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ಮೀನ(Pisces): ಕೌಟುಂಬಿಕ ಜೀವನದಲ್ಲಿ ಕೆಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ. ಮನೆ ಸ್ಥಳಾಂತರ ಕಾರ್ಯ ನಡೆಯಬಹುದು. ಮನೆಯ ಸ್ವಚ್ಛತಾ ಕಾರ್ಯಗಳೂ ನಡೆಯಬಹುದು. ವಿಚ್ಚೇದಿತರಿಗೆ ಮರು ವಿವಾಹಕ್ಕೆ ಸಂಬಂಧ ಹೊಂದಿಬರಲಿದೆ. ಆದಿತ್ಯ ಹೃದಯ ಪಠಣ ಮಾಡಿ. 

PREV
Read more Articles on
click me!

Recommended Stories

ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ